``ಗ್ರಾಮ ವಾಸ್ತವ್ಯದ ಮೂಲಕ ಸಮಸ್ಯೆಗಳ ಪರಿಹಾರ’’ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ್

``ಗ್ರಾಮ ವಾಸ್ತವ್ಯದ ಮೂಲಕ ಸಮಸ್ಯೆಗಳ ಪರಿಹಾರ’’ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ್

``ಗ್ರಾಮ ವಾಸ್ತವ್ಯದ ಮೂಲಕ ಸಮಸ್ಯೆಗಳ ಪರಿಹಾರ’’
ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ್


ಕೊರಟಗೆರೆ: ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಅಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ ಕಾರ್ಯದಲ್ಲಿ  ನರಸಾಪುರ ಗ್ರಾಮದಲ್ಲಿ ವಾಸ್ತವ್ಯದಲ್ಲಿ ವೈಯಕ್ತಿಕ ಮತ್ತು ಸಾಮೂಹಿಕ ಸಮಸ್ಯೆಯನ್ನು ಪರಿಹರಿಸಲಾಗುತ್ತಿದೆ ಎಂದು ಉಪವಿಭಾಗಧಿಕಾರಿ ಸೋಮಪ್ಪ ಕಡಕೋಳ್ ತಿಳಿಸಿದರು. 
ತಾಲೂಕಿನ ಕೋಳಾಲ ಹೋಬಳಿ ನರಸಾಪುರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ರೈತರ, ಜನರ ವೈಯಕ್ತಿಕ ಸಮಸ್ಯೆಗಳು ಹಾಗೂ ಗ್ರಾಮಗಳ ಮೂಲಭೂತ ಸಮಸ್ಯೆಗಳನ್ನು ಅಹವಾಲು ಮೂಲಕ ಪರಿಹರಿಸಲಾಗುವುದು. ಈ ವಾಸ್ತವ್ಯದಲ್ಲಿ ಗ್ರಾಮಸ್ಥರಿಗೆ ಎಲ್ಲಾ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ತಿಳಿಸುವುದರೊಂದಿಗೆ ಆದಷ್ಟು ಬೇಗ ಸಮಸ್ಯೆಗಳನ್ನು ಪರಿಹರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ತಹಸೀಲ್ದಾರ್ ನಹೀದಾ ಜಮ್ ಜಮ್ ಮಾತನಾಡಿ ರಾಜ್ಯ ಸರ್ಕಾರ ಮತ್ತು ಇಲಾಖಾ ಸುತ್ತೋಲೆಯಂತೆ ಜನರ ಕುಂದು ಕೊರತೆಯನ್ನು ತಕ್ಷಣ ಪರಿಹಾರ ನೀಡಲಾಗುವುದು. ಕೆಲವುಗಳನ್ನು ಪರಿಶೀಲಿಸಿ ಪರಿಹರಿಸಲಾಗುವುದು. ಅರ್ಜಿಗಳಲ್ಲಿ ಬಹುತೇಕ ಗ್ರಾಮಗಳ ಮೂಲಭೂತ ಸೌಕರ್ಯಗಳ ಬಗ್ಗೆ, ಫವತಿ ಖಾತೆಗಳು, ಸ್ಮಶಾನ, ಪಿಂಚಣಿಗಳ ಬಗ್ಗೆ ಬಂದಿದ್ದು ಎಲ್ಲವನ್ನೂ ಪರಿಹರಿಸಲಾಗುವುದು ಎಂದರು.
ಜನಪ್ರತಿನಿಧಿಗಳ ಕುಯುಕ್ತಿ: ಕೋಳಾಲ ನರಸಾಪುರದಲ್ಲಿ ನಡೆದ ಗ್ರಾಮವಾಸ್ತವ್ಯ ಎಲ್ಲವೂ ಅಚ್ಚುಕಟ್ಟಾಗಿ ಏರ್ಪಡಾಗಿತ್ತು. ದಿನವಿಡೀ ವಾಸ್ತವ್ಯವಿರುವುರಿಂದ ರೈತರು ಸಮಯ ನೋಡಿಕೊಂಡು ಬರುತ್ತಿದ್ದರು. ಸಾಕಷ್ಟು ಜನರು ಈ ಕಾರ್ಯಕ್ರಮದಲ್ಲಿ ಇದ್ದರು. ಆದರೆ ಕೆಲ ಜನಪ್ರತಿನಿಧಿಗಳು ಈ ಕಾರ್ಯಕ್ರಮಕ್ಕೆ ರಾಜಕೀಯ ಲೇಪನ ಮಾಡುವ ಕುಯುಕ್ತಿ ಮಾಡುತ್ತಿರುವುದು ಕಂಡುಬರುತ್ತಿತ್ತು.
ಕೆಲ ಗ್ರಾ.ಪಂ. ಸದಸ್ಯರು ಮಾಧ್ಯಮದವರಿಗೆ ಪ್ರಚಾರವೇ ಆಗಿಲ್ಲ ಎಂದು ಸುಳ್ಳು ಹೇಳಿದ್ದರು. ಅಧಿಕಾರಿಗಳಿಗೂ ಇದೆ ರೀತಿ ಹೇಳಿ ಜನರಿಗೆ ಈ ಕಾರ್ಯಕ್ರಮದ ವಿರುದ್ಧ ಕೆಲವರಿಗೆ ತಿಳಿಸಿದ್ದರು. ಇಂತಹ ಜನಪರ ಕಾರ್ಯಕ್ರಮಗಳಿಗೆ ಒಣ ಸ್ವಪ್ರತಿಷ್ಠೆ, ರಾಜಕೀಯ ಲೇಪನ ಹಚ್ಚಿದರೆ ಶ್ರಮವಹಿಸುವ ಅಧಿಕಾರಿಗಳ ಪಾಡೇನು ಎನ್ನುವಂತಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
ವಾಸ್ತವ್ಯ ಕಾರ್ಯಕ್ರಮದಲ್ಲಿ ಮಧುಗಿರಿ ಡಿವೈಎಸ್‌ಪಿ ರಾಮಕೃಷ್ಣ, ಗ್ರಾ.ಪಂ. ಅಧ್ಯಕ್ಷೆ ಕಮಲಮ್ಮ ತಾಲೂಕು ಮಟ್ಟದ ಅಧಿಕಾರಿಗಳಾದ ನಾಗರಾಜು, ಸುಧಾಕರ್, ಮಂಜುನಾಥ್, ನಂಜಯ್ಯ, ಉಮಾಮಹೇಶ್, ಅಂಬಿಕಾ, ಪುಷ್ಪಲತಾ, ಮಹಾಲಕ್ಷಮ್ಮ, ನರಸಿಂಹಮೂರ್ತಿ, ಎ.ಜಿ. ರಾಜು, ಮಧುಸೂದನ್, ಪ್ರತಾಪ್ ಸೇರಿದಂತೆ ಇತರರು ಹಾಜರಿದ್ದರು.