``ಸಂಸ್ಕಾರದ ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿದೆ’’ ಉಜ್ಜಯಿನಿ ಶ್ರೀ ಶಿವಾಚಾರ್ಯ ಮಹಾಭಗವತ್ಪಾದರು
``ಸಂಸ್ಕಾರದ ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿದೆ’’
ಉಜ್ಜಯಿನಿ ಶ್ರೀ ಶಿವಾಚಾರ್ಯ ಮಹಾಭಗವತ್ಪಾದರು
ತುಮಕೂರು: ಸಂಸ್ಕಾರದ ಮೌಲ್ಯಗಳ ಆಧಾರವಾಗಿರುವಂತಹ ಗುಣಮಟ್ಟದ ಶಿಕ್ಷಣ ನೀಡಬೇಕಾಗಿದೆ ಎಂದು ಉಜ್ಜಯಿನಿ ಮಹಾಪೀಠದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಭಗತ್ಪಾದರು ತಿಳಿಸಿದರು.
ನಗರದ ಅರಳೇಪೇಟೆ ಶ್ರೀ ಬಸವೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಮತ್ತು ಕುಂಭಾಭೀಷೇಕ ಸಮಾರಂಭದ ಸಾನಿಧ್ಯ ವಹಿಸಿದ್ದ ಶ್ರೀಗಳು ತಮ್ಮ ಆಶೀರ್ವಚನದಲ್ಲಿ, ಇಂದು ಕೇಂದ್ರ ಸರ್ಕಾರ ಪ್ರತಿಭಾವಂತರಿಗಾಗಿ, ಜಾಣರಿಗಾಗಿ ಐಐಟಿಯನ್ನು ಸ್ಥಾಪನೆ ಮಾಡಿದೆ. ಅಲ್ಲಿ ಉಚಿತವಾಗಿ ಸೀಟು ಕೊಡುತ್ತಾರೆ, ಮೆರಿಟ್ ಮೇಲೆ ಸೀಟು ಪಡೆದು ಆ ಐಐಟಿಯಲ್ಲಿ ಉನ್ನತ ವ್ಯಾಸಾಂಗವನ್ನು ಮಾಡಿದಂತಹ ಬಹುತೇಕ ವಿದ್ಯಾರ್ಥಿಗಳು ಅಮೇರಿಕಾ, ಪ್ರಾನ್ಸ್, ಜಪಾನ್, ಜರ್ಮನಿಗೆ ಹೋಗುತ್ತಾರೆ, ನಮ್ಮದ ದೇಶದ ಐಐಟಿಗಳು ಬೇರೆ ದೇಶಗಳಿಗೆ ಪ್ರತಿಭೆಯನ್ನು ರಫ್ತು ಮಾಡುವಂತಹ ಕಾರ್ಖಾನೆಗಳಾಗಿವೆ.
ಉಚಿತವಾಗಿ ಸೀಟು ಪ್ರತಿಭೆಗೆ ಆಧಾರಿತ ಎಲ್ಲಾ ವ್ಯವಸ್ಥೆಯನ್ನೂ ಸರ್ಕಾರ ಮಾಡುತ್ತದೆ. ಆದರೆ ಐಐಟಿಯಲ್ಲಿ ಪದವಿಯನ್ನು ಪಡೆದ ಮೇಲೆ ಅವರ ಸೇವೆ ಕೇವಲ ದುಡ್ಡಿಗಾಗಿ ಸಂಪತ್ತಿಗಾಗಿ ಬೇರೆ ದೇಶಗಳ ಆಧಾರಿತವಾಗಿರುತ್ತದೆ ಎಂದರೆ ನಮ್ಮ ಶಿಕ್ಷಣದ ಗುಣಮಟ್ಟ ಮೌಲ್ಯಗಳಿಂದ ಸಂಸ್ಕಾರದಿAದ ಕೂಡಿಲ್ಲ ಎಂಬುದಾಗಿ ತಿಳಿಯುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ನಂತರ ನಡೆದ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಭಗತ್ಪಾದರು, ಭಾರತ ದೇಶ ಮಂದಿರಗಳ ದೇಶ. ಈ ದೇಶದಲ್ಲಿರುವಷ್ಟು ಗುಡಿ, ಗುಂಡಾರಗಳು, ಮಠ ಮಂದಿರಗಳನ್ನು ಪ್ರಪಂಚದ ಯಾವುದೇ ರಾಷ್ಟçದಲ್ಲಿ ನಾವು ನೋಡುವುದಕ್ಕೆ ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ನಗರ ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ಅರಳೇಪೇಟೆ ಶ್ರೀಬಸವೇಶ್ವರ ದೇವಾಲಯವನ್ನು ಸುಮಾರು 1.70 ಕೋಟಿ ರೂ.ಗಳ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿದ್ದು, ಇದಕ್ಕೆ ಎಲ್ಲಾ ಸಮುದಾಯದ ಜನರು, 5 ಸಾವಿರದಿಂದ 10 ಲಕ್ಷದವರೆಗೆ ದೇಣಿಗೆ ನೀಡಿದ್ದಾರೆ. ಸುಮಾರು 30*80 ಅಡಿ ಪ್ರದೇಶದಲ್ಲಿದ್ದ ದೇವಾಲಯ ಚಿಕ್ಕದಾಗುವ ಕಾರಣ, ಪಕ್ಕದಲ್ಲಿಯೇ ಇದ್ದ ಕಾಮಗಾನಹಳ್ಳಿ ನಂಜಪ್ಪ ಟ್ರಸ್ಟ್ನವರ ಮನವೊಲಿಸಿ, ಅವರ 30*80 ನಿವೇಶನವನ್ನು ಪಡೆದು, 60*80ರಲ್ಲಿ ಶ್ರೀಬಸವೇಶ್ವರಸ್ವಾಮಿ, ಶ್ರೀಮಲ್ಲಿಕಾರ್ಜುನಸ್ವಾಮಿ, ಶ್ರೀಬ್ರಮರಾಂಭ ದೇವಿ, ಜಗದ್ಗುರು ಶ್ರೀರೇಣುಕಾಚಾರ್ಯರ ಐದು ಗರ್ಭಗುಡಿಗಳು ಪ್ರತಿಷ್ಠಾಪನೆಗೊಂಡಿವೆ ಎಂದು ತಿಳಿಸಿದರು.
ಇದಕ್ಕೂ ಮುನ್ನ, ಉಜ್ಜಯಿನಿ ಮಹಾಪೀಠದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಭಗತ್ಪಾದರ ಸಾನಿಧ್ಯದಲ್ಲಿ ಶನಿವಾರ ವಿಜೃಂಭಣೆಯಿAದ ಜರುಗಿತು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಕಳಸಹೊತ್ತ ಸುಮಂಗಲಿಯರು ಉಜ್ಜಯಿನಿ ಶ್ರೀಗಳನ್ನು ಸಾರೋಟ್ ಮೂಲಕ ಬಸವೇಶ್ವರ ದೇವಸ್ಥಾನದವರೆಗೆ ಭವ್ಯ ಸ್ವಾಗತ ಕೋರಿದರು. ನಂತರ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ, ಜಗದ್ಗುರು ಶ್ರೀ ರೇಣುಕಾಚಾರ್ಯರ ಮತ್ತು ನವಗ್ರಹಗಳ ಪ್ರತಿಷ್ಠಾಪನೆಯನ್ನು ನೆರವೇರಿಸಲಾಯಿತು. ಸಿದ್ಧರಬೆಟ್ಟ ಸುಕ್ಷೇತ್ರ ಶ್ರೀ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಬೃಹತ್ ನಂದಿ ವಿಗ್ರಹವನ್ನು ಅನಾವರಣಗೊಳಿಸಿದರು.
ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯಸ್ವಾಮೀಜಿ, ಶಿವÀಗಂಗೆ ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ನಗರ ವೀರಶೈವ ಸಮಾಜ ಸೇವಾ ಸಮಿತಿ ಉಪಾಧ್ಯಕ್ಷ ಎಸ್.ಜಿ. ಚಂದ್ರಮೌಳಿ, ದೇವಸ್ಥಾನ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ನಗರ ವೀರಶೈವ ಸಮಾಜ ಸೇವಾ ಸಮಿತಿ ಮಾಜಿ ಅಧ್ಯಕ್ಷರಾದ ಕೆ.ವೈ. ಸಿದ್ಧಲಿಂಗಮೂರ್ತಿ, ಸಿ.ವಿ. ಮಹದೇವಯ್ಯ, ದೇವಸ್ಥಾನ ಸಮಿತಿಯ ಗೌರವ ಕಾರ್ಯದರ್ಶಿ ಅತ್ತಿ ರೇಣುಕಾನಂದ, ವೀರಶೈವ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಜೆ. ರುದ್ರಪ್ಪ, ಉಪಾಧ್ಯಕ್ಷ ಕೆ. ಮಲ್ಲಿಕಾರ್ಜುನಯ್ಯ, ವೀರಶೈವ-ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಮೋಹನ್‌ಪಟೇಲ್ ಸೇರಿದಂತೆ ವೀರಶೈವ ಸಮಾಜದ ಎಲ್ಲಾ ನಿರ್ದೇಶಕರು, ಸದಸ್ಯರು, ವಿವಿಧ ಸಂಘಸAಸ್ಥೆಗಳ ಪದಾಧಿಕಾರಿಗಳು ಮುಖಂಡರು, ಗಣ್ಯರು ಭಾಗವಹಿಸಿದ್ದರು.