``ಇಷ್ಟಲಿಂಗ ಪೂಜೆಯಲ್ಲಿ ಪರಮಾತ್ಮನನ್ನು ಕಂಡವರು ವೀರಶೈವರು’’ ಸ್ನೇಹ ಸಂಗಮ ನೂತನ ಕಟ್ಟಡದಲ್ಲಿ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಪೂಜೆ

``ಇಷ್ಟಲಿಂಗ ಪೂಜೆಯಲ್ಲಿ ಪರಮಾತ್ಮನನ್ನು ಕಂಡವರು ವೀರಶೈವರು’’ ಸ್ನೇಹ ಸಂಗಮ ನೂತನ ಕಟ್ಟಡದಲ್ಲಿ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಪೂಜೆ


``ಇಷ್ಟಲಿಂಗ ಪೂಜೆಯಲ್ಲಿ ಪರಮಾತ್ಮನನ್ನು ಕಂಡವರು ವೀರಶೈವರು’’
ಸ್ನೇಹ ಸಂಗಮ ನೂತನ ಕಟ್ಟಡದಲ್ಲಿ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಪೂಜೆ


ತುಮಕೂರು: ವೀರಶೈವರು ಇಷ್ಟಲಿಂಗದಲ್ಲಿ ಪರಮಾತ್ಮನನ್ನು ಕಂಡವರು. ಶಿವಪೂಜೆ, ಲಿಂಗಪೂಜೆ ಅತ್ಯಂತ ಶ್ರೇಷ್ಟವಾದ ಪೂಜೆ ಎಂದು ರಂಭಾಪುರಿ ಜಗದ್ಗುರುಗಳಾದ ಶ್ರೀ ಪ್ರಸನ್ನ ರೇಣುಕಾ ವೀರ ಸೋಮೇಶ್ವರ ಸ್ವಾಮೀಜಿ ತಿಳಿಸಿದರು.


ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಸ್ನೇಹ ಸಂಗಮ ಸೌಹಾರ್ದ ಸಹಕಾರಿಯ ನೂತನ ಕಟ್ಟಡದ ಆರಂಭೋತ್ಸವದ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಸಾಮೂಹಿಕ ಇಷ್ಟ ಲಿಂಗ ಶಿವಪೂಜೆ ಕಾರ್ಯಕ್ರಮದ ಸಾನಿಧ್ಯ ವಹಿಸಿದ ಶ್ರೀಗಳು ಆಶೀರ್ವಚನ ನೀಡಿದರು.


ಪೂರ್ವ ಜನ್ಮದಲ್ಲಿ ಮನುಷ್ಯರು ಮಾಡಿದ ಕರ್ಮಗಳನ್ನು ಕಳೆಯಲು ಶಿವಪೂಜೆ, ಲಿಂಗಪೂಜೆಯಿAದ ಸಾಧ್ಯವಿದೆ. ಇದನ್ನು ವೀರಶೈವ ಧರ್ಮ ಪರಂಪರೆಯಲ್ಲಿ ದೃಢಪಡಿಸಲಾಗಿದೆ. ಜಗದ್ಗುರು ಶ್ರೀ ರೇಣುಕಾಚಾರ್ಯರು ಇದನ್ನೇ ಪ್ರತಿಪಾದಿಸಿದ್ದಾರೆ. ಬಸವಣ್ಣನವರ ವಚನಗಳಲ್ಲಿ ಕೂಡಾ ಇದರ ಉಲ್ಲೇಖಗಳಿವೆ ಎಂದು ಶ್ರೀಗಳು, ಎಲ್ಲಾ ಅನಿಷ್ಟ ದಾರಿದ್ರ‍್ಯಗಳ ನಿವಾರಣೆಗೆ ಶಿವಪೂಜೆ ಪರಿಹಾರವಾಗಿದೆ. ಹಣೆಬರಹದ ದೋಷವನ್ನು ದೂರಮಾಡುವ ಶಕ್ತಿ ಶಿವಪೂಜೆಗಿದೆ ಎಂದರು.


ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಸ್ನೇಹಸಂಗಮ ಪತ್ತಿನ ಸಹಕಾರಿಯವರು ಹೊಸ ಕಟ್ಟಡ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಸಾಮೂಹಿಕ ಶಿವಪೂಜೆ, ಇಷ್ಟಲಿಂಗ ಪೂಜೆ ಆಯೋಜಿಸಿದ್ದು, ಅದಕ್ಕೆ ತಮ್ಮನ್ನು ಆಹ್ವಾನಿಸಿ ನೆರವೇರಿಸಲಾಗಿದೆ. ಇದರಿಂದ ಭಕ್ತ ಸಮೂಹದಲ್ಲಿ ಧಾರ್ಮಿಕ ಮನೋಭಾವ ಜಾಗೃತವಾಗಲು ಸಹಕಾರಿಯಾಗಲಿದೆ ಎಂದು ಶ್ರೀಗಳು ನುಡಿದರು. 


ಸಿದ್ಧರಬೆಟ್ಡದ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಹೊಳವನಹಳ್ಳಿ ಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪೂಜೆ ಬಳಿಕ ತೀರ್ಥ ಪ್ರಸಾದ ವಿತರಿಸಲಾಯಿತು.


ಸಹಕಾರಿ ಅಧ್ಯಕ್ಷ ಬಿ.ಎಸ್.ಮಂಜುನಾಥ, ಉಪಾಧ್ಯಕ್ಷ ಎಚ್.ಆರ್.ನಾಗೇಶ್, ನಿರ್ದೇಶಕರಾದ ಟಿ.ಎಸ್. ನಳಿನಾ, ಟಿ.ಬಿ. ಮೃತ್ಯುಂಜಯ, ಎಚ್.ಎನ್. ಶಿವಕುಮಾರ್, ಪ್ರಭಾಕರ್, ಕೆ.ಎಸ್. ಸುರೇಶ್, ಓ.ಕೆ. ಅರುಣ್ ಕುಮಾರ್, ಟಿ.ಎಸ್. ಪೃಥ್ವಿ ಪ್ರಸಾದ್, ಟಿ. ಶಾಂತಕುಮಾರಿ, ಟಿ.ಎಸ್. ಲೋಕೇಶ್ ಕುಮಾರ್, ವಿಶೇಷ ಆಹ್ವಾನಿತರಾದ ಟಿ.ಎಸ್. ಚಿದಾನಂದ್, ಡಾ. ಡಿ.ಎಸ್. ಸುರೇಶ್, ಟಿ.ಎಸ್. ಜಗದೀಶ್, ಎಚ್.ಎಸ್. ಸಿದ್ದರಾಜು, ಸಿಇಒ ಕೆ.ಎಸ್. ಮಂಜುನಾಥ್ ಹಾಗೂ ಸಮಾಜದ ಗಣ್ಯರು, ಸದಸ್ಯರು ಭಾಗವಹಿಸಿದ್ದರು.