ತುಮಕೂರು ಜಿಲ್ಲೆಯಲ್ಲಿ ಮಳೆರಾಯ ತಂದ ಸಂಕಷ್ಟಗಳು

ತುಮಕೂರು ಜಿಲ್ಲೆಯಲ್ಲಿ ಮಳೆರಾಯ ತಂದ ಸಂಕಷ್ಟಗಳು

1. ಅತಿ ಮಳೆ ಸಂತ್ರಸ್ತರಿಗೆ ಟೂಡಾ ಹಾಲ್‍ನಲ್ಲಿ ತಾತ್ಕಾಲಿಕ ವಸತಿ: ಶಾಸಕ ರಾಜಗಾಲುವೆ ತೆರವಿಗಾಗಿ ಭಾರತಿನಗರ ನಿವಾಸಿಗಳ ಪ್ರತಿಭಟನೆ

ಅತಿ ಮಳೆ ಸಂತ್ರಸ್ತರಿಗೆ ಟೂಡಾ ಹಾಲ್‍ನಲ್ಲಿ ತಾತ್ಕಾಲಿಕ ವಸತಿ: ಶಾಸಕ ರಾಜಗಾಲುವೆ ತೆರವಿಗಾಗಿ ಭಾರತಿನಗರ ನಿವಾಸಿಗಳ ಪ್ರತಿಭಟನೆ

ಅತಿ ಮಳೆ ಸಂತ್ರಸ್ತರಿಗೆ ಟೂಡಾ ಹಾಲ್‍ನಲ್ಲಿ ತಾತ್ಕಾಲಿಕ ವಸತಿ: ಶಾಸಕ

ರಾಜಗಾಲುವೆ ತೆರವಿಗಾಗಿ ಭಾರತಿನಗರ ನಿವಾಸಿಗಳ ಪ್ರತಿಭಟನೆ

 

ತುಮಕೂರು: ಅತಿ ಮಳೆಯ ಪರಿಣಾಮ  ನಗರದ ಅಕ್ಕತಂಗಿಯರ ಕಟ್ಟೆಯ ಸಮೀಪವಿರುವ ಭಾರತೀ ನಗರಕ್ಕೆ ನೀರು ನುಗ್ಗುತ್ತಿದ್ದು, ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ನಿವಾಸಿಗಳು ಪ್ರತಿಭಟನೆ ನಡೆಸಿದರು.

ಅಕ್ಕತಂಗಿಯರ ಕಟ್ಟೆ ಆಕ್ಕಪಕ್ಕದಲ್ಲಿರುವ ಬಡಾವಣೆಗಳಲ್ಲಿ ಹಾದು ಹೋಗಿದ್ದ ರಾಜಕಾಲುವೆ, ಚರಂಡಿಗಳು ನಾಪತ್ತೆಯಾಗಿರುವುದೇ ಇಂದು ನಮ್ಮ ಮನೆಗಳು ಮಳೆ ನೀರಿನಲ್ಲಿ ಮುಳುಗಡೆಯಾಗಲು ಕಾರಣವಾಗಿದೆ. ಇದಕ್ಕೆ ಅಧಿಕಾರಿಗಳು ರಾಜಕಾಲುವೆಗಳನ್ನು ಲೆಕ್ಕಿಸದೆ ಲೇಔಟ್‌ಗಳ ನಿರ‍್ಮಾಣಕ್ಕೆ ಅನುಮತಿ ನೀಡಿರುವುದು ಪ್ರಮುಖ ಕಾರಣ. ಅಧಿಕಾರಿಗಳ ಲಂಚಬಾಕತನ ಹಾಗೂ ಬೇಜವಾಬ್ದಾರಿಯಿಂದಾಗಿ ಇಂದು ನಾವುಗಳು ಸೂರು ಕಳೆದುಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನೆಗಳು ಮಳೆ ನೀರಿನಲ್ಲಿ ಮುಳುಗಡೆಯಾಗುವುದರಿಂದ ಸ್ಥಳಕ್ಕೆ ಶಾಸಕರು, ಅಧಿಕಾರಿಗಳು ಬಂದು ತಾತ್ಕಾಲಿಕವಾಗಿ ೩ ಅಥವಾ ೫ ಸಾವಿರ ಪರಿಹಾರ, ದಿನಸಿ, ಊಟ ಕೊಡಬಹುದು. ಆದರೆ ನಿಮಗೆ ಈ ರೀತಿಯ ಪರಿಹಾರ ಬೇಕಾಗಿಲ್ಲ. ನಮಗೇನಿದ್ದರೂ ಶಾಶ್ವತವಾದ ಪರಿಹಾರ ಒದಗಿಸಬೇಕು. ಮುಚ್ಚಿ ಹೋಗಿರುವ ರಾಜಗಾಲುವೆಗಳನ್ನು ತೆರೆದು ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಬೇಕು ಎಂದು ಅಲ್ಲಿನ ನಿವಾಸಿಗಳು ಪಟ್ಟು ಹಿಡಿದರು.

ದೇವರಾಯಪಟ್ಟಣ ಕೆರೆ ತುಂಬಿ ಅಕ್ಕತಂಗಿ ಕೆರೆಗೆ ನೀರು ಹರಿದು ಬರುತ್ತಿದೆ. ಆದರೆ ಅಕ್ಕತಂಗಿ ಕೆರೆಯಿಂದ ನೀರು ಸರಾಗವಾಗಿ  ಹೊರಗೆ ಹೋಗುವ ವ್ಯವಸ್ಥೆ ಇಲ್ಲದಿರುವುದರಿಂದ ಚರಂಡಿ ಮಾಡಿ ನೀರನ್ನು ಹೊರಗೆ ಬಿಡುವ ಕರ‍್ಯ ನಡೆದಿದೆ. ಇದರಿಂದ ಭಾರತೀ ನಗರವು ಸಹ ಜಲಾವೃತವಾಗುವ ಸಂಭವವಿದೆ. ಹಾಗಾಗಿ ಭಾರತಿ ನಗರದ ನಿವಾಸಿಗಳು ಸಹ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಭಾರತಿ ನಗರದ ಅಕ್ಕಪಕ್ಕದಲ್ಲಿ ನಿರ‍್ಮಾಣವಾಗಿರುವ ಕಾಲೇಜುಗಳು, ಮನೆಗಳು ರಾಜಗಾಲುವೆ ಒತ್ತುವರಿ ಮಾಡಿಕೊಂಡು ತಲೆ ಎತ್ತಿವೆ. ರಾಜಗಾಲುವೆ ಮುಚ್ಚಿ ಹೋಗಿರುವುದರಿಂದ ಮನೆಗಳಿಗೆ ನೀರು ನುಗ್ಗುವಂತಾಗಿದೆ. ಕೂಡಲೇ ರಾಜಗಾಲುವೆ ತೆರವುಗೊಳಿಸಬೇಕು ಎಂದು ನಿವಾಸಿಗಳು ಪಟ್ಟು ಹಿ‌ಡಿದಿದ್ದಾರೆ.

ಭಾರತಿ ನಗರದ ನಿವಾಸಿಗಳ ಅಹವಾಲು ಆಲಿಸಲು ಸ್ಥಳಕ್ಕೆ ಶಾಸಕ ಜ್ಯೋತಿಗಣೇಶ್ ಅವರು ಆಗಮಿಸಿದಾಗ ಅಲ್ಲಿನ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಒತ್ತುವರಿಯಾಗಿರುವ ರಾಜಗಾಲುವೆಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.

ನಂತರ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಅವರು, ರಾಷ್ಟ್ರೀಯ ಹೆದ್ದಾರಿ ಹಾದು ಹೋದ ಮೇಲೆ ಅಕ್ಕತಂಗಿ ಕೆರೆ ಪಕ್ಕದಲ್ಲಿ ಶೇ. ೮೦ ರಷ್ಟು ಹಾಗೂ ಪಶ್ಚಿಮ ಭಾಗದಲ್ಲಿ ಶೇ. ೨೦ ರಷ್ಟು ಉಳಿದುಕೊಂಡಿದೆ. ಅಡ್ಡ ದೇವರಾಯಪಟ್ಟ ರಸ್ತೆ ಹೋಗಿದೆ. ಹೀಗಾಗಿ ಕೆರೆ ೪ ಭಾಗವಾಗಿದೆ. ಭಾರತಿ ನಗರ ಕೆರೆ ಅಂಗಳದಲ್ಲಿದೆ. ಆದರೆ ಇವರಿಗೆಲ್ಲ ಹಕ್ಕುಪತ್ರ ನೀಡಲಾಗಿದೆ. ಈಗ ಯಾರಿಗೆ ಯಾವ ರೀತಿ ಏನು ಮಾಡಬೇಕು ಎಂಬುದು ತೋಚದಾಗಿದೆ. ಚರಂಡಿ ಮಾಡಿ ನೀರು ಬಿಡಲು ಹೋದರೆ ಕುವೆಂಪು ನಗರ ಮುಳುಗಿ ಹೋಗಲಿದೆ. ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರದಲ್ಲಿ ಸಾಕಷ್ಟು ಕಡೆ ಮನೆಗಳು ಮುಳುಗಡೆಯಾಗುತ್ತಿದೆ. ಹೊಸಳ್ಳಯ್ಯನ ತೋಟದಲ್ಲಿ ಸುಮಾರು ೮೦ ರಿಂದ ೧೦೦ ಮನೆಗಳು ಮುಳುಗಿ ಹೋಗಿವೆ. ಇವರಿಗೆಲ್ಲ ಹಕ್ಕು ಪತ್ರ ಇವೆ. ಇನ್ನು ನಾಲ್ಕೈದು ದಿವಸ ಇಲ್ಲಿ ವಾಸ ಮಾಡಲು ಸಾಧ್ಯವಾಗುವುದಿಲ್ಲ. ಮಹಾನಗರ ಪಾಲಿಕೆ, ಟೂಡಾ ವತಿಯಿಂದ ಸದಾಶಿವನಗರದ ಟೂಡಾ ಹಾಲ್‌ನಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಇವರಿಗೆಲ್ಲ ಊಟ, ತಿಂಡಿ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಲಾಗುವುದು. ಹಾನಿಯಾಗಿರುವ ಮನೆಗಳಿಗೆ ಪರಿಹಾರ ನೀಡಲಾಗುವುದು ಎಂದರು ಶಾಸಕರು.  

 

2. ಸುವರ್ಣಮುಖಿ, ಜಯಮಂಗಲಿ ನದಿಗಳಿಗೆ ಜೀವಕಳೆ ಮಾವತ್ತೂರು ಕೆರೆಯೂ ಕೋಡಿ, 175ಕ್ಕೂ ಅಧಿಕ ಕೆರೆ-ಕಟ್ಟೆ ಭರ್ತಿ ಕೊರಟಗೆರೆ ತಾ.ನ ಬಹುತೇಕ ಗ್ರಾಮಗಳು ಜಲಾವೃತ

ಸುವರ್ಣಮುಖಿ, ಜಯಮಂಗಲಿ ನದಿಗಳಿಗೆ ಜೀವಕಳೆ ಮಾವತ್ತೂರು ಕೆರೆಯೂ ಕೋಡಿ, 175ಕ್ಕೂ ಅಧಿಕ ಕೆರೆ-ಕಟ್ಟೆ ಭರ್ತಿ  ಕೊರಟಗೆರೆ ತಾ.ನ ಬಹುತೇಕ ಗ್ರಾಮಗಳು ಜಲಾವೃತ

ಸುವರ್ಣಮುಖಿ, ಜಯಮಂಗಲಿ ನದಿಗಳಿಗೆ ಜೀವಕಳೆ
ಮಾವತ್ತೂರು ಕೆರೆಯೂ ಕೋಡಿ, 175ಕ್ಕೂ ಅಧಿಕ ಕೆರೆ-ಕಟ್ಟೆ ಭರ್ತಿ 
ಕೊರಟಗೆರೆ ತಾ.ನ ಬಹುತೇಕ ಗ್ರಾಮಗಳು ಜಲಾವೃತ

ಕೊರಟಗೆರೆ:- ಮಳೆರಾಯನ ಆರ್ಭಟದಿಂದ ಸುವರ್ಣಮುಖಿ, ಜಯಮಂಗಲಿ ಮತ್ತು ಗರುಡಾಚಲ ನದಿ ಪಾತ್ರದ ಸೇತುವೆಗಳು ಜಲಾವೃತ ಆಗಿದೆ. ಕೊರಟಗೆರೆ ಕ್ಷೇತ್ರದ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಬಹುತೇಕ ಮಣ್ಣಿನ ಮನೆಗಳು ಕುಸಿದಿವೆ. ರೈತಾಪಿವರ್ಗ ಬಿತ್ತನೆ ಮಾಡಿದ್ದ ಸಾವಿರಾರು ಎಕರೇ ಕೃಷಿ, ರೇಷ್ಮೆ ಮತ್ತು ತೋಟಗಾರಿಕೆ ಬೆಳೆಗಳು ನೀರಿನಲ್ಲಿ ಮುಳುಗಿ ರೈತರಿಗೆ ಕೋಟ್ಯಾಂತರ ರೂ ನಷ್ಟವಾಗಿದೆ.
ಕೊರಟಗೆರೆ ಕ್ಷೇತ್ರದ ಜಯಮಂಗಲಿ, ಸುವರ್ಣಮುಖಿ ಮತ್ತು ಗರುಡಾಚಲ ನದಿಗಳು 25ವರ್ಷಗಳ ನಂತರ ಮತ್ತೇ ಸಂಗಮವಾಗಿವೆ. ವೀರಸಾಗರ ಮತ್ತು ಚೀಲಗಾನಹಳ್ಳಿ ಗ್ರಾಮವೇ ಜಲಾವೃತವಾಗಿ ಮನೆಯಲ್ಲಿದ್ದ ದವಸ ಧಾನ್ಯಗಳು ನೀರಿನಲ್ಲಿ ಮುಳುಗಿ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆಯ ಸಹಾಯದಿಂದ ತೋಟದಲ್ಲಿನ ರೈತರನ್ನು ರಕ್ಷಣೆ ಮಾಡಲಾಗಿದೆ. 
ಕೊರಟಗೆರೆ ಕ್ಷೇತ್ರದಲ್ಲಿ ರೈತರು ಬಿತ್ತನೆ ಮಾಡಲಾಗಿದ್ದ ಕೃಷಿ ಬೆಳೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ನೂರಾರು ಮನೆಗಳು ನೆಲಸಮ ಆಗಿವೆ. ಮನೆಯಲ್ಲಿದ್ದ ಧಾನ್ಯಗಳು ನಾಶವಾಗಿವೆ. ಹೂವಿನ ಬೆಳೆಗಳು ನೀರಿನಲ್ಲಿ ಮುಳುಗಿವೆ. ತೋಟಗಳಲ್ಲಿ 5ಅಡಿಗೂ ಅಧಿಕ ನೀರು ನಿಂತಿದೆ. ಮಳೆರಾಯನ ಆರ್ಭಟದಿಂದ ಕೊರಟಗೆರೆ ಕ್ಷೇತ್ರದಲ್ಲಿ ಊಹಿಸಲು ಆಗದಷ್ಟು ನಷ್ಟವಾಗಿದೆ. ಕಂದಾಯ, ಕೃಷಿ ಮತ್ತು ತೋಟಗಾರಿಕೆ ಅಧಿಕಾರಿವರ್ಗ ಜಂಟಿಸಮೀಕ್ಷೆ ಮಾಡಬೇಕಿದೆ.


ಮೂರು  ನದಿಗಳ ಸಂಗಮ..
ಸುವರ್ಣಮುಖಿ, ಜಯಮಂಗಲಿ ಮತ್ತು ಗರುಡಾಚಲ ನದಿಗಳು ಕೊರಟಗೆರೆ ಕ್ಷೇತ್ರದ ಮೂಲಕ ಹರಿಯುತ್ತವೆ. 3ನದಿಗಳು ವೀರಸಾಗರ ಬಳಿ ಸಂಗಮವಾಗಿ ಜಯಮಂಗಲಿ ನದಿಯಾಗಿ ಹರಿದು ಆಂಧ್ರಪ್ರದೇಶದ ಪರಿಗಿ ಕೆರೆಗೆ ಸೇರಲಿದೆ. ಕೊರಟಗೆರೆ ಕ್ಷೇತ್ರದ ಮಾವತ್ತೂರು ಕೆರೆಯು 25ವರ್ಷದ ನಂತರ ಭರ್ತಿಯಾಗಿದೆ. ತೀತಾ ಜಲಾಶಯ, ಜೆಟ್ಟಿಅಗ್ರಹಾರ ಮತ್ತು ತುಂಬಾಡಿ ಜಲಾಶಯ ಸೇರಿದಂತೆ ಕೊರಟಗೆರೆಯ 175ಕ್ಕೂ ಅಧಿಕ ಕೆರೆಕಟ್ಟೆಗಳು ತುಂಬಿ ಕೋಡಿಬಿದ್ದಿವೆ. 
ನದಿಯಲ್ಲಿ ಹರಿಯುವ ನೀರನ್ನು ಲೆಕ್ಕಿಸದೇ ಸೇತುವೆಯನ್ನು ದಾಟಿ ಮುಂಜಾನೆಯೇ ರೈತರ ಮನೆ ಮತ್ತು ಜಮೀನುಗಳಿಗೆ ತಹಶೀಲ್ದಾರ್ ನಾಹೀದಾ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೆ-ಕಟ್ಟೆಗಳ ಮೇಲೆ ನಿಗಾ ವಹಿಸುವಂತೆ ಸಣ್ಣ ನೀರಾವರಿ ಇಲಾಖೆ ಸೂಚಿಸಿದ್ದಾರೆ. ಕಂದಾಯ ಇಲಾಖೆ, ತಾಪಂ ಇಓ, ಪಪಂ ಮುಖ್ಯಾಧಿಕಾರಿ ಮತ್ತು ಪೊಲೀಸ್ ಇಲಾಖೆ 24ಗಂಟೆಯು ಕಾರ್ಯನಿರ್ವಹಣೆ ಮಾಡಲಿದೆ. ಗ್ರಾಪಂ ಪಿಡಿಓ ಮತ್ತು ನಾಡಕಚೇರಿ ಸಿಬ್ಬಂದಿಗಳು ಸ್ಥಳದಲ್ಲೇ ಮೊಕ್ಕಾಂ ಹೊಡುವಂತೆ ತಹಶೀಲ್ದಾರ್ ಖಡಕ್ ಆದೇಶ ಮಾಡಿದ್ದಾರೆ.

ಸೇತುವೆ ಜಲಾವೃತ-ಸಂಪರ್ಕ ಕಡಿತ..
ಸುವರ್ಣಮುಖಿ ಮತ್ತು ಜಯಮಂಗಳಿ ನದಿಪಾತ್ರದ ಬಿ.ಡಿ.ಪುರ ಸಂಪರ್ಕದ ಸೇತುವೆ, ದೊಡ್ಡಸಾಗ್ಗೆರೆ ಸಂಪರ್ಕದ ಸೇತುವೆ, ಕೋಡ್ಲಹಳ್ಳಿ ಸೇತುವೆ, ಚೀಲಗಾನಹಳ್ಳಿ ಸೇತುವೆ, ಚನ್ನಸಾಗರ ಸೇತುವೆ, ಚೀಲಗಾನಹಳ್ಳಿ ಸೇತುವೆ, ಲಂಕೇನಹಳ್ಳಿ ಸೇತುವೆ ಜಲಾವೃತವಾಗಿ ಸಾರಿಗೆ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಕೊರಟಗೆರೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ನೂರಾರು ಮನೆಗಳಿಗೆ ನೀರು ಹರಿದು ಲಕ್ಷಾಂತರ ರೂ ನಷ್ಟವಾಗಿದೆ.


‘ತರ‍್ತು ಪರಿಹಾರ ಕೊಡಿ’
ಮಳೆರಾಯನ ಕೃಪೆಯಿಂದ ಕೊರಟಗೆರೆ ಕ್ಷೇತ್ರದ ಕೆರೆಕಟ್ಟೆ ತುಂಬಿ ದಶಕಗಳ ನಂತರ 3ನದಿಗಳ ಸಂಗಮವಾಗಿದೆ. ಕೊರಟಗೆರೆ ಪಟ್ಟಣ ಮತ್ತು ಗ್ರಾಮೀಣದಲ್ಲಿ ಮನೆಗಳು ಕುಸಿದು ಬೆಳೆಗಳಿಗೆ ಹಾನಿಯಾಗಿವೆ. ನದಿಪಾತ್ರದ ರೈತರು ಎಚ್ಚರಿಕೆಯಿಂದ ಇರಬೇಕಿದೆ. ಕೆರೆ-ಕಟ್ಟೆಗಳ ರಕ್ಷಣೆಗೆ ಅಧಿಕಾರಿವರ್ಗ ಮುಂದಾಗಿ ರಾಜ್ಯ ಸರಕಾರ ತಕ್ಷಣ ರೈತರಿಗೆ ತುರ್ತು ಪರಿಹಾರ ನೀಡಬೇಕಿದೆ.
ಪಿ.ಆರ್.ಸುಧಾಕರಲಾಲ್. 
ಮಾಜಿ ಶಾಸಕ. ಕೊರಟಗೆರೆ


ಕೊರಟಗೆರೆಯ ವೀರಸಾಗರ ಮತ್ತು ಚೀಲಗಾನಹಳ್ಳಿ ಗ್ರಾಮ ಜಲಾವೃತ ಆಗಿದೆ. ಅಧಿಕಾರಿವರ್ಗ ಜಂಟಿಯಾಗಿ ತುರ್ತು ಕಾರ್ಯಚರಣೆ ನಡೆಸುತ್ತಿದ್ದಾರೆ. ಅವಶ್ಯಕತೆ ಇರುವ ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲು ಈಗಾಗಲೇ ತಹಶೀಲ್ದಾರ್‌ಗೆ ಸೂಚಿಸಿದ್ದೇನೆ. ಸರಕಾರದ ಆದೇಶದಂತೆ ಜಂಟಿ ಸಮೀಕ್ಷೆ ನಡೆಸಿ ಬೆಳೆಪರಿಹಾರ ಮತ್ತು ಪುರ್ನವಸತಿಗೆ ತುರ್ತಾಗಿ ಕ್ರಮ ಕೈಗೊಳ್ಳುತ್ತೇವೆ.
ವೈ.ಎಸ್.ಪಾಟೀಲ್. 
ಜಿಲ್ಲಾಧಿಕಾರಿ. 


03 ಕೊರಟಗೆರೆ ಚಿತ್ರ2:- ಗೊರವನಹಳ್ಳಿ ಸಮೀಪದ ತೀತಾ ಜಲಾಶಯದ ಕೋಡಿಯ ಮನಮೋಹಕ ದೃಶ್ಯ


03 ಕೊರಟಗೆರೆ ಚಿತ್ರ3:- ಮಳೆಯ ನೀರಿನಲ್ಲಿ ಮುಳುಗಿರುವ ಚೀಲಗಾನಹಳ್ಳಿ ರೈತರ ಮನೆ.

3.

ಲೀಡ್ 4 ಕಾಲಂ (((((((2 ಬಾಕ್ಸ್ ))))) ಇವೆ
‘ಜಯಮಂಗಲಿ’ಯ ರುದ್ರ ನರ್ತನಕ್ಕೆ ಬೆಚ್ಚಿ ಬಿದ್ದ ಜನತೆ
ಚನ್ನಸಾಗರ ಜಲಾವೃತ: ರೆಡ್ ಅರ‍್ಟ್ ಘೋಷಣೆ

ಮಧುಗಿರಿ: ಸುಮಾರು 40 ವರ್ಷಗಳ ನಂತರ ಜಯಮಂಗಲಿ ನದಿಯ ರೌದ್ರ ನರ್ತನಕ್ಕೆ ಜನತೆ ಬೆಚ್ಚಿ ಬಿದ್ದಿದ್ದು, ತಾಲ್ಲೂಕಿನ ಚೆನ್ನಸಾಗರ, ಇಮ್ಮಡಗೊಂಡನಹಳ್ಳಿ, ಕೋಡಗದಾಲ, ನಂಜಾಪುರ, ಸೂರನಾಗೇನಹಳ್ಳಿ, ತಿಗಳರಹಳ್ಳಿ, ವೀರಾಪುರ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದು, ಗ್ರಾಮಸ್ಥರು ಭಯಬೀತರಾಗಿದ್ದಾರೆ.
ಬೆಳಗಿನ ಜಾವ ಸುಮಾರು 3 ಗಂಟೆಯ ವೇಳೆಗೆ ಈ ಗ್ರಾಮದಲ್ಲಿ ಜಯಮಂಗಲಿ ನದಿ ನೀರಿನ ಹರಿವು ಹೆಚ್ಚಾಗಿ ಏಕಾಏಕಿ ಮನೆಗಳಿಗೆ ನುಗ್ಗಿದ್ದರಿಂದ ಹೆದರಿದ ಗ್ರಾಮಸ್ಥರು ಎತ್ತರದ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. 
ಕೊರಟಗೆರೆ ತಾಲ್ಲೂಕಿನ ತೀತಾ ಜಲಾಶಯ ತುಂಬಿದ ನಂತರ ಜಯಮಂಗಲಿ ನೀರು ಈ ಭಾಗದಲ್ಲಿ ವ್ಯಾಪಕವಾಗಿ ಹರಿದು ಬರುತ್ತಿದ್ದು, ಚೆನ್ನಸಾಗರದ ಬಳಿ ಸೇತುವೆಯನ್ನು ಮೀರಿ ಹರಿಯಿತು. ಬೆಳಗಿನಿಂದ ಮಧ್ಯಾಹ್ನದವರೆಗೆ ಗೌರಿಬಿದನೂರು -ಮಧುಗಿರಿ ಸಂರ‍್ಕ ಕಡಿತಗೊಂಡಿತ್ತು. ನದಿಗೆ ಸುಮಾರು ದೂರದಲ್ಲಿರುವ ಇಡೀ ಗ್ರಾಮದಲ್ಲಿ ನೀರು ಪ್ರವಾಹದೋಪಾದಿಯಲ್ಲಿ ಹರಿಯಿತು. ಮಧ್ಯಾಹ್ನದ ನಂತರವೂ ರ‍್ಕಾರಿ ಶಾಲೆ, ಹಾಲುಉತ್ಪಾದಕರ ಸಂಘ, ರಾಮ ದೇವಾಲಯ ಹಾಗೂ ಸಮುದಾಯ ಭವನಗಳನ್ನು ಆವರಿಸಿಕೊಂಡು ನೀರು ಹರಿಯುತ್ತಲೇ ಇತ್ತು. 
ಜಯಮಂಗಲಿ ನದಿ ಪಾತ್ರದಲ್ಲಿರುವ ಬಹುತೇಕ ಗ್ರಾಮಗಳು ಅಪಾಯದ ಅಂಚಿನಲ್ಲಿದ್ದು, ಈ ಗ್ರಾಮಗಳು ಮಳೆ ನೀರಿನಿಂದ ಜಲಾವೃತವಾಗಿದ್ದು, ಜನರು ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಗಳು ಜಲಾವೃತವಾಗಿರುವ ಬಗ್ಗೆ ಮಾಹಿತಿ ತಿಳಿದ ಅಧಿಕಾರಿಗಳು ಬೆಳ್ಳಬೆಳಗ್ಗೆ ಗ್ರಾಮಗಳಿಗೆ ತೆರಳಿ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದು, ನೀರು ಸರಾಗವಾಗಿ ಹರಿಯುವಂತೆ ಜೆಸಿಬಿಗಳ ಮೂಲಕ ತೆರವುಗೊಳಿಸುವ ಪ್ರಯತ್ನ ನಡೆಸಿದ್ದಾರೆ.
ಜಯಮಂಗಲಿ ನದಿ ಪಾತ್ರದಲ್ಲಿರುವ ಬಹುತೇಕ ಗ್ರಾಮಗಳು ಮಳೆ ನೀರಿನಿಂದ ಜಲಾವೃತವಾಗಿದ್ದು, ನದಿ ನೀರು ಗ್ರಾಮಗಳಿಗೆ ನುಗ್ಗಿ ಜನರು ಮನೆಗಳಿಂದ ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಗಳು ಜಲಾವೃತವಾಗಿರುವ ಬಗ್ಗೆ ಮಾಹಿತಿ ತಿಳಿದ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ತಹಶೀಲ್ದಾರ್ ಸುರೇಶಾಚಾರ್ ಮತ್ತು ಅಧಿಕಾರಿಗಳ ತಂಡ ಬೆಳ್ಳಬೆಳಗ್ಗೆ ಗ್ರಾಮಗಳಿಗೆ ತೆರಳಿ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದು, ನೀರು ಸರಾಗವಾಗಿ ಹರಿಯುವಂತೆ ಜೆಸಿಬಿಗಳ ಮೂಲಕ ತೆರವುಗೊಳಿಸುತ್ತಿದ್ದಾರೆ.
ಸ್ಥಳದಲ್ಲೆ ಮೊಕ್ಕಾಂ ಹೂಡಿರುವ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೊಳ, ತಹಶೀಲ್ದಾರ್ ಸುರೇಶಾಚಾರ್ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದು, ಜಿಲ್ಲಾಡಳಿತ ರೆಡ್, ಹೈ ಅಲರ್ಡ್ ಘೋಷಿಸಿದೆ. 
ಎತ್ತರದ ಪ್ರದೇಶದಲ್ಲಿ ಆಶ್ರಯ : ಜಯಮಂಗಲಿ ನದಿಯ ನೀರು ಗ್ರಾಮದೊಳಗೆ ಹರಿದು ಗ್ರಾಮವು ಸಂಪೂರ್ಣ ಜಲಾವೃತಗೊಂಡಿದ್ದರಿಂದ ಹೆದರಿದ ಗ್ರಾಮಸ್ಥರು ಎತ್ತರದ ಪ್ರದೇಶದಲ್ಲಿ ಆಶ್ರಯ ಪಡೆದಿದ್ದು, ಅಗ್ನಿಶಾಮಕ ಠಾಣೆ ಸಿಬ್ಬಂದಿ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದರು. ಅಗ್ನಿ ಶಾಮಕ ದಳ ನೆರವಿಗೆ ಧಾವಿಸಿತು, ರಾಜಧಾನಿಯಿಂದ ಹೊಯ್ಸಳ ಸಿಬ್ಬಂದಿಯೂ ಆಗಮಿಸಿ ನೆರವು ನೀಡಿತು.
ಕಾಳಜಿ ಕೇಂದ್ರ : ಚನ್ನಸಾಗರ ಗ್ರಾಮದಲ್ಲಿ ಸುಮಾರು 67 ಮನೆಗಳಿದ್ದು, ಬಹುತೇಕ ಎಲ್ಲಾ ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಗ್ರಾಮದಲ್ಲಿದ್ದ 300 ಕ್ಕೂ ಹೆಚ್ಚು ಜನರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆದು ಗ್ರಾಮಸ್ಥರಿಗೆ ತಿಂಡಿ ಮತ್ತು ಊಟದ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಕೊಡಿಗೇನಹಳ್ಳಿಯಲ್ಲೂ ಕಾಳಜಿ ಕೇಂದ್ರ ತೆರೆಯುವ ಚಿಂತನೆಯಿದೆ ಎಂದು ತಹಶೀಲ್ದಾರ್ ಸುರೇಶಾಚಾರ್ ತಿಳಿಸಿದ್ದಾರೆ. 

ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಮಾತನಾಡಿ ಜಯಮಂಗಲಿ ನದಿ ತುಂಬಿ ಹರಿಯುತ್ತಿದ್ದು, ಕೆಲವು ಊರುಗಳಿಗೆ ಸಂಪೂರ್ಣ ನೀರು ನುಗ್ಗಿ ಜಲಾವೃತವಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದೇವೆ, ನೀರು ಸರಾಗವಾಗಿ ಹರಿಯುವಂತೆ ಜೆಸಿಬಿ ಗಳ ಮೂಲಕ ತೆರವುಗೋಳಿಸಿದ್ದೇವೆ ಎಂದರು.
ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಎಸ್.ಪಿ ರಾಹುಲ್ ಕುಮಾರ್, ಸಿಇಓ ವಿದ್ಯಾಕುಮಾರಿ, ಮಧುಗಿರಿ ಉಪವಿಭಾಗದ ಡಿವೈಎಸ್ಪಿ ವೆಂಕಟೇಶ್ ನಾಯ್ಡು, ತಾ.ಪಂ ಇಓ ಲಕ್ಷ÷್ಮಣ್ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಆತಂಕ ಬೇಡ: ನಾವಿದ್ದೇವೆ-ಡಿಸಿ 
ಜಲಾವೃತಗೊಂಡ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಮಾತನಾಡಿ ಚೆನ್ನಸಾಗರ, ಇಮ್ಮಡಗಾನಹಳ್ಳಿ, ಕೋಡಗದಾಲ, ಇನ್ನು ಮುಂತಾದ ಹಳ್ಳಿಗಳು ಸಂಪೂರ್ಣ ಜಲಾವೃತಗೊಂಡಿದ್ದು, ಗ್ರಾಮಗಳಲ್ಲಿ ರೆಡ್ ಹೈಅಲರ್ಟ್ ಘೋಷಣೆ ಮಾಡಲಾಗಿದೆ, ಜಯಮಂಗಲಿ ನದಿ ಹರಿಯುವ ಭಾಗಗಳಲ್ಲಿ ಪೋಲೀಸರನ್ನು ನಿಯೋಜಿಸಲು ಉದ್ದೇಶಿಸಲಾಗಿದ್ದು, ಸಾರ್ವಜನಿಕರು ತಮ್ಮ ಮಕ್ಕಳೊಂದಿಗೆ ಕೆರೆಕಟ್ಟೆ, ಹಳ್ಳಗಳ ಬಳಿ ಹೋಗಬಾರದು, ಹಿರಿಯ ನಾಗರೀಕರು, ಮಕ್ಕಳು ಆದಷ್ಟು ಎಚ್ಚರಿಕೆಯಿಂದ ಇರಬೇಕು. ಕೆರೆ ಕಟ್ಟೆಗಳ ಸಮೀಪ ಹೋದದ್ದು ಕಂಡುಬAದಲ್ಲಿ ಅಂತವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಜನ-ಜಾನುವಾರುಗಳಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಳೆ ನೀರಿನಿಂದ ಬಾಧಿತರಾದವರಿಗೆ ಆಹಾರ ವ್ಯವಸ್ಥೆಗಾಗಿ ಜಿಲ್ಲಾಡಳಿತದಿಂದ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. ಕಾಳಜಿ ಕೇಂದ್ರದಲ್ಲಿ ಯಾವುದೇ ಸಮಸ್ಯೆ ಬಾರದಂತೆ ನಿಗಾ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯವಿದ್ದಲ್ಲಿ ಮಾತ್ರ ನದಿ ಪಾತ್ರದಲ್ಲಿರುವ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದೇವೆ. ಗ್ರಾಮಸ್ಥರು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆಯಿಲ್ಲ. ರಸ್ತೆಯಲ್ಲಿ ಸಂಚರಿಸಲು ಅನುವಾಗುವಂತೆ ಈಗಾಗಲೇ ಜೆಸಿಬಿಯಿಂದ ಕಾರ್ಯಾಚರಣೆ ಕೈಗೊಂಡಿದ್ದು, ಮುಂಜಾನೆಗಿAತ ನೀರಿನ ಹರಿವಿನ ಪ್ರಮಾಣ ಈಗ ಕಡಿಮೆಯಾಗಿದೆ ಎಂದರು.



ಮಧುಗಿರಿ ತಾಲೂಕಿನ 25 ಕೆರೆ ಭರ್ತಿ

ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಸುಮಾರು 25 ಕೆರೆಗಳು ಕೋಡಿ ಹರಿದಿದ್ದು, ಬಿಜವರ, ಕುಣಿಗಲ್ -ತಿಮ್ಮನಹಳ್ಳಿ ಕೆರೆ (ಕೆಟಿ ಹಳ್ಳಿ ಕೆರೆ), ಕಾರ್ಪೆನಹಳ್ಳಿ, ಬಸವನಹಳ್ಳಿ, ಸಿಂಗ್ರಾವುತನಹಳ್ಳಿ, ರಂಗನಪಾಳ್ಯ, ಗುರಮ್ಮನಕಟ್ಟೆ, ದಬ್ಬೆಘಟ್ಟ, ಸಿದ್ದಾಪುರ, ಗರಣಿ, ಚೋಳೇನಹಳ್ಳಿ, ಬಿಟ್ಟನಕುರಿಕೆ, ವಜ್ರದಹಳ್ಳಿ, ಬೆಲ್ಲದಮಡುಗು, ಕೂನಹಳ್ಳಿ, ಭೀಮನಕುಂಟೆ, ಬಿದರಕೆರೆ, ಹೊಸಕೆರೆ ಕೆರೆಗಳು ಸಂಪೂರ್ಣ ತುಂಬಿದ್ದು, ನೀರಕಲ್ಲು ಗ್ರಾಮವೂ ಜಲ ದಿಗ್ಬಂದನಕ್ಕೊಳಗಾಗಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಹರ ಸಾಹಸ ಪಡುತ್ತಿರುವ ಅಧಿಕಾರಿಗಳು : ಇನ್ನು ಜಲಾವೃತಗೊಂಡ ಎಲ್ಲಾ ಗ್ರಾಮಗಳಲ್ಲೂ ರಕ್ಷಣಾ ಕಾರ್ಯ ಕೈಗೊಂಡು ಸಾರ್ವಜನಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವಲ್ಲಿ ಅಧಿಕಾರಿಗಳ ತಂಡ ಯಶಸ್ವಿಯಾದರೂ ಇಮ್ಮಡಗೊಂಡನಹಳ್ಳಿ ಗೆ ತೆರಳಲು ಮಾತ್ರ ಸಾಧ್ಯವಾಗದೇ ಹರ ಸಾಹಸ ಪಡುವಂತಾಗಿದೆ. ಸಂಪೂರ್ಣ ಗ್ರಾಮವು ಜಲಾವೃತಗೊಂಡಿದ್ದು, ಗ್ರಾಮಕ್ಕೆ ತೆರಳಲು ಸಂಜೆ 4 ಗಂಟೆಯವರೆಗೂ ಸಾದ್ಯವಾಗದೇ ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ.