ಮಾದಕದ್ರವ್ಯ : ಸದ್ಯದಲ್ಲೇ ‘ಸರ್ಜಿಕಲ್ ಸ್ಟ್ರೈಕ್‌ ’- ಐಜಿ ವಾರಸುದಾರಿಗೆ ರೂ.9.5 ಕೋಟಿ ಮೌಲ್ಯದ ಕಳವು ವಸ್ತು ಹಸ್ತಾಂತರ

ig

ಮಾದಕದ್ರವ್ಯ : ಸದ್ಯದಲ್ಲೇ ‘ಸರ್ಜಿಕಲ್ ಸ್ಟ್ರೈಕ್‌ ’- ಐಜಿ ವಾರಸುದಾರಿಗೆ ರೂ.9.5 ಕೋಟಿ ಮೌಲ್ಯದ ಕಳವು ವಸ್ತು ಹಸ್ತಾಂತರ


ಮಾದಕದ್ರವ್ಯ : ಸದ್ಯದಲ್ಲೇ ‘ಸರ್ಜಿಕಲ್ ಸ್ಟ್ರೈಕ್‌ ’- ಐಜಿ
ವಾರಸುದಾರಿಗೆ ರೂ.9.5 ಕೋಟಿ ಮೌಲ್ಯದ ಕಳವು ವಸ್ತು ಹಸ್ತಾಂತರ


ತುಮಕೂರು: ಗಾಂಜಾ ಮೊದಲಾದ ಮಾದಕ ದ್ರವ್ಯ ಜಾಲದ ವಿರುದ್ಧ ಸದ್ಯದಲ್ಲೇ ಪೊಲೀಸರು ‘ಸರ್ಜಿಕಲ್ ಸ್ಟೆçöÊಕ್’ ನಡೆಸಲಿದ್ದಾರೆ ಎಂದು ತುಮಕೂರು ಒಳಗೊಂಡ ಕೇಂದ್ರ ವಲಯದ ಐ.ಜಿ.ಪಿ. ಎಂ. ಚಂದ್ರಶೇಖರ್ ಘೋಷಿಸಿದರು.


ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾದಕ ಪದಾರ್ಥಗಳ ಸಮಸ್ಯೆ ಕಂಡುಬAದಿದೆ. ಈ ಜಾಲದ ವಿರುದ್ಧ ಕ್ರಮ ಆರಂಭಿಸಲಾಗಿದೆ. ಮಾದಕ ಪದಾರ್ಥಗಳು ಎಲ್ಲಿಂದ ಪೂರೈಕೆ ಆಗುತ್ತಿದೆಯೋ, ಅದನ್ನು ಪತ್ತೆ ಮಾಡಿ ಶೀಘ್ರವೇ ಸರ್ಜಿಕಲ್ ಸ್ಟೆçöÊಕ್ ಮಾಡಲಾಗುತ್ತದೆ ಎಂದು ಸ್ಪಷ್ಟ ಶಬ್ದಗಳಲ್ಲಿ ಹೇಳಿದರು.


ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿ ನಡೆದಿದ್ದ ಒಟ್ಟು 507 ಕಳವು ಪ್ರಕರಣಗಳಿಗೆ ಸಂಬAಧಿಸಿದAತೆ ಪೊಲೀಸರು 9 ಕೋಟಿ 47 ಲಕ್ಷ 49,862 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಈ ಪೈಕಿ ಒಟ್ಟು 473 ಪ್ರಕರಣಗಳಿಗೆ ಸಂಬAಧಿಸಿದ ಒಟ್ಟು 7 ಕೋಟಿ 69 ಲಕ್ಷ 73,500 ರೂ. ಮೌಲ್ಯದ ವಸ್ತುಗಳ ಪ್ರದರ್ಶನ ಮತ್ತು ಅವುಗಳನ್ನು ದೂರುದಾರರು ಮತ್ತು ವಾರಸುದಾರರಿಗೆ ಸಾಂಕೇತಿಕವಾಗಿ ವಿತರಿಸಿದರು.


ವಿವಿಧ ಕಳವು ಪ್ರಕರಣಗಳನ್ನು ಅದರಲ್ಲೂ ವಿಶೇಷವಾಗಿ ಸರಗಳ್ಳತನವನ್ನು ಭೇದಿಸಿ ಗಣನೀಯ ಪ್ರಮಾಣದಲ್ಲಿ ಕಳವು ಪದಾರ್ಥಗಳನ್ನು ವಶಪಡಿಸಿಕೊಂಡಿರುವ ತುಮಕೂರು ಜಿಲ್ಲಾ ಪೊಲೀಸರ ಶ್ರಮ ಹಾಗೂ ಸಾಧನೆಯನ್ನು ಮುಕ್ತಕಂಠದಿAದ ಪ್ರಶಂಸಿಸಿದ ಅವರು, ಇದೊಂದು ‘ಮಿನಿ ಸರ್ಜಿಕಲ್ ಸ್ಟೆçöÊಕ್’ ಎಂದು ಬಣ್ಣಿಸಿದರು.


ಕೋವಿಡ್‌ನಂತಹ ಅತ್ಯಂತ ಅಪಾಯದ ಸಂದರ್ಭದಲ್ಲಿ ಜಿಲ್ಲೆಯ ಪೊಲೀಸರು ತಮ್ಮ ಜೀವವನ್ನು ಪಣಕ್ಕಿಟ್ಟು ರಾಜ್ಯವಷ್ಟೇ ಅಲ್ಲದೆ ದೇಶದ ವಿವಿಧ ಪ್ರದೇಶಗಳಿಗೆ ತೆರಳಿ, ಅಪರಾಧಿಗಳನ್ನು ಹಿಡಿದು ಕಳವು ವಸ್ತುಗಳನ್ನು ವಶಪಡಿಕೊಂಡಿರುವುದು ಸಾಧಾರಣವಾದ ಸಂಗತಿಯಲ್ಲ. ಪೊಲೀಸರ ಒಂದು ತಂಡ ಗುಜರಾತಿನಲ್ಲಿ 60 ದಿನಗಳ ಕಾಲ ಇತ್ತೆಂಬುದು ಗಮನಾರ್ಹ. ಇದೇ ರೀತಿ ಆಂಧ್ರ, ತಮಿಳುನಾಡು ಮೊದಲಾದೆಡೆಗೆ ಇಲ್ಲಿನ ಪೊಲೀಸರು ತೆರಳಿ, ಇಂತಹುದೊAದು ಸಾಧನೆ ಮಾಡಿದ್ದಾರೆ. ಪ್ರಸ್ತುತ ತುಮಕೂರು ನಗರವನ್ನು ಬಹುತೇಕ ಸರಗಳ್ಳತನದಿಂದ ಮುಕ್ತವಾಗಿಸಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಮನೆಗಳ್ಳತನಗಳೂ ನಿಯಂತ್ರಣಗೊಳ್ಳುವAತೆ ಮಾಡಿದ್ದಾರೆ. ಇದು ಪೊಲೀಸರ ಟೀಮ್ ವರ್ಕ್ಗೆ ಮತ್ತು ಪೊಲೀಸರ ಮೇಲಿನ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ ಎಂದು ಹರ್ಷದಿಂದ ವಿವರಿಸಿದರು.


ಎಸ್ಪಿ ರಾಹುಲ್ ಕುಮಾರ್ ಶಹಪೂರ್‌ವಾಡ್, ಅಡಿಷನಲ್ ಎಸ್ಪಿ ಉದೇಶ್ ಮತ್ತು ಎಲ್ಲ ಅಧಿಕಾರಿ-ಸಿಬ್ಬಂದಿಯನ್ನು ಹೆಸರಿಸುತ್ತ ಅಭಿನಂದಿಸಿದರು.
ಕಳ್ಳತನದAತಹ ಘಟನೆಗಳಾದಾಗ ಅದು ದೊಡ್ಡ ಸುದ್ದಿಯಾಗುತ್ತದೆ. ಆದರೆ ಅದನ್ನು ಪತ್ತೆ ಮಾಡಿ ಪದಾರ್ಥಗಳನ್ನು ವಾರಸುದಾರಿಗೆ ನೀಡುವಾಗ ಯಾರಿಗೂ ಗೊತ್ತಾಗುವುದೇ ಇಲ್ಲ. ಅದು ಗೊತ್ತಾದರೆ ಜನರಿಗೆ ಪೊಲೀಸರ ಮೇಲೆ ವಿಶ್ವಾಸ ಬಲವಾಗುತ್ತದೆ. ಅಲ್ಲದೆ ವಾರಸುದಾರರ ಭಾವನಾತ್ಮಕ ಪ್ರತಿಕ್ರಿಯೆಗಳು ಪೊಲೀಸರಿಗೆ ಸಾರ್ಥಕದ ಭಾವನೆಯನ್ನು ಮೂಡಿಸುತ್ತದೆ. ಆದ್ದರಿಂದ ಇಂತಹ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಚಂದ್ರಶೇಖರ್ ಸ್ಪಷ್ಟಪಡಿಸಿದರು. 


ಇದೇ ಸಂದರ್ಭದಲ್ಲಿ ವಾರಸುದಾರರಾದ ಅನಸೂಯ, ರಮ್ಯ, ಕೃಷ್ಣಾಚಾರ್, ಮಂಜುಳಮ್ಮ, ಅಂಬಿಕಮ್ಮ, ಗೌರಮ್ಮ, ಉಮೇಶ್, ತಿಮ್ಮರಾಯಪ್ಪ, ಬೋರೇಗೌಡ, ಮಮತಾ ಅವರಿಗೆ ಅವರು ಕಳೆದುಕೊಂಡಿದ್ದ ಚಿನ್ನಾಭರಣ ಇತ್ಯಾದಿಗಳನ್ನು ಸಾಂಕೇತಿಕವಾಗಿ ಕೇಂದ್ರ ವಲಯ ಐ.ಜಿ.ಪಿ. ವಿತರಿಸಿದರು.
ಇದೇ ರೀತಿ ಯಶಸ್ವೀ ಪತ್ತೆ ಕಾರ್ಯ ಮಾಡಿರುವ ತುಮಕೂರು ಡಿವೈಎಸ್ಪಿ ಹೆಚ್. ಶ್ರೀನಿವಾಸ್, ಶಿರಾ ಡಿವೈಎಸ್ಪಿ ಎಲ್. ಕುಮಾರಪ್ಪ, ಕುಣಿಗಲ್ ಡಿವೈಎಸ್ಪಿ ಜಿ.ಆರ್. ರಮೇಶ್, ಮಧುಗಿರಿ ಡಿವೈಎಸ್ಪಿ ಕೆ.ಜಿ. ರಾಮಕೃಷ್ಣಪ್ಪ, ತಿಪಟೂರು ಡಿವೈಎಸ್ಪಿ ಗೋವಿಂದರಾಜು ಅವರಿಗೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಪ್ರಶಂಸಾ ಪತ್ರ ವಿತರಿಸಿದರು.


ಸಭೆಯಲ್ಲಿ ವಾರಸುದಾರರ ಪರವಾಗಿ ವಿಜಯಕುಮಾರ್, ಮಹೇಶ್, ನಾಗರಾಜ್, ವಿಜಯೇಂದ್ರ ಮತ್ತು ಕಾಂತು ಮಾತನಾಡಿ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು. 


ಎಸ್ಪಿ ರಾಹುಲ್‌ಕುಮಾರ್ ಶಹಪೂರವಾಡ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತ ಕ್ಯಾತಸಂದ್ರ ಠಾಣೆ ವ್ಯಾಪ್ತಿಯ ಅತ್ಯಾಚಾರ ಪ್ರಕರಣದ ಪತ್ತೆಗೆ ತುಮಕೂರು ಡಿವೈಎಸ್ಪಿ ಹೆಚ್. ಶ್ರೀನಿವಾಸ್ ನಿರಂತರ ಪ್ರಯತ್ನದಲ್ಲಿದ್ದಾರೆ. ಅದೇ ರೀತಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಇನ್ನೊಂದು ಪ್ರಕರಣದ ಬಗ್ಗೆ ಸರ್ಕಲ್ ಇನ್ಸ್ಪೆಕ್ಟರ್ ತೀವ್ರ ಗಮನ ಹರಿಸಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು. ಅಡಿಷನಲ್ ಎಸ್ಪಿ ಉದೇಶ್ ವಂದಿಸಿದರು.

ಮೂರ್ತಿ ಅಂಡ್ ಮೂರ್ತಿ


ತುಮಕೂರು ಸೇರಿದಂತೆ ಇತರೆಡೆಗಳಲ್ಲಿ ಸರಗಳ್ಳತನ ಹೆಚ್ಚಾಗಿದ್ದು ನಾಗರಿಕರು, ವಿಶೇಷವಾಗಿ ಮಹಿಳೆಯರು ಆತಂಕಕ್ಕೀಡಾಗಿದ್ದರು. ಈ ಸರಗಳ್ಳತನ ಪತ್ತೆಗೆ ವಿಶೇಷ ಆಸಕ್ತಿ ತೋರಿ ಕಳ್ಳರ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿರುವ ಮೂರ್ತಿ ಅಂಡ್ ಮೂರ್ತಿ ಅವರ ಕಾರ್ಯಕ್ಷಮತೆಯನ್ನು ಐಜಿಪಿ ಚಂದ್ರಶೇಖರ್ ಮುಕ್ತವಾಗಿ ಪ್ರಶಂಸಿಸಿದರು.
ಸರಗಳ್ಳರ ಪತ್ತೆಹಚ್ಚುವಲ್ಲಿ ಶ್ರಮಿಸಿ ಯಶಸ್ವಿಯಾದ ಪ್ರೊಬೇಷನರಿ ಸಬ್‌ಇನ್ಸ್ಪೆಕ್ಟರ್‌ಗಳಾದ ಟಿ. ಮೂರ್ತಿ ಮತ್ತು ಟಿ.ಸಿ. ಮೂರ್ತಿ ಅವರನ್ನು ವಿಶೇಷವಾಗಿ ಅಭಿನಂದಿಸಿದರು.


ಇದರೊAದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್‌ವಾಡ್, ಅಡಿಷನಲ್ ಎಸ್ಪಿ ಉದೇಶ್ ಮತ್ತು ಎಲ್ಲ ಅಧಿಕಾರಿ-ಸಿಬ್ಬಂದಿಯನ್ನು ಹೆಸರಿಸುತ್ತ ಅಭಿನಂದಿಸಿದರು. ಪತ್ತೆ ಕಾರ್ಯದಲ್ಲಿ ಸ್ವಯಂಪ್ರೇರಣೆಯಿAದ ಮುನ್ನುಗ್ಗಿಬರುವ ಹೆಡ್‌ಕಾನ್ಸ್ಟೆಬಲ್ ಮೋಹನ್ ಕುಮಾರ್ ಅವರ ಕಾಳಜಿಯನ್ನು ಪ್ರಶಂಸಿಸಿದರು. ಪತ್ತೆ ಕಾರ್ಯವನ್ನು ಯಶಸ್ವಿಯಾಗಿ ನಡೆಸಿರುವ ಜಿಲ್ಲೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬಹುಮಾನ (ರಿವಾರ್ಡ್) ನೀಡುವ ಸಮಾರಂಭವನ್ನು ಪ್ರತ್ಯೇಕವಾಗಿ ಏರ್ಪಡಿಸಲು ಸಲಹೆಯಿತ್ತರಲ್ಲದೆ, ಈ ಕಾರ್ಯಕ್ರಮಕ್ಕೆ ತಾವೇ ಬರುವುದಾಗಿಯೂ ಚಂದ್ರಶೇಖರ್ ಪ್ರಕಟಿಸಿದರು.


ಪ್ರದರ್ಶನದಲ್ಲಿ ಏನೇನಿತ್ತು?


ಈ ಪ್ರದರ್ಶನದಲ್ಲಿ ವೈವಿಧ್ಯಮಯವಾದ ಚಿನ್ನಾಭರಣಗಳು, ಬೆಳ್ಳಿಯ ಪದಾರ್ಥಗಳು, ದ್ವಿಚಕ್ರ ವಾಹನಗಳು, ಇತರೆ ವಾಹನಗಳು, ಮೊಬೈಲ್ ಫೋನ್‌ಗಳು, ನಗದು ಹಣ ಇತ್ಯಾದಿಗಳಿದ್ದು, ಸಾರ್ವಜನಿಕರ ಗಮನಸೆಳೆಯಿತು.


ಪೊಲೀಸರು ಈಗಾಗಲೇ ವಶಪಡಿಸಿಕೊಂಡಿದ್ದ ವಸ್ತುಗಳ ಪಟ್ಟಿಯಲ್ಲಿ 146 ಕುರಿಗಳು ಮತ್ತು ಮೇಕೆಗಳು, 4 ಹಸುಗಳು, 25 ನಾಟಿ ಕೋಳಿಗಳು ಸೇರಿವೆಯೆಂಬುದು ಸಹ ಕುತೂಹಲಕ್ಕೆಡೆಮಾಡಿತು.