ಕೆಟ್ಟುಹೋದ ಟಿಸಿ, ಮೋಟಾರ್‌ಗಳು: ನೀರು ಪೂರೈಕೆಗೆ ಅಡ್ಡಿ

ಕೆಟ್ಟುಹೋದ ಟಿಸಿ, ಮೋಟಾರ್‌ಗಳು: ನೀರು ಪೂರೈಕೆಗೆ ಅಡ್ಡಿ

ಕೆಟ್ಟುಹೋದ ಟಿಸಿ, ಮೋಟಾರ್‌ಗಳು: ನೀರು ಪೂರೈಕೆಗೆ ಅಡ್ಡಿ

ಆರ್.ಎಸ್.ಅಯ್ಯರ್
ತುಮಕೂರು : ತುಮಕೂರು ನಗರಕ್ಕೆ ಹೇಮಾವತಿ ನೀರು ಪೂರೈಕೆ ಮಾಡುವ ಬುಗುಡನಹಳ್ಳಿ ಜಲಸಂಗ್ರಹಾಗಾರದಲ್ಲಿ ಹೇಮಾವತಿ ನೀರು ಸಾಕಷ್ಟು ಪ್ರಮಾಣದಲ್ಲಿ ಇದೆಯಾದರೂ, ವಿದ್ಯುತ್ ಟ್ರಾನ್ಸ್ಫಾರ್ಮರ್ ಮತ್ತು ಪಂಪ್ ಹೌಸ್‌ಗಳಲ್ಲಿರುವ ಮೋಟಾರ್‌ಗಳು ಕೆಟ್ಟುಹೋಗಿರುವ ಹಿನ್ನೆಲೆಯಲ್ಲಿ ಹೇಮಾವತಿ ನೀರು ಸರಬರಾಜಿನಲ್ಲಿ ಅಡಚಣೆಗಳು ಉಂಟಾಗುತ್ತಿದೆಯೆAಬ ಗಂಭೀರ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಇAತಹುದೊAದು ಗಂಭೀರ ತಾಂತ್ರಿಕ ಸಮಸ್ಯೆಗಳು ಉದ್ಭವಿಸಿದ್ದರೂ, ತುಮಕೂರು ಮಹಾನಗರ ಪಾಲಿಕೆಯು ಅದನ್ನು ತ್ವರಿತವಾಗಿ ಸರಿಪಡಿಸುವ ಬದಲು ಆ ಲೋಪವನ್ನು ಮುಚ್ಚಿಕೊಳ್ಳುವ ಸಲುವಾಗಿ ವಿದ್ಯುತ್ ಸಮಸ್ಯೆಯಿಂದ ನೀರು ಪೂರೈಕೆಗೆ ಅಡಚಣೆಯುಂಟಾಗುತ್ತಿದೆಯೆAಬ ಕುಂಟುನೆಪ ಹೇಳುತ್ತಿದೆಯೆಂಬುದು ಬಹಿರಂಗವಾಗಿದೆ. 
ಖಚಿತ ಮಾಹಿತಿ ಪ್ರಕಾರ, ತುಮಕೂರು ಮಹಾನಗರ ಪಾಲಿಕೆಗೆ ಸೇರಿರುವ ಬುಗುಡನಹಳ್ಳಿ ಜಲಸಂಗ್ರಹಾಗಾರದ ಬಳಿ ಎರಡು ವಿದ್ಯುತ್ ಟ್ರಾನ್ಸ್ಫಾರ್ಮರ್ (ಟಿಸಿ)ಗಳಿವೆ. ಇವುಗಳಲ್ಲಿ ಒಂದು ಟಿ.ಸಿ. ಕೆಟ್ಟು ಹೋಗಿ ಸುಮಾರು ಎರಡು ತಿಂಗಳುಗಳಾದರೂ ಈವರೆಗೆ ರಿಪೇರಿ ಆಗಿಲ್ಲ. ಈ ಟಿ.ಸಿ.ಗಳನ್ನು ಪಾಲಿಕೆಯೇ ತನ್ನ ಅನುಕೂಲಕ್ಕಾಗಿ ಪ್ರತಿಷ್ಠಾಪನೆ ಮಾಡಿಸಿಕೊಂಡಿರುವುದರಿAದ ಇದನ್ನು ರಿಪೇರಿ ಮಾಡಿಸುವ ಹೊಣೆಯೂ ಪಾಲಿಕೆಯದ್ದೇ ಆಗಿದೆ.
ಬುಗುಡನಹಳ್ಳಿ ಬಳಿಯ ಪಂಪ್ ಹೌಸ್‌ನಲ್ಲಿರುವ ೨೧೫ ಹೆಚ್.ಪಿ. ಸಾಮರ್ಥ್ಯದ ಮೂರು ಮೋಟಾರ್‌ಗಳಲ್ಲಿ ಎರಡು ಮೋಟಾರ್‌ಗಳು ಸುಟ್ಟಿದ್ದು, ಎರಡು ತಿಂಗಳುಗಳಿAದ ಅದನ್ನು ರಿಪೇರಿ ಮಾಡಿಸಲು ಆಗಿಲ್ಲ.
ಅಲ್ಲೇ ಸಮೀಪದ ಕುಪ್ಪೂರು ಜಾಕ್ವೆಲ್‌ನಲ್ಲಿ ೧೮೦ ಹೆಚ್.ಪಿ. ಸಾಮರ್ಥ್ಯದ ಒಂದು ಮೋಟಾರ್ ಇನ್ನೂ ಸಹಾ ರಿಪೇರಿ ಭಾಗ್ಯ ಕಂಡಿಲ್ಲ.
ಶಿರಾಗೇಟ್ ಹೊರವಲಯದ ಪಂಥನಾಥರಾಯರ ಪಾಳ್ಯದ ಪಂಪ್‌ಹೌಸ್‌ನಲ್ಲಿ ೩೩೫ ಹೆಚ್.ಪಿ. ಸಾಮರ್ಥ್ಯದ ಮೂರು ಮೋಟಾರ್‌ಗಳಿದ್ದು, ಎರಡು ಮೋಟಾರ್‌ಗಳು ಕೆಟ್ಟಿವೆ.
ಮಹಾನಗರ ಪಾಲಿಕೆ ಕಚೇರಿ ಆವರಣದ ಪಂಪ್‌ಹೌಸ್‌ನಲ್ಲಿ ೨೧೫ ಹೆಚ್.ಪಿ. ಸಾಮರ್ಥ್ಯದ ಮೂರು ಮೋಟಾರ್‌ಗಳಿದ್ದು, ಅವುಗಳಲ್ಲಿ ಎರಡು ಮೋಟಾರ್‌ಗಳು ಕೆಟ್ಟಿವೆ ಎಂದು ಮೂಲಗಳು ಖಚಿತಪಡಿಸಿವೆ.
ಸಂತೆಪೇಟೆಯಲ್ಲಿರುವ ಪಂಪ್‌ಹೌಸ್‌ನಲ್ಲಿ ಮೂರು ಮೋಟಾರ್‌ಗಳಿದ್ದು, ಇದರಲ್ಲಿ ಒಂದು ಮೋಟಾರ್ ಇತ್ತೀಚೆಗೆ ಕೆಟ್ಟು ಹೋದಾಗ ಒಡನೆಯೇ ಸ್ಥಳೀಯರನ್ನು ಕರೆಸಿ ಸಣ್ಣಪುಟ್ಟ ರಿಪೇರಿ ಮಾಡಲಾಗಿದೆಯೆಂದು ತಿಳಿದುಬಂದಿದೆ.
ತಾAತ್ರಿಕ ಕಾರಣಗಳಿಂದ ಈಗ ಸಂತೆಪೇಟೆ ಪಂಪ್‌ಹೌಸ್‌ಗೆ ಬುಗುಡನಹಳ್ಳಿಯಿಂದ ಸರಾಗವಾಗಿ ಹೇಮಾವತಿ ನೀರು ಹರಿದುಬರುತ್ತಿಲ್ಲವೆನ್ನಲಾಗಿದೆ.


ಎಕ್ಸ್ಪ್ರೆಸ್ ವಿದ್ಯುತ್ ಲೈನ್ 


ಬುಗುಡನಹಳ್ಳಿಯಿಂದ ತುಮಕೂರು ನಗರಕ್ಕೆ ಅಡೆತಡೆಯಿಲ್ಲದೆ ನೀರು ಸರಬರಾಜು ಆಗಬೇಕೆಂಬ ಕಾರಣದಿಂದ ಈ ಹಿಂದೆಯೇ ನರಸಾಪುರ, ಕುಪ್ಪೂರು, ಬುಗುಡನಹಳ್ಳಿ, ಪಿ.ಎನ್.ಆರ್.ಪಾಳ್ಯದ ಪಂಪ್‌ಹೌಸ್‌ಗಳಿಗೆ ಅಂತರಸನಹಳ್ಳಿ ವಿದ್ಯುತ್ ಕೇಂದ್ರದಿAದ ಎಕ್ಸ್ಪ್ರೆಸ್ ವಿದ್ಯುತ್ ಲೈನ್ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಇಲ್ಲಿ ವಿದ್ಯುತ್ ಸಮಸ್ಯೆ ತಲೆದೋರಲು ಸಾಧ್ಯವಿಲ್ಲ. ಅಪರೂಪಕ್ಕೆ ಸಮಸ್ಯೆ ಎದುರಾದರೂ, ಅದನ್ನು ಬಗೆಹರಿಸಲಾಗುತ್ತದೆ. ಇದು ವಾಸ್ತವ ವಿಚಾರ. ಹೀಗಾಗಿ ವಿದ್ಯುತ್ ಸಮಸ್ಯೆ ಎಂಬ ಕುಂಟುನೆಪವನ್ನು ಹೇಳುವಂತಿಲ್ಲವೆAಬುದು ಮೂಲಗಳ ಅಭಿಪ್ರಾಯ.


ಜನರೇಟರ್ ಸೌಲಭ್ಯ


ಇದಿಷ್ಟೇ ಅಲ್ಲದೆ ತುಮಕೂರು ನಗರದಲ್ಲಿ ನೀರಿನ ಸರಬರಾಜಿಗೆ ತೊಡಕಾಗಬಾರದೆಂಬ ಕಾರಣದಿಂದ ಪಾಲಿಕೆ ಆವರಣದ ಪಂಪ್‌ಹೌಸ್ ಮತ್ತು ವಿದ್ಯಾನಗರದ ಪಂಪ್‌ಹೌಸ್‌ಗೆ ಜನರೇಟರ್ ಅಳವಡಿಸಿದ್ದು, ವಿದ್ಯುತ್ ಪೂರೈಕೆ ಇಲ್ಲದಿದ್ದಾಗ ಜನರೇಟರ್ ಬಳಸಿಕೊಳ್ಳುವ ಸದವಕಾಶ ಕಲ್ಪಿಸಲಾಗಿದೆ. ವಾಸ್ತವ ಹೀಗಿರುವಾಗ ವಿದ್ಯುತ್ ಸಮಸ್ಯೆ ಎಂದು ಹೇಗೆ ಹೇಳಲು ಸಾಧ್ಯ? ಎಂದು ಬಲ್ಲಮೂಲಗಳು ಪ್ರಶ್ನಿಸುತ್ತಿವೆ.


ಪಂಪು-ಮೋಟಾರ್ ರಿಪೇರಿ ವಿಳಂಬ


ಈ ಮಧ್ಯೆ ನಗರದಲ್ಲಿರುವ ಪಾಲಿಕೆಗೆ ಸೇರಿದ ಬೋರ್‌ವೆಲ್‌ಗಳಿಗೆ ಅಳವಡಿಸಲಾಗಿರುವ ಪಂಪು-ಮೋಟಾರ್‌ಗಳ ರಿಪೇರಿ ಕೆಲಸದಲ್ಲಿ ವಿಳಂಬವಾಗುತ್ತಿದೆಯೆAಬುದೂ ಈಗ ಚರ್ಚೆಯಾಗುತ್ತಿದೆ. ಪದೇ ಪದೇ ರಿಪೇರಿಗೆ ಬರುತ್ತಿದೆಯೆಂಬ ದೂರು ಒಂದೆಡೆಯಾದರೆ, ರಿಪೇರಿಗೆಂದು ಹೋದ ಪಂಪು-ಮೋಟಾರ್‌ಗಳು ಬೇಗ ದುರಸ್ತಿಗೊಳ್ಳುತ್ತಿಲ್ಲವೆಂಬುದು ಇನ್ನೊಂದು ದೂರಾಗಿದೆ.


ಎಲೆಕ್ಟಿçಕಲ್ ಇಂಜಿನಿಯರ್‌ಗಳೇ ಇಲ್ಲ!


ಮಹಾನಗರ ಪಾಲಿಕೆಯ ನೀರು ಪೂರೈಕೆ ಮತ್ತು ವಿದ್ಯುತ್ ವಿಭಾಗಕ್ಕೆ ಎಲೆಕ್ಟಿçಕಲ್ ಇಂಜಿನಿಯರಿAಗ್ ವ್ಯಾಸಂಗ ಮಾಡಿದ ಇಂಜಿನಿಯರ್‌ಗಳೇ ಇರಬೇಕು. ಕಾರಣ ಬೃಹತ್ ಸಾಮರ್ಥ್ಯದ ಪಂಪು-ಮೋಟಾರ್‌ಗಳು, ಸಬ್‌ಮರ್ಸಿಬಲ್ ಪಂಪು ಮೋಟಾರ್‌ಗಳ ಸಮಗ್ರ ಕಾರ್ಯವಿಧಾನಗಳ ಬಗ್ಗೆ ಅವರಿಗೆ ಸಹಜವಾಗಿಯೇ ಅರಿವಿರುತ್ತದೆ. ಅದೇ ರೀತಿ ಬೀದಿದೀಪಗಳ ತಾಂತ್ರಿಕ ಜ್ಞಾನವೂ ಇರುತ್ತದೆ. ಆದರೆ ಪ್ರಸ್ತುತ ತುಮಕೂರು ಮಹಾನಗರ ಪಾಲಿಕೆಯ ನೀರುಪೂರೈಕೆ ಮತ್ತು ವಿದ್ಯುತ್ ವಿಭಾಗದಲ್ಲಿ ಎಲೆಕ್ಟಿçಕಲ್ ಇಂಜಿನಿಯರಿAಗ್ ವಿಷಯದಲ್ಲಿ ಬಿ.ಇ. ಅಥವಾ ಡಿಪ್ಲೊಮೋ ವ್ಯಾಸಂಗ ಮಾಡಿದವರೇ ಇಲ್ಲದಿರುವುದು ಚರ್ಚೆಗೆ ಗ್ರಾಸವಾಗಿದೆ.