ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕೆ.ಎಸ್.ಸಿದ್ದಲಿಂಗಪ್ಪ ಅಧಿಕಾರ ಸ್ವೀಕಾರ ‘ಹಾರ ತುರಾಯಿ ಸಾಕು- ಕನ್ನಡ ಪುಸ್ತಕ ಬೇಕು’

charge taken by ks siddalingappa, kannada sahitya parishat

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ  ಕೆ.ಎಸ್.ಸಿದ್ದಲಿಂಗಪ್ಪ ಅಧಿಕಾರ ಸ್ವೀಕಾರ  ‘ಹಾರ ತುರಾಯಿ ಸಾಕು- ಕನ್ನಡ ಪುಸ್ತಕ ಬೇಕು’

 

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ

ಕೆ.ಎಸ್.ಸಿದ್ದಲಿಂಗಪ್ಪ ಅಧಿಕಾರ ಸ್ವೀಕಾರ

‘ಹಾರ ತುರಾಯಿ ಸಾಕು- ಕನ್ನಡ ಪುಸ್ತಕ ಬೇಕು’

ತುಮಕೂರು: ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಗೆ ನೂತನ ಅಧ್ಯಕ್ಷರಾಗಿ ಭಾನುವಾರ ಚುನಾಯಿತರಾದ ಕೆ.ಎಸ್.ಸಿದ್ದಲಿಂಗಪ್ಪನವರು ನಗರದ ಕನ್ನಡ ಭವನದಲ್ಲಿ ಶುಕ್ರವಾರ ಸಂಜೆ ನಡೆದ ಸರಳ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅವರ ಉಪಸ್ಥಿತಿಯಲ್ಲಿ ಪರಿಷತ್ತಿನ ಪ್ರಬಾರ ಹೊಂದಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಅವರಿಂದ ಸಿದ್ದಲಿಂಗಪ್ಪನವರು ಅಧಿಕಾರ ವಹಿಸಿಕೊಂಡರು.

ಆನಂತರ ಸಿದ್ದಲಿಂಗಪ್ಪನವರು ಮಾತನಾಡಿ, ಭಾನುವಾರದಿಂದ ದಿನಕ್ಕೆ ಎರಡು ತಾಲೂಕುಗಳಂತೆ ಪ್ರವಾಸ ಮಾಡಿ ಆಜೀವ ಸದಸ್ಯರನ್ನು ಭೇಟಿ ಮಾಡಿ, ತಾಲೂಕು ಸಮಿತಿಗಳನ್ನು ರಚಿಸಲಾಗುವುದು,ವರ್ಷದ ಕ್ರಿಯಾ ಯೋಜನೆ ರೂಪಿಸಿ, ಸಕ್ರಿಯವಾಗಿ ಕಾರ್ಯ ನಿರ್ವಹಿಸದ ಸಮಿತಿಗಳನ್ನು ಅಥವಾ ಸದಸ್ಯರನ್ನು ಬದಲಿಸಲಾಗುವುದು, ಸಾಹಿತ್ಯ ಪರಿಷತ್ತಿನ ಸಮಾರಂಭಗಳಲ್ಲಿ ಹಾರ, ತುರಾಯಿಗಳ ಬದಲಿಗೆ ಸ್ಥಳೀಯ ಲೇಖಕರ ಕನ್ನಡ ಪುಸ್ತಕಗಳನ್ನು ಕೊಡುಗೆಯಾಗಿ ನೀಡುವುದನ್ನು ರೂಡಿಸಿಕೊಳ್ಳಬೇಕು ಎಂದರು.

ಸಾಹಿತ್ಯ ಪರಿಷತ್ತಿನ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಣೆಗೆ ತಮ್ಮ ವಿರೋಧವಿದೆ ಎಂದ ಸಿದ್ದಲಿಂಗಪ್ಪನವರು, ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ತಮ್ಮ ಈ ಅಭಿಪ್ರಾಯವನ್ನು ಮಂಡಿಸಲಾಗುವುದು ಅಲ್ಲದೇ ಮೂರು ವರ್ಷದ ಅವಧಿಯನ್ನೇ ಗುರಿಯಾಗಿರಿಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನಗೊಳಿಸಲಾಗುವುದು ಎಂದರಲ್ಲದೇ, ತಮ್ಮ ಗೆಲುವಿಗೆ ಕಾರಣರಾದ ಎಲ್ಲರನ್ನೂ ಅಭಿನಂದಿಸಿದರಲ್ಲದೇ ಚುನಾವಣೆಗೆ ಸ್ಪರ್ಧಿಸಿದ್ದ ಎಲ್ಲರೊಂದಿಗೆ ಹಾರ್ಧಿಕ ಸಂಬಂದ ಹೊಂದಿ ಕನ್ನಡದ ತೇರನ್ನು ಮುಂದಕ್ಕೊಯ್ಯುತ್ತೇನೆ ಎಂದು ಭರವಸೆ ನೀಡಿದರು.

ನಿಕಟಪೂರ್ವ ಅಧ್ಯಕ್ಷೆ ಬಾಹ ರಮಾಕುಮಾರಿ ಮಾತನಾಡಿ, ಐದೂವರೆ ವರ್ಷದ ಹಿಂದೆ ತಾವು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಅರೆಬರೆ ನಿರ್ಮಾಣ ಹಂತದಲ್ಲಿದ್ದ ಈ ಕನ್ನಡ ಭವನವನ್ನು ಪೂರ್ಣಗೊಳಿಸಲು ಎರಡು ವರ್ಷ ಕಾಲ ವಹಿಸಿದ ಶ್ರಮವನ್ನು ನೆನಪಿಸಿಕೊಂಡರು. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣನವರು ನೀಡಿದ 50 ಲಕ್ಷ ರೂ ಇಡುಗಂಟು ಹಾಗೂ ಇನ್ನಿತರ ಸಂಘ ಸಂಸ್ಥೆಗಳು ವ್ಯಕ್ತಿಗಳು ನೀಡಿದ ದೇಣಿಗೆಯಿಂದ ಜಿಲ್ಲೆಯಲ್ಲಿ ಕನ್ನಡಕ್ಕೊಂದು ಭವನ ಸಿದ್ದಗೊಂಡಿತು ಎಂದರಲ್ಲದೇ, ಹೊಸ ಅಧ್ಯಕ್ಷರು ಹಾಗೂ ಸಮಿತಿಯೊಂದಿಗೆ ಸಹಕರಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಏಳಿಗೆಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ವಿದ್ಯಾವಾಚಸ್ಪತಿ ಡಾ.ಕವಿತಾ ಕೃಷ್ಣ ಮುಖ್ಯ ಅತಿಥಿಯಾಗಿ ಮಾತನಾಡಿ, ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಕಾಲದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಚನೆಗೆ ಕಾರಣರಾದ ಕಾದಂಬರಿಕಾರ ಅ.ನ.ಕೃ ಹಾಗೂ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಕಾರಣರಾದ ಜಿಲ್ಲೆಯ ಸಾಹಿತಿಗಳನ್ನು ಸ್ಮರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ಕನ್ನಡ ಭವನಕ್ಕೊಂದು ಅಸ್ಮಿತೆ ರೂಪುಗೊಂಡಿದೆ. ಇಲ್ಲಿ ನಾಟಕಗಳಿವೆ ಎಂದು ತಿಳಿದ ಕೂಡಲೇ ಸಂಜೆ ಆರೂವರೆ ಹೊತ್ತಿಗೆ ಸಹೃದಯ ಜನರು ತಂತಾನೇ ಬಂದು ಸೇರುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರಲ್ಲದೇ, ಕನ್ನಡ ಭವನದ ನೆಲಮಹಡಿಯಲ್ಲಿ ನೀರು ಸಂಗ್ರಹಗೊಳ್ಳುತ್ತಿದ್ದು ಸೂಕ್ತ ವೈಜ್ಞಾನಿಕ ವಿಧಾನದಲ್ಲಿ ಸರಿಪಡಿಸುವಂತೆ ನೂತನ ಅಧ್ಯಕ್ಷರಿಗೆ ಕಿವಿಮಾತು ಹೇಳಿದರು.

ಲೇಖಕ ಕಂಟಲಗೆರೆ ಸಣ್ಣ ಹೊನ್ನಯ್ಯ ನಿರೂಪಿಸಿದರು. ಕೆಎಸ್ಎಸ್ ಅಭಿಮಾನಿಗಳೂ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ, ಸಿದ್ದಲಿಂಗಪ್ಪನವರಿಗೆ ಹಾರ, ಶಾಲು ಸಲ್ಲಿಸಿ ಸನ್ಮಾನಿಸಿದರು.ಸಂವಿಧಾನ ದಿನದಂದು ನಡೆದ ಸಮಾರಂಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗು ಕನ್ನಡ ಮಾತೆಯ ಭಾವ ಚಿತ್ರಗಳಿಗೆ ಹೂ ಅರ್ಪಿಸಿ ಗೌರವ ಸಲ್ಲಿಸಲಾಯಿತು.

 

ಕುವೆಂಪು ಗುರುವನ್ನು

ಹುಡುಕಿ ಕೊಟ್ಟವರು!?

ರಾಷ್ಟ್ರ ಕವಿ ಕುವೆಂಪು ಅವರ ಪ್ರಾಥಮಿಕ ಶಾಲೆಯ ಗುರುವೊಬ್ಬರು ತುಮಕೂರಿನಲ್ಲಿದ್ದಾರೆಂಬ ಸಂಗತಿಯನ್ನು ತಿಳಿದು, ಅವರ ನಿವಾಸವನ್ನು ಪತ್ತೆ ಹಚ್ಚಿ ಸರಕಾರಕ್ಕೆ ಮಾಹಿತಿ ನೀಡಿದ್ದು ಆಗ ಯುವತಿಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷೆ ಬಾ.ಹ.ರಮಾಕುಮಾರಿ.

-ಡಾ.ಕವಿತಾ ಕೃಷ್ಣ

ಹಿರಿಯ ಸಾಹಿತಿ,