ಲಾಭದ ಖಾಸಗೀರಣ-ನಷ್ಟದ ಸಾರ್ವತ್ರೀಕರಣ ದೇಶವಿರೋಧಿ ಕ್ರಮ
ಲಾಭದ ಖಾಸಗೀರಣ-ನಷ್ಟದ ಸಾರ್ವತ್ರೀಕರಣ ದೇಶವಿರೋಧಿ ಕ್ರಮ,meenakshi-sundaram-citu-privatisation-profit-making
ಲಾಭದ ಖಾಸಗೀರಣ-ನಷ್ಟದ ಸಾರ್ವತ್ರೀಕರಣ ದೇಶವಿರೋಧಿ ಕ್ರಮ
ತುಮಕೂರು: ಕೇಂದ್ರ ಸರ್ಕಾರ ಅನುಸರಿಸುತ್ತಿರುವ ನೀತಿಯಿಂದ ದೇಶದಲ್ಲಿ ಲಾಭದ ಖಾಸಗೀಕರಣ ಹಾಗು ನಷ್ಟದ ಸರ್ವಾತ್ರೀಕರಣ ನಡೆಯುತ್ತಿದೆ ಇದರಿಂದಾಗಿ ಅಸಮಾನತೆ ಬೆಳೆಯುತ್ತಿದೆ ಇದೊಂದು ದೇಶ ವಿರೋಧಿ ಕ್ರಮ ಎಂದು ಶ್ರೀಮಂತರಿಗೆ ತೆರಿಗೆ ಹೊರೆ ಹೆಚ್ಚಿಸಿ ಜನ ಸಮಾನ್ಯರಿಗೆ ತೆರಿಗೆ ಹೊರಯನ್ನು ಕಡಿಮೆ ಮಾಡುವಂತೆ ಸರ್ಕಾರವನ್ನು ಸಿಐಟಿಯುನ ರಾಜ್ಯ ಪ್ರಧಾನ ಕಾರ್ಯಧರ್ಶಿ ಮೀನಾಕ್ಷಿ ಸುಂದರA ಅವರು ಅಭಿಪ್ರಾಯ ಪಟ್ಟರು ಮುಂದುವರಿದು ಮಾತನಾಡಿದ ಅವರು ತುಮಕೂರು ನಗರದ ಜನ ಚಳುವಳಿ ಕೇಂದ್ರದಲ್ಲಿ ಸಿಐಟಿಯು ಜಿಲ್ಲಾ ಸಮಿತಿ ದಿ; 13-02-2022 ರಂದು ಆಯೋಜಿಸಿದ್ದ ‘’ಅಖಿಲ ಭಾರತ ಸಾರ್ವತ್ರಿಕ ಮುಷ್ಕರ - ಪ್ರಜಾರಾಂದೋಲವನ್ನು ಉಧ್ಘಾಟಿಸಿ ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು ದೇಶದಲ್ಲಿ ಉದ್ಯೋಗ ನಷ್ಟ, ಆದಾಯ ನಷ್ಟ ಹೆಚ್ಚಿದೆ, ಅವಲಂಬಿಸ ಬಹುದಾದ ಉದೋಗಗಳನ್ನು ಸೃಷ್ಟಿಸಲಾಗುತ್ತಿಲ್ಲ. ಗ್ರಾಮಿಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೂಲಿ ಹೆಚ್ಚಿಸು, ಹಾಗು ಯೋಜನೆಯನ್ನು ನಗರ ಪ್ರದೇಶಗಳಿಗೆ ವಿಸ್ತರಿಸಲು ಆಗ್ರಹಿಸಿದರು.ಕಡಿಮೆ ವೇತನ ದಲ್ಲಿ ಕಾರ್ಮಿಕರನ್ನು ಹಂಗಾವಿಯಾಗಿ ದುಡಿಸಿ ಕೊಳ್ಳಲು ಕಾರ್ಮಿಕ ಕಾನೂನುಗಳನ್ನು ಬದಲಿಸುವ ಕ್ರಮವನ್ನು ವಿರೋಧಿಸಿ ಇದೆ ಮಾರ್ಚಿ- 28-29 ಅಖಿಲ ಭಾರತ ಮುಷ್ಕರಕ್ಕೆ ಕಾರ್ಮಿಕ ಸಂಘಟನೆ ಗಳ ಜಂಟಿ ಸಮಿತಿ ಜೆಸಿಟಿಯು ಕರೆ ನೀಡಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಆಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಗುಲ್ಜಾರ್ ಬಾನು ಸ್ಕೀಮ್ ನೌಕರರಿಗೆ ಕಾರ್ಮಿಕರೆಂದು ಪರಿಗಣಿಸದೆ ಕನಿಷ್ಟ ವೇತನ, ಪಿಂಚಣಿ , ಸಾಮಾಜಿಕ ಭದ್ರತೆಯನ್ನು ಇಲ್ಲದೆ ದುಡಿಸುವ ಸರ್ಕಾರದ ಕ್ರಮ ವಿರೋಧಿಸಿ ಮುಷ್ಕರಕೆ ಸ್ಕೀಮ್ ನೌಕರರು ಬೆಂಬಲಿಸಲಿದಾರೆ ಎಂದರು
ಗುತ್ತಿಗೆ ನೌಕರರಿಗೆ ಸಮಾನ ವೇತನ ನೀಡಬೇಕು, ಹಂತ ಹಂತವಾಗಿ ಸೇವೆಗಳನ್ನು ಖಾಯಂ ಮಾಡುವಂತೆ ನೀರು ಸರಬರಾಜು ನೌಕರರ ಸಂಘ ಅಧ್ಯಕ್ಷ ಕುಮಾರ್ ಅವರು ಒತ್ತಾಯಿಸಿದರು,
ಅಂಘಟಿತ ವಲಯದ ಹಮಾಲಿ ಕಾರ್ಮಿಕರಿಗೆ ಉದೋಗ ಇಲ್ಲದ ಎಪಿಎಂಸಿ ಹಮಾಲರು ತೊಂದರೆಗೆ ಸಿಲುಕಿದ್ದಾರೆ, ಹಮಾಲರಿಗೆ ಸಾಮಾಜಿಕ ಭದ್ರತೆಯನ್ನು ನೀಡುಬೇಕೆಂದು ರಾಜ್ಯ ಹಮಾಲಿ ಕಾರ್ಮಿಕರ ಫೇಡರೇಷನ್ ನ ಪಾವಗಡ ರಾಮಾಂಜಿನಿ ಅವರು ಒತ್ತಾಯಿಸಿದರು.
ಪೌರ ಕಾರ್ಮಿಕರ ಸಂಘದ ನಾಗರಾಜು ಮಾತನಾಡಿ ಮುನಿಸಿಪಲ್ ಕಾರ್ಮಿಕರ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಕಾರ್ಮಿಕ ಸಂಘಗಳ ಜೋತೆಯಲ್ಲಿ ಮಾತುಕತೆ ನಡೆಸಿ ಸಮಸ್ಯೆಗಳ ಪರಿಹರಿಸಬೇಕಂದು ಅಗ್ರಹಿಸಿದರು
ಮನೆಕೆಲಸಗಾರರ ಸಂಘ ಕಾರ್ಯಧರ್ಶಿ ಜಯಮ್ಮ ಮಾತನಾಡಿ ಕೋವಿಡ್ ನಿಂದ ಸಾವಿರಾರು ಮನೆ ಕೆಲಸಗಾರರು ಕೆಲಸ ಕಳೆದು ಕೊಂಡಿದ್ದಾರೆ ಸಕಾರದ ನೆರವು ಏನೇನು ಸಾಲದು ಹಾಗಾಗಿ ಮುಷ್ಕರ ಮೂಲಕ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.
ಅಕ್ಷರ ದಾಸೋಹ ನೌಕರರ ಸಂಘ ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಗಿರಿಜಾ ಮಾತನಾಡಿ ಕಳೆದ ಹಲವು ವರ್ಷಗಳಿಂದ ಬಿಸಿಊಟ ನೌಕರರಿಗೆ ಕೂಲಿ ಹೆಚ್ಚಳ ಮಾಡಿಲ್ಲ ಸರ್ಕಾರಕ್ಕೆ ನೌಕರರ ಬಗ್ಗೆ ಕಾಳಜಿ ಇಲ್ಲ ಎಂದರು
ಸಭೆಯಲ್ಲಿ ಪಂಚಾಯತ್ ನೌಕರ ಸಂಘ ಶಂಕಪ್ಪ, ಕಟ್ಟಡ ಕಾರ್ಮಿಕರ ಸಂಘದ ಶಂಕರಪ್ಪ ಮೇಳೆ ಕೋಟೆ, ಸಿಐಟಿಯು ಜಿಲ್ಲಾ ಖಚಾಂಜಿ ಎ ಲೊಕೇಶ್, ಪ್ರಧಾನ ಕಾರ್ಯಧರ್ಶಿ ಜಿ. ಕಮಲ ,ಕೈಗಾರಿಕ ಕಾರ್ಮಿಕರಾದ ಸುಜೀತ್ ನಾಯಕ್, ಶಿವಕುಮಾರ್ ಸ್ವಾಮಿ, ಮಾತನಾಡಿದರು
ಅಧ್ಯಕ್ಷತೆ ವಹಿಸಿದ್ದ ಸೈಯದ್ ಮುಜೀಬ್ ಅವರು ಮಾತನಾಡಿ ರೈತರಿಗೆ ನೀಡಿದ್ದ ಭರವಸೆಯನ್ನು ಪೂರೈಸದೆ ಹೋರೆ ಹೇರುವ ನೀತಿಗಳು ಹಾಗು ವಿಪರೀತ ಸಂಕಷ್ಟದಲ್ಲಿ ಇರುವ ಜನತೆ ಮತ್ತೆ ಬೇಲೆ ಏರಿಕೆಯಿಂದ ಬಳಲುವಂತೆ ಮಾಡುತ್ತಿರು ಸರ್ಕಾರದ ವಿರುದ್ದ ಮುಷ್ಕರಕ್ಕೆ ಎಲ್ಲಾರು ಬೆಂಬಲಿಸುವAತೆ ವಿನಂತಿಸಿದರು
ಸಭೆಯ ಅರಂಭಧಲ್ಲಿ ಎಸ್. ಡಿ ಪಾರ್ವತಮ್ಮ ಕ್ರಾಂತಿ ಗೀತೆ ಹಾಡಿ ರಂಗಧಾಮಯ್ಯ ಸ್ವಾಗತಿಸಿ, ಎನ್.ಕೆ ಸುಬ್ರಮಣ್ಯ ವಂದಿಸಿದರು