``ಕೊಲೆಗಡುಕರನ್ನು ಬಂಧಿಸಿ-ಸಚಿವರನ್ನ ವಜಾಗೊಳಿಸಿ’’ ಸಂಯುಕ್ತ ಹೋರಾಟ ಕರ್ನಾಟಕದ ಜಿಲ್ಲಾ ಘಟಕ ಮನವಿ 

Protest - suspend Minister

``ಕೊಲೆಗಡುಕರನ್ನು ಬಂಧಿಸಿ-ಸಚಿವರನ್ನ ವಜಾಗೊಳಿಸಿ’’ ಸಂಯುಕ್ತ ಹೋರಾಟ ಕರ್ನಾಟಕದ ಜಿಲ್ಲಾ ಘಟಕ ಮನವಿ 

``ಕೊಲೆಗಡುಕರನ್ನು ಬಂಧಿಸಿ-ಸಚಿವರನ್ನ ವಜಾಗೊಳಿಸಿ’’
ಸಂಯುಕ್ತ ಹೋರಾಟ ಕರ್ನಾಟಕದ ಜಿಲ್ಲಾ ಘಟಕ ಮನವಿ 


ತುಮಕೂರು: ಉತ್ತರ ಪ್ರದೇಶದಲ್ಲಿ ಹಕ್ಕೊತ್ತಾಯಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಮುದಾಯದ ಮೇಲೆ, ದೇಶದಾದ್ಯಂತ ಬೆಳೆಯುತ್ತಿರುವ ಚಳುವಳಿಯನ್ನು ಮುರಿಯುವ ಸಂಚಿನ ಭಾಗವಾಗಿ ಸಚಿವರ ಬೆಂಗಾವಲಿನ ವಾಹನಗಳನ್ನು ಚಲಾಯಿಸಿ, ಎಂಟು ಜನರ ಬರ್ಬರ ಹತ್ಯೆ ನಡೆಸಲಾದ ಕುಕೃತ್ಯವು ದೇಶದಾದ್ಯಂತ ತೀವ್ರ ಆತಂಕ ಮತ್ತು ತಲ್ಲಣವನ್ನುಂಟು ಮಾಡಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕದ ಜಿಲ್ಲಾ ಘಟಕ ವಿಷಾದಿಸಿದೆ.
ಒಕ್ಕೂಟ ಸರಕಾರದ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರ ಹಾಗೂ ಆತನ ಮಗ ಮತ್ತು ಸಂಬAಧಿ ಗುಂಡಾಗಳು ಈ ದುಷ್ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಈ ಘಟನೆಯನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಜಿಲ್ಲಾಧಿಕಾರಿ ವೈ.ಎಸ್. ಪಾಟಿಲ ಅವರ ಮೂಲಕ ರಾಷ್ಟçಪತಿಗಳಿಗೆ ಮನವಿ ಕಳಹಿಸಲಾಯಿತು. ಸಂಯುಕ್ತ ಹೋರಾಟ ಕರ್ನಾಟಕದ ಜಿಲ್ಲಾ ಸಂಚಾಲಕ ಸಿ. ಯತಿರಾಜು, ರಾಜ್ಯ ರೈತ ಸಂಘ ಜಿಲ್ಲಾ ಅಧ್ಯಕ್ಷ ಎ. ಗೋವಿಂದರಾಜು, ರವೀಶ್, ಪ್ರಾಂತ ರೈತ ಸಂಘದ ಬಿ. ಉಮೇಶ್, ಅರ್.ಕೆ.ಎಸ್.ನ ಎಸ್.ಎನ್. ಸ್ವಾಮಿ, ಸಿಐಟಿಯು ಸೈಯದ್ ಮುಜೀಬ್, ಕಟ್ಟಡ ಕಾರ್ಮಿಕರ ಸಂಘದ ಬೆಟ್ಟಪ್ಪ ನಿಯೋಗದಲ್ಲಿದ್ದರು.
ಹರ್ಯಾಣ ಮುಖ್ಯಮಂತ್ರಿ ಬಿಜೆಪಿ ಮತ್ತು ಸಂಘ ಪರಿವಾರದ ಗುಂಡಾಗಳಿಗೆ ರೈತ ಚಳುವಳಿಯನ್ನು ಮುರಿಯಲು ಲಾಠಿ ಮುಂತಾದ ಆಯುಧಗಳ ಮೂಲಕ ದಾಳಿ ನಡೆಸಲು ಬಹಿರಂಗವಾಗಿ ಕರೆ ನೀಡುವ ಮೂಲಕ ಸಂವಿಧಾನಾತ್ಮಕ ಅಧಿಕಾರವನ್ನು ಸಂವಿಧಾನ ವಿರೋಧಿಯಾಗಿ ದುರ್ಬಳಕೆ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಒಕ್ಕೂಟ ಸರಕಾರದ ಸಚಿವರು ರೈತಚಳುವಳಿಯನ್ನು ನಿಂದಿಸುವ ಅಪರಾಧ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂತಹದೊಂದು ಬರ್ಬರ ಹಾಗೂ ಅಮಾನುಷ ಮತ್ತು ತೀವ್ರ ಸ್ವರೂಪದ ಅಧಿಕಾರ ದುರುಪಯೋಗದ ಘಟನೆಗಳನ್ನು ಪ್ರಧಾನ ಮಂತ್ರಿಗಳು ಖಂಡಿಸದೇ ಇರುವುದು ಸಂಚಿನ ವಾಸನೆಯನ್ನು ಬಹಿರಂಗ ಪಡಿಸುತ್ತದೆ ಎಂದು ಅರೋಪಿಸಲಾಗಿದೆ.
ಹಕ್ಕೊತ್ತಾಯಗಳು: ಒಕ್ಕೂಟ ಸರಕಾರದ ಗೃಹ ಖಾತೆಯ ರಾಜ್ಯ ಸಚಿವರಾದ ಅಜಯ ಮಿಶ್ರರವರನ್ನು ಈ ಕೂಡಲೇ ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು. ಸಚಿವ ಅಜಯ ಮಿಶ್ರ ಹಾಗೂ ಆತನ ಮಗ ಆಶಿಶ್ ಮಿಶ್ರ ಮೋನು ಆತನ ಗುಂಡಾಪಡೆಯನ್ನು ತಕ್ಷಣವೇ ಬಂಧಿಸಬೇಕು ಮತ್ತು ಕೊಲೆಪಾತಕ ಪ್ರಕರಣವೆಂದು ಮೊಕದ್ದಮೆಗಳನ್ನು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಪ್ರಕರಣವನ್ನು ಸುಪ್ರೀಂಕೋರ್ಟ್ ಸುಪರ್ದಿಯಲ್ಲಿ ಉನ್ನತ ನ್ಯಾಯಾಂಗ ತನಿಖೆಗೆ ಕ್ರಮವಹಿಸಬೇಕು. ಹರ್ಯಾಣ ಮುಖ್ಯಮಂತ್ರಿಯನ್ನು, ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಲು ಅಗತ್ಯ ಕ್ರಮವಹಿಸಬೇಕು. ಈ ಕೊಲೆಪಾತಕ ದುಷ್ಕೃತ್ಯದಲ್ಲಿ ಹುತಾತ್ಮರಾದ ರೈತ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ಗಳ ಪರಿಹಾರವನ್ನು ನೀಡಬೇಕು ಮತ್ತು ತೀವ್ರವಾಗಿ ಗಾಯಗೊಂಡವರಿಗೂ ಅಗತ್ಯ ಉಚಿತ ಚಿಕಿತ್ಸೆ ಹಾಗೂ ಸೂಕ್ತ ಪರಿಹಾರ ನೀಡಬೇಕೆಂದು ಸಂಯುಕ್ತ ಹೋರಾಟ ಕರ್ನಾಟಕದ ಜಿಲ್ಲಾ ಘಟಕ ಆಗ್ರಹಿಸಿದೆ.


ಜಿಲ್ಲಾ ಸಮಸ್ಯೆಗಳ ಬಗ್ಗೆ ಜಂಟಿ ಸಭೆ ಕರೆಯಿರಿ


ಜಿಲ್ಲಾ ಹಂತದ ಸಮಸ್ಯೆಗಳನ್ನು ಪರಿಹಾರ ಕಾಣಲು ರೈತ ಸಂಘಟನೆಗಳ ಜೊತೆ ಜಂಟಿ ಸಭೆಯನ್ನು ನಡೆಸಲು ರೈತ ಸಂಘದ ಪ್ರತಿನಿಧಿಗಳು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಅವರನ್ನು ಕೋರಿದರು. ನೀರಾವರಿ ಪ್ರಶ್ನೆಗಳು ಹಾಗೂ ಜಿಲ್ಲೆಯ ಎಲ್ಲಾ ಕೆರೆಗಳಿಗೆ ಕುಡಿಯುವ ನೀರು ಒದಗಿಸುವ ಕಾರ್ಯದ ಕುರಿತು ಸಹ ಸಭೆಯ ಅಗತ್ಯ ಇದೆ ಎಂದು ನಿಯೋಗದಲ್ಲಿದ್ದ ಸದಸ್ಯರು ಮನವಿ ಮಾಡಿದರು.