ಇಂದು ನಗರದ ಗಾಜಿನ ಮನೆಯಲ್ಲಿ ಕಾಂಗ್ರೆಸ್ ಜನಜಾಗೃತಿ ಸಮಾವೇಶ ತಕ್ಷಣ ಬೆಳೆ ನಷ್ಟ ಪರಿಹಾರ ನೀಡಿ- ಡಾ. ಜಿ.ಪರಮೇಶ್ವರ

rain havoc G parameshwar

ಇಂದು ನಗರದ ಗಾಜಿನ ಮನೆಯಲ್ಲಿ ಕಾಂಗ್ರೆಸ್ ಜನಜಾಗೃತಿ ಸಮಾವೇಶ ತಕ್ಷಣ ಬೆಳೆ ನಷ್ಟ ಪರಿಹಾರ ನೀಡಿ- ಡಾ. ಜಿ.ಪರಮೇಶ್ವರ

ಇಂದು ನಗರದ ಗಾಜಿನ ಮನೆಯಲ್ಲಿ ಕಾಂಗ್ರೆಸ್ ಜನಜಾಗೃತಿ ಸಮಾವೇಶ
ತಕ್ಷಣ ಬೆಳೆ ನಷ್ಟ ಪರಿಹಾರ ನೀಡಿ- ಡಾ. ಜಿ.ಪರಮೇಶ್ವರ


ತುಮಕೂರು: ಕಳೆದ 15 ದಿನಗಳಿಂದ ರಾಜ್ಯದಲ್ಲಿ ಯಥೇಚ್ಚವಾಗಿ ಮಳೆ ಬೀಳ್ತಾ ಇದೆ. 11ಲಕ್ಷ 55 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಬೆಳೆ ನಾಶವಾಗಿದೆ, ಒಂದೂವರೆ ಲಕ್ಷ ಕೋಟಿ ರೂ. ನಷ್ಟ ಎಂದು ಕೃಷಿ ಇಲಾಖೆ ಪ್ರಕಟಿಸಿದೆ. ಕೇಂದ್ರದ ಅನುದಾನಕ್ಕೆ ಕಾಯದೇ ರಾಜ್ಯ ಸರ್ಕಾರ ಕೂಡಲೇ ರೈತರಿಗೆ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಒತ್ತಾಯಿಸಿದರು. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸುವ ಮೂಲಕ ಸಂಗ್ರಹಿಸಿರುವ ಲಕ್ಷ ಲಕ್ಷ ಕೋಟಿ ಕೇಂದ್ರದಲ್ಲಿ ಕೊಳೆಯುತ್ತ ಬಿದ್ದಿದ್ದು ಈ ಮೊತ್ತವನ್ನು ರೈತರಿಗೆ ಪರಿಹಾರ ನೀಡಲು ಬಳಸಬೇಕೆಂದು ಅವರು ಆಗ್ರಹಿಸಿದರು.


ನಗರದ ಅಮಾನಿ ಕೆರೆ ಅಂಗಳದಲ್ಲಿನ ಗಾಜಿನಮನೆಯಲ್ಲಿ ಭಾನುವಾರ ಏರ್ಪಡಿಸಿರುವ ಕಾಂಗ್ರೆಸ್ ಜನಜಾಗೃತಿ ಸಮಾವೇಶ ಸಿದ್ಧತೆಯನ್ನು ಪಕ್ಷದ ಮುಖಂಡರೊAದಿಗೆ ಪರಿಶೀಲಿಸಿದ ಸಂದರ್ಭದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಹಳಷ್ಟು ಕೆರೆಗೆಳು ಭರ್ತಿಯಾಗಿದ್ದು ಕೆಲವು ಕೆರೆಗಳು ಒಡೆಯುವ ಸಂಭವವಿದ್ದು ಸಣ್ಣ ನೀರಾವರಿ ಖಾತೆ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಇಂಜಿನಿಯರ್‌ಗಳಿಗೆ ಆದೇಶ ನೀಡಬೇಕೆಂದು ಒತ್ತಾಯಿಸಿದರು.


ವಿಧಾನ ಪರಿಷತ್ ಚುನಾವಣೆಯಲ್ಲಿ 25ಕ್ಕೆ 25 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.


ದಿಲ್ಲಿ ಗಡಿಗಳಲ್ಲಿ ಲಕ್ಷಾಂತರ ರೈತರು ವರ್ಷ ಪೂರ್ತಿ ಸತ್ಯಾಗ್ರಹ ನಡೆಸಿದರೂ ಗಮನ ಹರಿಸದ ಕೇಂದ್ರ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಲು ಗಮನ ಹರಿಸದ , 700 ರೈತರು ಮಡಿದಾಗಲೂ ತಿರುಗಿ ನೋಡದ ಪ್ರಧಾನಿ, ರೈತರೇ ನಿಮ್ಮ ಮನೆ ಬಾಗಿಲಿಗೆ ಬಂದು ಬೇಡಿಕೊಂಡರೂ ಕರಗದ ನೀವು ಈಗ ಕೃಷಿ ಕಾಯದೆಗಳನ್ನು ಹಿಂಪಡೆದುಕೊAಡಿರುವುದಕ್ಕೆ ನೀವು ಅಭಿನಂದನೆಗೂ ಅರ್ಹರಲ್ಲ ಎಂದೆನಿಸಿದೆ.


ನಿಮ್ಮ ಹಿಂದಿನ ಹೇಳಿಕೆಗಳನ್ನು ಗಮನಿಸಿದರೆ ನಿಮ್ಮ ಘೋಷಣೆ ಸುಳ್ಳಾಗುವ ಆತಂಕವಿದ್ದು ಪಾರ್ಲಿಮೆಂಟ್ ಅಧಿವೇಶನದಲ್ಲಿ ಮಸೂದೆ ಮಂಡಿಸಿ ಹಿಂತೆಗೆದುಕೊಳ್ಳಬೇಕೆAದು ಒತ್ತಾಯಿಸಿದರು. ಆನಂತರ ರಾಜ್ಯದಲ್ಲಿ ಅಂಗೀಕರಿಸಿರುವ ಎಪಿಎಂಸಿ ತಿದ್ದುಪಡಿ ಕಾಯದೆಯನ್ನೂ ನಿರಸನಗೊಳಿಸಬೇಕು ಎಂದು ಆಗ್ರಹಿಸಿದರು.


ನಾಳಿನ ಸಮಾವೇಶದಲ್ಲಿ ವಿರೋಧ ಪಕ್ಷದ  ನಾಯಕರಾದ ಸಿದ್ದರಾಮಯ್ಯ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಿರಿಯ ಮುಖಂಡರಾದ ವೀರಪ್ಪ ಮೊಯ್ಲಿ, ಕೆ.ಹೆಚ್. ಮುನಿಯಪ್ಪ ಮೊದಲಾದವರು ಭಾಗವಹಿಸಲಿದ್ದು, ಪಕ್ಷದ ಬಗ್ಗೆ ಬಿಜೆಪಿ ಅಪಪ್ರಚಾರವನ್ನು ಖಂಡಿಸಲಾಗುವುದು ಎಂದರು.


ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ ,ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ಡಾ.ರಫೀಕ್ ಅಹಮದ್, ಷಫಿ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಕಿಸಾನ್ ಘಟಕದ ಅಧ್ಯಕ್ಷ ಹೆಚ್.ಸಿ.ಹನುಮಂತಯ್ಯ, ಹಾಗೂ ಮುಖಂಡರು ಇದ್ದರು.


ದಿಲ್ಲಿಯಲ್ಲಿ ಮಡಿದ ರೈತರ  ಕುಟುಂಬಕ್ಕೆ ಪರಿಹಾರ ಕೊಡಿ


ದಿಲ್ಲಿ ಗಡಿಗಳಲ್ಲಿ ಒಂದು ವರ್ಷದ ಕಾಲ ಸತ್ಯಾಗ್ರಹ ನಡೆಸಿದ ರೈತರ ಶಕ್ತಿಗೆ ಕೇಂದ್ರ ಸರ್ಕಾರ ಮಣಿದು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ತೆಗೆದುಕೊಂಡಿದೆಯಾದರೂ, ಈ ಅವಧಿಯಲ್ಲಿ ಮರಣಹೊಂದಿದ 700ಕ್ಕೂ ಹೆಚ್ಚು ರೈತ ಸತ್ಯಾಗ್ರಹಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು.
ಕೆ.ಎನ್.ರಾಜಣ್ಣ
ಮಾಜಿ ಶಾಸಕರು