``ಸಾಮಾಜಿಕ ಪ್ರಗತಿಗೆ ಶಿಕ್ಷಣಕ್ಕೆ ಪ್ರಾಶಸ್ತ್ಯ ಕೊಡಿ’’ ಕುಂಬಾರ ಸಮಾಜಕ್ಕೆ ಕೆ.ಎನ್. ರಾಜಣ್ಣ ಕರೆ

``ಸಾಮಾಜಿಕ ಪ್ರಗತಿಗೆ ಶಿಕ್ಷಣಕ್ಕೆ ಪ್ರಾಶಸ್ತ್ಯ ಕೊಡಿ’’ ಕುಂಬಾರ ಸಮಾಜಕ್ಕೆ ಕೆ.ಎನ್. ರಾಜಣ್ಣ ಕರೆ


``ಸಾಮಾಜಿಕ ಪ್ರಗತಿಗೆ ಶಿಕ್ಷಣಕ್ಕೆ ಪ್ರಾಶಸ್ತ್ಯ ಕೊಡಿ’’
ಕುಂಬಾರ ಸಮಾಜಕ್ಕೆ ಕೆ.ಎನ್. ರಾಜಣ್ಣ ಕರೆ


ತುಮಕೂರು: ಕುಂಬಾರ ಸಮಾಜ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ಬರಲು ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ತಿಳಿಸಿದರು.
ಜಿಲ್ಲಾ ಕುಂಬಾರರ ಸಂಘದ ಪದಾಧಿಕಾರಿಗಳು ಕೆ.ಎನ್. ರಾಜಣ್ಣ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿದ ವೇಳೆ ಮಾತನಾಡಿದ ಅವರು, ಸರ್ವಜ್ಞ ಕುಲದವರಾದ ಕುಂಬಾರರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಆಧುನೀಕರಣದ ಭರಾಟೆಯಲ್ಲಿ ಈ ಸಮುದಾಯ ಮೂಲೆಗುಂಪಾಗಿದ್ದಾರೆ ಎಂದು ವಿಷಾದಿಸಿದರು.
ಈ ಸಮುದಾಯದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಬೇಕು, ಉನ್ನತ ಶಿಕ್ಷಣಕ್ಕೆ ಬಡ್ಡಿರಹಿತ ಸಾಲ ದೊರೆಯಬೇಕು, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಬಿಸಿಎಂ ಹಾಸ್ಟೆಲ್ಲಿನ ಎಲ್ಲಾ ಸೌಲಭ್ಯ ದೊರೆಯಬೇಕು ಎಂದರು.
ರಘು ಎಂಬ ಕುಂಬಾರ ವಿದ್ಯಾರ್ಥಿ ನಮ್ಮ ಮನೆಗೆ ವಿದ್ಯುತ್ ಸಂಪರ್ಕವಿಲ್ಲ ಎಂದು ನನಗೆ ಪತ್ರ ಬರೆದಾಗ ಅದನ್ನು ಗಣನೆಗೆ ತೆಗೆದುಕೊಂಡು ವಿದ್ಯಾರ್ಥಿಗಳಿರುವ ಸಾವಿರಾರು ಮನೆಗಳಿಗೆ `ವಿದ್ಯಾರ್ಥಿ ಜ್ಯೋತಿ' ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಸರ್ಕಾರದಿಂದ ಮಾಡಲಾಯಿತು ಎಂದರು.
ಸAಘದ ಶ್ರೆಯೋಭಿವೃದ್ಧಿಗೆ ಶ್ರಮಿಸುತ್ತಿರುವ ಕೆರೆಗಲಪಾಳ್ಯ ನಾರಾಯಣ್, ಹನುಮಂತಪುರ ಕೃಷ್ಣಮೂರ್ತಿ, ಕೆ.ಜಿ. ಗವಿಸಿದ್ಧಯ್ಯ, ಆದಿಮೂರ್ತಿ ಇವರನ್ನು ಕೆ.ಎನ್. ರಾಜಣ್ಣ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಂಬಾರ ಸಂಘದ ಉಪಾಧ್ಯಕ್ಷ ಗುರುಮೂರ್ತಿ, ಕಾರ್ಯದರ್ಶಿ ಆದಿಮೂರ್ತಿ, ನಿರ್ದೇಶಕರಾದ ಕೆ.ಎನ್. ಮಂಜುನಾಥ್, ಜಯಮ್ಮ ನಾಗರಾಜು, ಮಧುಗಿರಿ ತಾಲ್ಲೂಕು ಕುಂಬಾರ ಸಂಘದ ಪದಾಧಿಕಾರಿಗಳಾದ ಸುಬ್ಬರಾಯಪ್ಪ, ಆಶ್ವತ್ಥಪ್ಪ, ಗವಿಸಿದ್ದಯ್ಯ, ನೀಲಿಹಳ್ಳಿ ಶ್ರೀನಿವಾಸ್, ಗುರುರಾಜ್, ಲೋಕೇಶ್ ಇತರರು ಇದ್ದರು.