ಕೆಜಿಎಫ್ ಪೊಲೀಸ್ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ
ಕೆಜಿಎಫ್ ಪೊಲೀಸ್ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ
ಕೆಜಿಎಫ್: ಕೋಲಾರ ಚಿನ್ನದ ಗಣಿ ಪ್ರದೇಶದ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಪಿ. ಮುರಳೀಧರ ಅವರ ಅಧ್ಯಕ್ಷತೆಯಲ್ಲಿ ಕನ್ನಡ ರಾಜ್ಯೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕನ್ನಡ ಧ್ವಜಾರೋಹಣ ನೆರವೇರಿಸಿ, ತಾಯಿ ಶ್ರೀ ಭುವನೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಡಿವೈಎಸ್‌ಪಿ ಪಿ. ಮುರಳೀಧರ ಅವರು ಮಾತನಾಡಿ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕೆಜಿಎಫ್ ಪೊಲೀಸ್ ಜಿಲ್ಲೆಯು ವಿಶೇಷ ಸ್ಥಾನÀವನ್ನು ಪಡೆದಿದೆ. ಕನ್ನಡ ನಾಡು-ಚಿನ್ನದ ಬೀಡು ಎಂಬ ಹೆಸರು ಬರಲು ಕಾರಣವಾದ ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ನಾಗರೀಕರಿಗೆ ಪೊಲೀಸ್ ಇಲಾಖೆಯು ಉತ್ತಮ ಸೇವೆಯನ್ನು ಸಲ್ಲಿಸುತ್ತಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ನಾಡು, ನುಡಿಯ ಅಭಿವೃದ್ದಿಗೆ ಸಹಕರಿಸಲು ಕರೆ ನೀಡಿದರು.
ಪ್ರತಿಯೊಬ್ಬರು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ನಾಡಿನ ಮೇಲೆ ಅಭಿಮಾನ ಮೆರೆಯುವ ಮೂಲಕ ರಾಜ್ಯದ ಸರ್ವತೋಮುಖಾಭಿವೃದ್ದಿಗೆ ಪಣ ತೊಡಬೇಕೆಂದು ಜಿಲ್ಲಾ ಉಪ ರಕ್ಷಣಾಧಿಕಾರಿ ಪಿ. ಮುರಳೀಧರ ಅವರು ಕರೆ ನೀಡಿದರು. ಪ್ರತಿಯೊಬ್ಬ ಜನಸಾಮಾನ್ಯರಿಗೂ ನಾಡು, ನುಡಿ, ಭಾಷೆಯ ಮೇಲೆ ಅಭಿಮಾನವಿರಬೇಕು, ಶಾಲಾ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ದೇಶದ, ನಾಡಿನ ಬಗ್ಗೆ ಅಕ್ಕರೆ ಮೂಡಿಸುವ ಕಾರ್ಯವಾಗಬೇಕು, ಎಲ್ಲರೂ ಕೈಗೂಡಿಸಿದ್ದಲ್ಲಿ ಮಾತ್ರ ನಾಡಿನ ಸರ್ವತೋಮುಖಾಭಿವೃದ್ದಿ ಸಾಧ್ಯವೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪೊಲೀಸ್ ಇನ್ಸ್ಪೆಕ್ಟರ್‌ಗಳಾದ ಕೆ.ನಾಗರಾಜ್, ವೆಂಕಟರಾಮ್, ಆರ್.ದಯಾನಂದ, ನವೀನ್, ಸೇರಿದಂತೆ ಜಿಲ್ಲೆಯ ಎಲ್ಲಾ ಪಿಎಸ್‌ಐಗಳು, ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ, ಲಿಪಿಕ ಸಿಬ್ಬಂದಿಗಳು ಹಾಜರಿದ್ದರು.
ಆರ್.ಪಿ.ಐ. ವಿ.ಸೋಮಶೇಕರ ಅವರ ನೇತೃತ್ವದಲ್ಲಿ ಆಕರ್ಷಕ ರೀತಿಯಲ್ಲಿ ಪಥಸಂಚಲನ, ಡಿ.ಎ.ಆರ್. ಪೊಲೀಸ್ ವಾದ್ಯವೃಂದದಿAದ ನಾಡಗೀತೆ ಗಾಯನ, ಹಾಗೂ ಪೊಲೀಸ್ ಸಿಬ್ಬಂದಿಗಳಿAದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಡಿ.ಎ.ಆರ್.ನ ಆರ್‌ಎಸ್‌ಐ ಬಸವರೆಡ್ಡಿ ಕಪ್ಪತ್ತನವರ್ ಮತ್ತು ಸಿಬ್ಬಂದಿಗಳು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಗೌರವ ರಕ್ಷೆ, ಪಹರೆ ಪಡೆಯ ಗೌರವ ವಂದನೆಗಳನ್ನು ಕನ್ನಡ ಭಾಷೆಯಲ್ಲಿ ನೀಡುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.