ಮಧುಗಿರಿಯಲ್ಲಿ ರಾಜಕುಮಾರ ಇಂದಿನಿಂದ ಉಚಿತ ಪ್ರದರ್ಶನ

ಮಧುಗಿರಿಯಲ್ಲಿ ರಾಜಕುಮಾರ ಇಂದಿನಿಂದ ಉಚಿತ ಪ್ರದರ್ಶನ

ಮಧುಗಿರಿಯಲ್ಲಿ ರಾಜಕುಮಾರ
ಇಂದಿನಿಂದ ಉಚಿತ ಪ್ರದರ್ಶನ


ಮಧುಗಿರಿ: ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ಕನ್ನಡ ಪರ ಸಂಘಟನೆಗಳ ವತಿಯಿಂದ ಪಟ್ಟಣದ ಶಂಕರ್ ಚಿತ್ರಮಂದಿರದಲ್ಲಿ ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಚಿತ್ರವನ್ನು ಉಚಿತವಾಗಿ ಪ್ರದರ್ಶನ ಮಾಡಲಾಗುವುದು ಎಂದು ಯುವ ಪುನೀತ್ ಅಭಿಮಾನಿ ಬಳಗದ ಕೇಬಲ್ ಸುಬ್ಬು ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ ನಾಲ್ಕು ಪ್ರದರ್ಶನಗಳು ಏರ್ಪಡಿಸಲಾಗಿದ್ದು ಸೋಮವಾರದಿಂದ ಗುರುವಾರದವರೆಗೂ ಈ ಪ್ರದರ್ಶನ ಇರುತ್ತದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡಾ. ರಾಜಕುಮಾರ್ ಅಭಿಮಾನಿ ಬಳಗದ ಸಯ್ಯದ್ ಕರೀಂ, ಪುರಸಭಾ ಸದಸ್ಯ ಮಂಜುನಾಥ್ ಆಚಾರ್, ಮುಖಂಡರುಗಳಾದ ಎಂ.ಜಿ. ರಾಮು,  ಅನಂತನಾರಾಯಣ ಬಾಬು, ಸುಧೀರ್, ಶಿವಕುಮಾರ್ ಡಿ.ಟಿ. ರಾಘವೇಂದ್ರ. ನಾಗೇಂದ್ರ ಬಿಜೆಪಿ ಶಿವಕುಮಾರ ಹಾಗೂ ಮುಂತಾದವರು ಇದ್ದರು.