ಅ. 25 ರಿಂದ ರಾಜ್ಯಾದ್ಯಂತ ಪೂರ್ಣ ಪ್ರಮಾಣದ ಶಾಲೆ: ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸವಿದ ಸಚಿವ ಬಿ.ಸಿ. ನಾಗೇಶ್

ಅ. 25 ರಿಂದ ರಾಜ್ಯಾದ್ಯಂತ ಪೂರ್ಣ ಪ್ರಮಾಣದ ಶಾಲೆ: ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸವಿದ ಸಚಿವ ಬಿ.ಸಿ. ನಾಗೇಶ್

ಅ. 25 ರಿಂದ ರಾಜ್ಯಾದ್ಯಂತ ಪೂರ್ಣ ಪ್ರಮಾಣದ ಶಾಲೆ:

ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸವಿದ ಸಚಿವ ಬಿ.ಸಿ. ನಾಗೇಶ್


ತಿಪಟೂರು : ಈ ತಿಂಗಳಿನ 25 ರಿಂದ ರಾಜ್ಯದಾದ್ಯಂತ ಪೂರ್ಣ ಪ್ರಮಾಣ ಶಾಲೆಗಳನ್ನು ತೆರೆಯಲಿದ್ದು, ಕೊರೊನಾ ಪೂರ್ವದಲ್ಲಿ ಇದ್ದಂತೆಯೇ ಯಥಾವತ್ತಾಗಿ ಶಾಲೆಗಳನ್ನು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಪೂರ್ಣ ತರಗತಿಗಳನ್ನು ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಇಲ್ಲಿನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಗೆ ಗುರುವಾರ ದಿಢೀರ್ ಭೇಟಿ ನೀಡಿದ ಶಿಕ್ಷಣ ಸಚಿವರು, ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯ ಅಡಿಯಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
ಸೆಪ್ಟೆಂಬರ್ 23 ರಿಂದ ಕೋವಿಡ್ ನಂತರದಲ್ಲಿ ಶಾಲೆಗಳನ್ನು ಪ್ರಾರಂಭಿಸಿದ್ದು, ಮೊದಲನೆ ಹಂತದಲ್ಲಿ 9 ರಿಂದ 12 ರವರೆಗಿನ ತರಗತಿಗಳನ್ನು ನಂತರ 6 ರಿಂದ 8 ವರಗಿನ ಶಾಲೆಗಳನ್ನು ತೆರೆದೆವು. ನಂತರದಲ್ಲಿ ಅ. 1ರಿಂದ ಪೂರ್ಣ ಪ್ರಮಾಣದ ಶಾಲೆಗಳನ್ನು ತೆರೆಯಲು ಪ್ರಾರಂಭಿಸಿದ್ದೇವೆ. 1 ರಿಂದ 5ನೇ ತರಗತಿಗಳ ವಿದ್ಯಾರ್ಥಿಗಳಿಗೂ ಅ. 25ರಿಂದ ಶಾಲೆ ಪ್ರಾರಂಭಿಸಲಿದ್ದು, ಸಕಲ ಸಿದ್ಧತೆಗಳನ್ನು ಇಲಾಖೆಯಿಂದ ಮಾಡಿಕೊಳ್ಳಲಾಗಿದೆ ಎಂದರು.
ಪೂರ್ಣ ಶಾಲೆಯಿರುವಾಗ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯ ಅಡಿಯಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮನ್ನು ಇಂದಿನಿAದ ಪ್ರಾರಂಭಿಸಲಾಗಿದೆ. ಅಲ್ಲದೇ ಇನ್ನು ಮುಂದೆ ಪೂರ್ಣ ಪ್ರಮಾಣದ ತರಗತಿಗಳನ್ನು ಕೊರೊನಾ ಮುಂಚಿತವಾಗಿ ನಡೆಯುವಂತೆಯೇ ಪ್ರಾರಂಭಿಸಲಾಗುವುದು. ಬಿಸಿಯೂಟದಲ್ಲಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಈಗಾಗಲೇ ಸೂಚನೆ ನೀಡಿದ್ದು ಎಲ್ಲೆಡೆಯಿಂದ ಉತ್ತಮ ಸ್ಪಂದನೆ ದೊರೆತಿರುವುದು ಸಂತಸ ತಂದಿದೆ. ಶಾಲೆಗಳಲ್ಲಿನ ಶಿಕ್ಷಕರು ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಂಡು ಈ ವರ್ಷದ ಪಠ್ಯವನ್ನು ಸಂಪೂರ್ಣವಾಗಿ ಬೋಧಿಸುವತ್ತ ಕಾಳಜಿವಹಿಸುವಂತೆ ಈಗಾಗಲೇ ಸುಚನೆ ನೀಡಲಾಗಿದ್ದು, ಶಿಕ್ಷಕರಿಂದಲೂ ಉತ್ತಮ ಸ್ಪಂದನೆ ದೊರೆತಿದೆ ಎಂದರು.
ಸಾಧ್ಯವಾದರೆ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಂಡು ಪಠ್ಯವನ್ನು ಮುಗಿಸುವುದಾಗಿ ಹಲವು ಶಿಕ್ಷಕರು ತಿಳಿಸಿದ್ದಾರೆ. ಇನ್ನು ವಿದ್ಯಾರ್ಥಿಗಳಿಂದ, ಪೋಷಕರಿಂದಲೂ ಉತ್ತಮ ಸ್ಪಂದನೆ ದೊರೆತಿದ್ದು, ಯಾವುದೇ ಭೀತಿ ಇಲ್ಲದೇ ತರಗತಿಗಳನ್ನು ನಡೆಸಲಾಗುವುದು. ಜೊತೆಗೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಇಲಾಖೆಯಿಂದ ಸೂಚಿಸಲಾಗಿದೆ ಎಂದು ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಬಿಸಿಯೂಟ ತಯಾರಿಸುವಂತಹ ಸಿಬ್ಬಂದಿಗೆ ನೀಡುತ್ತಿದ್ದ ಗೌರವ ಧನವನ್ನು ಇನ್ನು ಮುಂದೆ ನೇರವಾಗಿ ಅವರ ಖಾತೆಗೆ ಜಮಾವಣೆ ಮಾಡುವ ಕಾರ್ಯವಾಗುತ್ತಿದೆ. ಅದರಲ್ಲಿ ಕೆಲವರು ನೀಡಿರುವ ಬ್ಯಾಂಕ್ ಖಾತೆಗಳ ಮಾಹಿತಿ ತಪ್ಪಿರುವುದರಿಂದ ಕೆಲವರಿಗೆ ಹಣ ಸಂದಾಯ ಮಾಡಲು ಸಾಧ್ಯವಾಗಿಲ್ಲ. ಶೀಘ್ರವೇ ಅಂತಹವರಿAದ ಮಾಹಿತಿ ಪಡೆದು ಖಾತೆಗೆ ಗೌರವಧನ ಜಮಾವಣೆ ಮಾಡುವುದಾಗಿ ತಿಳಿಸಿದರು
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ, ಬಾಲಕಿಯ ಪದವಿಪೂರ್ವ ಕಾಲೇಜಿನ ಉಪಪ್ರಾಚಾರ್ಯ ಎಂ.ಎಸ್. ಚನ್ನೇಗೌಡ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ಎಸ್. ಸುರೇಶ್, ಶಿಕ್ಷಕರಾದ ಎಲ್.ಆರ್. ಕುಮಾರಸ್ವಾಮಿ, ಸಂತೋಷ್ ಕುಮಾರ್ ಎಸ್.ಜೆ., ಚಂದ್ರಶೇಖರ್ ಬಿ., ಮಧುಚಂದ್ರ, ಜಗದೀಶ್, ಮುರುಳೀಧರ್, ಮಧುಕುಮಾರ್, ಆನಂದ್, ವಸಂತಕುಮಾರ್, ಪಾರ್ವತಮ್ಮ ಜಿ., ನೂರ್ ಹಸೀನಾ ಯಾಸಿನ್, ಶೀಲಾ ಬಿ., ಸುಧಾರಾಣಿ ಇದ್ದರು.

ವಿದ್ಯಾರ್ಥಿಗಳೊಂದಿಗೆ ಊಟ ಮಾಡಿದ ಸಚಿವರು:


ತಿಪಟೂರು ನಗರದ ಬಾಲಕಿರ ಪ್ರೌಢಶಾಲೆಯಲ್ಲಿ ಸಚಿವರೇ ಖುದ್ದು ವಿದ್ಯಾರ್ಥಿನಿಯರಿಗೆ ಸಿಹಿ ಊಟವನ್ನು ಬಡಿಸಿದರು. ನಂತರದಲ್ಲಿ ತಾವು ವಿದ್ಯಾರ್ಥಿಗಳೊಂದಿಗೆ ಸೇರಿ ಸಿಹಿ ತಿಂದು ಸೇವಿಸಿದರು. ಅಲ್ಲದೇ ವಿದ್ಯಾರ್ಥಿಗಳೊಂದಿಗೆ ಪಠ್ಯದ ಬಗ್ಗೆ, ಬಸ್ಸಿನ ಸೌಕರ್ಯದ ಬಗ್ಗೆ, ಬಿಸಿಯೂಟದ ಗುಣಮಟ್ಟದ ಬಗ್ಗೆ, ಶಾಲಾ ವಾತಾವರಣ ಇನ್ನಿತರ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಿ ಮಾಹಿತಿ ಪಡೆದರು. ತವರು ತಾಲ್ಲೂಕಿನಲ್ಲಿ ಸಚಿವರ ಶಾಲೆಗಳ ಭೇಟಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಸಂಚಲನ ಸೃಷ್ಟಿಸಿತ್ತು.

ತಾವು ಓದಿದ ಶಾಲೆಗೆ ಭೇಟಿ ನೀಡಿದ ಸಚಿವರು :


ನಗರದ ಶ್ರೀ ವಿದ್ಯಾಪೀಠದ ಎಸ್.ವಿ.ಪಿ. ಪ್ರೌಢಶಾಲೆಗೆ ಭೇಟಿ ನೀಡಿದ ಸಚಿವ ಬಿ.ಸಿ.ನಾಗೇಶ್ ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಳ್ಳುತ್ತಾ ಬಿಸಿಯೂಟದ ನಿರ್ವಹಣೆ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೇ ಶಿಕ್ಷಕರೊಂದಿಗೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿ ಪಠ್ಯಕ್ರಮಕ್ಕೆ, ಬೋಧನೆಗೆ ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಿದರು.