‘ಲಚ್ಚಣ್ಣ ಎಲ್ಲ ಹಿಂದುಳಿದ ವರ್ಗಗಳ ನಾಯಕ’ ಲಕ್ಷ್ಮೀನರಸಿಂಹಯ್ಯನವರ 20ನೇ ಸಂಸ್ಮರಣೆಯಲ್ಲಿ ಆಡಿಟರ್ ಆಂಜಿನಪ್ಪ

lakshminarasimhaiah-obc-leader-lachhanna

‘ಲಚ್ಚಣ್ಣ ಎಲ್ಲ ಹಿಂದುಳಿದ ವರ್ಗಗಳ ನಾಯಕ’ ಲಕ್ಷ್ಮೀನರಸಿಂಹಯ್ಯನವರ 20ನೇ ಸಂಸ್ಮರಣೆಯಲ್ಲಿ ಆಡಿಟರ್ ಆಂಜಿನಪ್ಪ



‘ಲಚ್ಚಣ್ಣ ಎಲ್ಲ ಹಿಂದುಳಿದ ವರ್ಗಗಳ ನಾಯಕ’
ಲಕ್ಷ್ಮೀನರಸಿಂಹಯ್ಯನವರ 20ನೇ ಸಂಸ್ಮರಣೆಯಲ್ಲಿ ಆಡಿಟರ್ ಆಂಜಿನಪ್ಪ

ತುಮಕೂರು: ಲಚ್ಚಣ್ಣ ಎಂದೇ ಖ್ಯಾತರಾಗಿದ್ದ ದಿವಂಗತ ಲಕ್ಷಿö್ಮÃನರಸಿಂಹಯ್ಯನವರು ನಾಡಿನ ಎಲ್ಲ ಹಿಂದುಳಿದ ವರ್ಗಗಳಿಗೂ ನಾಯಕರಾಗಿದ್ದರು, ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಗುಣಗಳನ್ನು ಅಳವಡಿಸಿಕೊಂಡು ಹೋದಾಗ ಹಿಂದುಳಿದ ವರ್ಗಗಳು ಮತ್ತಷ್ಟು ಶಕ್ತಿಯುತವಾಗುತ್ತವೆ ಎಂದು ಜಾತ್ಯಾತೀತ ಮಾನವ ವೇದಿಕೆ ಅಧ್ಯಕ್ಷ ಹಾಗೂ ನಗರದ ಹೆಸರಾಂತ ಲೆಕ್ಕಪರಿಶೋಧಕ ಟಿ.ಆರ್.ಆಂಜಿನಪ್ಪ ತಿಳಿಸಿದರು.


ನಗರದ ಹೊರಪೇಟೆಯ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಮಂಗಳವಾರ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ, ಸ್ಪೂರ್ತಿ ವನಿತಾ ಮಂಡಳಿ, ಸಮಾಜ, ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘ, ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್, ಪರಮಹಂಸ ಪತ್ತಿನ ಸಹಕಾರ ಸಂಘಗಳ ವತಿಯಿಂದ ಏರ್ಪಡಿಸಿದ್ದ ಮಾಜಿ ಸಚಿವ ದಿ.ಲಕ್ಷಿö್ಮÃನರಸಿಂಹಯ್ಯನವರ 20ನೇ ಸಂಸ್ಮರಣಾ ದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಡಿ.ದೇವರಾಜ ಅರಸು, ಲಕ್ಷಿö್ಮÃನರಸಿಂಹಯ್ಯ, ಆರ್.ಎಲ್.ಜಾಲಪ್ಪ, ಸಿದ್ಧರಾಮಯ್ಯ, ಪಿ.ಜಿ.ಆರ್.ಸಿಂಧ್ಯ ಮೊದಲಾದ ಮುಖಂಡರು ಮಂತ್ರಿಗಳಾಗಿ ಹಿಂದುಳಿದ ವರ್ಗಗಳನ್ನು ಮುಂದೆ ತೆಗೆದುಕೊಂಡು ಹೋಗುವಂತಹ ಕೆಲಸವನ್ನು ಮಾಡಿದ್ದಾರೆ ಎಂದು ಅವರು ಸ್ಮರಿಸಿದರು.

ಸ್ವಾಮಿ ವಿವೇಕಾನಂದ ಸಹಕಾರ ಸಂಘ ನಿ. ಅಧ್ಯಕ್ಷ ಪಿ.ಮೂರ್ತಿ ಮಾತನಾಡಿ,  1996ರಲ್ಲಿ ಸ್ವಾಮಿ ವಿವೇಕಾನಂದ ಸಹಕಾರ ಸಂಘವನ್ನು ಹುಟ್ಟಿಹಾಕಿದ್ದೇ ಲಕ್ಷಿö್ಮÃನರಸಿಂಹಯ್ಯನವರು. ಅಂದಿನಿAದ ಆರಂಭಗೊAಡ ಸಹಕಾರ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ.
6315 ಸದಸ್ಯರನ್ನು ಹೊಂದಿರುವ ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘ 2 ಕೋಟಿ 25 ಲಕ್ಷ ರೂ. ಲಾಭದಲ್ಲಿ ಮುನ್ನಡೆಯುತ್ತಿದೆ. ಬೆಳ್ಳಿ ಹಬ್ಬವನ್ನು ಆಚರಿಸುತ್ತಿದೆ. ಸಮಾಜ ಹಾಗೂ ಸಂಘದ ವತಿಯಿಂದ 20 ವರ್ಷಗಳಿಂದ ಪ್ರತೀ ವರ್ಷ ಸಮಾಜದ ಮುಖಂಡರಾಗಿದ್ದ ದಿ.ಲಕ್ಷಿö್ಮÃನರಸಿಂಹಯ್ಯನವರ ಸಂಸ್ಮರಣೆಯನ್ನು ನಡೆಸುತ್ತಾ ಬಂದಿದ್ದು, ಇಂದೂ ಸಹ ಅವರನ್ನು ಸ್ಮರಣೆ ಮಾಡುತ್ತಾ ಅವರ ಕಾರ್ಯಯೋಜನೆಗಳನ್ನು ತಿಳಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಒಕ್ಕೂಟದ ಸಂಚಾಲಕ ಧನಿಯಾಕುಮಾರ್ ಮಾತನಾಡಿ, 10 ಹಿಂದುಳಿದ ವರ್ಗಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿಗಳನ್ನು ಕೊಡುವ ಮೂಲಕ ದಿ.ಲಕ್ಷಿö್ಮÃನರಸಿಂಹಯ್ಯನವರ ಜನ್ಮದಿನ ಆಚರಿಸಿದರೆ ಉತ್ತಮ ಎಂದರು.
ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘದ 2022ನೇ ಸಾಲಿನ ನೂತನ ಕ್ಯಾಲೆಂಡರ್‌ನ್ನು ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು.   
ಕಾರ್ಯಕ್ರಮದಲ್ಲಿ ಲಕ್ಷಿö್ಮÃನರಸಿಂಹಯ್ಯನವರ ಅಳಿಯ ಬಿ.ಆರ್.ರಮೇಶ್, ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎ.ಡಿ.ಬಲರಾಮಯ್ಯ, ಮಾಜಿ ಜಿಪಂ ಉಪಾಧ್ಯಕ್ಷ ಕರಿಗಿರಿಯಪ್ಪ, ಮಾಜಿ ನಗರಸಭಾ ಉಪಾಧ್ಯಕ್ಷ ಶ್ರೀನಿವಾಸ್ ಪ್ರಸಾದ್, ಟೂಡಾ ಸದಸ್ಯ ಹಾಗೂ ಸಮಾಜದ ಅಧ್ಯಕ್ಷ ಶಿವಕುಮಾರ್ ಅಣ್ಣೇನಹಳ್ಳಿ, ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಎಚ್.ನಂಜುAಡಯ್ಯ, ಮಾಜಿ ನರಗರಸಭಾ ಸದಸ್ಯ ರಮೇಶ್ ಹಾಗು ಸ್ವಾಮಿ ವಿವೇಕಾನಂದ ಸಹಕಾರ ಸಂಘದ ನಿರ್ದೇಶಕರಾದ ಸರೋಜ ರಾಜು ಸಿ.ರವಿಶಂಕರ್, ಕೆ.ಎಸ್, ನಾಗರಾಜ್, ತಿಮ್ಮಾರೆಡ್ಡಿ, ಹೆಚ್.ಎಸ್.ರಾಮಚಂದ್ರಪ್ಪ, ಪಿ.ಜಿ.ರಾಮಚಂದ್ರಪ್ಪ, ಕೆ.ಹೆಚ್.ಬೇಬಿ(ಭಾರತಿ) ಎಸ್.ಶ್ರೀಹರ್ಷ, ಬಿ.ಎಸ್.ಹನುಮಂತರಾಯಪ್ಪ, ಎಂ.ಎಸ್.ಕಾAತರಾಜು,ಚಿಕ್ಕಹನುಮಯ್ಯ, ಸುರೇಶ್ ಕೆ.ಎಸ್, ಟಿ.ಸಿ.ಸುರೇಶ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಬಿ.ಎನ್.ನಾಗರಾಜು ನಿರೂಪಿಸಿದರು.


ಸರ್ಕಾರದ ತಪ್ಪಿನಿಂದ ನಾಗರಿಕರಿಗೆ ನಷ್ಟ

ಸರ್ಕಾರಗಳು ಹಣಕಾಸು ಹಾಗೂ ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಮೊದಲಿಗೆ ವರ್ಷಕ್ಕೊಮ್ಮೆ ಬಜೆಟ್‌ನಲ್ಲಿ ಹೊಸ ನಿಯಮಗಳನ್ನು ಹಾಗೂ ಬದಲಾವಣೆಗಳನ್ನು ಅಳವಡಿಸಿ ಜಾರಿಗೆ ತರುತ್ತಿದ್ದವು. ಆಗ ಸಂಘ ಸಂಸ್ಥೆಗಳು ಹಾಗೂ ವರ್ತಕರಿಗೆ ಈ ಬದಲಾವಣೆಗಳನ್ನು ಅರ್ಥ ಮಾಡಿಸುವುದು ಮತ್ತು ಅಳವಡಿಸಿಕೊಳ್ಳುವುದು ಸುಲಭ, ಸರಳವಾಗಿತ್ತು, ಆದರೆ ಈಗ ವರ್ಷ ಪೂರ್ತಿ ಒಂದಲ್ಲೊAದು ಹೊಸ ಆದೇಶಗಳನ್ನು ಹೊರಡಿಸಲಾಗುತ್ತಿದ್ದು ಅವುಗಳನ್ನು ಕಾಲಕಾಲಕ್ಕೆ ಅಧ್ಯಯನ ಮಾಡಿ ಅಳವಡಿಸಿಕೊಳ್ಳುವುದು ತ್ರಾಸದಾಯಕವಾಗಿದೆ. ಆದಾಯ ತೆರಿಗೆ ಸಲ್ಲಿಸುವ ಸಾಫ್ಟ್ವೇರ್ ಬದಲು ಮಾಡಿದ್ದರಿಂದ ಆರು ತಿಂಗಳಾದರೂ ರಿಟರ್ನ್ಗಳನ್ನು ಸಲ್ಲಿಸುವ ಕಾರ್ಯ ಪೂರ್ಣಗೊಳ್ಳುತ್ತಿಲ್ಲ, ತಪ್ಪು ಸರ್ಕಾರದ್ದೇ ಆದರೂ ನಾಗರಿಕರು ದಂಡ ತೆರುವಂತ ಸನ್ನಿವೇಶ ಸೃಷ್ಟಿಮಾಡಲಾಗಿದೆ.
ಸಹಕಾರ ಸಂಘಗಳಿಗೆ ಆದಾಯ ತೆರಿಗೆ ವಿನಾಯಿತಿ ಇದ್ದರೂ ವಿಷಯ ಮುಚ್ಚಿಟ್ಟು ತೆರಿಗೆ ತೆರುವಂತೆ ಮಾಡಲಾಗುತ್ತಿದೆ.
ಟಿ.ಆರ್.ಆಂಜಿನಪ್ಪ
ಲೆಕ್ಕಪರಿಶೋಧಕರು



ಬಸವಣ್ಣನಿಂದ ಲಾಭ ಪಡೆದರು !?

ಸಮಾಜದಲ್ಲಿ ಮುಂದುವರೆದ ಜನಾಂಗದವರು ಬಸವಣ್ಣ ಅವರನ್ನು ಮುಂದಿಟ್ಟುಕೊAಡು ಲಾಭ ಪಡೆದುಕೊಂಡರು, ಆದರೆ ಅವರ ತತ್ವಾದರ್ಶಗಳನ್ನು ಪಾಲಿಸುತ್ತಾ ನಾವು ಇಂದಿಗೂ ಹಿಂದುಳಿದಿದ್ದೇವೆ.
ಹಿAದುಳಿದ ಜಾತಿ, ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ ಅವರಲ್ಲಿರುವ ಒಗ್ಗಟ್ಟನ್ನು ಮುರಿಯುವ ಪ್ರಯತ್ನ ಮುಂದುವರೆದ ಜಾತಿಗಳಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಆದ್ದರಿಂದ ಹಿಂದುಳಿದ ವರ್ಗಗಳು ಒಗ್ಗಟ್ಟಾಗುವ ಅವಶ್ಯಕತೆ ಹಿಂದೆAದಿಗಿAತಲೂ ಈಗ ಪ್ರಸ್ತುತವಾಗಿದೆ.
ಹಿಂದುಳಿದವರು ಹಿಂಜರಿಕೆ ಮನೋಭಾವ ಬಿಟ್ಟಾಗ ಮಾತ್ರ ಸಮಾಜದಲ್ಲಿ ಮುಂದೆ ಬರಲು ಸಾಧ್ಯ, 
ದಿ.ಲಕ್ಷಿö್ಮÃನರಸಿಂಹಯ್ಯನವರಿಗೆ ಮುನ್ನುಗ್ಗುವ ಗುಣವಿತ್ತು, ಅವರು ಎಲ್ಲ ಹಿಂದುಳಿದ ವರ್ಗಗಳ ನಾಯಕರಾಗಿದ್ದರು, ಅವರ ಆದರ್ಶಗುಣಗಳನ್ನು ಹಿಂದುಳಿದ ಸಮಾಜದ ಯುವಪೀಳಿಗೆ ಅಳವಡಿಸಿಕೊಂಡಾಗ ಸಮಾಜದಲ್ಲಿ ಮುಂದೆ ಬರಲು ಸಾಧ್ಯ. 
ಎಸ್.ನಾಗಣ್ಣ 
ರೆಡ್‌ಕ್ರಾಸ್ ಸಭಾಪತಿ 

ಸ್ವಾಮಿ ವಿವೇಕಾನಂದ ಸಹಕಾರ ಸಂಘದ 2020-21ನೇ ಸಾಲಿನ 25ನೇ ವಾರ್ಷಿಕ ಮಹಾಸಭೆ ತುಮಕೂರು ನಗರದ ಹೊರಪೇಟೆ ವಾಲ್ಮೀಕಿ ಸಭಾಂಗಣದಲ್ಲಿ ಮಂಗಳವಾರ ಆನ್‌ಲೈನ್‌ನಲ್ಲಿ ನಡೆಯಿತು, ಸಂಘದ ಅಧ್ಯಕ್ಷರಾದ ಪಿ.ಮೂರ್ತಿ ಉಪಾಧ್ಯಕ್ಷ ಬಿ.ಎಚ್.ನಂಜುAಡಯ್ಯ, ನಿರ್ದೇಶಕರಾದ ಕೆ.ಎನ್.ಸರೋಜರಾಜು, ಬಿ..ಆರ್.ರಮೇಶ್, ಪಿ..ನಾಗರಾಜು, ಜಿ.ತಿಮ್ಮಾರೆಡ್ಡಿ, ರವಿಶಂಕರ್, ಹೆಚ್.ಎಸ್.ರಾಮಚಂದ್ರಪ್ಪ, ಎಸ್.ಶ್ರೀಹರ್ಷ, ಪಿ.ಜಿ.ರಾಮಚಂದ್ರಪ್ಪ, ಕೆ.ಹೆಚ್.ಬೇಬಿ(ಭಾರತಿ), ಟಿ.ಎಸ್.ಹನುಮಂತರಾಯಪ್ಪ, ಕಾಂತರಾಜು, ಕೆ.ಎಸ್.ಸುರೇಶ್ ಹಾಗೂ ಸಿಬ್ಬಂದಿ ಇದ್ದರು.