ಬಿ.ಎಂ.ಶ್ರೀ. ಸ್ಮಾರಕಭವನ ನಮಗೆ ವಹಿಸಿ, ನಾವು ನಿರ್ವಹಿಸುತ್ತೇವೆ ಜಿಲ್ಲಾಡಳಿತಕ್ಕೆ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮನವಿ

bmsri-bhavana-kasapa

ಬಿ.ಎಂ.ಶ್ರೀ. ಸ್ಮಾರಕಭವನ ನಮಗೆ ವಹಿಸಿ, ನಾವು ನಿರ್ವಹಿಸುತ್ತೇವೆ ಜಿಲ್ಲಾಡಳಿತಕ್ಕೆ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮನವಿ


ಬಿ.ಎಂ.ಶ್ರೀ. ಸ್ಮಾರಕಭವನ ನಮಗೆ ವಹಿಸಿ, ನಾವು ನಿರ್ವಹಿಸುತ್ತೇವೆ
ಜಿಲ್ಲಾಡಳಿತಕ್ಕೆ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮನವಿ


ತುಮಕೂರು: ಕನ್ನಡದ ಕಣ್ವರೆಂದೇ ಹೆಸರಾದ ಬಿ.ಎಂ. ಶ್ರೀಕಂಠಯ್ಯನವರ ಹುಟ್ಟೂರಾದ ಸಂಪಿಗೆಯಲ್ಲಿ ಸರ್ಕಾರದ ವತಿಯಿಂದ ನಿರ್ಮಾಣಗೊಂಡಿರುವ ಬಿ.ಎಂ.ಶ್ರೀ. ಸ್ಮಾರಕ ಭವನವು ಸರಿಯಾದ ನಿರ್ವಹಣೆಯಿಲ್ಲದೆ ಶಿಥಿಲಾವಸ್ಥೆ ತಲುಪಿದೆ. ಉದ್ಘಾಟನಾ ಫಲಕವನ್ನು ಯಾರೋ ಕಿತ್ತುಹಾಕಿದ್ದು ನೆಲಕ್ಕೆ ಹಾಕಿರುವ ಹಾಸುಗಲ್ಲುಗಳಲ್ಲಿ ಕೊಳೆ ತುಂಬಿದ್ದು ಹೀನಾಯ ಸ್ಥಿತಿಯಿಲ್ಲದೆ. ಈ ಕಟ್ಟಡವನ್ನು ಜಿಲ್ಲಾಡಳಿತ ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಿದರೆ ಸರಿಯಾದ ನಿರ್ವಹಣೆ ಮಾಡುತ್ತೇವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಆಗ್ರಹಿಸಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತುರುವೇಕೆರೆ ತಾಲ್ಲೂಕು ಕ.ಸಾ.ಪ. ಸಹಯೋಗದೊಂದಿಗೆ ಸೇರಿ ಬಿ.ಎಂ.ಶ್ರೀಕAಠಯ್ಯನವರ ಜನ್ಮದಿನಾಚರಣೆಯನ್ನು ಅದರ ಹುಟ್ಟೂರಾದ ಸಂಪಿಗೆಯ ಅವರ ಸ್ಮಾರಕ ಭವನದಲ್ಲಿ ಏರ್ಪಾಟಾಗಿದ್ದ ಸಮಾರಂಭದಲ್ಲಿ ಮಾತನಾಡಿದರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ 1938 ರಿಂದ 42ರವರೆಗೆ ಉಪಾಧ್ಯಕ್ಷರಾಗಿದ್ದ ಅವರು ಪರಿಷತ್ತಿಗೆ ಅಗಾಧ ಸೇವೆಯನ್ನು ಸಲ್ಲಿಸಿದರು. ನವೋದಯ ಹರಿಕಾರರೆಂದೇ ಹೆಸರಾದ ಅವರು ಕನ್ನಡ ಸಾಹಿತ್ಯವನ್ನು ಕಟ್ಟಿ ಬೆಳೆಸುವುದರಲ್ಲಿ ಯಶಸ್ವಿಯಾದರು. ಅವರ ಜೀವನವೇ ಇಂದು ನಮ್ಮೆಲ್ಲರಿಗೆ ಕನ್ನಡ ಕಟ್ಟಲು ಸ್ಫೂರ್ತಿಯಾಗಿದೆ ಎಂದರು.

ಸಮಾರAಭದಲ್ಲಿ ಭಾಗವಹಿಸಿದ್ದ ಸಂಶೋಧಕರಾದ ಡಾ. ಡಿ.ಎನ್. ಯೋಗೀಶ್ವರಪ್ಪನವರು ವಸಾಹತು ಕಾಲದಲ್ಲಿ ಅಲಕ್ಷö್ಯಕ್ಕೆ ಈಡಾಗಿದ್ದ ಕನ್ನಡಕ್ಕೆ ನ್ಯಾಯವನ್ನು ಒದಗಿಸಲು ಸಾಹಿತ್ಯ ರಚನೆಯ ಮೂಲಕ ಹೋರಾಡಿದ ಅವರು ಆಧುನಿಕ ಕನ್ನಡದ ನವಯುಗದ ಪ್ರವರ್ತಕರಲ್ಲಿ ಒಬ್ಬರಾಗಿದ್ದಾರೆ. ಅಗ್ರಗಣ್ಯರಾಗಿದ್ದ ಹೊಸಗನ್ನಡ ಕಾವ್ಯ ಕುಲಪತಿಗಳು ಎಂದು ಬಣ್ಣಿಸಿದರು.

ನವೋದಯ ಕಾವ್ಯ ಸಾಹಿತ್ಯದ ಪ್ರವರ್ತಕ ಪಿತಾಮಹ ಎಂದೇ ಕರೆಸಿಕೊಂಡಿರುವ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಅಚ್ಚುಕೂಟ ಸ್ಥಾಪಿಸಿದ್ದೇ ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನ ಚಿನ್ಹೆಯಲ್ಲಿರುವ ಸಿರಿಗನ್ನಡಂ ಗೆಲ್ಗೆ ಎಂಬ ಪದಗುಚ್ಛವನ್ನು ಸೃಷ್ಠಿಸಿದರು. ಜನರಿಗೆ ತಿಳಿಯದ ಭಾಷೆಯಲ್ಲಿ ಬರೆಯುವುದರಲ್ಲಿ ಯಾವ ಬುದ್ಧಿವಂತಿಕೆಯೂ ಇಲ್ಲ. ಹೊಸಗನ್ನಡವನ್ನೇ ಎಲ್ಲರೂ ಹಿರಿಯಬೇಕು ಎಂದು ಕರೆಕೊಟ್ಟು ಅಗ್ರಗಣ್ಯ ಸಾಹಿತಿ ಬಿ.ಎಂ.ಶ್ರೀ. ಎಂದರು.

ಲೇಖಕರಾದ ಎಂ.ಹೆಚ್. ನಾಗರಾಜು ಮಾತನಾಡಿ, ಬಿ.ಎಂ. ಶ್ರೀಕಂಠಯ್ಯನವರು ಇಂಗ್ಲೀಷ್ ಭಾಷಾ ಪ್ರಾಧ್ಯಾಪಕರಾಗಿದ್ದರೂ ಕನ್ನಡಕ್ಕಾಗಿ ತಮ್ಮನ್ನು ಮುಡುಪಾಗಿಟ್ಟುಕೊಂಡು ಧಾರವಾಡದಲ್ಲಿ 1910ರಲ್ಲಿ ಕನ್ನಡ ಮಾತು ತಲೆಯೆತ್ತುವ ಬಗ್ಗೆ ಎಂಬ ಯುಗಪ್ರವರ್ತಕ ಕನ್ನಡ ಭಾಷಣವನ್ನು ಮಾಡಿ ಅಲ್ಲಿದ್ದ ಸಭಿಕರನ್ನು ರೋಮಾಂಚನಗೊಳಿಸಿದ ಶ್ರೇಷ್ಠ ವ್ಯಕ್ತಿ ಎಂದರು.

ಸಮಾರAಭದ ಅಧ್ಯಕ್ಷತೆಯನ್ನು ತುರುವೇಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಪಿ. ರಾಜು ವಹಿಸಿದ್ದರು. ಇದೇ ಸಂದರ್ಭದಲ್ಲಿ ದಂಡಿನಶಿವರ ಹೋಬಳಿ, ಕನ್ನಡ ಸಾಹಿತ್ಯ ಪರಿಷತ್ತು ಘಟಕವನ್ನು ಉದ್ಘಾಟಿಸಲಾಯಿತು. ಸಿ.ಎಸ್. ನಂಜುAಡಪ್ಪ ಬಿ.ಎಂ.ಶ್ರೀ. ಕುರಿತು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಚಾಲಕರಾದ ಎಸ್. ಯೋಗಾನಂದ, ಇತಿಹಾಸಕಾರ ಪುಟ್ಟರಂಗಪ್ಪ ದಂಡಿನಶಿವರ ಹೋಬಳಿ ಘಟಕದ ಅಧ್ಯಕ್ಷರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿಗಳಾದ ಷಣ್ಮುಖಪ್ಪ ಹೆಚ್.ಆರ್., ದಿನೇಶ್‌ಕುಮಾರ್, ಕೋಶಾಧ್ಯಕ್ಷ ಕೆ. ಕೆಂಪರಾಜು ಭಾಗವಹಿಸಿದ್ದರು. ಶೈಲೇಶ್ ಕಾರ್ಯಕ್ರಮ ನಿರೂಪಿಸಿದರು.

ಸಂಪಿಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರು, ಚಂಪಕ ಪ್ರೌಢಶಾಲೆಯ ಮಕ್ಕಳು ಬಿ.ಎಂ.ಶ್ರೀ. ಭಾವಚಿತ್ರ ಹಿಡಿದು ಊರಿನಲ್ಲಿ ಮೆರವಣಿಗೆ ನಡೆಸಿದರು.