``ತ್ಯಾಜ್ಯವನ್ನು ಇನ್ನು ಮುಂದೆ ಲಕ್ಷ್ಮೀ ಸಾಗರದ ಕಲ್ಲುಕೋರೆಯಲ್ಲಿ ಸುರಿಯಲು ಬಿಡುವುದಿಲ್ಲ''

``ತ್ಯಾಜ್ಯವನ್ನು ಇನ್ನು ಮುಂದೆ ಲಕ್ಷ್ಮೀ ಸಾಗರದ ಕಲ್ಲುಕೋರೆಯಲ್ಲಿ ಸುರಿಯಲು ಬಿಡುವುದಿಲ್ಲ''

``ತ್ಯಾಜ್ಯವನ್ನು ಇನ್ನು ಮುಂದೆ ಲಕ್ಷ್ಮೀ ಸಾಗರದ ಕಲ್ಲುಕೋರೆಯಲ್ಲಿ ಸುರಿಯಲು ಬಿಡುವುದಿಲ್ಲ''

18 ದಿನದಿಂದ ಕಾವಲು ಕಾಯುತ್ತಿರುವ ರೈತರಿಗೆ ಜಿಲ್ಲಾಧಿಕಾರಿ ಭರವಸೆ

ಕೋಲಾರ: ಹೊಸಕೋಟೆ ಮತ್ತು ಕೋಲಾರ ನಗರಸಭೆಯ ತ್ಯಾಜ್ಯ ಹಾಗೂ ಕೆ.ಆರ್.ಪುರಂ., ಹೊಸಕೋಟೆ, ಕೋಲಾರ ಆಸ್ಪತ್ರೆಗಳ ತ್ಯಾಜ್ಯವನ್ನು ಇನ್ನು ಮುಂದೆ ಕಲ್ಲುಕೋರೆಯಲ್ಲಿ ಸುರಿಯಲು ಅವಕಾಶ ನೀಡುವುದಿಲ್ಲ ಹಾಗೂ ಸಂಬAಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಭರವಸೆ ನೀಡಿದರು.

ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಹೈ ಕೋರ್ಟ್ ತಡೆಯಾಜ್ಞೆಯನ್ನು ಕಾಪಾಡಲು ಕಾವಲು ಕಾಯುತ್ತಿರುವುದು ೧೮ನೇ ದಿನೇ ದಿನಕ್ಕೆ ಗುರುವಾರ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.

 ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶವಿದ್ದರೂ ಕೋಲಾರ ತಾಲ್ಲೂಕಿನ ಲಕ್ಷ್ಮೀ ಸಾಗರದ ಕೆರೆಯ ಪಕ್ಕದ ಅಕ್ರಮ ಕಲ್ಲುಕೋರೆಯಲ್ಲಿ ಕಸದ ರಾಶಿಯನ್ನು ವಿಲೇವಾರಿ ಮಾಡಿರುವುದನ್ನು ಖಂಡಿಸಿ ರೈತ ನಾಯಕ ಪ್ರೊ ನಂಜುAಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ  ಕ್ವಾರಿಯಿಂದ ಒಂದು ಕಿಲೋ ಮೀಟರ್ ಅಂತರದ ಬೈಪಾಸ್ ಮುಖ್ಯ ರಸ್ತೆಯ ಪಕ್ಕದಲ್ಲೇ ಪೆಂಡಾಲ್ ಹಾಕಿ ಕಾವಲು ಕಾಯುತ್ತಿದ್ದರೆ. ವಿವಿಧ ಪಕ್ಷಗಳ ಮುಖಂಡರುಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. 
ಇನ್ನು ಕಸ ಹಾಕುತ್ತಿರುವ ಈ ಜಾಗ ಅಕ್ರಮ ಕಲ್ಲು ಕ್ವಾರೆಯಾಗಿದ್ದು ಈ ಮೊದಲು ಇಲ್ಲಿ ಅಕ್ರಮ ಗಣಿಗಾರಿಕೆ ಮಾಡಿರುವ ಜಾಗದಲ್ಲಿ ಸದ್ಯ ಈಗ ಕಸ ಹಾಕುತ್ತಿರುವ ಪ್ರಕರಣ ಕೋರ್ಟ್ ನಲ್ಲಿ ಇರುವುದರಿಂದ ಒಂದು ಹುಲ್ಲು ಕಡ್ಡಿ ಕಸ ಸಹ ಹಾಕಬಾರದು ಮತ್ತು ಹೋಗಬಾರದೆಂದು ತಡೆಯಾಜ್ಞೆ ಆದೇಶವಿದೆ. 
ಜಿಲ್ಲಾ ಪ್ರದಾನ ಕಾರ್ಯದರ್ಶಿ ಜಿ ನಾರಾಯಣಸ್ವಾಮಿ, ಯುವ ಘಟಕದ ರಾಜ್ಯಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಜಗನ್ನಾಥ್ ರೆಡ್ಡಿ, ಎಲ್.ಎನ್ ಬಾಬು, ದೊಡ್ಡ ಕುರುಬರಹಳ್ಳಿ ಶಂಕರಪ್ಪ, ಧನರಾಜ್, ವೈ.ಆರ್ ಚಂದ್ರಪ್ಪ, ಮುಳಬಾಗಿಲು ರಾಮು, ಯಶ್ವಂತ್ ಇದ್ದರು.