ಕನ್ನಡ ಗೀತ ಗಾಯನ ಹೆಮ್ಮೆ ಮೂಡಿಸುವಂತಹದ್ದು

ಕನ್ನಡ ಗೀತ ಗಾಯನ ಹೆಮ್ಮೆ ಮೂಡಿಸುವಂತಹದ್ದು

ಕನ್ನಡ ಗೀತ ಗಾಯನ ಹೆಮ್ಮೆ ಮೂಡಿಸುವಂತಹದ್ದು


ಕೊರಟಗೆರೆ: ರಾಜ್ಯೋತ್ಸವ ಲಕ್ಷಕಂಠ ಕನ್ನಡಗೀತ ಗಾಯನ ಕನ್ನಡಿಗರಲ್ಲಿ ನಿಜವಾಗಿಯೂ ಹೆಮ್ಮೆ ಮೂಡಿಸುವಂತಹದ್ದು ಎಂದು ತಹಶೀಲ್ದಾರ್ ನಹಿದಾ ಜಮ್‌ಜಮ್ ತಿಳಿಸಿದರು. 
ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವ ವಿಶೇಷವಾಗಿ ತಾಲೂಕಿನ ಅಧಿಕಾರಿಗಳು, ಕನ್ನಡ ಪರ ಹೋರಾಟಗಾರರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೊತೆಗೂಡಿ ಕನ್ನಡ ಗೀತಗಾಯನ ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
ರಾಜ್ಯ ಸರ್ಕಾರವು ಈ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿರುವುದು ಕನ್ನಡಿಗರಲ್ಲಿ ಹೊಸದೊಂದು ಉತ್ಸಹ ಮೂಡಿಸಿದ್ದು, ನಾವು ಕನ್ನಡಿಗರು ಎನ್ನುವ ಆತ್ಮಾಭಿಮಾನವನ್ನು ಹೆಚ್ಚಿಸಿದೆ ಎಂದರು.
ನಾವೆಲ್ಲಾ ಕನ್ನಡಿಗರು ಒಂದೇ ಎನ್ನುವ ಜಾಗತಿಕ ಗುರಿಯಲ್ಲಿ ಬಾಳಬೇಕಿದ್ದು ಇತರೆ ಭಾಷೆಯವರಿಗೆ ಕನ್ನಡದ ನೆಲ, ಜಲ, ಭಾಷೆ, ವೈವಿಧ್ಯತೆ ಮತ್ತು ಸಂಸ್ಕೃತಿಯನ್ನು ತಿಳಿಸಿಕೊಡುವುದರೊಂದಿಗೆ ಕನ್ನಡವನ್ನು ಮಹತ್ವವನ್ನು ತಿಳಿಸಬೇಕಿದೆ ಎಂದು ಹೇಳಿದರು. 
ರಾಷ್ಟçಕವಿ ಡಾ. ಕುವೆಂಪು ರವರ ಬಾರಿಸು ಕನ್ನಡ ಡಿಂಡಿಮವ, ಡಾ. ನಿಸಾರ್ ಅಹಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ ಮತ್ತು ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎನ್ನುವ ಗೀತೆಗಳನ್ನು ಹಾಡಲಾಯಿತು. 
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ದೊಡ್ಡ ಸಿದ್ದಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್, ವೈದ್ಯ ಸುಜಾತ ನಾಗ್, ಹಿಂದುಳಿದ ವರ್ಗಗಳ ಸಹಾಯಕ ನಿದೇಶಕ ಅನಂತರಾಜು, ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎನ್. ನಟರಾಜ್, ಸದಸ್ಯರಾದ ಕೆ.ಆರ್. ಓಬಳರಾಜು, ಮುಖಂಡರಾದ ಎಲ್. ರಾಜಣ್ಣ, ಚಿಕ್ಕರಂಗಯ್ಯ, ಅರವಿಂದ್ ಇದ್ದರು.