ಬುಡಕಟ್ಟು ಮಹಿಳೆಗೆ ರಾಷ್ಟ್ರಪತಿ ಪದವಿ: ಭಾರತದ ಪ್ರಜಾಪ್ರಭುತ್ವದ ವೈಶಿಷ್ಟ್ಯ

ಬುಡಕಟ್ಟು ಮಹಿಳೆಗೆ ರಾಷ್ಟ್ರಪತಿ ಪದವಿ: ಭಾರತದ ಪ್ರಜಾಪ್ರಭುತ್ವದ ವೈಶಿಷ್ಟ್ಯ

ಬುಡಕಟ್ಟು ಮಹಿಳೆಗೆ ರಾಷ್ಟ್ರಪತಿ ಪದವಿ:  ಭಾರತದ ಪ್ರಜಾಪ್ರಭುತ್ವದ ವೈಶಿಷ್ಟ್ಯ

 

ಬುಡಕಟ್ಟು ಮಹಿಳೆಗೆ ರಾಷ್ಟ್ರಪತಿ ಪದವಿ:

ಭಾರತದ ಪ್ರಜಾಪ್ರಭುತ್ವದ ವೈಶಿಷ್ಟ್ಯ

ತುಮಕೂರು : ತುಳಿತಕ್ಕೊಳಗಾದ ಬುಡಕಟ್ಟು ಮಹಿಳೆ ಪ್ರಥಮ ಪ್ರಜೆ ಯಾಗಿರುವುದು ಸ್ವಾತಂತ್ರ್ಯದ 75ನೇವರ್ಷದ ಅಮೃತ ಮಹೋತ್ಸವದ ಸಂದರ್ಭದ ಪ್ರಜಾಪ್ರಭುತ್ವದ ವೈಶಿಷ್ಟ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ  ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ರಾಮ್ ಮಾಧವ್ ಅಭಿಪ್ರಾಯಪಟ್ಟರು.

 

“ಒಂದು ವರ್ಗ ಸ್ವಾತಂತ್ರ್ಯ ಕೇವಲ ನಮ್ಮ ಕೊಡುಗೆ ಎಂದು ಬೀಗುತ್ತಿದೆ”

ಆರ್ ಎಸ್ ಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರಾಮಮಾಧವ ವಿಷಾದ

ತುಮಕೂರು: ಸ್ವಾತಂತ್ರ್ಯಕ್ಕಾಗಿ ಸಾಮಾನ್ಯ ರೈತರು, ಕ್ರಾಂತಿಕಾರಿಗಳು, ಸಾಹಿತಿಗಳು, ಸಾಧುಸಂತರು ಹೋರಾಟ ಮಾಡಿದ್ದಾರೆ ಆದರೆ ಇಂದು ಕೇವಲ ಒಂದು ವರ್ಗ ಮಾತ್ರ ಸ್ವಾತಂತ್ರ್ಯ ಕೇವಲ ನಮ್ಮ ಕೊಡುಗೆ ಎಂದು ಬೀಗುತ್ತಿದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ  ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ರಾಮ್ ಮಾಧವ್ ಅಭಿಪ್ರಾಯಪಟ್ಟರು

ನಗರದ ಸಿದ್ದಗಂಗಾ ವೈದ್ಯಕೀಯ ಮತ್ತು ಸಂಶೋಧನಾ ಕಾಲೇಜಿನ ಸಭಾಂಗಣದಲ್ಲಿ ಜು 24ರ ಭಾನುವಾರ ಬೆಳಿಗ್ಗೆ  ಮಂಥನ ತುಮಕೂರು ಏರ್ಪಡಿಸಿದ್ದ  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಸ್ವಾತಂತ್ರ್ಯಕ್ಕಾಗಿ ನಾವೆಲ್ಲರೂ ಹೋರಾಡ ಮಾಡಲು ಸಾಧ್ಯವಾಗಿಲ್ಲವಾದರೂ , ಬಲಿದಾನಗೈದ ಸಾವಿರಾರು ಜನರ ಪ್ರೇರೇಪಣೆಯಿಂದ   ದೇಶಕ್ಕಾಗಿ ಹೇಗೆ ಬದುಕಬೇಕು ಎಂಬ ಬಗ್ಗೆ ಪ್ರಸ್ತುತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಎಲ್ಲರೂ ಚಿಂತಿಸಬೇಕು ಎಂದು ಹೇಳಿದರು.

ಜಗತ್ತಿನಲ್ಲಿಯೇ ನಾವು ಮುಂದುವರೆದ ರಾಷ್ಟ್ರ ಎಂದು ಹೇಳಿಕೊಳ್ಳುವ ಅಮೆರಿಕ ಇಲ್ಲಿಯವರೆಗೂ ಯಾವುದೇ ಮಹಿಳಾ ರಾಷ್ಟ್ರಪತಿಯನ್ನು ಕಂಡಿಲ್ಲ ಆದರೆ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಭಾರತಕ್ಕೆ ಇಬ್ಬರು ಮಹಿಳಾ ರಾಷ್ಟ್ರಪತಿಗಳ ಕೊಡುಗೆಯನ್ನು ನೀಡಿರುವುದಕ್ಕೆ ಹೆಮ್ಮೆಯಿದೆ, ನಮ್ಮ ಪೂರ್ವಿಕರ ತ್ಯಾಗ ಬಲಿದಾನದಿಂದ ಬಂದ ಸ್ವಾತಂತ್ರ್ಯ ಅದರೊಟ್ಟಿಗೆ ಸೃಷ್ಟಿಯಾದ ಹತ್ತು ಹಲವಾರು ಸಮಸ್ಯೆಗಳಲ್ಲಿ ಪಾಕಿಸ್ತಾನದ ನಿರ್ಮಾಣವಾಗಿ ನಮ್ಮದೇ ಭೂಮಿ ಕಳೆದುಕೊಂಡಿದ್ದು ,ಜಮ್ಮು ಕಾಶ್ಮೀರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ವಿಧಿ 370 ಸೃಷ್ಟಿಮಾಡಿದುದು, ತುಷ್ಟೀಕರಣದ ನೀತಿಯಿಂದ ದೇಶಕ್ಕಾದ ಸಮಸ್ಯೆಗಳ ಬಗ್ಗೆ ರಾಮಮಾಧವ ಎಳೆಎಳೆಯಾಗಿ ಬಿಚ್ಚಿಟ್ಟರು.

ಪ್ರತಿ ಭಾರತೀಯನಿಗೆ ದೇಶದ ಎಲ್ಲ ಅಸಮಾನತೆಗಳು ಹಾಗೂ  ಸಮಸ್ಯೆಗಳಿಂದ ಸ್ವಾತಂತ್ರ್ಯ ಸಿಗುವಂತೆ ಆಗಬೇಕು ಎಂದರು.

ಶತಮಾನಗಳಿಂದ ಕಗ್ಗಂಟಾಗಿ ಉಳಿದಿದ್ದ ಅಂತ ಹತ್ತು ಹಲವಾರು ಸಮಸ್ಯೆಗಳು ಸ್ವಾತಂತ್ರದ ಎಲ್ಲರ ಸರ್ವ ಸಮ್ಮತಿಯಿಂದ ಬಗೆ  ಹರಿಯುತ್ತಿರುವುದು ಸಂತೋಷ ಎಂದರು.

1946 ರಲ್ಲಿ ಭಾರತದ ಸ್ವಾತಂತ್ರ್ಯದ ಮಸೂದೆಯನ್ನು ಇಂಗ್ಲೆಂಡಿನಲ್ಲಿ ಮಂಡಿಸುವಾಗ ಇಂಗ್ಲೆಂಡ್ ನ ವಿರೋಧ ಪಕ್ಷದ ನಾಯಕ ವಿನ್ಸ್ಟನ್ ಚರ್ಚಿಲ್ ಭಾರತ ಅನಕ್ಷರತೆಯ ಕೂಪವಾಗಿದೆ, ಭಾರತೀಯರಿಗೆ ಅವರನ್ನು ಅವರು ಆಳಿಕೊಳ್ಳುವ ಯೋಗ್ಯತೆ ಇಲ್ಲ ಎಂದು ಜರಿದು ಸ್ವಾತಂತ್ರ್ಯ ಕೊಡುವ ಪ್ರಸ್ತಾವನೆಯನ್ನು ವಿರೋಧಿಸಿದ್ದರು ಎಂದು ಹೇಳುತ್ತಾ, ಪ್ರಸ್ತುತ ಭಾರತ ಇಡೀ ಜಗತ್ತಿನ ಎದುರಿಗೆ  ತನ್ನ ಸಾಮರ್ಥ್ಯ ಏನು ಎಂಬುದನ್ನು ಕಳೆದ  75 ವರ್ಷಗಳಲ್ಲಿ ತೋರಿಸಿದೆ, ಎಂದು ಹೇಳುತ್ತಾ ಸುವರ್ಣಮಹೋತ್ಸವದ ಈ ಸುಸಂದರ್ಭದಲ್ಲಿ ಭಾರತವನ್ನು ಇನ್ನಷ್ಟು ಉನ್ನತಿಗೆ ತರಲು ನಾವೆಲ್ಲರೂ ಶ್ರಮಿಸಬೇಕೆಂದರು.

ಜನ ಕಲ್ಯಾಣ ಟ್ರಸ್ಟ್ನ ಅಧ್ಯಕ್ಷ ನಾಗೇಂದ್ರಪ್ರಸಾದ್ ವೇದಿಕೆಯಲ್ಲಿದ್ದರು ,      250ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ನರಸಿಂಹರಾಜು ನಿರೂಪಿಸಿದರು, ಸಂಜಯ್ ಸ್ವಾಗತಿಸಿದರು,ಪ್ರದೀಪ್ ವಂದಿಸಿದರು.