‘ಕೃಷಿ ಕಾಯ್ದೆ: ರೈತರನ್ನು ಕಾಂಗ್ರೆಸ್ ಪ್ರಚೋದಿಸಿತು’ ಬಿಜೆಪಿ ‘ಜನ್‌ಸ್ವರಾಜ್’ ಸಮಾವೇಶದಲ್ಲಿ ಜಗದೀಶ್ ಶೆಟ್ಟರ್ ಆರೋಪ

jan swaraj yatra by bjp in tumkur

‘ಕೃಷಿ ಕಾಯ್ದೆ: ರೈತರನ್ನು ಕಾಂಗ್ರೆಸ್ ಪ್ರಚೋದಿಸಿತು’ ಬಿಜೆಪಿ ‘ಜನ್‌ಸ್ವರಾಜ್’ ಸಮಾವೇಶದಲ್ಲಿ ಜಗದೀಶ್ ಶೆಟ್ಟರ್ ಆರೋಪ

‘ಕೃಷಿ ಕಾಯ್ದೆ: ರೈತರನ್ನು ಕಾಂಗ್ರೆಸ್ ಪ್ರಚೋದಿಸಿತು’
ಬಿಜೆಪಿ ‘ಜನ್‌ಸ್ವರಾಜ್’ ಸಮಾವೇಶದಲ್ಲಿ ಜಗದೀಶ್ ಶೆಟ್ಟರ್ ಆರೋಪ

ತುಮಕೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಯಕತ್ವದ ಬಿಜೆಪಿ ಸರಕಾರವು ಕೃಷಿ ಹಾಗೂ ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಿ ದೇಶದ ರೈತರಿಗೆ ಅನುಕೂಲ ಮಾಡಿಕೊಡಲು ಕಾಂಗ್ರೆಸ್ ಬಿಡಲಿಲ್ಲ ಎಂದು  ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಆಪಾದಿಸಿದರು.


ಬಾರತೀಯ ಜನತಾ ಪಾರ್ಟಿಯು ವಿಧಾನ ಪರಿಷತ್ ಚುನಾವಣೆ ಅಂಗವಾಗಿ ನಗರದ ಅಮಾನಿಕೆರೆ ಅಂಗಳದಲ್ಲಿರುವ ಗಾಜಿನ ಮನೆಯಲ್ಲಿ ಗುರುವಾರ ಏರ್ಪಡಿಸಿದ್ದ ‘ಜನ್‌ಸ್ವರಾಜ್’ಸಮಾವೇಶದಲ್ಲಿ ಪಕ್ಷದ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದÀರು. 


ಶುಕ್ರವಾರ ಬೆಳಿಗ್ಗೆಯೇ ಪ್ರಧಾನಿ ಮೋದಿ ಅವರು ರಾಷ್ಟçವನ್ನುದ್ದೇಶಿಸಿ ದೂರದರ್ಶನದ ಮುಖಾಂತರ ಭಾಷಣ ಮಾಡಿ, ದಿಲ್ಲಿ ಗಡಿಗಳಲ್ಲಿ ಹಾಗೂ ದೇಶದಾದ್ಯಂತ ಒಂದು ವರ್ಷದಿಂದ ರೈತರು ಬೃಹತ್ ಪ್ರಮಾಣದಲ್ಲಿ ಸತ್ಯಾಗ್ರಹ ನಡೆಸಲು ಕಾರಣವಾದ ವಿವಾದಿತ ಕೃಷಿ ಕಾನೂನು ತಿದ್ದುಪಡಿಗಳನ್ನು ಹಿಂದಕ್ಕೆ ಪಡೆದಿರುವುದಾಗಿ ಘೋಷಿಸಿದ್ದನ್ನುಉಲ್ಲೇಖಿಸಿ ಮಾತನಾಡಿದ ಶೆಟ್ಟರ್, 


ದೇಶದ ರೈತರ ಜೀವನವನ್ನು ಹಸನು ಮಾಡುವ ಬಿಜೆಪಿ ಸರಕಾರದ ಪ್ರಯತ್ನಕ್ಕೆ ಅಡ್ಡಿ ಪಡಿಸಿದ ಕಾಂಗ್ರೆಸ್ ಪ್ರತಿಭಟನೆ ನಡೆಸುವಂತೆ ರೈತರನ್ನು ಪ್ರಚೋದಿಸಿತು ಎಂದು ವಿಷಾದಿಸಿದರು. 


ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಅವರು ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿಯವರು ಸಮಾವೇಶನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ನಂತರವಷ್ಟೇ ಜಿಲ್ಲೆಯ ಎಲ್ಲ ಕೆರೆಗಳಿಗೂ ಹೇಮಾವತಿ ನೀರನ್ನುಹರಿಸಲು ಸಾಧ್ಯವಾಯಿತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲೂ ಬಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಆಯ್ಕೆ ಮಾಡಲಿರುವ ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲುವ ಭರವಸೆ ನನಗಿದೆ ಎಂದರು.

ಕೇಂದ್ರ ಸಚಿವರಾದ ಶ್ರೀ ಎ. ನಾರಾಯಣಸ್ವಾಮಿ, ಸಚಿವರಾದ ಬಿ.ಸಿ. ನಾಗೇಶ್, ಭೈರತಿ ಬಸವರಾಜು, ಗೋಪಾಲಯ್ಯ ಸಮಾವೇಶವನ್ನುದ್ದೇಶಿಸಿ ಮಾತನಾಡಿ ವಿಧಾನ ಪರಿಷತ್‌ನಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.


 ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ರಾಜ್ಯ ಉಪಾಧ್ಯಕ್ಷರುಗಳಾದ ರಾಜೇಂದ್ರ , ಎಂ.ಬಿ.ನAದೀಶ್, ರಾಜ್ಯ ಕಾರ್ಯದರ್ಶಿ ಮುನಿರಾಜುಗೌಡ, ಶಾಸಕರುಗಳಾದ ಜ್ಯೋತಿಗಣೇಶ್, ರಾಜೇಶ್ ಗೌಡ, ಮಸಾಲೆ ಜಯರಾಮ್, ವಿಧಾನಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಎಂ. ಚಿದಾನಂದ್ ಗೌಡ, ಮಾಜಿ ಸಚಿವರಾದ ಸೊಗಡು ಶಿವಣ್ಣ, ಮಾಜಿ ವಿಧಾನಪರಿಷತ್ ಸದಸ್ಯರಾದ ಡಾ.ಹುಲಿನಾಯ್ಕರ್, ನಿಗಮ ಮಂಡಳಿ ಅಧ್ಯಕ್ಷರಾದ ಕಿರಣ್ ಕುಮಾರ್, ಮಂಜುನಾಥ್, ಎಸ್.ಆರ್. ಗೌಡ, ಜನಪ್ರತಿನಿಧಿಗಳು, ರಾಜ್ಯ, ಜಿಲ್ಲೆ, ಮಂಡಲ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು.



ಅಂಬೇಡ್ಕರ್-ಪರಮೇಶ್ವರ ಇಬ್ಬರನ್ನೂ ಬಿಡಲಿಲ್ಲ:
ಕಾಂಗ್ರೆಸ್ ದಲಿತ ವಿರೋಧಿ: ವಿಜಯೇಂದ್ರ


ತುಮಕೂರು: ಕಾಂಗ್ರೆಸ್ ದಲಿತ ವಿರೋಧಿ ಎಂದು ಬಣ್ಣಿಸಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರರವರು, ಅಂದು ಅಂಬೇಡ್ಕರ್ ಅವರನ್ನು ಗೆಲ್ಲಲು ಬಿಡಲಿಲ್ಲ, ಇಂದು ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರ ಅವರನ್ನೂ ಗೆಲ್ಲಲು ಕಾಂಗ್ರೆಸ್‌ನವರೇ ಅಡ್ಡಿಪಡಿಸಿದರು ಎಂದರು.


ಬಾರತೀಯ ಜನತಾ ಪಾರ್ಟಿಯು ವಿಧಾನ ಪರಿಷತ್ ಚುನಾವಣೆ ಅಂಗವಾಗಿ ನಗರದ ಅಮಾನಿಕೆರೆ ಅಂಗಳದಲ್ಲಿರುವ ಗಾಜಿನ ಮನೆಯಲ್ಲಿ ಗುರುವಾರ ಏರ್ಪಡಿಸಿದ್ದ ‘ಜನ್‌ಸ್ವರಾಜ್’ಸಮಾವೇಶದಲ್ಲಿ


ಮಾತನಾಡಿದ ಅವರು, ಕಾಂಗ್ರೆಸ್ ಅಂಬೇಡ್ಕರ್ ಅವರು ನಿಧನರಾದಾಗ ಅಂತ್ಯ ಸಂಸ್ಕಾರ ಮಾಡಲು ಭೂಮಿ ಕೊಡಲೂ ತೊಂದರೆ ಮಾಡಿದರು ಎಂದು ವಿಷಾದಿಸಿದರು.


ತುಮಕೂರು ಜಿಲ್ಲೆ ಅಭಿವೃದ್ಧಿ ಕಂಡಿದ್ದೇ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಎಂಬ ಮಾಜಿ ಸಚಿವ ಸೊಗಡು ಶಿವಣ್ಣ ಅವರ ಮಾತನ್ನು ಉಲ್ಲೇಖಿಸಿದ ವಿಜಯೇಂದ್ರ, ಯಡಿಯೂರಪ್ಪನವರು ಅಭಿವೃದ್ಧಿ ವಿಚಾರದಲ್ಲಿ ಜಾತಿ, ಧರ್ಮ ತಾರತಮ್ಯ ಮಾಡಲಿಲ್ಲ ಎಂದು ಸ್ಪಷ್ಟಪಡಿಸಿದರು.


ಶಿರಾ ಉಪ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದಂತೆಯೇ ವಿಧಾನ ಪರಿಷತ್ ಚುನಾವಣೆಯಲ್ಲೂ ಗೆಲುವು ತಂದುಕೊAಡಬೇಕೆAದು ಮನವಿ ಮಾಡಿದರು.

ಸಿದ್ಧಗಂಗಾ ಮಠಾದೀಶ ಸಿದ್ಧಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ವಿಜಯೇಂದ್ರ


ಶುಕ್ರವಾರ ತುಮಕೂರಿನಲ್ಲಿ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರರವರು, ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಮಠಾಧೀಶ ಶ್ರೀ ಸಿದ್ಧಲಿಂಗಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಗೆ ಪೂಜೆ ಸಲ್ಲಿಸಿದರು. ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ಕಾಂಪೋಸ್ಟ್ ನಿಗಮದ ನಿರ್ದೇಶಕ ಟಿ.ಆರ್. ಸದಾಶಿವಯ್ಯ ಮೊದಲಾದವರು ಜೊತೆಯಲ್ಲಿದ್ದರು.