``ಪಕ್ಷದಲ್ಲಿ ಗೌರವ ಇಲ್ಲದಿರುವಾಗ ಇಲ್ಲಿರುವುದು ಒಳಿತಲ್ಲ’’ ಜೆಡಿಎಸ್ ವರಿಷ್ಠರ ವಿರುದ್ಧ ವಾಸಣ್ಣ ಅಸಮಾಧಾನ
``ಪಕ್ಷದಲ್ಲಿ ಗೌರವ ಇಲ್ಲದಿರುವಾಗ ಇಲ್ಲಿರುವುದು ಒಳಿತಲ್ಲ’’
ಜೆಡಿಎಸ್ ವರಿಷ್ಠರ ವಿರುದ್ಧ ವಾಸಣ್ಣ ಅಸಮಾಧಾನ
ಗುಬ್ಬಿ : ಅ. ೨೫ ರಂದು ಗುಬ್ಬಿಯಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶ ಮಾಡುತ್ತಿರುವವರು ಮಾಡಿಕೊಳ್ಳಲಿ. ನಮ್ಮ ಯಾವುದೇ ಕಾರ್ಯಕರ್ತರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಹಾಗಾಗಿ ಯಾವುದೇ ರೀತಿಯ ಗೊಂದಲವಿಲ್ಲ. ನಮ್ಮ ಪಕ್ಷದಲ್ಲಿ ನನಗೆ ಗೌರವ ಕೊಡುತ್ತಿಲ್ಲ ಎಂದ ಮೇಲೆ ಇಲ್ಲಿರುವುದು ಒಳಿತಲ್ಲ ಎಂಬುದು ನನ್ನ ಭಾವನೆ ಅಷ್ಟೇ ಎಂದು ಶಾಸಕ ಎಸ್. ಆರ್. ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ಪಟ್ಟಣದ ಅಮಾನಿಕೆರೆ ತುಂಬಿದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿ ಮಾತನಾಡಿದ ಅವರು, ೧೫ ದಿನಗಳಿಂದ ಕೋಡಿ ಹೋಗುತ್ತಿದ್ದು ಇಂದು ಬಾಗಿನ ಅರ್ಪಣೆ ಮಾಡಲಾಗಿದೆ. ಎಲ್ಲಾ ಕೆರೆಗಳು ತುಂಬುತ್ತಿರುವುದರಿAದ ರೈತಾಪಿ ವರ್ಗದವರಿಗೆ ಸಾಕಷ್ಟು ಅನುಕೂಲಕರವಾಗಿದೆ. ಹೇಮಾವತಿ ನಾಲೆಯಲ್ಲಿ ಸಾಕಷ್ಟು ನೀರು ಹರಿಯುತ್ತಿರುವುದರಿಂದ ಗುಬ್ಬಿ ತಾಲ್ಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿದ್ದು ಕಡಬ ಕೆರೆ ಮಾತ್ರ ಬಾಕಿ ಇದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಸ್. ಆರ್. ಶ್ರೀನಿವಾಸ್ ತಿಳಿಸಿದರು.
೨೦೦೪ ರಿಂದಲೂ ನನ್ನ ಕಾರ್ಯಕರ್ತರು ನನ್ನ ಜೊತೆಯಲ್ಲಿದ್ದಾರೆ. ಹಾಗಾಗಿ ಯಾವುದೇ ಗೊಂದಲವಿಲ್ಲ. ೩ ಜನ ಜೆಡಿಎಸ್ ಬಿಟ್ಟು ಹೊರ ಹೋಗಿರುವ ಕಾರ್ಯಕರ್ತರು ಮಾತ್ರ ಸಮಾವೇಶಕ್ಕಾಗಿ ಓಡಾಡುತ್ತಿರುವುದು ಬಿಟ್ಟರೆ ಬೇರೆ ಯಾರೂ ಕೂಡ ಸಮಾವೇಶದಲ್ಲಿ ಭಾಗವಹಿಸುತ್ತಿಲ್ಲ ಎಂದರು.
ಪಕ್ಷದ ವರಿಷ್ಠರ ಜೊತೆಯಲ್ಲಿ ನಾನೇ ಮಾತುಕತೆಗೆ ಮುಂದಾದರೂ ಸಹ ಅವರಿಗೆ ಇಷ್ಟವಿಲ್ಲ ಎಂದ ಮೇಲೆ ನನಗೂ ಅದರ ಅವಶ್ಯಕತೆಯಿಲ್ಲ. ನಾನು ಕಾಂಗ್ರೆಸ್ಸಿಗೆ ಹೋಗುತ್ತೇನೋ, ಬಿಜೆಪಿಗೆ ಹೋಗುತ್ತೇನೋ ಎಂಬ ಚಿಂತನೆಯನ್ನು ಮಾಡಿಲ್ಲ. ಬೆಮೆಲ್ ಕಾಂತರಾಜು ಹಾಗೂ ನಾನು ಇಬ್ಬರೂ ಸೇರಿಯೇ ಸಂಘಟನೆ ಮಾಡಬೇಕು ಎಂದುಕೊAಡಿದ್ದೆವು ಹಾಗೂ ತುರುವೇಕೆರೆಯನ್ನು ಸಹ ಡ್ಯಾಮೇಜ್ ಆಗುತ್ತದೆ ಎಂದು ಸಹ ವರಿಷ್ಠರಿಗೆ ತಿಳಿಸಿದ್ದೆ. ಆದರೂ ಸಹ ನಮ್ಮ ರಾಜ್ಯ ನಾಯಕರು ನಮ್ಮಿಬ್ಬರನ್ನು ಹೊರಗೆ ಅಟ್ಟುತ್ತಿದ್ದಾರೆ. ಹಾಗಾಗಿ ಹೋದರೆ ಕಾಂತರಾಜು ಹಾಗೂ ನಾನು ಜೊತೆಯಲ್ಲೇ ಹೋಗುತ್ತೇವೆ. ನಾವು ಮಾತ್ರ ಅಲ್ಲ ರಾಜ್ಯದ ಸಾಕಷÀÄ್ಟ ಜನ ಇವರ ನಡವಳಿಕೆಯಿಂದ ಬೇಸತ್ತು ಪಕ್ಷವನ್ನು ಬಿಡುವ ನಿರ್ಧಾರ ಮಾಡಿದ್ದಾರೆ ಎಂದು ವರಿಷÀ್ಠರಿಗೆ ಟಾಂಗ್ ನೀಡಿದರು.
ಎಂಎಲ್‌ಸಿ ಕಾಂತರಾಜು ಮಾತನಾಡಿ ನಾವು ಸನ್ಯಾಸಿಗಳಲ್ಲ. ರಾಜಕೀಯದಲ್ಲಿ ಸಾರ್ವಜನಿಕ ಸೇವೆ ಮಾಡಬೇಕು ಎಂಬ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಬಂದಿದ್ದು ನಮಗೆ ಬೆಲೆ ಇಲ್ಲದಂತಹ ಪಕ್ಷದಲ್ಲಿ ನಾವು ಇರಲು ಸಾಧ್ಯವಿಲ್ಲ. ಹಾಗಾಗಿ ಮುಂದಿನ ದಿನದಲ್ಲಿ ನಮಗೆ ಅನುಕೂಲವಾಗುವಂಥ ಪಕ್ಷದೊಳಗೆ ನಾವು ಸಾಗುತ್ತಿದ್ದೇವೆ. ನಮಗೆ ಯಾವ ಪಕ್ಷ ತತ್ವ ಸಿದ್ಧಾಂತ ಒಪ್ಪುತ್ತದೆಯೋ ಆ ಪಕ್ಷಕ್ಕೆ ನಾವು ಹೋಗಿ ನಮ್ಮ ರಾಜಕೀಯ ಜೀವನವನ್ನು ಕಟ್ಟಿಕೊಳ್ಳಲು ನಾವು ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ, ಉಪಾಧ್ಯಕ್ಷೆ ಮಹಾಲಕ್ಷ್ಮಿ ಸದಸ್ಯರುಗಳಾದ ಕುಮಾರ್, ರೇಣುಕಾಸ್ವಾಮಿ, ಶಿವಕುಮಾರ್, ಸಾದಿಕ್, ಮುಖಂಡರಾದ ಯೋಗಾನಂದ್ ವೆಂಕಟೇಶ್ ಇದ್ದರು.