ವಿಧಾನ ಪರಿಷತ್ :ಮಹಿಳೆಯರು 100% ಶೇ.99.78 ದಾಖಲೆ ಮತದಾನ

mlc-election-voting-percentage-tumkur-women-voters-hudred-percent

ವಿಧಾನ ಪರಿಷತ್ :ಮಹಿಳೆಯರು 100% ಶೇ.99.78 ದಾಖಲೆ ಮತದಾನ

ವಿಧಾನ ಪರಿಷತ್ :ಮಹಿಳೆಯರು 100%
ಶೇ.99.78 ದಾಖಲೆ ಮತದಾನ


ತುಮಕೂರು: ಕರ್ನಾಟಕ ವಿಧಾನ ಪರಿಷತ್ತಿಗೆ 14 ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ. 99.78ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ. 


ಜಿಲ್ಲಾದ್ಯಂತ ಶಾಂತಿಯುತ ಮತದಾನವಾಗಿದ್ದು, ಜಿಲ್ಲೆಯ 338 ಮತದಾನ ಕೇಂದ್ರದಲ್ಲಿ ಶುಕ್ರವಾರ ಬೆಳಿಗ್ಗೆ 8 ರಿಂದ 4 ಗಂಟೆಯವರೆಗೂ ನಡೆದ ಚುನಾವಣೆಯಲ್ಲಿ 2621 ಪುರುಷರು ಹಾಗೂ 2938 ಮಹಿಳೆಯರು ಸೇರಿದಂತೆ 5559 ಅರ್ಹ ಮತದಾರರಲ್ಲಿ 2610 ಪುರುಷರು (ಶೇ.99.58) ಹಾಗೂ 2937 ಮಹಿಳೆಯರು (ಶೇ.99.97) ಸೇರಿದಂತೆ 5547 ಮತದಾರರು ಮತದಾನ ಮಾಡಿದ್ದಾರೆ. 


ಮತದಾನ ಮಾಡಿದ 5547 ಮತದಾರರ ಪೈಕಿ 8 ಪುರುಷರು ಹಾಗೂ 5 ಮಹಿಳೆಯರು ಸೇರಿದಂತೆ 13 ಮಂದಿ ವಿಕಲಚೇತನರು ಸೇರಿದ್ದಾರೆ.
ಜಿಲ್ಲೆಯ ತುಮಕೂರು ಹಾಗೂ ಶಿರಾ ತಾಲ್ಲೂಕಿನಲ್ಲಿ ಶೇ. 100ರಷ್ಟು ಮತದಾನವಾಗಿದ್ದು, ಗುಬ್ಬಿ ತಾಲ್ಲೂಕು ಹೊರತುಪಡಿಸಿ ಉಳಿದೆಲ್ಲಾ ತಾಲ್ಲೂಕುಗಳಲ್ಲಿ ಶೇ. 100ರಷ್ಟು ಮಹಿಳಾ ಮತದಾರರು ಮತದಾನ ಮಾಡಿರುವುದು ವಿಶೇಷವಾಗಿದೆ.


ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ 8 ರಿಂದ 4 ಗಂಟೆಯವರೆಗೆ 338 ಮತಗಟ್ಟೆಗಳಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಂತಿಯುತ ಮತದಾನವಾಗಿದ್ದು, ಪ್ರತಿ ಮತಗಟ್ಟೆಯಲ್ಲಿ ಮತದಾರರನ್ನು ಹಾಗೂ ಚುನಾವಣಾ ಸಿಬ್ಬಂದಿಯನ್ನು ಕೋವಿಡ್ ನಿಯಮಾವಳಿಯನ್ವಯ ಥರ್ಮಲ್ ಸ್ಕಾö್ಯನಿಂಗ್ ತಪಾಸಣೆಗೊಳಪಡಿಸಲು ಆಶಾ ಕಾರ್ಯಕರ್ತೆಯರನ್ನು ನೇಮಿಸಲಾಗಿತ್ತು. ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತ ಮತದಾನ ಪ್ರಕ್ರಿಯೆ ನಡೆಸುವ ನಿಟ್ಟಿನಲ್ಲಿ ಪ್ರತಿ ಮತದಾನ ಕೇಂದ್ರಗಳಿಗೂ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. 


ವಿಧಾನ ಪರಿಷತ್ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲಾ ಮತದಾನ ಕೇಂದ್ರಗಳಿಗೆ ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿ, ಸೂಕ್ಷö್ಮ ಮತಗಟ್ಟೆ ವೀಕ್ಷಕರು, ಮತದಾರರನ್ನು ಗುರುತು ಹಚ್ಚುವ ಅಧಿಕಾರಿಗಳು ಸೇರಿದಂತೆ ಒಟ್ಟು 1200 ಅಧಿಕಾರಿ/ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.


ತಾಲ್ಲೂಕುವಾರು ಮತದಾನದ ವಿವರ


ತಾಲೂಕಿನ ಹೆಸರು    ಒಟ್ಟು ಮತದಾನ     ಶೇಕಡಾ       ಪುರುಷರು        ಮಹಿಳೆಯರು
ಚಿಕ್ಕನಾಯಕನಹಳ್ಳಿ:         492                    99.39            238                254
ತಿಪಟೂರು:                       437                    99.77            208               229
ತುರುವೇಕೆರೆ:                      412                    99.76          192                  220
ಕುಣಿಗಲ್:                          522                     99.62           245                277 
ತುಮಕೂರು:                     786                     100.00          379                 407
ಕೊರಟಗೆರೆ:                      406                       99.75             196                210
ಗುಬ್ಬಿ:                              622                        99.68             297                 325
ಶಿರಾ:                               658                        100.00           302                 356
ಪಾವಗಡ:                       577                          99.83            257                 320
ಮಧುಗಿರಿ:                      635                            99.84            296               339