ಕೂಡಲೇ ಕಡತ ವಿಲೆವಾರಿ ಮಾಡಿ ಸಿಎಂ ಬೊಮ್ಮಾಯಿ ಖಡಕ್‌ ಸೂಚನೆ

ಕೂಡಲೇ ಕಡತ ವಿಲೆವಾರಿ ಮಾಡಿ   ಸಿಎಂ ಬೊಮ್ಮಾಯಿ ಖಡಕ್‌ ಸೂಚನೆ

ಕೂಡಲೇ ಕಡತ ವಿಲೆವಾರಿ ಮಾಡಿ

ಸಿಎಂ ಬೊಮ್ಮಾಯಿ ಖಡಕ್‌ ಸೂಚನೆ

ಬೆಂಗಳೂರು: ಪ್ರಮುಖ ಇಲಾಖೆಯ ಕಡತಗಳನ್ನು ವಿಳಂಬ ಮಾಡದೆ ತಕ್ಷಣವೇ ವಿಲೇವಾರಿ ಮಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

ಕಡತಗಳನ್ನು ವಿಳಂಬ ಮಾಡುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಆಗುತ್ತದೆ. ಆದ್ದರಿಂದ ಕಾನೂನಿನ ವ್ಯಾಪ್ತಿಯಲ್ಲಿರುವ ಕಡತಗಳನ್ನು ಸುಖಾಸುಮ್ಮನೆ ವಿಳಂಬ ಮಾಡದೆ ಕೂಡಲೇ ಇತ್ಯರ್ಥ ಪಡಿಸಬೇಕೆಂದು ಸೂಚನೆ ಕೊಟ್ಟರು.

ಶನಿವಾರ ದಿನಪೂರ್ತಿ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಜೊತೆ ಕಡತ ಪರಿಶೀಲನೆ ನಡೆಸಿದ ಅವರು, ಅನಗತ್ಯವಾಗಿ ಅಧಿಕಾರಿಗಳು ಕಡತಗಳನ್ನು ವಿಲೇವಾರಿ ಮಾಡದೇ ಬಾಕಿ ಉಳಿಸಿ ಕೊಂಡಿರುವುದಕ್ಕೆ ತರಾಟೆಗೆ ತೆಗೆದುಕೊಂಡರು. 

ಕಾಲಮಿತಿಯೊಳಗೆ ಕಡತಗಳನ್ನು ವಿಲೇವಾರಿ ಮಾಡುವಂತೆ ನಾನು ಅಧಿಕಾರ ವಹಿಸಿದ ಸಂದರ್ಭದಲ್ಲೇ ಸೂಚನೆ ಕೊಟ್ಟಿದ್ದೆ. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಕಡತಗಳು ವಿಲೇವಾರಿಯಾಗಿಲ್ಲ. ಇದಕ್ಕೆ ಕಾರಣವಾದರೂ ಏನು ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.

ನೀವು ಕಡತ ವಿಲೇವಾರಿ ವಿಳಂಬ ಮಾಡುವುದರಿಂದ ಸರ್ಕಾರದ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಅನುಷ್ಟಾನ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿಯೊಂದಕ್ಕೂ ಕಾನೂನು ತೊಡಕುಗಳನ್ನು ಮುಂದಿಟ್ಟುಕೊAಡು ವಿಳಂಬ ಮಾಡುತ್ತೀರಿ. ಮುಂದೆ ಈ ರೀತಿ ಆದರೆ ನಾನು ಸಹಿಸುವುದಿಲ್ಲ ಎಂದು ಎಚ್ಚರಿಕೆಯನ್ನು ನೀಡಿದರು.

ಕಾನೂನು ತೊಡಕುಗಳಿದ್ದರೆ ಅಂತಹ ಕಡತಗಳನ್ನು ಮುಟ್ಟಬೇಡಿ ಎಂದು ನಾನೇ ಹೇಳಿರುತ್ತೇನೆ. ಸಣ್ಣ ಪುಟ್ಟ ಕಾರಣಗಳನ್ನು ಮುಂದಿಟ್ಟು ಕೊಂಡು ಹಾಗೆ ಉಳಿಸಿಕೊಂಡರೆ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಟಾನ ಮಾಡಲು ಸಾಧ್ಯವೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಮುಂದೆ ಮುಖ್ಯ ಕಾರ್ಯದರ್ಶಿಗಳೇ ಪ್ರತಿಯೊ ಂದು ಕಡತಗಳನ್ನು 15 ದಿನಕ್ಕೊಮ್ಮೆ ಪರಿಶೀಲನೆ ನಡೆಸಬೇಕು. ನಾನು ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ. ಮುಂದೆ ಇನ್ನಷ್ಟು ವಿಳಂಬವಾದರೆ ಅಧಿಕಾರಿಗಳನ್ನೆ ಹೊಣೆ ಗಾರರನ್ನಾಗಿ ಮಾಡುವುದಾಗಿ ಎಚ್ಚರಿಕೆಯನ್ನು ಕೊಟ್ಟರು.

ದಿನವಿಡೀ ಬ್ಯುಸಿ: ಉಪ ಸಮರದಲ್ಲಿ ಬ್ಯುಸಿಯಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಪೂರ್ತಿ ದಿನ ಕಡತ ವಿಲೇವಾರಿ ಕಾರ್ಯದಲ್ಲಿ ತೊಡಗಿದ್ದರು. ಕಳೆದ ಎರಡು ವಾರದಿಂದ ಉಪಚುನಾವಣೆ ಪ್ರಚಾರ, ಜಿಲ್ಲಾ ಪ್ರವಾಸಗಳಲ್ಲಿ ತೊಡಗಿದ್ದ ಬೊಮ್ಮಾಯಿ ಅವರಿಗೆ ಕಡತ ವಿಲೇವಾರಿ ಸಾಧ್ಯವಾಗಿರಲಿಲ್ಲ.

ಮುಖ್ಯಮಂತ್ರಿ ಕಚೇರಿಯಲ್ಲಿ ಸಾಕಷ್ಟು ಕಡತಗಳು ಸಹಿ ಆಗದೆ ಹಾಗೇ ಉಳಿದುಕೊಂಡಿದ್ದವು. ಹೀಗಾಗಿ ಮುಖ್ಯಮಂತ್ರಿಗಳು ತಮ್ಮ ದಿನದ ವೇಳಾಪಟ್ಟಿಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಿಗದಿಪಡಿಸದೆ ಶನಿವಾರ ಇಡೀ ದಿನ ಬಹುತೇಕ ಸಮಯವನ್ನು ಕಡತ ವಿಲೇವಾರಿಗೆ ಮೀಸಲಿಟ್ಟಿದ್ದರು.

ಬಹಳ ದಿನಗಳಿಂದ ಕಡತಗಳ ವಿಲೇವಾರಿ ಕೆಲಸ ಬಾಕಿ ಇತ್ತು. ಇದರಿಂದ ಆಡಳಿ ತಾತ್ಮಕ ಕೆಲಸ ಕಾರ್ಯಗಳಿಗೆ ತೊಡಕಾಗಿತ್ತು. ಇತ್ತ ಆಡಳಿತ ಮರೆತು ಉಪಸಮರದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಪ್ರತಿಪಕ್ಷಗಳು ತಮ್ಮ ಆಕ್ರೋಶ ಹೊರಹಾಕಿದ್ದವು.

ವಿಧಾನಸೌಧಕ್ಕೆ ಬೀಗ ಹಾಕಲಾಗಿದೆ ಎಂದು ಕಿಡಿಕಾರಿದ್ದರು. ಕಳೆದ ಎರಡು ವಾರಗಳಿಂದ ಉಪಸಮರ, ಜಿಲ್ಲಾ ಪ್ರವಾಸದಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ಬ್ಯುಸಿಯಾಗಿದ್ದರು. ಹೀಗಾಗಿ ಸಿಎಂ ಕಚೇರಿಯಲ್ಲಿ ಕಡತ ವಿಲೇವಾರಿಯಾಗದೆ ರಾಶಿ ಬಿದ್ದಿವೆ. ಈ ಹಿನ್ನೆಲೆಯಲ್ಲಿ ಶನಿವಾರ ತಮ್ಮ ದಿನದ ಬಹುತೇಕ ಸಮಯವನ್ನು ಸಿಎಂ ಕಡತ ವಿಲೇವಾರಿಗೆ ಮೀಸಲಿಟ್ಟರು.