ಶಿವಾತ್ಮಾನಂದ ಸರಸ್ವತಿ ಸ್ವಾಮೀಜಿ ನಿಧನ: ಜಿಲ್ಲಾ ವಿಶ್ವಕರ್ಮ ಮಹಾಸಭಾ ಸಂತಾಪ

shivathmananda-saraswathi-swamiji-death-jilla-vishwakarma-mahasabha-condolence

ಶಿವಾತ್ಮಾನಂದ ಸರಸ್ವತಿ ಸ್ವಾಮೀಜಿ ನಿಧನ: ಜಿಲ್ಲಾ ವಿಶ್ವಕರ್ಮ ಮಹಾಸಭಾ ಸಂತಾಪ


ಶಿವಾತ್ಮಾನಂದ ಸರಸ್ವತಿ ಸ್ವಾಮೀಜಿ ನಿಧನ: ಜಿಲ್ಲಾ ವಿಶ್ವಕರ್ಮ ಮಹಾಸಭಾ ಸಂತಾಪ

ಕೋಲಾರ : ಪರಮ ಪೂಜ್ಯ ಶ್ರೀ ಶಿವಾತ್ಮಾನಂದ ಸರಸ್ಪತಿ ಸ್ವಾಮೀಜಿಗಳು ಅಪಘಾತಕ್ಕೀಡಾಗಿ ಶಿವಕ್ಯರಾಗಿರುವುದು ವಿಶ್ವಕರ್ಮ ಸಮಾಜಕ್ಕೆ ತುಂಬಲಾರ ನಷ್ಟವೆಂದು ಕೋಲಾರ ಜಿಲ್ಲಾ ವಿಶ್ವ ಕರ್ಮಾ ಮಹಾಸಭಾದ ಜಿಲ್ಲಾಧ್ಯಕ್ಷ ಕಲಾವಿದ ವಿಷ್ಣು ಶೋಕ ವ್ಯಕ್ತಪಡಿಸಿದ್ದಾರೆ.


ಚಿಕ್ಕಬಳ್ಳಾಪುರ ಜಿಲ್ಲೆ ನಂದಿ ತಪ್ಪಲಿನಲ್ಲಿ ವಿಶ್ವಕರ್ಮ ಸೇರಿದಂತೆ ಎಲ್ಲಾ ಸಮಾಜಗಳನ್ನು ಮಾತೃ ಹೃದಯದಿಂದ ಬರ ಮಾಡಿಕೊಳ್ಳುತ್ತಿದ್ದ ನಂದಿ ಆಶ್ರಮದ ಪೂಜ್ಯರಾದ ಶಿವಾತ್ಮಾನಂದ ಶ್ರೀಗಳುಕಾರು ಅಪಘಾತ ಒಂದರಲ್ಲಿ ತೀವ್ರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ಭಾರತ ದೇಶದ ವಿಶ್ವಕರ್ಮ ಸಮುದಾಯಕ್ಕೆ ತುಂಬಲಾರದ ನ್ಠವಾಗಿದೆ ಎಂದರು.


ಸ್ವಾಮೀಜಿಗಳು ದೇಶದ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮ ಬೋಧನೆಯಿಂದ ಎಲ್ಲಾ ಸಮಾಜದವರನ್ನು ಸನ್ಮಾರ್ಗದತ್ತ ಕೊಡೊಯ್ಯುವ ಏಕೆಕ ಶ್ರೀಗಳಾಗಿದ್ದರು. ಘನ ವಿದ್ವಾಂಸರು , ವೇದಾಧ್ಯಯನ ಪಂಡಿತರು, ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿ ಪ್ರಸಿದ್ಧರಾಗಿದ್ದ ಸ್ವಾಮೀಜಿಗಳು ರಾಜ್ಯದ ಉದ್ದಗಲಕ್ಕೂ ಸಂಚರಿಸಿ ವಿಶ್ವಕರ್ಮ ಸಮಾಜಕ್ಕೆ ಏನೆಲ್ಲಾ ಕೊಡುಗೆಗಳನ್ನು ಸರ್ಕಾರಗಳಿಂದ ಕೊಡಿಸುವತ್ತ ಸೇವೆಯನ್ನು ಗೈದಿದ್ದರು ಎಂದರು


ವಿಶ್ವಕರ್ಮ ಸಮಾಜದ ಪ್ರಮುಖ ಪೀಠಗಳಲ್ಲಿ ಒಂದಾದ ನಂದಿ ಆಶ್ರಮದ ಪರಮ ಪೂಜ್ಯರಾದ ಸರಸ್ಪತಿ ಸ್ವಾಮಿಗಳು ಇನಿಲ್ಲ ಎನ್ನುವುದು ಸಮಾಜದ ಅಘಾತಕಾರಿಯಾಗಿದೆ. ಇವರ ಮಾರ್ಗದರ್ಶನ ಮತ್ತು ದಾರಿದೀಪವಾಗಿ ಸಮಾಜವನ್ನು ಮುನ್ನಡೆಸುವ ದಾರ್ಷನಿಕರಾಗಿದ್ದರು ಎಂದರು.


ಶ್ರೀಗಳ ಆತ್ಮಕ್ಕೆ ಭಗವಾನ್ ವಿಶ್ವಕರ್ಮ ಹಾಗೂ ಶ್ರೀ ಕಾಳಿಕಾ ಮಾತೆ ಶಾಂತಿ ನೀಡಲೆಂದು ವಿಶ್ವಕರ್ಮ ಮಹಾ ಸಭಾದ ಜಿಲ್ಲಾಧ್ಯಕ್ಷ ಕಲಾವಿದ ವಿಷ್ಣು, ಜಿಲ್ಲಾ ಉಪಾಧ್ಯಕ್ಷ ಶಿಲ್ಪಿ ಎಸ್.ಎನ್.ಪುರುಷೋತ್ತಮಾಚಾರ್ಯ, ಶಿಲ್ಪಿ ಮಹದೇವ ಪಂಚಾಲ, ಎ.ಪ್ರಭಾಕರ್, ಡಿ.ಹರಿಪ್ರಕಾಶ್, ಕೆ.ಎನ್.ಶ್ರೀನಿವಾಸಾಚಾರ್ಯ, ಶಿಲ್ಪಿ ಆಲೇರಿ ವೆಂಕಟಶಾಮಾಚಾರ್ಯ, ವಿ.ಚಲಪತಿ, ಕೆ. ಮೋಹನಾಚಾರ್ಯಲು, ರಾಮಕೃಷ್ಣಾಚಾರ್ಯ, ಗಿರಿಶೇಖರಾಚಾರ್ಯ, ಕೃಷ್ಣಾಚಾರ್ಯ, ನಂದನ್ ಕುಮಾರ್ ಸೇರಿದಂತೆ ನೂರಾರು ವಿಶ್ವಕರ್ಮರು ದುಃಖ ವ್ಯಕ್ತಪಡಿಸಿದ್ದಾರೆ.