ಈ ಸಲ ರಾಜೇಂದ್ರ ಗೆಲ್ಲಬೇಕು” ಸಿದ್ಧರಾಮಯ್ಯ

siddaramiah r rajendra should win

ಈ ಸಲ ರಾಜೇಂದ್ರ ಗೆಲ್ಲಬೇಕು” ಸಿದ್ಧರಾಮಯ್ಯ

ಈ ಸಲ ರಾಜೇಂದ್ರ ಗೆಲ್ಲಬೇಕು” ಸಿದ್ಧರಾಮಯ್ಯ

ತುಮಕೂರು: ವಿಧಾನ ಪರಿಷತ್ ಚುನಾವಣೆಗೆ ಕೆ.ಎನ್.ರಾಜಣ್ಣ ಮಗ ಆರ್.ರಾಜೇಂದ್ರ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರಕಲಿದೆ ಎಂದು ವೇದಿಕೆಯಿಂದ ಘೋಷಿಸಿದ ಸಿದ್ದರಾಮಯ್ಯನವರು, ರಾಜೇಂದ್ರ ನೂರಕ್ಕೆ ನೂರು ಕಾಂಗ್ರೆಸ್‌ನಿAದ ಗೆದ್ದು ವಿಧಾನ ಪರಿಷತ್ ಪ್ರವೇಶಿಸಲಿದ್ದಾರೆ ಎಂದು ಭವಿಷ್ಯ ನುಡಿದರು.


ಕಳೆದ ಚುನಾವಣೆಯಲ್ಲಿ ರಾಜೇಂದ್ರ ಸೋತಿದ್ದಾರೆ, ಈ ಸೋಲಿಗೆ ಕಾರಣ ಏನೆಂದು ಈಗ ಹೇಳಹೋಗುವುದಿಲ್ಲ. ರಾಜೇಂದ್ರ ಗೆಲ್ಲಲೇ ಬೇಕು, ಜಿಲ್ಲೆಯ ಎಲ್ಲ ಕಾಂಗ್ರೆಸ್ ಮುಖಂಡರು ಸೇರಿ ರಾಜೇಂದ್ರ ಅವರನ್ನು ಗೆಲ್ಲಿಸಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.


ಚುನಾವಣೆ ನಡೆಯುತ್ತಿರುವ 25 ಕ್ಷೇತ್ರಗಳ ಪೈಕಿ ಕಡೇ ಪಕ್ಷ 15ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಬೇಕು ಎಂದು ಅವರು ಆಶಿಸಿದರು.