‘ಉಕ್ಕಿನ ಮನುಷ್ಯ’ ಅಮಿತ್ ಶಾ ಸ್ವಾಗತಕ್ಕೆ ಅಭೂತಪೂರ್ವ ಸಿದ್ಧತೆ: ಸಿದ್ಧಗಂಗಾ ಶ್ರೀ ಜಯಂತಿ ಐತಿಹಾಸಿಕ : ಬಿ.ವೈ.ವಿಜಯೇಂದ್ರ

‘ಉಕ್ಕಿನ ಮನುಷ್ಯ’ ಅಮಿತ್ ಶಾ ಸ್ವಾಗತಕ್ಕೆ ಅಭೂತಪೂರ್ವ ಸಿದ್ಧತೆ: ಸಿದ್ಧಗಂಗಾ ಶ್ರೀ ಜಯಂತಿ ಐತಿಹಾಸಿಕ : ಬಿ.ವೈ.ವಿಜಯೇಂದ್ರ, bevarahani-tumakuru-by-vijayendra-amith-shah-siddaganga-mutt

‘ಉಕ್ಕಿನ ಮನುಷ್ಯ’ ಅಮಿತ್ ಶಾ ಸ್ವಾಗತಕ್ಕೆ ಅಭೂತಪೂರ್ವ ಸಿದ್ಧತೆ: ಸಿದ್ಧಗಂಗಾ ಶ್ರೀ ಜಯಂತಿ ಐತಿಹಾಸಿಕ : ಬಿ.ವೈ.ವಿಜಯೇಂದ್ರ


‘ಉಕ್ಕಿನ ಮನುಷ್ಯ’ ಅಮಿತ್ ಶಾ ಸ್ವಾಗತಕ್ಕೆ ಅಭೂತಪೂರ್ವ ಸಿದ್ಧತೆ:
ಸಿದ್ಧಗಂಗಾ ಶ್ರೀ ಜಯಂತಿ ಐತಿಹಾಸಿಕ : ಬಿ.ವೈ.ವಿಜಯೇಂದ್ರ


ತುಮಕೂರು: “ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಪದ್ಮಭೂಷಣ, ಕರ್ನಾಟಕ ರತ್ನ, ಆಧುನಿಕ ಬಸವಣ್ಣ,ಪರಮ ಪೂಜ್ಯ ಶ್ರೀ ಶಿವಕುಮಾರ  ಸ್ವಾಮೀಜಿಯವರ 115ನೇ ಜಯಂತಿ ಹಾಗೂ ಗುರುವಂದನಾ ಕರ‍್ಯಕ್ರಮ ಸಿದ್ಧಗಂಗಾ ಮಠದಲ್ಲಿ ಏಪ್ರಿಲ್ ಒಂದನೇ ತಾರೀಕಿನ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.


ಸಿದ್ಧಗಂಗಾ ಮಠದಲ್ಲಿ ಆಯೋಜಿಸಿರುವ ಬೃಹತ್ ಸಮಾರಂಭದ ಸಿದ್ಧತೆಗಳನ್ನು ಕೇಂದ್ರ ಐಜಿ ಚಂದ್ರಶೇಖರ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ ಎಡಿಜಿಪಿ ಪ್ರತಾಪ್ ರೆಡ್ಡಿ, ಜಿಲ್ಲಾ ಎಸ್ಪಿ ರಾಹುಲ್ ಕುಮಾರ್ ಶಹಾಪುರವಾಡ್ ಅವರೊಂದಿಗೆ ಪರಿಶೀಲಿಸಿದ ಬಳಿಕ ಸ್ಥಳದಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುತ್ತೂರಿನ ಶ್ರೀ ದೇಶಿಕೇಂದ್ರ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಸಿದ್ಧಗಂಗಾ ಮಠಾಧೀಶ ಶ್ರೀ ಸಿದ್ದಲಿಂಗ ಮಹಾಸ್ವಾಮಿಯವರ ನೇತೃತ್ವದಲ್ಲಿ ನಡೆಯಲಿರುವ ಸಮಾರಂಭವನ್ನು ಸರ್ದಾರ್ ವಲ್ಲಭ ಬಾಯಿ ಪಟೇಲ್ ನಂತರ ಸ್ವಾತಂತ್ರö್ಯ ಭಾರತ ಕಂಡ ಉಕ್ಕಿನ ಮನುಷ್ಯ ಎಂದು ಹೆಸರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ‍್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಮಿತ್ ಶಾ ಅವರು ಸರಿಯಾಗಿ 10.45ಕ್ಕೆ ಯೂನಿವರ್ಸಿಟಿ ಹೆಲಿಪ್ಯಾಡ್‌ನಲ್ಲಿ ಬಂದಿಳಿಯಲಿದ್ದಾರೆ. ಅಲ್ಲಿಂದ ನೇರವಾಗಿ ರಸ್ತೆ ಮೂಲಕ ಸಿದ್ಧಗಂಗಾ ಮಠಕ್ಕೆ ಆಗಮಿಸಿ, ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸುವರು,ನಂತರ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಪ್ರಸಾದ ಸ್ವೀಕರಿಸಿ ತೆರಳುವರು.


ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಕೇಂದ್ರ ಮಂತ್ರಿಗಳಾದ ಪ್ರಹ್ಲಾದ್ ಜೋಷಿ,ಭಗವಂತ್ ಖೂಬಾ, ಎ.ನಾರಾಯಣಸ್ವಾಮಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹಾಗೂ ಜಿಲ್ಲೆಯ ಸಚಿವರು ವೇದಿಕೆಯಲ್ಲಿ  ಉಪಸ್ಥಿತರಿರುವರು. ಎರಡು ಗಂಟೆಗಳ ಕಾಲ ನಡೆಯಲಿರುವ ಕರ‍್ಯಕ್ರಮ ಕೇವಲ ಜಯಂತಿಯಲ್ಲ, ಇದೊಂದು ಐತಿಹಾಸಿಕ ಕರ‍್ಯಕ್ರಮವಾಗಲಿದೆ ಎಂದರು ವಿಜಯೇಂದ್ರ.


ಬಸ್ ಹಾಗೂ ಇತರ ವಾಹನಗಳಲ್ಲಿ ಬರುವ ಭಕ್ತಾದಿಗಳು ಹೆಚ್ಚು ದೂರ ನಡೆಯದಂತೆ ಅತಿ ಸಮೀಪದಲ್ಲೇ ಎಲ್ಲ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಒಂದೂವರೆಯಿAದ ಎರಡು ಲಕ್ಷದವರೆಗೆ ಜನರು ಸ್ವಯಂ ಆಸಕ್ತಿಯಿಂದ ಬರುವ ನಿರೀಕ್ಷೆಯಿದೆ. ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಸಂಜೆ ಗಾಯಕ್ ವಿಜಯ್ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ನೇತೃತ್ವದಲ್ಲಿ ಬಸವ ಭಾರತ ಸಂಗೀತ ಕರ‍್ಯಕ್ರಮ ಏರ್ಪಡಿಸಲಾಗಿದೆ.


ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹೆಲಿಪ್ಯಾಡ್ ಬಳಿ ಪಕ್ಷದ ಕರ‍್ಯಕರ್ತರು ಹತ್ತಾರು ಸಾಂಸ್ಖೃತಿಕ ಮೇಳದೊಂದಿಗೆ ಸ್ವಾಗತಿಸುವರು. ಯಾವುದೇ ರಾಜಕೀಯ ಸಭೆ ಏರ್ಪಡಿಸಿಲ್ಲ ಎಂದು ಸ್ಪಷ್ಟ ಪಡಿಸಿದರು.


ಸಮಾರಂಭದ ಮುನ್ನಾ ದಿನ ಕಾಂಗ್ರೆಸ್ ರಾಷ್ಟಿçÃಯ ಮುಖಂಡ ರಾಹುಲ್ ಗಾಂಧಿ ಅವರ ದಿಡೀರ್ ಭೇಟಿ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, “ ಸಿದ್ಧಗಂಗಾ ಮಠದ ಮಹಿಮೆಯೇ ಅಂತಾದ್ದು, ಎಲ್ಲ ವರ್ಗದ, ಎಲ್ಲ ಧರ್ಮಗಳ, ಎಲ್ಲ ಪಕ್ಷಗಳ ಜನರನ್ನು ಸೆಳೆಯುತ್ತದೆ. ಅಷ್ಟರ ಹೊರತಾಗಿ ಬೇರೇನೂ ತಿಳಿದಿಲ್ಲ” ಎಂದರು.
ಮಾಜಿ ಸಚಿವ ಸೊಗಡು ಶಿವಣ್ಣ, ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಲಕ್ಷಿö್ಮÃಶ್, ಕಾಂಪೊಸ್ಟ್ ನಿಗಮದ ನಿರ್ದೇಶಕ ಟಿ.ಆರ್.ಸದಾಶಿವಯ್ಯ ಮೊದಲಾದವರು ಜೊತೆಯಲ್ಲಿದ್ದರು.


ಸಮಾರಂಭಕ್ಕಾಗಿ ಹೆಸರಾಂತ ಬೆಂಗಳೂರಿನ ತಿಬ್ಬಾದೇವಿ ಟೆಂಟ್ಸ್ನ 60ಕ್ಕೂ ಹೆಚ್ಚು ಕಾರ್ಮಿಕರು ನಿರಂತರ ಮೂರು ದಿನ ಕಾರ್ಯನಿರ್ವಹಿಸಿ 140 ಅಡಿ /400 ಅಡಿ ವಿಸ್ತೀರ್ಣದ ಅತ್ಯಾಧುನಿಕ ಪೆಂಡಾಲ್ ನಿರ್ಮಿಸಿದ್ದಾರೆ. 80 ಅಡಿ ಅಗಲದ ಬೃಹತ್ ವೇದಿಕೆ ಸಜ್ಜುಗೊಳಿಸಲಾಗಿದೆ. ಮತ್ತೊಂದು ಬೃಹತ್ ಎಲ್‌ಇಡಿ ಪರದೆ ಸ್ಥಾಪಿಸಿ ಮುಖ್ಯ ಪೆಂಡಾಲ್ ಬದಿಯಲ್ಲೇ ಮತ್ತೊಂದು ಸಭಾಂಗಣವನ್ನೂ ನಿರ್ಮಿಸಲಾಗಿದೆ. ಒಟ್ಟು ಎರಡೂ ಸಭಾಂಗಣಗಳು ಸೇರಿ 25 ಸಾವಿರ ಕುರ್ಚಿಗಳನ್ನು ಹಾಕಲಾಗಿದೆ.


ತುಮಕೂರಿನಲ್ಲಿ ಪ್ರಧಾನ ಮಂತ್ರಿಯವರೂ ಸೇರಿದಂತೆ ಹಿಂದಿನ ಯಾವುದೇ ಅತಿಗಣ್ಯರ ಆಗಮನದ ಸಂದರ್ಭಕ್ಕಿಂತ ಹೆಚ್ಚಿನ ಭದ್ರತೆಯನ್ನು ಹಾಗೂ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಸಂದರ್ಭದಲ್ಲಿ ನಿಯೋಜಿಸಲಾಗಿದೆ. ಅಮಿತ್ ಶಾ ಭದ್ರತಾ ಮುಖ್ಯಸ್ಥ ರವಿಶಂಕರ್, ಕೇಂದ್ರ ಐಜಿ ಚಂದ್ರಶೇಖರ್, ಜಿಲ್ಲಾ ಎಸ್ಪಿ ರಾಹುಲ್ ಕುಮಾರ್ ಶಹಾಪುರವಾಡ್ ಮಾರ್ಗದರ್ಶನದಲ್ಲಿ ಭದ್ರತಾ ಏರ್ಪಾಡುಗಳು ನಡೆದಿವೆ.


ಅಮಿತ್ ಶಾ ಸಂಚರಿಸುವ ತುಮಕೂರು ವಿವಿಯಿಂದ ಸಿದ್ಧಗಂಗಾ ಮಠದ ಎರಡೂ ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಕರ‍್ಯ ಪ್ರಗತಿಯಲ್ಲಿದೆ. ರಸ್ತೆಗಳ ಗುಂಡಿ ಮುಚ್ಚಿ, ಡಾಂಬರು ಹಾಕುವ ಕಾರ‍್ಯ ಹಗಲಿರುಳೆನ್ನದೇ ಸಾಗುತ್ತಿದೆ. ಜೊತೆಗೆ ಈ ಮಾರ್ಗದ ಎಲ್ಲ ರಸ್ತೆ ಉಬ್ಬುಗಳನ್ನ ಸಹಾ ತೆಗೆದು ರಸ್ತೆಯನ್ನು ಸಪಾಟು ಮಾಡಲಾಗಿದೆ.