ಕಾರು ಬಿಟ್ಟು ಕಳಿಸಲು 28 ಸಾವಿರ ರೂ ಲಂಚ:  ಎಸಿಬಿ ವಶದಿಂದ ಸಿಎಸ್‌ಪುರ ಎಸ್‌ಐ ಪರಾರಿ!

ಕಾರು ಬಿಟ್ಟು ಕಳಿಸಲು 28 ಸಾವಿರ ರೂ ಲಂಚ:  ಎಸಿಬಿ ವಶದಿಂದ ಸಿಎಸ್‌ಪುರ ಎಸ್‌ಐ ಪರಾರಿ!

ಕಾರು ಬಿಟ್ಟು ಕಳಿಸಲು 28 ಸಾವಿರ ರೂ ಲಂಚ: 
ಎಸಿಬಿ ವಶದಿಂದ ಸಿಎಸ್‌ಪುರ ಎಸ್‌ಐ ಪರಾರಿ!


ಗುಬ್ಬಿ: ಪೊಲೀಸರ ವಶದಲ್ಲಿದ ಕಾರು ಬಿಡುಗಡೆ ಮಾಡಲುಇ 28 ಸಾವಿರ ರೂ ಲಂಚ ಬೇಡಿಕೆ ಇಟ್ಟು 12 ಸಾವಿರ ಪಡೆದು ಉಳಿದ 16 ಸಾವಿರ ಲಂಚ ಸ್ವೀಕರಿಸುವ ವೇಳೆ ತಾಲ್ಲೂಕಿನ ಸಿ.ಎಸ್.ಪುರ ಪಿಎಸ್‌ಐ  ಸೋಮಶೇಖರ್ ಎಸಿಬಿ ಬಲೆಗೆ ಬಿದ್ದಿದ್ದು, ವಿಚಾರಣೆ ಅರ್ಧದಲ್ಲೇ ತನ್ನ ಮೊಬೈಲ್ ಜತೆ ಬೈಕ್ ನಲ್ಲಿ ಪರಾರಿಯಾದ ಘಟನೆ ತೀರ ಅನುಮಾನಕ್ಕೆ ಎಡೆಮಾಡಿದೆ. ನಂತರ ಸಾರ್ವಜನಿಕರು ಬೆನ್ನತ್ತಿ ಹಿಡಿಯಲು ಮುಂದಾದ ಘಟನೆ ಪೋಲಿಸ್ ಇಲಾಖೆಗೆ ಮುಜುಗರ ಉಂಟುಮಾಡಿದ ಘಟನೆ ಬುಧವಾರ ನಡೆದಿದೆ.


ಕೌಟುಂಬಿಕ ಕಲಹದ ವಿಚಾರವಾಗಿ ಸಿ.ಎಸ್.ಪುರ ಠಾಣೆಯಲ್ಲಿ ಚಂದ್ರಣ್ಣ ಎಂಬುವವರ ಮೇಲೆ ಕಳೆದ ತಿಂಗಳು 22 ರಂದು ದೂರು ದಾಖಲಾಗಿತ್ತು. ನ್ಯಾಯಾಲಯದಲ್ಲಿ ಜಾಮೀನು ಪಡೆದ ಚಂದ್ರಣ್ಣ ತನ್ನ ಕಾರು ಬಿಡಿಸಿಕೊಳ್ಳಲು ಬಂದ ಸಂದರ್ಭದಲ್ಲಿ 28 ಸಾವಿರ ರೂಗಳ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಎಸಿಬಿಗೆ ದೂರು ನೀಡಿದ್ದ ಚಂದ್ರಣ್ಣ ಈಗಾಗಲೇ 12 ಸಾವಿರ ಲಂಚ ನೀಡಿದ್ದ ಬಗ್ಗೆ ತಿಳಿಸಿ ಉಳಿದ 16 ಸಾವಿರ ರೂ ಲಂಚವನ್ನು ಹೆಡ್ ಕಾನ್ಸ್ಟೇಬಲ್ ನಯಾಜ್ ಅಹಮದ್ ಮೂಲಕ ಹಣ ನೀಡುವ ಸಮಯದಲ್ಲಿ ಎಸಿಬಿ ಇನ್ಸ್ಪೆಕ್ಟರ್ ವಿಜಯಲಕ್ಷ್ಮೀ ತಂಡ ಪಿಎಸೈ ಸೋಮಶೇಖರ್ ಮತ್ತು ನಯಾಜ್ ಅವರನ್ನು ವಶಕ್ಕೆ ಪಡೆಯಿತು.
 ತನಿಖೆ ಆರಂಭಿಸಿದ ಸಂದರ್ಭದಲ್ಲಿ ಠಾಣೆಯ ಎಲ್ಲಾ ಸಿಬ್ಬಂದಿಗಳ ಮೊಬೈಲ್ ಪಡೆದು ವಿಚಾರಣೆ ನಡೆಸಲಾಯಿತು. ಮಧ್ಯಾಹ್ನ ಊಟದ ಸಮಯದಲ್ಲಿ ಠಾಣೆಯಿಂದ ಹೊರಬಂದ ಪಿಎಸೈ ಸೋಮಶೇಖರ್ ಬೈಕ್ ಏರಿ ಪಲಾಯನ ಆಗಿದ್ದು ಎಲ್ಲರಿಗೂ ಅಚ್ಚರಿ ತಂದಿದೆ. ತನ್ನ ಮೊಬೈಲ್ ಜತೆ ಬೈಕ್ ಏರಿದ ಪಿಎಸೈ ಪರಾರಿ ಒಂದು ಸಿನಿಮೀಯಾ ಮಾದರಿಯಲ್ಲಿ ಕಂಡಿತ್ತು. ಆದರೆ ಎಲ್ಲಾ ಪೊಲೀಸ್ ಅಧಿಕಾರಿಗಳ ಮುಂದೆ ನಡೆದ ಈ ಪಲಾಯನ ಘಟನೆ ಇಲಾಖೆಗೆ ಮುಜುಗರ ತಂದಿದೆ. ಇಡೀ ಪ್ರಕರಣ ಮತ್ತು ಎಸ್ಕೇಪ್ ಹೈಡ್ರಾಮಾಗೆ ಠಾಣೆಯ ಚಾಲಕನ ಹೆಸರು ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಬಂದಿದೆ.