ಪೌರ ಕಾರ್ಮಿಕರ ಮುಷ್ಕರ 4ನೇ ದಿನಕ್ಕೆ

ಪೌರ ಕಾರ್ಮಿಕರ ಮುಷ್ಕರ 4ನೇ ದಿನಕ್ಕೆ

ಪೌರ ಕಾರ್ಮಿಕರ ಮುಷ್ಕರ 4ನೇ ದಿನಕ್ಕೆ

ಪೌರ ಕಾರ್ಮಿಕರ ಮುಷ್ಕರ 4ನೇ ದಿನಕ್ಕೆ


ತುಮಕೂರು: ಸೇವಾ ಖಾಯಂಮಾತಿಗೆ ಒತ್ತಾಯಿಸಿ ಪೌರ ಸ್ವಚ್ಚತಾ ಕಾರ್ಮಿಕರ ಸಂಘಟನೆಗಳು ನಿನ್ನೆಯಿಂದ ಅರಂಭಿಸಿರುವ ಮುಷ್ಕರವು ನಾಲ್ಕನೇ ದಿನಕ್ಕೂ ಮುಂದುವರೆದಿದೆ. ಜುಲೈ ಒಂದರಂಉ ಮುಖ್ಯ ಮಂತ್ರಿಗಳ ಜೊತೆಯಲ್ಲಿ ನಡೆದ ಕರ‍್ಮಿಕ ಪ್ರತಿನಿಧಿಗಳ ಮಾತುಕತೆಯ ವಿಚಾರಗಳನ್ನು ಸಭಾ ನಡವಳಿಯಲ್ಲಿ ಯಥಾವತ್ತು ತಾರದೇ ಇರುವ ಕಾರಣದಿಂದ ಮುಷ್ಕರವು ಮುಂದುವರೆದು 4ನೇ ದಿನಕ್ಕೆ ಕಾಲಿಟ್ಟಿದೆ ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ನಡೆಯುತ್ತಿರುವ ಮುನಿಸಿಪಲ್ ಕಾರ್ಮಿಕರ ಮುಷ್ಕರದ ಸ್ಥಳಕ್ಕೆ ಮಾಜಿ ಶಾಸಕ ಡಾ.ರಫೀಕ್ ಅಹಮದ್ ಡಾ.ಮುರಳಿಧರ್ ಪಾವನ ಅಸ್ಪತ್ರೆ, ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ್, ಮಂಜುನಾಥ್, ಮಹೇಶ್, ಲಕ್ಷಿನರಸಿಂಹರಾಜು, ರೂಪ ಶ್ರೀ ಮಹೇಶ್, ವೀಣಾ ಮನೋಹರ್ ಗೌಡ, ಪಾವಗಡ ಪಟ್ಟಣ ಪಂಚಾಯಿತಿ ಅಧ್ಯಕ್ಷ ವೇಲ್ ರಾಜು, ನಾಗಭೂಷನ್ ರೆಟ್ಟಿ, ಅವಿನಾಶ್ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಕಾರ್ಯಧ್ಯಾಕ್ಷ ಬಿ.ಉಮೇಶ್, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಜಿ, ಕಮಲ. ಸಪಾಯಿ ಕಾರ್ಮಚಾರಿ ಕಾವಲು ಸಮಿತಿ ಓಬಳೇಶ್, ಸ್ಲಂ ಜನಾಂದೋಲದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ನೀರು ಸರಬರಾಜು ನೌಕರ ಸಂಘದ ಮಂಜುನಾಥ, ಶಿವರಾಜು ಮತ್ತಿತರು ಮಾತನಾಡಿ ಮುಷ್ಕರ ಬೆಂಬಲಿಸಿದರು.