ಮತದಾರರೂ ಲಂಚಕೋರರೇಅಲ್ಲವೇ?!

ಮತದಾನದ ಪ್ರಾಮುಖ್ಯತೆ

ಮತದಾರರೂ ಲಂಚಕೋರರೇಅಲ್ಲವೇ?!

ಗುಪ್ತ ಮತದಾನದ ಬಗ್ಗೆ ವ್ಯಾಪಕಚರ್ಚೆಯಾಗಬೇಕಾಗಿದೆ. ಅರಿವು ಮೂಡಿಸುವಗುರುತರವಾದಜವಾಬ್ದಾರಿಯಾರ ಮೇಲೆ ಹಾಕಬೇಕು, ಆಸೆ ಆಮಿಷಗಳಿಗೆ ಬಲಿಯಾಗಿತಮ್ಮಅಮೂಲ್ಯವಾದಓಟನ್ನು ಮಾರಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ನಿಜವಾದ ಲಂಚಕೋರರು ಮತದಾರರೇಎಂದು ಏಕೆ ಪರಿಗಣಿಸಬಾರದುಎಂದುಚರ್ಚೆ ಮಾಡುವವರೂಇದ್ದಾರೆ. ಮತದಾರರು ಪ್ರಜ್ಞಾವಂತರಾಗಿತಮ್ಮಕೋಟಿ ಬೆಲೆ ಬಾಳುವ ಮತವನ್ನು ಮಾರಿಕೊಂಡು ಪ್ರಜಾಪ್ರಭುತ್ವಕ್ಕೆ ಮಾರಕವಾದ ಮತದಾರರಿಗೆ ಗುಪ್ತ ಮತದಾನದಅರಿವನ್ನು ಮೂಡಿಸಿ ಮತದಾರರ ಶೀಲವನ್ನುಕಾಪಾಡುವವರುಯಾರು?

 


ವಿಧಾನಸಭೆ-2023

ಟಿ.ಎಸ್. ಆಂಜನಪ್ಪ

  ನಮ್ಮದು ಪ್ರಜಾಪ್ರಭುತ್ವ ಸರ್ಕಾರ. ಪ್ರಜಾಪ್ರಭುತ್ವ ಸರ್ಕಾರದಲ್ಲಿ ಪ್ರಜೆಗಳೆ ಪ್ರಭುಗಳು. ಪ್ರಜೆಗಳಿಗೆ ಗುಪ್ತ ಮತದಾನದಮಹತ್ವವನ್ನುಮನವರಿಕೆ ಮಾಡಿಕೊಡುವವರುಯಾರು?

 ಪ್ರಜಾಪ್ರಭುತ್ವ ಸರ್ಕಾರಯಾರಪ್ಪನ ಸ್ವತ್ತೂಅಲ್ಲ. ಇದುಎಲ್ಲರ ಸ್ವತ್ತು. ಪ್ರಜಾಪ್ರಭುತ್ವ ಸರ್ಕಾರ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರವಾಗಿ ರಚನೆಯಾಗಿದೆ. ಪ್ರಜೆಗಳ ಕಲ್ಯಾಣಕ್ಕಗಿ ಕೆಲಸ ಮಾಡಬೇಕಾದದ್ದು ಪ್ರಜಾಪ್ರಭುತ್ವ ಸರ್ಕಾರದ ಮೊದಲ ಕರ್ತವ್ಯ.

ಪ್ರಪಂಚದ ಹಲವು ರಾಷ್ಟçಗಳಲ್ಲಿ ಪ್ರಜಾಪ್ರಭುತ್ವ ಸರ್ಕಾರಇದೆ. ಇಂಗ್ಲೆಂಡ್, ಅಮೇರಿಕಾ, ಸ್ವಿಸ್, ಫ್ರಾನ್ಸ್, ನಾರ್ವೆ, ಐಸ್‌ಲ್ಯಾಂಡ್, ಸ್ವೀಡನ್, ಮೆಕ್ಸಿಕೋ ಪ್ರಜಾಪ್ರಭುತ್ವ ಹೊಂದಿರುವ ದೇಶಗಳು. ಭಾರತ, ಅಮೇರಿಕಾ, ಇಂಗ್ಲೆಂಡ್‌ ಎಲ್ಲ ದೇಶಕ್ಕಿಂತದೊಡ್ಡದಾದ ಪ್ರಜಾಪ್ರಭುತ್ವ ಹೊಂದಿರುವ ದೇಶಗಳು.

ಪ್ರಪಂಚದಲ್ಲಿರುವ ಪ್ರಜಾಪ್ರಭುತ್ವ ರಾಷ್ಟçಗಳು ಸ್ವಾತಂತ್ರö್ಯ ಅಸ್ಥಿತ್ವ ಬಂದತಕ್ಷಣಎಲ್ಲರಿಗೂ ಮತದಾನದ ಹಕ್ಕನ್ನುಕೊಟ್ಟಿರಲಿಲ್ಲ. ವಿದ್ಯಾವಂತರಿಗೆ ಮಾತ್ರಓಟು ಮಾಡುವ ಹಕ್ಕು ಕೊಟ್ಟಿತು.

ಆದರೆ ನಮ್ಮ ಭವ್ಯ ಭಾರತದೇಶ ಸ್ವತಂತ್ರವಾಗಿದ್ದು, 1947 ಆಗಸ್ಟ್ 15 ರಂದು ನಮ್ಮದೇಶ ಸರ್ವಸ್ವತಂತ್ರ ಪ್ರಜಾಸತ್ತಾತ್ಮಕಗಣರಾಜ್ಯವಾಗಿದ್ದು 1950 ಜನವರಿ 26 ರಂದು ಅಂದೇ ನಮ್ಮ ಸಂವಿಧಾನಜಾರಿಗೆ ಬಂದಿದ್ದು ನಮ್ಮದೇಶದಲ್ಲಿ ಪ್ರತಿಯೊಬ್ಬ ಪೌರನಿಗೂ ಓಟು ಮಾಡುವ ಹಕ್ಕನ್ನು ನಮ್ಮ ಸಂವಿಧಾನ ದಯಪಾಲಿಸಿದೆ. 

ನಮ್ಮ ಸಂವಿಧಾನ ಲಿಖಿತ ಸಂವಿಧಾನ. ಡಾ|| ಬಿ.ಆರ್. ಅಂಬೇಡ್ಕರ್‌ರವರು ಬರೆದ ಸಂವಿಧಾನ. ಅವರಿಗೆ ‘ಸಂವಿಧಾನ ಶಿಲ್ಪಿ’ ಎಂದುಕರೆಯುತ್ತೇವೆ. ನಮ್ಮ ಭವ್ಯ ಭಾರತದೇಶ ಸಂಕೀರ್ಣ ಸಂಸ್ಕೃತಿಗಳ ನಾಡು. ವೈವಿಧ್ಯಮಯವಾದ ನಾಡು ನಮ್ಮ ಈ ಭಾರತ. ವಿವಿಧ ಸಂಸ್ಕೃತಿ ಹಾಗೂ ವೈವಿಧ್ಯಮಯನಾಡಾದ ನಮ್ಮ ಭಾರತ ಏಕತೆಯನ್ನು ಕಾಪಾಡಿಕೊಂಡಿರುವುದು ವಿದೇಶಿಯರಿಗೆ ನುಂಗಲಾರದ ತುತ್ತಾಗಿದೆ. ನಮ್ಮ ಸಂವಿಧಾನ ಪ್ರಜೆಗಳಿಗೆ ಪ್ರತಿಯೊಬ್ಬರಿಗೂ ಒಂದು ಓಟನ್ನು ಮಾಡುವ ಹಕ್ಕು ಕೊಟ್ಟಿದೆ. ನಮ್ಮಲ್ಲಿ ಒಂದೇ ಸಂವಿಧಾನ ಇದೆ. ಒಂದೇ ರಾಷ್ಟ್ರ ಧ್ವಜ ಇದೆ. ಒಂದೇ ರಾಷ್ಟ್ರ  ಲಾಂಛನ ಇದೆ. ಒಂದೇ ರಾಷ್ಟ್ರ ಗೀತೆ ಇದೆ. ಒಂದೇ ಸುಪ್ರೀಂಕೋರ್ಟ್ ಇದೆ. ಒಂದೇ ರಾಷ್ಟ್ರೀಯ ನಿರ್ದೇಶಕ ತತ್ವಗಳಿವೆ. ಮೂಲಭೂತ ಹಕ್ಕುಗಳಿದೆ. ಇದೆಲ್ಲವೂ ನಾವೆಲ್ಲರೂ ಒಂದೇ ಎಂದು ಸಾರುವ ಅಂಶಗಳಾಗಿವೆ. ನಮ್ಮ ಸಂವಿಧಾನ ಮೂಲಭೂತ ಹಕ್ಕುಗಳನ್ನು ನಮಗೆ ದಯಪಾಲಿಸಿದೆ ಮತ್ತು ಕರ್ತವ್ಯಗಳನ್ನು ಹೇಳಿದೆ. ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದಎರಡು ಮುಖಗಳು. ನಮ್ಮಲ್ಲಿ ಸಾರ್ವತ್ರಿಕ ಚುನಾವಣೆಗಳು 5 ವರ್ಷಕ್ಕೆಒಂದು ಸಾರಿ ನಡೆಯಲು ನಮ್ಮ ಸಂವಿಧಾನ ಅನುವು ಮಾಡಿಕೊಟ್ಟಿದೆ. 1951 ರಿಂದಇಲ್ಲಿಯವರೆಗೆ ಹಲವಾರು ಸಾರ್ವತ್ರಿಕ ಚುನಾವಣೆಗಳು ಆಗಿ ಹೋಗಿವೆ. ಹಲವಾರು ಸರ್ಕಾರಗಳು ರಚನೆಯಾಗಿ ಕೆಲಸ ಮಾಡಿವೆ. ಅನೇಕ ರಾಷ್ಟ್ರೀಯ ಪಕ್ಷಗಳು ಸಾರ್ವತ್ರಿ ಕಚುನಾವಣೆಯಲ್ಲಿ ಸ್ಪರ್ಧಿಸುತ್ತವೆ. ಯಾವ ಪಕ್ಷ ಹೆಚ್ಚು ಸೀಟುಗಳನ್ನು ಗೆಲ್ಲುತ್ತದೆಯೋಅದು ಸರ್ಕಾರರಚಿಸುತ್ತದೆ.

ನಮ್ಮ ಸರ್ಕಾರದಲ್ಲಿ 3 ಅಂಗಗಳಿವೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ. ಎರಡು ಸರ್ಕಾರಕ್ಕೆ ನಮ್ಮ ಸಂವಿಧಾನ ಅನುವು ಮಾಡಿಕೊಟ್ಟಿದೆ. ರಾಜ್ಯ ಸರ್ಕಾರ ಮತ್ತುಕೇಂದ್ರ ಸರ್ಕಾರ.

ಕೇಂದ್ರ ಸರ್ಕಾರದಲ್ಲಿ ಕೆಳಮನೆ ಲೋಕಸಭೆ, ಮೇಲ್ಮನೆರಾಜ್ಯಸಭೆ. ರಾಜ್ಯ ಸರ್ಕಾರದಲ್ಲಿ ಕೆಳಮನೆ ವಿಧಾನ ಸಭೆ, ಮೇಲ್ಮನೆ ವಿಧಾನ ಪರಿಷತ್ತು. ಕೇಂದ್ರದಲ್ಲಿಕಾರ್ಯಾಂಗದ ಮುಖ್ಯಸ್ಥ ರಾಷ್ಟ್ರಪತಿ. ರಾಜ್ಯದಲ್ಲಿ ಕಾರ್ಯಾಂಗದ ಮುಖ್ಯಸ್ಥ ಗೌರ್ನರ್, ರಾಷ್ಟ್ರಮಟ್ಟದಲ್ಲಿ ಸುಪ್ರೀಂಕೋರ್ಟ್, ರಾಜ್ಯಮಟ್ಟದಲ್ಲಿ ಹೈಕೋರ್ಟ್ಇದೆ.

ಸಾರ್ವತ್ರಿಕಚುನಾವಣೆ 5 ವರ್ಷಕ್ಕೆಒಂದು ಸಾರಿ ನಡೆಯುವುದರಿಂದರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತವೆ. ಸ್ಥಳೀಯ ಸಂಸ್ಥೆಗಳಲ್ಲಿಯೂ ಸಹ ಗ್ರಾಮ ಪಂಚಾಯ್ತಿ ಹೊರತುಪಡಿಸಿ ಇನ್ನುಳಿದ ಎಲ್ಲಾಕಡೆರಾಜಕೀಯ ಪಕ್ಷಗಳು ಭಾಗವಹಿಸುತ್ತವೆ.ಪ್ರಪಂಚದಎಲ್ಲಾ ಪ್ರಜಾಪ್ರಭುತ್ವ ರಾಷ್ಟçಗಳು ಮುಂದುವರೆದ ರಾಷ್ಟ್ರಗಳಾಗಿದ್ದು ಪ್ರಜಾಪ್ರಭುತ್ವ ಸರ್ಕಾರ ಯಶಸ್ವಿಯಾಗಿದೆ.

ನಮ್ಮ ಭವ್ಯ ಭಾರತ ರಾಷ್ಟ್ರವನ್ನು ಶ್ರೀಮಂತರಿಂದ ಕೂಡಿದ ಬಡರಾಷ್ಟ್ರ ಎಂದು ಬ್ರಿಟೀಷರು ಕರೆದಿದ್ದರು ಎಂದು ಇತಿಹಾಸದಲ್ಲಿ ಓದಿದ್ದೇವೆ. ನಮ್ಮಲ್ಲಿ ಪ್ರಕೃತಿ ಸಂಪತ್ತು ತುಂಬಿ ತುಳುಕಾಡುತ್ತಿದೆ. ಆದರೆ ಸರ್ಕಾರ ರಚಿಸುವ ರಾಜಕೀಯ ಪಕ್ಷಗಳಿಗೆ ಇಚ್ಛಾಶಕ್ತಿಯ ಕೊರತೆಯಿಂದ ನಿಗದಿತ ಗುರಿ ಮುಟ್ಟಿಲ್ಲ ಎಂದು ಮಾತನಾಡಿಕೊಳ್ಳುವವರು ಇದ್ದಾರೆ.

ನಮ್ಮಲ್ಲಿ 18 ವರ್ಷತುಂಬಿದ ಪೌರರಿಗೆ ಒಂದೇ ಓಟುಇದೆ. ನಮ್ಮಲ್ಲಿ ಗುಪ್ತ ಮತದಾನ ಪದ್ಧತಿ ಇದೆ. ಗುಪ್ತ ಮತದಾನ ಪದ್ಧತಿ ಎಂದರೆ ನಾವು ಮತದಾನ ಮಾಡಿದ್ದು ಯಾರಿಗೆ ಮತ ಹಾಕಿದ್ದು ಎಂಬುದುಯಾರಿಗೂ ಗೊತ್ತಾಗಬಾರದು. ಮತವನ್ನು ಯಾವುದೇ ಪ್ರತಿಫಲಾಪೇಕ್ಷೆಇಲ್ಲದೆ ದಾನ ಮಾಡುವುದು. ಮತವನ್ನು ಹಾಕುವಾಗ ಅಂದರೆ ಮತವನ್ನುದಾನ ಮಾಡುವಾಗದಾನ ಮಾಡುವವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆದಾನ ಮಾಡುವುದು ಸರ್ವಶ್ರೇಷ್ಠ.

ಬೇರೆ ಪ್ರಜಾಪ್ರಭುತ್ವ ರಾಷ್ಟçಗಳಲ್ಲಿ ಒಳ್ಳೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಏಕೆಂದರೆಅಲ್ಲಿ ಪ್ರಜ್ಞಾವಂತ ಮತದಾರರಿದ್ದಾರೆ. ಆದರೆ ನಮ್ಮಲ್ಲಿ ಸಾರ್ವತ್ರಿಕ ಮತದಾನದಂದು ವಿಧಾನಸಭೆಗಾಗಲಿ, ಲೋಕಸಭೆಗಾಗಲಿ, ಸ್ಥಳೀಯ ಸಂಸ್ಥೆಗಳಿಗಾಗಲಿ ಚುನಾವಣೆ ನಡೆದಾಗ ಎಷ್ಟು ರೀತಿಯ ಆಸೆ ಆಮಿಷಗಳಿಗೆ ನಮ್ಮ ಮತದಾರರು ಬಲಿಯಾಗಿ ತಮ್ಮ ಮಾಣಿಕ್ಯದಂತಹ ಮತವನ್ನು ಹಣ, ಹೆಂಡ, ಅಭ್ಯರ್ಥಿಗಳು ಕೊಡುವಂತ ಎಂಜಲಿಗೆ ಕೈ ಚಾಚಿಓಟನ್ನು ಮಾರಿಕೊಳ್ಳುತ್ತಿರುವುದರಿಂದ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯವಾಗುತ್ತಿಲ್ಲ ಎಂದುಮಾತನಾಡಿಕೊಳ್ಳುತ್ತಿದ್ದಾರೆ. ಕೋತಿಗಳಿಗೇನು ಗೊತ್ತು ಮಾಣಿಕ್ಯದ ಬೆಲೆ ಎಂಬಂತಾಗಿದೆ.

ಗುಪ್ತ ಮತದಾನದ ಅರಿವನ್ನು ಮೂಡಿಸುವವರು ಯಾರು? ನಾವು ಮತವನ್ನುದಾನ ಮಾಡುವಾಗಯಾರಿಗೆ ಮತ ಹಾಕಿದ್ದೇನೆಂದು ನಾವು ಗುಪ್ತವಾಗಿ ಇಟ್ಟುಕೊಂಡರೆ ಅದು ಕೋಟಿ ಬೆಲೆ ಬಾಳುತ್ತದೆ. ಟಾಂಟಾಂ ಹಾಕಿಕೊಂಡು ಆಸೆ ಆಮಿಷಗಳಿಗೆ, ಲಂಚಕ್ಕೆ ಬಲಿಯಾಗಿ ಮತದಾನ ಮಾಡಿದರೆ ನಾವು ಬೇರೆಯವರಿಗೆದಾಸರಾಗಿರುತ್ತೇವೆ.

ಸಾರ್ವಜನಿಕ ಚುನಾವಣೆಗಳು ಹತ್ತಿರ ಬಂದಾಗರಾಜಕೀಯ ಪಕ್ಷಗಳು ಮತದಾರರಿಗೆ ಆಸೆ ತೋರಿಸಿ ಮತ ಹಾಕಿಸಿಕೊಂಡು 5 ವರ್ಷಗಳ ಕಾಲ ತಮ್ಮತಮ್ಮ ಹಿತಾಸಕ್ತಿಗೆ ಹೆಚ್ಚಿನಒತ್ತನ್ನುಕೊಟ್ಟುತಾವೇಬೆಳೆಯುತ್ತಿದ್ದಾರೆ. ಸಮಾಜಕ್ಕೆಸಂಪೂರ್ಣವಾಗಿಸ್ಪಂದಿಸುವುದಿಲ್ಲ. “ಅರಿಶಿನದ ಕೂಳಿಗೆ ಹೋಗಿ ವರ್ಷದ ಕೂಳನ್ನು ಕಳೆದುಕೊಂಡಂತೆೆ” ಎಂಬಂತಾಗಿದೆ ಮತದಾನ ಮಾಡುವವರ ಪಾಡು.

ಸ್ವಿಸ್‌ನಲ್ಲಿ ಜನಪ್ರತಿನಿಧಿಗಳು ನಿಗದಿತ ವೇಳೆಯಲ್ಲಿ ಸರಿಯಾಗಿ ಕೆಲಸ ಮಾಡದಿದ್ದರೆಅವರನ್ನು ವಾಪಸ್ಸು ಕರೆಸಿಕೊಳ್ಳುವ ಅಧಿಕಾರಮತದಾರರಿಗಿದೆ. ಅದಕ್ಕೆ ಇನಿಷಿಯೇಟಿವ್ ಮತ್ತು ರೆಫರೆಂಡಮ್‌ ಎಂದುಕರೆಯುತ್ತಾರೆ. ಇದೇ ಪದ್ಧತಿ ನಮ್ಮಲ್ಲಿ ಬಂದರೆ ಒಳ್ಳೆಯದಲ್ಲವೆ?

ಗುಪ್ತ ಮತದಾನದ ಬಗ್ಗೆ ವ್ಯಾಪಕಚರ್ಚೆಯಾಗಬೇಕಾಗಿದೆ. ಅರಿವು ಮೂಡಿಸುವ ಗುರುತರವಾದ ಜವಾಬ್ದಾರಿಯಾರ ಮೇಲೆ ಹಾಕಬೇಕು, ಆಸೆ ಆಮಿಷಗಳಿಗೆ ಬಲಿಯಾಗಿ ತಮ್ಮ ಅಮೂಲ್ಯವಾದ ಓಟನ್ನು ಮಾರಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ನಿಜವಾದ ಲಂಚಕೋರರು ಮತದಾರರೆ ಎಂದು ಏಕೆ ಪರಿಗಣಿಸಬಾರದು ಎಂದು ಚರ್ಚೆ ಮಾಡುವವರೂ ಇದ್ದಾರೆ.ಮತದಾರರು ಪ್ರಜ್ಞಾವಂತರಾಗಿತಮ್ಮಕೋಟಿ ಬೆಲೆ ಬಾಳುವ ಮತವನ್ನು ಮಾರಿಕೊಂಡು ಪ್ರಜಾಪ್ರಭುತ್ವಕ್ಕೆ ಮಾರಕವಾದ ಮತದಾರರಿಗೆ ಗುಪ್ತ ಮತದಾನದ ಅರಿವನ್ನು ಮೂಡಿಸಿ ಮತದಾರರ ಶೀಲವನ್ನು ಕಾಪಾಡುವವರು ಯಾರು?

ನಮ್ಮ ಪ್ರಜಾಪ್ರಭುತ್ವ ಸರ್ಕಾರದ 3 ನೇ ಅಂಗವಾದ ನ್ಯಾಯಾಂಗವನ್ನು ಪೂಜೆ ಮಾಡಬೇಕು. ಮೂಲಭೂತ ಹಕ್ಕುಗಳಿಗೆ ಧಕ್ಕೆಯಾದರೆ ನ್ಯಾಯಾಲಯಕ್ಕೆ ಹೋಗಬಹುದು. ಶಾಸಕಾಂಗ ಮಾಡಿದ ಶಾಸನಗಳನ್ನು ಕಾನೂನಿನ ಮೂಲಕ ಜಾರಿಗೆತಂದಾಗ ತಪ್ಪುಗಳಾದಾಗ ನ್ಯಾಯಾಂಗ ವ್ಯವಸ್ಥೆ ಮುಖ ಮೋರೆ ನೋಡದೆಚಾಟಿಏಟು ಬೀಸುತ್ತಾ ಬಂದಿದೆ. ನ್ಯಾಯಾಂಗ ವ್ಯವಸ್ಥೆಇಲ್ಲದಿದ್ದರೆ ಇಷ್ಟು ಹೊತ್ತಿಗೆಏನಾಗುತ್ತಿತ್ತೋದೇವರೆ ಬಲ್ಲ. ಕಾನೂನಿನ ಕಣ್ಣಲ್ಲಿಎಲ್ಲರೂ ಸರಿಸಮಾನರು.


******
ದೂರವಾಣಿ: 9008534224