ನ.26ರಂದು ‘ಗೋವಿಂದಗೋವಿಂದ’ ಬೆಳ್ಳಿ ತೆರೆಗೆ ಮನೆ ಮಂದಿಯೆಲ್ಲಾಕೂಡಿ ನೋಡಬಹುದಾದ ಸಿನಿಮಾ: ತಿಲಕ್

govinda govinda

ನ.26ರಂದು ‘ಗೋವಿಂದಗೋವಿಂದ’ ಬೆಳ್ಳಿ ತೆರೆಗೆ ಮನೆ ಮಂದಿಯೆಲ್ಲಾಕೂಡಿ ನೋಡಬಹುದಾದ ಸಿನಿಮಾ: ತಿಲಕ್

ನ.26ರಂದು ‘ಗೋವಿಂದಗೋವಿಂದ’ ಬೆಳ್ಳಿ ತೆರೆಗೆ
ಮನೆ ಮಂದಿಯೆಲ್ಲಾಕೂಡಿ ನೋಡಬಹುದಾದ ಸಿನಿಮಾ: ತಿಲಕ್

ತುಮಕೂರು: ನಾನು ಅವನಲ್ಲ ಅವಳು, ನಮಸ್ತೇ ಮೇಡಂ ಸೇರಿದಂತೆ ಅನೇಕ ಚಿತ್ರ ನಿರ್ಮಾಣ ಮತ್ತು ಕಿರುತರೆಧಾರವಾಹಿ ನಿರ್ದೇಶಕ ರವಿ ಆರ್‌ ಗರಣಿ, ಮತ್ತೊಬ್ಬ ಹೆಸರಾಂದ ನಿರ್ಮಾಪಕ ಶೈಲೇಂದ್ರ ಬಾಬು ಹಾಗೂ ಮಧುಗಿರಿಯ ಕಿಶೋರ್ ನಿರ್ಮಾಣದ ಹಾಸ್ಯ, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಸಿನಿಮಾ ‘ಗೋವಿಂದಗೋವಿಂದ’ ರಾಜ್ಯದಲ್ಲ್ರಿ ನ.26ರಂದು ತೆರೆಕಾಣಲಿದೆಎಂದುಚಿತ್ರದನಿರ್ದೇಶಕ ತಿಲಕ್ ತಿಳಿಸಿದರು.


ಸಿನಿಮಾ ಬಿಡುಗಡೆಗೆ ಪೂರ್ವಭಾವಿಯಾಗಿ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತುತೆಲುಗುಚಿತ್ರರಂಗದಲ್ಲಿ ಹೆಸರು ಮಾಡಿರುವ ಸುಮಂತ್, ಜಾಕಿ ಭಾವನಾ ಕವಿತಾಗೌಡ, ಪವನ್, ಚೆಂಡೂರ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸುತ್ತಿದ್ದು, ಕುಟುಂಬ ಸಮೇತ ನೋಡಬಹುದಾದ ಕೌಟುಂಬಿಕ ಕಾಮಿಡಿ ಥ್ರಿಲ್ಲರ್‌ ಚಿತ್ರ ಇದಾಗಿದೆ ಎಂದರು.


ಚಿತ್ರದ ನಾಯಕನಟ ಸುಮಂತ್ ಮಾತನಾಡಿ, ಐದು ವರ್ಷದ ನಂತರಕನ್ನಡದಲ್ಲಿ ಸಿನಿಮಾ ಮಾಡುತ್ತಿದ್ದು, ಪ್ರೇಕ್ಷಕರಿಗೆಉತ್ತಮಚಿತ್ರ ನೀಡುತ್ತಿರುವ ಖುಷಿ ಇದೆಎಂದ ಅವರು, ಹಾಸ್ಯಭರಿತ ಕೌಟುಂಬಿಕಚಿ ತ್ರವನ್ನು ಮನೆ ಮಂದಿಯಲ್ಲ ಕುಳಿತು ನೋಡಬಹುದಾದ ಸಿನಿಮಾಇದಾಗಿದೆಎಂದರು.


ಸಿನಿಮಾಕನ್ನಡ ,ತಮಿಳು,ಮಲೆಯಾಳಂ ಹೀಗೆ ತ್ರಿಭಾಷೆಯಲ್ಲಿ ರೂಪುಗೊಂಡಿರುವ ಗೋವಿಂದಗೋವಿಂದ ಬಿಡುಗಡೆಯಾಗುತ್ತಿದೆ, ಮೊದಲು ಕನ್ನಡದಲ್ಲಿ ಬಿಡುಗೊಂಡ ನಂತರ ತಮಿಳು ಮತ್ತು ಮಲೆಯಾಳಂ ಸಿನಿಮಾ ಬಿಡುಗಡೆಗೆತಯಾರಿ ಮಾಡಿಕೊಳ್ಳಲಾಗಿದೆ ಎಂದರು.


ಚಿತ್ರದಲ್ಲಿ ನಾನು ಉತ್ತರಕರ್ನಾಟಕದ ಹುಡುಗನಾಗಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆಇಷ್ಟವಾಗಲಿದ್ದು, ಇದರೊಂದಿಗೆ ಹಾಸ್ಯಕ್ಕೆಒತ್ತು ನೀಡಿದರೂ ವಿರಾಮದ ಬಳಿಕ ಸಸ್ಪೆನ್ಸ್ಥ್ರಿಲ್ಲರ್‌ಇದಾಗಿದ್ದು, ಕೌಟುಂಬಿಕ ಮನರಂಜನಾ ಸಿನಿಮಾಎಂದರು.


ಸಣ್ಣಪುಟ್ಟ ಸಮಸ್ಯೆಗಳು ನಮ್ಮ ನಡುವೆಉಂಟು ಮಾಡುವ ಸಮಸ್ಯೆ ಹಾಗೂ ತಂದೆ ಮತ್ತು ಮಕ್ಕಳ ನಡುವಿನ ಅಂತರವನ್ನುತೋರುವಂತಹ ಪಾತ್ರವನ್ನು ಮಾಡಿದ್ದು, ನನಗೆ ತಂದೆಯಾಗಿಅಚ್ಯುತ್‌ಕುಮಾರ್ ಕಾಣಿಸಿಕೊಂಡಿದ್ದಾರೆ, ಅವರೊಂದಿಗೆ ಪಾತ್ರ ಹಂಚಿಕೊಳ್ಳುತ್ತಿರುವುದು ಸಂತಸದ ವಿಚಾರಎಂದುಚಿತ್ರದ ನಾಯಕಿ ಕವಿತಾಗೌಡ ತಿಳಿಸಿದರು.
ಮಧುಗಿರಿ  ಶಾಂತಲಾ ಚಿತ್ರಮಂದಿರದ ಮಾಲೀಕರೂ ಆಗಿರುವ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಕಿಶೋರ್ ಮಧುಗಿರಿ ಅವರು ಮಾತನಾಡಿ ನಮ್ಮಕುಟುಂಬ ಅರವತ್ತು ವರ್ಷದಿಂದ ಚಿತ್ರ ಪ್ರದರ್ಶಕ ವ್ಯವಹಾರದಲ್ಲಿತೊಡಗಿದ್ದು, ಇದು ನನ್ನಮೊದಲನೇ ಸಿನಿಮಾದ ನಿರ್ಮಾಣಕ್ಕೆಖ್ಯಾತ ನಿರ್ಮಾಪಕರುಜೊತೆಗೂಡಿದ್ದರಿಂದಉತ್ತಮಚಿತ್ರ ಮೂಡಿ ಬಂದಿದೆಸಿನಿಮಾಕ್ಕೆಎರಡೂವರೆ ಕೋಟಿ ರೂ ವೆಚ್ಚವಾಗಿದ್ದು ಮಾರ್ಕೆಟಿಂಗ್‌ ಎಲ್ಲ ಸೇರಿ ನಾಲ್ಕು ಕೋಟಿ ರೂ ಆಗಲಿದೆ ಎಂದರು.


ಹಾಸ್ಯನಟ, ಚಿತ್ರ ಬರಹಗಾರ ವಿಜಯ್‌ಚೆಂಡೂರ್ ಮಾತನಾಡಿ, ಚಿತ್ರದಲ್ಲಿಗಂಭೀರ ಪಾತ್ರ ಮಾಡಿದ್ದರು ಸಹ ನಿಮ್ಮಲ್ಲಿ ನಗು ಮೂಡಿಸುವಂತಹ ಅವಸ್ಥೆ ಚಿತ್ರದಲ್ಲಿದೆ, ಮನರಂಜನೆಯಿಂದ ವಂಚಿತರಾಗಿರುವವರು ಚಿತ್ರದಲ್ಲಿ ಭರಪೂರ ಮನರಂಜನೆದೊರಕಲಿದೆ ಎಂದರು.


ಪೋಷಕರು ಮಕ್ಕಳ ಮೇಲೆ ಹೇರುತ್ತಿರುವಒತ್ತಡ ಮತ್ತುತಂದೆ ಮಕ್ಕಳ ನಡುವಿನ ವಿರೋಧಾಭಾಸದಲ್ಲಿನ ಹಾಸ್ಯ ಸನ್ನಿವೇಶಗಳೇ ಚಿತ್ರದ ಜೀವಾಳ, ಜೀವನದಲ್ಲಿ ಅವಾಂತರಗಳಲ್ಲಿನ ತಿಕ್ಕಾಟದಿಂದ ಹೊರಬರಲುಗೋವಿಂದಗೋವಿಂದಚಿತ್ರ ನೆರವಾಗಲಿದೆ ಎಂದು ಮಜಾ ಟಾಕೀಸ್ ಖ್ಯಾತಿಯ ಪವನ್‌ ಅಭಿಪ್ರಾಯಪಟ್ಟರು.


ಚಿತ್ರಕ್ಕೆ ನಿತಿನ್ ಹಾಸನ್ ಸಂಗೀತ ನಿರ್ದೇಶನ ಮಾಡಿದ್ದು, ಛಾಯಾಗ್ರಹಣವನ್ನುಚಂದ್ರು ಮಾಡಿದ್ದಾರೆ, ಗಾಯಿತ್ರಿಚಿತ್ರಮಂದಿರದ ಮಾಲೀಕ ರುದ್ರಪ್ಪ ಸೇರಿದಂತೆ ಚಿತ್ರದ ತಂತ್ರಜ್ಞರು ಭಾಗವಹಿಸಿದ್ದರು.


ಜನಾರ್ದನ ಕಾರ್ಯಕಾರಿ ನಿರ‍್ಮಾಪಕರಾಗಿ ಕಾರ‍್ಯ ನಿರ‍್ವಹಿಸಿದ್ದಾರೆ. ದೇವ್‌ ರಂಗಭೂಮಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಬರೆದಿರುವ ಈ ಚಿತ್ರಕ್ಕೆಕೆ.ಎಸ್.ಚಂದ್ರಶೇಖರ್ಅವರಛಾಯಾಗ್ರಹಣವಿದೆ. ರವಿಚಂದ್ರನ್ಸಂಕಲನ, ಪ್ರಕಾಶ್‌ ಪುಟ್ಟಸ್ವಾಮಿ ಕಲಾ ನಿರ್ದೇಶನ ಹಾಗೂ ಥ್ರಿಲ್ರ‍್ಮರ್‌ ಮಂಜು ಅವರಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಐತಿಹಾಸಿಕವಿಜಯಪುರ, ಮಧುಗಿರಿಗಳಲ್ಲಿಚಿತ್ರೀಕರಣನಡೆಸಲಾಗಿದೆ.


ಸುಮಂತ್‌ ಶೈಲೇಂದ್ರನಾಯಕರಾಗಿ ನಟಿಸಿರುವ ಈ ಚಿತ್ರದತಾರಾಬಳಗದಲ್ಲಿಕವಿತಾಗೌಡ, ಭಾವನಮೆನನ್, ರೂಪೇಶ್ಶೆಟ್ಟಿ, ಪವನ್ಕುಮಾರ್, ವಿಜಯ್ಚೆಂಡೂರ್, ಅಚ್ಯುತಕುಮಾರ್, ವಿ.ಮನೋಹರ್, ಕೆ.ಮಂಜು, ಕಡ್ಡಿಪುಡಿಚಂದ್ರು, ಪದ್ಮಾವಾಸಂತಿ, ಶ್ರೀನಿವಾಸಪ್ರಭು, ಗೋವಿಂದೇಗೌಡ, ಯಮುನಶ್ರೀನಿಧಿಮುಂತಾದವರಿದ್ದಾರೆ.