‘ಕುವೆಂಪು ವಿಚಾರ ಸಾಹಿತ್ಯದಿಂದ ಸ್ವಾಸ್ಥ್ಯ ಸಮಾಜ ’ ವಿಶ್ವ ಮಾನವ ದಿನ ಸಮಾರಂಭದಲ್ಲಿ ಲೇಖಕ ಎಸ್.ಜಿ.ಸಿದ್ಧರಾಮಯ್ಯ

kuvempu-present-future-h-g-siddaramaiah

‘ಕುವೆಂಪು ವಿಚಾರ ಸಾಹಿತ್ಯದಿಂದ ಸ್ವಾಸ್ಥ್ಯ ಸಮಾಜ ’  ವಿಶ್ವ ಮಾನವ ದಿನ ಸಮಾರಂಭದಲ್ಲಿ ಲೇಖಕ ಎಸ್.ಜಿ.ಸಿದ್ಧರಾಮಯ್ಯ

‘ಕುವೆಂಪು ವಿಚಾರ ಸಾಹಿತ್ಯದಿಂದ ಸ್ವಾಸ್ಥ್ಯ ಸಮಾಜ ’

ವಿಶ್ವ ಮಾನವ ದಿನ ಸಮಾರಂಭದಲ್ಲಿ ಲೇಖಕ ಎಸ್.ಜಿ.ಸಿದ್ಧರಾಮಯ್ಯ

 

ತುಮಕೂರು: ಕೊರೊನಾ ವೈರಾಣು ಮತ್ತು ರಾಜಕೀಯ ವೈರಾಣುಗಳು ,ದೈಹಿಕ ಮತ್ತು ಮಾನಸಿಕವಾಗಿ ನಮ್ಮನ್ನು ತಳಮಳಗೊಳಿಸುತ್ತಿವೆ .ಕುವೆಂಪುರವರ ಚಿಂತನೆಗಳು ರೋಗಗ್ರಸ್ತ ಮನಸ್ಸಿಗೆ ಕೊಡುವ ಔಷಧಗಳು. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಓದಿನ ಅಭಿರುಚಿ ಬೆಳೆಸಬೇಕು . ಕುವೆಂಪುರವರ ಸಾಹಿತ್ಯ ಅದರಲ್ಲೂ, ಅವರ ವಿಚಾರ ಸಾಹಿತ್ಯ ಓದಿಸಿದರೆ , ಮುಂದಿನ ದಿನಗಳಲ್ಲಿ ಸಮಾಜ ಸ್ವಾಸ್ಥ್ಯ ವಾಗಿ ಇರಬಲ್ಲದು ಎಂದು ಹಿರಿಯ ಸಾಹಿತಿಗಳಾದ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. 

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ವಮಾನವ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕುವೆಂಪು ಬಹುದೊಡ್ಡ ಸ್ತ್ರೀ ಸಂವೇದನೆ ಹೊಂದಿದ್ದ ಲೇಖಕ.ಅವರ ಸಾಹಿತ್ಯ ದಲ್ಲಿ ಸ್ತ್ರೀ ಪ್ರಧಾನತೆಯ ಹೆಸರುಗಳು ,ಹೆಣ್ಣಿನ ಒಳಸಂಕಟಗಳು ,ಸಂಕಥನಗಳು ಇವೆ.ಪ್ರತಿಭಟನಾ ಶಕ್ತಿಯ  ಸ್ತ್ರೀ ಪಾತ್ರಗಳಿವೆ.ಇರುವೆಂಭತ್ತು ಕೋಟಿ  ಜೀವರಾಶಿಯೂ  ಈ ಭೂಮಿಯ ಹಕ್ಕುದಾರರು ಎಂದು ಭಾವಿಸಿದ ಲೋಕಪ್ರಜ್ಞೆ ಕುವೆಂಪು ರವರದು.ಋಷಿಸದೃಷ ಲೇಖಕರು ಕುವೆಂಪು .ಕನ್ನಡ ಸಾಂಸ್ಕೃತಿಕ ಲೋಕದ ಬಹುದೊಡ್ಡ ಚೇತನ.

20 ನೇ ಶತಮಾನದ ಎಲ್ಲಾ ಕನ್ನಡ ಪ್ರಜ್ಞೆಯನ್ನು ಬೆಳೆಸಿದವರು ಎಂದು ಸಿದ್ದರಾಮಯ್ಯ ಬಣ್ಣಿಸಿದರು.

ಎಂದು ಹೇಳಿದರು. 

 

"ಮಲೆಗಳಲ್ಲಿ ಮದುಮಗಳು ಮತ್ತು ಮಹಿಳೆ " ಎಂಬ ವಿಷಯದ ಬಗ್ಗೆ ಉಮಾ ಗ್ಯಾರಳ್ಳ ರವರು ಉಪನ್ಯಾಸ ನೀಡುತ್ತಾ ಕುವೆಂಪುರವರ ಎರಡು ಕಾದಂಬರಿಗಳೂ ಮಹಾಕಾವ್ಯಗಳೇ. ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ, ಪ್ರಾರಂಭದಲ್ಲಿಯೇ ಹೇಳಿರುವಂತೆ ಇಲ್ಲಿ ಯಾರೂ ಮುಖ್ಯರಲ್ಲ .ಯಾರೂ ಅಮುಖ್ಯರಲ್ಲ. ಎಲ್ಲಾ ಪಾತ್ರಗಳೂ ಮುಖ್ಯವಾಗಿವೆ. ಕಾದಂಬರಿಯಲ್ಲಿ ಬರುವ ಎಲ್ಲಾ ಮಹಿಳೆಯರೂ ಅಕ್ಷರಸ್ಥ ರಲ್ಲ. ಮಹಿಳೆಯರು ಕಲಿಯುವುದು ಹಾಸ್ಯಾಸ್ಪದ ಎಂದು ತಿಳಿದಿದ್ದ ಕಾಲದಲ್ಲೂಸೇಸಿ ,ತಿಮ್ಮಿ ,ಪೀಂಚಲು ಚಿನ್ನಮ್ಮ ನಂತಹ ಹೆಣ್ಣು ಪಾತ್ರಗಳು ಹೆದರುವುದಿಲ್ಲ . ಅಪಾಯದ ಅರಿವಿದ್ದೂ ಧೈರ್ಯ ವಾಗಿ ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.ಪ್ರೀತಿಯೇ ಪ್ರತಿಭಟನೆಯಾಗಿರುತ್ತದೆ ಎಂದು ಬಣ್ಣಿಸಿದರು. 

 

ಲೇಖಕಿಯರ ಸಂಘದ ಅಧ್ಯಕ್ಷೆ  ಜಿ.ಮಲ್ಲಿಕಾ ಬಸವರಾಜು ಪ್ರಾಸ್ತಾವಿಕ ಮಾತನಾಡಿ,  ವರ್ತಮಾನದ ತಲ್ಲಣಗಳಿಗೆ ,ಸಂಕಟಗಳಿಗೆ ಕುವೆಂಪುರವರ ಬರಹದಲ್ಲಿ ಪರಿಹಾರವಿದೆ. ಬದುಕು ಬರಹ ಒಂದೇ ಆಗಿದ್ದರು ಕುವೆಂಪು.

ಕುವೆಂಪುರವರ ವಿಶ್ವ ಮಾನವ ಸಂದೇಶ ಮತ್ತು ಮಂತ್ರಮಾಂಗಲ್ಯದ ಮಹತ್ವವನ್ನು ಮತ್ತು ಇವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆಯನ್ನು  ತಿಳಿಸಿದರು,

 

ಅಧ್ಯಕ್ಷತೆ ವಹಿಸಿದ್ದ ,ಕಾಲೇಜಿನ ಪ್ರಾಂಶುಪಾಲರಾದ ವಸಂತ ಟಿ.ಡಿ. ಮಾತನಾಡುತ್ತಾ ,ಕುವೆಂಪುರವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು .ಆ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣವಾಗಬೇಕು ಎಂದರು. 

 

ಲಲಿತಾ ಮಲ್ಲಪ್ಪ ನಾಡಗೀತೆ ಹಾಡಿದರು, ಲೇಖಕಿಯರ ಸಂಘದ ಉಪಾಧ್ಯಕ್ಷೆ  ಸಿ.ಎ.ಇಂದಿರಾ ರವರು ಕುವೆಂಪುರವರ ಗೀತೆಗಳನ್ನು ಹಾಡಿದರು.  ಕಾಲೇಜಿನ ,ಮಹಿಳಾ ಸಬಲೀಕರಣ ವೇದಿಕೆಯ ಸಂಚಾಲಕಿ ರೇಣುಕಾ,ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಸಿ.ಎನ್.ಸುಗುಣಾ ದೇವಿ . ಖಜಾಂಚಿ ಸಿ.ಎಲ್.ಸುನಂದಮ್ಮ ,ಸದಸ್ಯರಾದ ಸುಶೀಲಾ ಸದಾಶಿವಯ್ಯ ,ಮುದ್ದರಂಗಮ್ಮ ಭಾಗವಹಿಸಿದ್ದರು.

ಕೃಷ್ಣನಾಯಕ್  ನಿರೂಪಿಸಿ, ಮರಿಯಂಬಿ  ಸ್ವಾಗತಿಸಿ , ಡಾ/ ಶಿವಲಿಂಗಮೂರ್ತಿ ರವರು ವಂದಿಸಿದರು, ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ ಹಾಗೂ  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸದರಿ ಕಾಲೇಜಿನ ಮಹಿಳಾ ಸಬಲೀಕರಣ ವೇದಿಕೆ ಸಮಾರಂಭವನ್ನು ಏರ್ಪಡಿಸಿದ್ದವು.