ಜನರ ಅನುಕೂಲಕ್ಕಾಗಿ ಹೊಸ ಮರಳು ನೀತಿ

ಜನರ ಅನುಕೂಲಕ್ಕಾಗಿ ಹೊಸ ಮರಳು ನೀತಿ

ಜನರ ಅನುಕೂಲಕ್ಕಾಗಿ ಹೊಸ ಮರಳು ನೀತಿ


ಚಿಕ್ಕನಾಯಕನಹಳ್ಳಿ : ರಾಜ್ಯದ ಜನರಿಗೆ ಕಡಿಮೆ ದರದಲ್ಲಿ ಮರಳು ದೊರೆಯುವಂತೆ ಮಾಡಲು ಹೊಸ ಮರಳು ನೀತಿಯನ್ನು ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.


ಹಂದನಕೆರೆಯಿAದ ಗವಿರಂಗಪುರ 3 ಕಿಮಿ ಮುಂದುವರೆದ ರಸ್ತೆ,  ಶಿಶುವಾಳದಿಂದ ಬೈಲಪ್ಪನಮಠದ 1.5 ಕಿ.ಮೀ ಲಿಂಕ್ ರಸ್ತೆ, ಬೈರಾಪುರ ಗೇಟ್‌ನಿಂದ ರಾಜ್ಯ ಹೆದ್ದಾರಿ 47ರ ಮುಖಾಂತರ ಗುಬೇಹಳ್ಳಿಗೆ ಮುಂದುವರೆದ ರಸ್ತೆಗೆ ಲೋಕೋಪಯೋಗಿ ಇಲಾಖೆಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.


ಆನ್‌ಲೈನ್‌ನಲ್ಲಿ ಮರುಳು ಖರೀದಿಗೆ ಅವಕಾಶ ಕಲ್ಪಿಸಿದ್ದು, ಒಂದು ಲಾರಿಯ ಲೋಡ್‌ಗೆ 8 ರಿಂದ 10 ಸಾವಿರ ರೂ ಕಡಿಮೆಯಾಗಲಿದೆ. ಮರಳನ್ನು ತೆಗೆಯುವಾಗ ಗಾಮ ಪಂಚಾಯಿತಿಯ ಅನುಮತಿಯನ್ನು ಪಡೆದು ರಾಯಲ್ಟಿ ಕಟ್ಟಬೇಕಿದೆ. ಸರಕಾರಿ ಕಟ್ಟಡದ ಕಾಮಾಗಾರಿಗಳಿಗೆ ಮತ್ತು ಬಡವರಿಗೆ ರಿಯಾಯಿತಿ ದರದಲ್ಲಿ ಮರಳು ನೀಡಲು ಸೂಚಿಸಿಲಾಗಿದೆ. ಖಾಸಗಿ ಜಮೀನುಗಳಲ್ಲಿ ಮರಳಿನ ನಿಕ್ಷೇಪವಿದ್ದರೆ ಆಯಾ ಸ್ಥಳೀಯ ಆಡಳಿತದ ಅನುಮತಿ ಪಡೆದು ಮರಳನ್ನು ಮಾರಾಟ ಮಾಡಬಹುದಾಗಿದೆ ಎಂದರು.


ರಾಜ್ಯ, ಜಿಲ್ಲಾ, ಹಾಗು ತಾಲ್ಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಗ್ರಾ.ಪಂ.ಗಳಿಗೆ ಮರುಳು ಸಾಗಣೆ ಪರವಾನಿಗೆ ನೀಡುವ ವಿಕೇಂದ್ರಿಕರಣ ವ್ಯವಸ್ಥೆ ಮಾಡಲಾಗಿದೆ. ನಾನಾ ಹಂತಗಳ ಹೊಣೆಗಾರಿಕೆಯನ್ನು ನಿಯಮಾವಳಿಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಸಮಿತಿಗಳು ಮರಳು ನಿಕ್ಷೇಪ ಗುರುತಿಸಿದ ಬಳಿಕ ಪರವಾನಿಗೆ ಅವಧಿಯನ್ನು ನಿಗದಿಪಡಿಸಿ ಮರಳು ತೆಗೆಯಲು ಸಂಬAಧಿಸಿದ ಗ್ರಾ.ಪಂಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ವೇಳೆ ಲೋಕೋಪಯೋಗಿ ಇಲಾಖಾ ಇಂಜಿನಿಯರ್ ಚಂದ್ರಶೇಖರ್, ಮಾಜಿ ತಾ.ಪಂ ಉಪಾಧ್ಯಕ್ಷ ನಿರಂಜನ್, ಸ್ಥಳೀಯ ಜನ ಪ್ರತಿನಿಧಿಗಳು ಹಾಗು ಗ್ರಾಮಸ್ಥರಿದ್ದರು.