ಬಸ್ ನಿಲ್ದಾಣದ ಸಿಬ್ಬಂದಿಯಿಂದ ಕರ್ನಾಟಕ ರಾಜ್ಯೋತ್ಸವ

ಬಸ್ ನಿಲ್ದಾಣದ ಸಿಬ್ಬಂದಿಯಿಂದ ಕರ್ನಾಟಕ ರಾಜ್ಯೋತ್ಸವ

ಬಸ್ ನಿಲ್ದಾಣದ ಸಿಬ್ಬಂದಿಯಿಂದ ಕರ್ನಾಟಕ ರಾಜ್ಯೋತ್ಸವ


ಕೋಲಾರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೋಲಾರ ವಿಭಾಗದ ಕೋಲಾರ ಬಸ್ ನಿಲ್ದಾಣದ ಸಿಬ್ಬಂದಿ ವತಿಯಿಂದ ವಿಭಾಗೀಯ ನಿಯಂತ್ರಣಾಧಿಕಾರಿ ನಿರಂಜನ್ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ 66ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಬಸ್ ನಿಲ್ದಾಣದಲ್ಲಿ ಅದ್ದೂರಿಯಾಗಿ ಹೂವಿನ ಅಲಂಕಾರ ಮಾಡಲಾಗಿತ್ತು.
ವಿಭಾಗೀಯ ಸಂಚಲನಾಧಿಕಾರಿ ಜೈಶಾಂತ್‌ಕುಮಾರ್, ವಿಭಾಗೀಯ ಯಾಂತ್ರಿಕ ಶಿಲ್ಪಿ ಸತೀಶ್, ಲೆಕ್ಕಾಧಿಕಾರಿ ಪಾಂಡುರAಗನಾಯ್ಡು, ಭದ್ರತಾ ಮತ್ತು ಜಾಗೃತಾಧಿಕಾರಿ ಪ್ರಸನ್ನ, ಉಗ್ರಾಣಾಧಿಕಾರಿ ಚಂದ್ರಶೇಖರ್, ಘಟಕ ವ್ಯವಸ್ಥಾಪಕ ರಮೇಶ್, ನಿಲ್ದಾಣಾಧಿಕಾರಿಗಳಾದ ಕೆ.ವಿ ಶಿವಕುಮಾರ್ ಹಾಗೂ ಶ್ರೀನಿವಾಸಮೂರ್ತಿ ಮತ್ತು ಸಿಬ್ಬಂದಿ ವರ್ಗದವರು ಇದ್ದರು.