ರಾಜಕೀಯವಾಗಿ ಪುನರ್ಜನ್ಮ ನೀಡಿದ ಹುಳಿಯಾರು ಖುಣ ತೀರಿಸಲಾಗದು ಸಚಿವ ಜೆ.ಸಿ.ಮಾಧುಸ್ವಾಮಿ 

jcm

ರಾಜಕೀಯವಾಗಿ ಪುನರ್ಜನ್ಮ ನೀಡಿದ ಹುಳಿಯಾರು ಖುಣ ತೀರಿಸಲಾಗದು ಸಚಿವ ಜೆ.ಸಿ.ಮಾಧುಸ್ವಾಮಿ 

ರಾಜಕೀಯವಾಗಿ ಪುನರ್ಜನ್ಮ ನೀಡಿದ ಹುಳಿಯಾರು ಖುಣ ತೀರಿಸಲಾಗದು
ಸಚಿವ ಜೆ.ಸಿ.ಮಾಧುಸ್ವಾಮಿ 


ಹುಳಿಯಾರು: ರಾಜಕೀಯವಾಗಿ ಪುನರ್ಜನ್ಮ ನೀಡಿದ ಹುಳಿಯಾರಿನ ಖುಣ ತೀರಿಸಲಾಗದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.


         ಹುಳಿಯಾರು ಹಾಗೂ ತಿಮ್ಲಾಪುರ ಕೆರೆಗಳಿಗೆ ಹೇಮಾವತಿ ನೀರು ಹರಿಸಿದ ಸಲುವಾಗಿ ಅಭಿಮಾನಿಗಳು ಹುಳಿಯಾರಿನ ಪರಿವೀಕ್ಷಣಾ ಮಂದಿರದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 


         ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಸೋತು ರಾಜಕೀಯ ಸಹವಾಸ ಸಾಕು ಎನ್ನುವ ಕಾಲದಲ್ಲಿ ರಾಮಕೃಷ್ಣಹೆಗಡೆ ಅವರ ಸೂಚನೆ ಮೇರೆಗೆ ಹುಳಿಯಾರು ಕ್ಷೇತ್ರದಿಂದ ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿದ್ದೆ. ನನ್ನ ಮೇಲೆ ಹೊರಗಿನವನು ಎನ್ನುವುದು ಸೇರಿದಂತೆ ಅನೇಕ ಅಪಪ್ರಚಾರಗಳನ್ನು ವಿರೋಧಿಗಳು ಮಾಡಿದರಾದರೂ ಹುಳಿಯಾರು ಜನತೆ ಕೈ ಹಿಡಿದರು. ಅಂದು ಹುಳಿಯಾರು ಜನ ಕೊಟ್ಟ ರಾಜಕೀಯ ಪುನರ್ಜನ್ಮದ ಫಲವಾಗಿ ಕೆಎಂಎಫ್ ಅಧ್ಯಕ್ಷನಾಗಿ, ಶಾಸಕನಾಗಿ, ಸಚಿವನಾಗಿ ರಾಜಕೀಯವಾಗಿ ಬೆಳದಿದ್ದೇನೆ ಎಂದರು.


         ಹುಳಿಯಾರು ಪೊಲೀಸ್ ಠಾಣಾ ಕಟ್ಟಡಕ್ಕೆ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಇನ್ನೊಂದು ವಾರದಲ್ಲಿ ಹುಳಿಯಾರಿನ ಪರಿವೀಕ್ಷಣ ಮಂದಿರಕ್ಕೂ ಭೂಮಿ ಪೂಜೆ ನೆರವೇರಿಸಲಿದ್ದೇನೆ. ಹುಳಿಯಾರು ಕೆರೆಗೆ ಹೇಮಾವತಿ ನೀರು ಹರಿಸಿದ್ದೇನೆ. ದಶಕಗಳಿಂದ ಗುಂಡಿ ಬಿದಿದ್ದ ಪಟ್ಟಣದ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದೇನೆ. ಹುಳಿಯಾರಿಗೆ ನೀರಿನ ಸಮಸ್ಯೆಯಾಗಬಾರದೆಂದು ಬೋರನಕಣಿವೆಗೆ ಭದ್ರಾದಿಂದ 1 ಟಿಎಂಸಿ ನೀರು ಮೀಸಲಿಟ್ಟಿದ್ದೇನೆ. ಅಲ್ಲದೆ ಶೀಘ್ರದಲ್ಲೇ ಹುಳಿಯಾರಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸುತ್ತೇನೆ. ಇಷ್ಟು ಕೆಲಸ ಮಾಡಿದರೂ ಹುಳಿಯಾರಿನವರ ಖುಣಕ್ಕೆ ಈ ಕೆಲಸಗಳು ಕಮ್ಮಿ ಎಂದರು.  


        ಸಣ್ಣ ನೀರಾವತಿ ಖಾತೆಯೇ ಬೇಕೆಂದು ಪಟ್ಟು ಹಿಡಿದು ಪಡೆದು ನನ್ನ ತಾಲೂಕಿಗೆ ಮಾತ್ರವಲ್ಲದೆ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಪ್ರಮಾಣಿಕ ಕೆಲಸ ಮಾಡುತ್ತಿದ್ದೇನೆ. ಕೊಲಾರ, ಚಿಕ್ಕಬಳ್ಳಾಪುರ ಕೆರೆಗಳನ್ನು ತುಂಬಿಸಿದAತೆ ಬೆಂಗಳೂರಿನ ಕೊಳಚೆ ನೀರನ್ನು ಶುದ್ಧಿಕರಿಸಿ ತುಮಕೂರು ಗ್ರಾಮಾಂತರ ಕೆರೆಗಳನ್ನು ತುಂಬಿಸಲು ಹಣ ನೀಡಿದ್ದೇನೆ. 30 ವರ್ಷಗಳ ನಂತರ ಕುಣಿಗಲ್ ಕೆರೆ ತುಂಬಿಸಿದ್ದೇನೆ. ಭದ್ರಾ, ಎತ್ತಿನಹೊಳೆ ಹಾಗೂ ಹೇಮಾವತಿ ಯೋಜನೆಯಿಂದ ಜಿಲ್ಲೆಗೆ ಮೀಸಲಾಗಿರುವ 15 ಟಿ.ಎಂ.ಸಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಯತ್ತೇಚ್ಚವಾಗಿ ಹಣ ನೀಡಿದ್ದೇನೆ ಎಂದು ವಿವರಿಸಿದರು.


        ಕೋವಿಡ್‌ನ ಎರಡನೇ ಅಲೆಯಲ್ಲಿ ಜಿಲ್ಲೆಯ ಪ್ರತಿ ತಾಲೂಕು ಆಸ್ಪತ್ರೆಗಳಿಗೆ 50 ಆಕ್ಸಿಜನ್ ಬೆಡ್ ಕೊಟ್ಟಿದಲ್ಲದೆ ವೆಂಟಿಲೇಟರ್ ಸಹಿತ ಐಸಿಯು ಆರಂಭಿಸಿ ಸಾವನೋವುಗಳನ್ನು ತಡೆದಿದ್ದೇವೆ. ಈಗ 100 ಮಂದಿ ಮಕ್ಕಳ ತಜ್ಞರನ್ನು ಸೇರಿಸಿ ಸಭೆ ನಡೆಸಿ 3 ನೇ ಅಲೆಯನ್ನು ಸಮರ್ಥವಾಗಿ ಎದುರಿಸುವಂತೆ ಜಿಲ್ಲೆಯ ಆಸ್ಪತ್ರೆಗಳು ಹಾಗೂ ಕೋವಿಡ್ ಕೇರ್ ಸೆಂಟರ್‌ಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದೇವೆ ಎಂದರಲ್ಲದೆ ಹುಳಿಯಾರನ್ನು ತಾಲೂಕು ಮಾಡುವ ಆಸೆಯಿದೆಯಾದರೂ ತುಮಕೂರು ಭಾಗ ಮಾಡಲು ಜಿಲ್ಲೆಯ ಯಾವ ಜನಪ್ರತಿನಿಧಿಯೂ ಕೈ ಹಾಕಿಲ್ಲ. ಬೆಳಗಾವಿ ನಂತರ 2 ನೇ ಅತೀ ದೊಡ್ಡ ಜಿಲ್ಲೆಯಾಗಿ ತುಮಕೂರು ಉಳಿಯಲಿ ಎನ್ನುವುದು ನಮ್ಮೆಲ್ಲರ ಬಯಕೆಯಾಗಿದೆ. ವಿಕೇಂದ್ರಿಕರಣದ ಕಾಲ ಕೂಡಿ ಬಂದರೆ ಹುಳಿಯಾರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದರು.


        ಪಪಂ ಅಧ್ಯಕ್ಷ ಕೆ.ಎಂ.ಎಲ್ ಕಿರಣ್, ಉಪಾಧ್ಯಕ್ಷೆ ಶೃತಿಸನತ್, ಸದಸ್ಯರುಗಳಾದ ಹೇಮಂತ್‌ಕುಮಾರ್, ಬೀಬೀಫಾತೀಮಾ, ಟಿ.ಸಂಧ್ಯ, ಚಂದ್ರಶೇಖರರಾವ್, ರತ್ನಮ್ಮ, ಜಿಪಂ ಮಾಜಿ ಸದಸ್ಯೆ ಮಂಜುಳಮ್ಮ, ತಾಪಂ ಮಾಜಿ ಅಧ್ಯಕ್ಷ ಕೆಂಕೆರೆನವೀನ್, ಹೊಸಹಳ್ಳಿಜಯಣ್ಣ, ನಿರಂಜನ್, ಕೇಶವಮೂರ್ತಿ, ಹರ್ಷ, ಕೆಂಕೆರೆ ಗ್ರಾಪಂ ಅಧ್ಯಕ್ಷ ಕೆ.ಸಿ.ವಿಕಾಸ್, ದೊಡ್ಡಬಿದರೆ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ, ಬಿಜೆಪಿ ಮುಖಂಡರಾದ ಬುಕ್ಕಾಪಟ್ಟಣ ಮಂಜುನಾಥ್, ಬರಕನಹಾಲ್ ವಿಶ್ವನಾಥ್, ನಂದಿಹಳ್ಳಿಶಿವಣ್ಣ, ಅಶೋಕ್‌ಬಾಬು, ರಾಮಣ್ಣ, ಶಿವರಾಜ್, ಬಸವರಾಜು ಮತ್ತಿತರರು ಇದ್ದರು.
30ಊUಐIಙಂಖ1: ಹುಳಿಯಾರಿನಲ್ಲಿ ಅಭಿಮಾನಿಗಳಿಂದ ಸಚಿವರು ಅಭಿನಂದನೆ ಸ್ವೀಕರಿಸಿದರು.

ಜೆ.ಸಿ.ಮಧುಸ್ವಾಮಿ ಅವರಿಗೆ ಅದ್ದೂರಿ ಮೆರವಣಿಗೆ
----------------- 
ಹುಳಿಯಾರು: ಹುಳಿಯಾರು ಹಾಗೂ ತಿಮ್ಲಾಪುರ ಕೆರೆಗೆ ಹೇಮಾವತಿ ನೀರು ಹರಿಸಿದ ಸಲುವಾಗಿ ಸಚಿವ ಜೆ.ಸಿ.ಮಾಧುಸ್ವಾಮಿ ಯವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 


         ಈ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರನ್ನು ಅಭಿಮಾನಿಗಳು ಅದ್ದೂರಿ ಸ್ವಾಗತದೊಂದಿಗೆ ಊರಿನ ಪ್ರಮುಖ ಬೀದಿಯಲ್ಲಿ ಭವ್ಯ ಮೆರವಣಿಗೆ ಮಾಡಿದರು. 


         ಹುಳಿಯಾರಿನ ಎಸ್‌ಎಲ್‌ಆರ್ ನಿಂದ ರಾಮ್ ಗೋಪಾಲ್ ಸರ್ಕಲ್ ಮಾರ್ಗವಾಗಿ ದುರ್ಗಮ್ಮನ ದೇವಸ್ಥಾನಕ್ಕೆ ತೆರೆದ ವಾಹನದಲ್ಲಿ ಸಚಿವರನ್ನು ಅಭಿವೃದ್ಧಿಯ ಹರಿಕಾರ, ಬರದ ನಾಡಿದ ಭಗೀರಥ ಮುಂತಾದ ಜಯಘೋಷದೊಂದಿಗೆ ಕರೆತರಲಾಯಿತು. 


         ಮೆರವಣಿಗೆಯಲ್ಲಿ ಬಿಜೆಪಿ ಭಾವುಟಗಳು ರಾರಾಜಿಸುತ್ತಿತ್ತಲ್ಲದೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬೈಕ್‌ನಲ್ಲಿ ಆಗಮಿಸಿ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಅಲ್ಲದೆ ಮೆರವಣಿಗೆಯುದ್ದಕ್ಕೂ ಪಟಾಕಿ ಸಿಡಿಸಿ ಕುಣಿದು ಸಂಭ್ರಮಿಸಿದರು.


         ಮೆರವಣಿಗೆಯುದ್ದಕ್ಕೂ ಸಚಿವರಿಗೆ ಅಭಿಮಾನಿಗಳು ಹೂನಿನ ಹಾರ ಹಾಕಿದರಲ್ಲದೆ ಬಾಗಿನ ಅರ್ಪಿಸಲು ಬಂದಾಗ, ವೇದಿಕೆ ಕಾರ್ಯಕ್ರಮಕ್ಕೆ ಬಂದಾಗ ಹೂವಿನ ಮಳೆ ಸುರಿದು ತಮ್ಮ ಅಭಿಮಾನ ಪ್ರದರ್ಶಿಸಿದರು.

ವೇದಿಕೆಯಲ್ಲಿ ಮತ್ತೊಮ್ಮೆ ಭಾವುಕರಾದ ಸಚಿವರು
-------------------- 
ಹುಳಿಯಾರು: ಇತ್ತೀಚೆಗಷ್ಟು ಜೆ.ಸಿ.ಪುರದಲ್ಲಿ ನಡೆದ ನೀರಾವರಿ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಭಾವುಕರಾಗಿ ಕಣ್ಣೀರಾಕುವ ಮೂಲಕ ಸುದ್ದಿಯಾಗಿದ್ದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಗುರುವಾರ ಹುಳಿಯಾರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾವುಕರಾಗಿ ಕಣ್ಣಂಚಿನಲ್ಲಿ ನೀರು ತಂದು ಕೊಂಡರು.


         ತಾಲೂಕಿನಲ್ಲಿ ತಿಮ್ಲಾಪುರ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಮಾತ್ರ ಹಿಂದೂಳಿದವರ ಜಮೀನಿದೆ. ಉಳಿದೆಡೆ ಮೇಲ್ವರ್ಗದವರ ಜಮೀನಿದೆ. ಹಾಗಾಗಿ ಹಿಂದುಳಿದವರಿಗೆ ನೆರವಾಗಲು ತಿಮ್ಲಾಪುರ ಕೆರೆಗೆ ಹೇಮಾವತಿ ನೀರು ಹರಿಸಲು ಹಠ ಮಾಡಿದ್ದೆ.


         ಆದರೆ ಕಳೆದ ವರ್ಷ ನೀರಿನ ಹಂಚಿಕೆಯ ಪ್ರಮಾಣ ಮುಗಿದಿದ್ದರಿಂದ ತಿಮ್ಲಾಪುರ ಕೆರೆಗೆ ನೀರು ಹರಿಯುವ ಮುಂಚೆಯೇ ಹೇಮಾವತಿ ನೀರು ಹರಿಯುವುದನ್ನು ನಿಲ್ಲಿಸಲಾಗಿತ್ತು. ಆದರೆ ಶೆಟ್ಟಿಕೆರೆ ಭಾಗದಲ್ಲಿ ಲಿಂಗಾಯಿತರು ಹೆಚ್ಚಾಗಿದ್ದಾರೆ. ಅವರಿಗೆ ಮಾತ್ರ ಮಾಧುಸ್ವಾಮಿ ಅನುಕೂಲ ಕಲ್ಪಿಸುತ್ತಾರೆ. ಹಾಗಾಗಿ ನೀರು ನಿಲ್ಲಿಸಿದ್ದಾರೆ ಎಂದು ಜಾತಿವಾದಿ ಪಟ್ಟ ಕಟ್ಟಿದ್ದರು.


        ರಾಜಕಾರಣದಲ್ಲಿ ಧರ್ಮ, ಜಾತಿ ಬರಬಾರದು. ನಾನೆಂದೂ ಜಾತಿ, ಧರ್ಮದ ಬೇದ ಮಾಡಿಲ್ಲ. ಈ ವರ್ಷ ತಿಮ್ಲಾಪುರ ಕೆರೆ ತುಂಬಿಸಿದ್ದೇನೆ. ಪಾಪಪುಣ್ಯ ಗೊತ್ತಿರುವವರು ನಾನು ಜಾತಿವಾದಿಯೇ ಎಂದು ಯೋಚನೆ ಮಾಡಲಿ ಎಂದು ಭಾವುಕರಾದರು. ವೇದಿಕೆಯಲ್ಲೇ ಕಣ್ಣೀರು ಹಾಕಿ ಭಾಷಣದ ನಡುವೆಯೇ ಕರ್ಚೀಫಿನಿಂದ ಒರೆಸಿಕೊಂಡರು.