ಮಲ್ಲಿಕಾರ್ಜುನ ಖರ್ಗೆ ‘ಕಿಂಗ್’ ಕಾಂಗ್ ಕಾಂಗ್ರೆಸ್‌ನಲ್ಲಿ ಹೊಸ ಇತಿಹಾಸ ದಾಖಲಿಸಿದ 80ರ ತರುಣ

ಮಲ್ಲಿಕಾರ್ಜುನ ಖರ್ಗೆ ‘ಕಿಂಗ್’ ಕಾಂಗ್ ಕಾಂಗ್ರೆಸ್‌ನಲ್ಲಿ ಹೊಸ ಇತಿಹಾಸ ದಾಖಲಿಸಿದ 80ರ ತರುಣ

ಮಲ್ಲಿಕಾರ್ಜುನ ಖರ್ಗೆ ‘ಕಿಂಗ್’ ಕಾಂಗ್  ಕಾಂಗ್ರೆಸ್‌ನಲ್ಲಿ ಹೊಸ ಇತಿಹಾಸ ದಾಖಲಿಸಿದ 80ರ ತರುಣ

ಮಲ್ಲಿಕಾರ್ಜುನ ಖರ್ಗೆ ‘ಕಿಂಗ್’ ಕಾಂಗ್ 


ಕಾಂಗ್ರೆಸ್‌ನಲ್ಲಿ ಹೊಸ ಇತಿಹಾಸ ದಾಖಲಿಸಿದ 80ರ ತರುಣ

ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್ನ (ಐಎನ್‍ಸಿ) ಅಧ್ಯಕ್ಷರಾಗಿ ಪಕ್ಷದ ಹಿರಿಯ ನಾಯಕ, ರಾಜ್ಯ ಸಭಾ ಸದಸ್ಯ ಎಂ.ಮಲ್ಲಿಕಾರ್ಜುನ ಖರ್ಗೆ ಭಾರೀಬಹುಮತದಿಂದ ಚುನಾಯಿತರಾಗಿದ್ದಾರೆ. ವ್ಯಕ್ತಿಯಾಗಿ ಪಕ್ಷದ 17ನೇ ರಾಷ್ಟ್ರೀಯ ಅಧ್ಯಕ್ಷನ ಆಯ್ಕೆಗೆ ಸೋಮವಾರ ದೇಶದಾದ್ಯಂತ ಕಾಂಗ್ರೆಸ್ ಪ್ರತಿನಿಧಿಗಳು ಓಟು ಮಾಡಿದ್ದರು, ಬುಧವಾರ ಮತ ಎಣಿಕೆ ನಡೆದು, ಚಲಾಯಿತ 9385 ಓಟುಗಳಲ್ಲಿ ಮಾಪಣ್ಣ ಮಲ್ಲಿಕಾರ್ಜುನ ಖರ್ಗೆ 7897 ಓಟುಗಳನ್ನು ಹಾಗೂ ಪ್ರತಿಸ್ಸ್ಪರ್ಧಿ ಮಾಜಿ ಸಚಿವ ಶಶಿತರೂರ್ 1072 ಓಟುಗಳನ್ನು ಗಳಿಸಿದ್ದಾರೆ, 416 ಓಟುಗಳು ಅಸಿಂಧುವಾಗಿವೆ ಎಂದು ಕಾಂಗ್ರೆಸ್‌ ಚುನಾವಣಾ ಆಯುಕ್ತ ಮಧುಸೂಧನ ಮಿಸ್ತ್ರಿ ಸುದ್ದಿಗೋಷ್ಟಿಯಲ್ಲಿ ಘೋಷಿಸಿದರು. 


ಖರ್ಗೆಯವರು ಕರ್ನಾಟಕದಿಂದ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಎರಡನೇ ನಾಯಕರಾಗಿದ್ದಾರೆ. 1968ರಲ್ಲಿ  ಮಾಜಿ ಮುಖ್ಯ ಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪನವರು ಎರಡು ವರ‍್ಷಗಳ ಅವಧಿಗೆ ಎಐಸಿಸಿ ಅಧ್ಯಕ್ಷರಾಗಿದ್ದರು. ನಿಜಲಿಂಗಪ್ಪನವರ ಅವಧಿಯಲ್ಲೇ ಕಾಂಗ್ರೆಸ್ ಎರಡು ಬಣಗಳಾಗಿ ಒಡೆಯಿತು. ಹಾಗಾಗಿ ನಿಜಲಿಂಗಪ್ಪನವರನ್ನು ಸ್ವಾತಂತ್ರೋತ್ತರ ಕಾಂಗ್ರೆಸ್ ಇತಿಹಾಸದಲ್ಲಿ ಅವಿಭಜಿತ ಕಾಂಗ್ರೆಸ್‍ನ ಕೊನೇ ಅಧ್ಯಕ್ಷ ಎಂದು ಗುರುತಿಸಬಹುದು.  ಆಗ ಇಂದಿರಾಗಾಂಧಿ ಕಾಂಗ್ರೆಸ್ (ಆರ್) ರಚಿಸಿದರೆ, ಸ್ವತಃನಿಜಲಿಂಗಪ್ಪ, ನೀಲಂಸಂಜೀವರೆಡ್ಡಿ, ಕಾಮರಾಜ್ ಹಾಗೂ ಮುರಾರ್ಜಿ ದೇಸಾಯಿ ಮೊದಲಾದವರಿದ್ದ ಕಾಂಗ್ರೆಸ್ (ಓ) ಸೃಷ್ಟಿಯಾಯಿತು. ಮುಂದೆ ಕಾಂಗ್ರೆಸ್ (ಆರ್) ಕಾಂಗ್ರೆಸ್ (ಐ) ಆಗಿ ನಂತರ ಅದೇ ಇಂಡಿಯನ್‌  ರಾಷ್ಟ್ರೀಯ ಕಾಂಗ್ರೆಸ್ ಆಗಿ ಉಳಿದು ಬಂದಿದೆ.
51 ವರ‍್ಷಗಳಿಂದ ಇತ್ತೀಚಿನ ಒಂದು ಅವಧಿ ಬಿಟ್ಟು ನಿರಂತರ 9 ಸಲ ವಿಧಾನ ಸಭೆಗೆ ಹಾಗೂ ಎರಡು ಸಲ ಲೋಕಸಭೆಗೆ ಚುನಾಯಿತರಾಗುತ್ತ, ಕಾಂಗ್ರೆಸ್‍ನ ಕಡು ನಿಷ್ಟ ಮುಖಂಡರಾಗಿ ಬೆಳೆದು ಬಂದಿರುವ ಮಲ್ಲಿಕಾರ್ಹುನ ಖರ‍್ಗೆ ಅತ್ಯಂತ ಕಷ್ಟದ ದಿನಗಳಲ್ಲಿ ಆ ಪಕ್ಷದ ಅಧ್ಯಕ್ಷರಾಗಿದ್ದಾರೆ. 


ಕಾಂಗ್ರೆಸ್ ಎಂದರೆ ನೆಹರೂ-ಗಾಂಧಿ ಕುಟುಂಬ ಎಂದಿದ್ದರೂ, 1947ರಿಂದೀಚೆಗೆ ಜವಹರಲಾಲ್‌ ನೆಹರೂ  1951-52, 53 ಹಾಗೂ 54ರಲ್ಲಿ ಮೂರು ಸಲ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು, ನಂತರ ಇಂದಿರಾ ಗಾಂಧಿ 1959ರಲ್ಲಿ ಒಂದು ಸಲ ಹಾಗೂ 1978-83ರವರೆಗೆ ಅಲ್ಲದೇ ರಾಜೀವಗಾಂಧಿ 1985-91ರವರೆಗೆ ಎಐಸಿಸಿ ಅಧ್ಯಕ್ಷರಾಗಿದ್ದರು. 1998ರಿಂದ 2017ರವರೆಗೆ ಹಾಗೂ 2019ರಿಂದ ಈವರೆಗೆ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, 2017-19ರ ಅವಧಿಯಲ್ಲಿ ಅವರ ಮಗ ರಾಹುಲ್ ಗಾಂಧಿ ಅಧ್ಯಕ್ಷರಾಗಿದ್ದರು. ಈ ಸಲದ ಚುನಾವಣೆ ಅತ್ಯಂತ ಮುಕ್ತ, ನ್ಯಾಯ ಸಮ್ಮತ ಹಾಗೂ ಪಾರದರ್ಶಕವಾಗಿತ್ತು ಎಂದು ಮಿಸ್ತ್ರಿ ಬಣ್ಣಿಸಿದ್ದಾರೆ.


ಆದರೆ ಖರ‍್ಗೆಯವರು ಕಾಂಗ್ರೆಸ್ ಹೈಕಮಾಂಡ್ ಆಗಿರುವ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಯವರ ಆಯ್ಕೆಯಾಗಿದ್ದರು, ಪಕ್ಷದ ಎಲ್ಲ ಪ್ರತಿನಿಧಿಗಳ ಆಗ್ರಹ ಹಾಗೂ ಬೆಂಬಲದ ಮೇರೆಗೆ ನಾನು ಸ್ಪರ್ಧೆಗಿಳಿದೆ ಎಂದೂ ಖರ‍್ಗೆ ಹೇಳಿದ್ದರು. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಯವರು ಹೈಕಮಾಂಡನ ಅನಧಿಕೃತ ಅಧಿಕೃತ ಅಭ್ಯರ್ಥಿ ಎಂದು ಮಾಧ್ಯಮಗಳು ಬಣ್ಣಿಸಿದ್ದವು.


ಎಐಸಿಸಿ ಚುನಾಯಿತ ಅಧ್ಯಕ್ಷರಾದರೂ ಕಾಂಗ್ರೆಸ್ಕು ಕುಟುಂಬದರ ರಿಮೋಟ್ ಕಂಟ್ರೋಲ್‍ನಲ್ಲಿ ಇರುತ್ತಾರೆ ಎಂಬ ಮಾಧ್ಯಮದ ಮಾತು ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಎಂಬುದನ್ನು ಕಾಲವೇ ಹೇಳಬೇಕು.
ಕಾಂಗ್ರೆಸ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ ಕೆಮಾಡುವ ಮೂಲಕದ ದಲಿತ ಕಾರ್ಡ ಪ್ಲೇ ಮಾಡಿದೆಯೇ ಎಂಬ ಪ್ರಶ್ನೆಯನ್ನೂ ಮಾಧ್ಯಮಗಳು ಎತ್ತಿವೆಯಾದರೂ,  ಎಐಸಿಸಿ ಅಧ್ಯಕ್ಷರಾದವರಲ್ಲಿ ಖರ್ಗೆ ಮೊದಲ ದಲಿತರೇನೂ ಅಲ್ಲ, 1970-71ರಲ್ಲಿ  ಜಗ ಜೀವನರಾಮ್ ಎಐಸಿಸಿ ಅ‍ಧ್ಯಕ್ಷರಾಗಿ ಕಾರ್ಯ ನಿರ‍್ವಹಿಸಿದ್ದಾರೆ. ಇವೆಲ್ಲ ಪ್ರಶ್ನೆಗಳು “ಗಾಂಧಿ ಕುಟುಂಬ ನಿಷ್ಟ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಚುನಾಯಿತರಾದರು,  ಇದು ಫಲಿತಾಂಶ ಮೊದಲೇ ನಿಗದಿಯಾಗಿದ್ದ ಚುನಾವಣೆ” ಎಂಬುದು ಮುಗಿದ ಮೇಲೆ ಟಿವಿ ಆಂಕರ‍್ಗಳ ಕಡೆಯ ಉದ್ಗಾರವಾಗಿದೆ. 


1996ರಲ್ಲಿ ಎಐಸಿಸಿ ಅಧ್ಯಕ್ಷರಾಗಿ ಚುನಾಯಿತರಾದ ಸೀತಾರಾಂ ಕೇಸರಿ ಕಡೇ ಪಕ್ಷ ನಾಮಪತ್ರ ಸಲ್ಲಿಸಲೂ ದಿಲ್ಲಿಯ ಕಾಂಗ್ರೆಸ್ ಹೆಡ್‍ ಕ್ವಾರ್ಟಸ್‌ ಹೋಗಿರಲಿಲ್ಲ. ಮತ್ತು ಮನೆಯಲ್ಲೇ ತನ್ನ ಮುದ್ದಿನ ಪೊಮೇರಿಯನ್ ನಾಯಿಮರಿಗಳ ಮೈಸವರುತ್ತ ಕೂತು ಕೇವಲ ದೂರವಾಣಿಯಲ್ಲೇ ಓಟುಗಳನ್ ಸೆಳೆದು, ಶರದ್‌ ಪವಾರ್‌ ಹಾಗೂ ರಾಜೇಶ್‌ ಪೈಲಟ್ ಈ ಇಬ್ಬರು ನಾಯಕರನ್ನೂ ಚಿತ್ಮಾಡಿದ್ದರು ಎಂದರೆ ಅಚ್ಚರಿ ಎನಿಸುವುದಿಲ್ಲವೇ. ‌


ಏನೆಲ್ಲ ಹೇಳಿದರೂ, ಕಾಂಗ್ರೆಸ್‍ನಲ್ಲಿ ಹೇಳಿ ಕೊಳ್ಳಲಾದರೂ ಆಂತರಿಕ ಪ್ರಜಾಪ್ರಭುತ್ವವಿದೆ. ಸದಸ್ಯತ್ವ ದಾಖಲೆಗಳಿವೆ, ಚುನಾವಣಾಘಟಕವಿದೆ, ಮಧುಸೂಧನ್ಮಿಸ್ತ್ರಿಯಂಥ ರಾಹುಲ್ ಗಾಂಧಿಯಿಂದ ಕಾಂಗ್ರೆಸ್‍ನ ಟಿ.ಎನ್.ಶೇಷನ್ ಎಂದು ಹೊಗಳಿಸಿಕೊಳ್ಳುವ ಘಾಟಿ ಗುಜರಾತಿ ಮುದುಕ ಮಧುಸೂಧನಮಿಸ್ತ್ರಿ ಇದ್ದಾರೆ. ವಿಶೇಷವೆಂದರೆ, ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಗಾದಿ ತನಗೆ ಬೇಡವೆಂದು ಖಡಾಖಂಡಿತವಾಗಿ ನಿರಾಕರಿಸಿದ ಪರಿಣಾಮವಾಗಿಯೇ ಈ ಚುನಾವಣೆ ನಡೆದದ್ದು. ಸದ್ಯ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಆಂಧ್ರಪ್ರದೇಶದಲ್ಲಿ ಇವತ್ತು ಸುದ್ದಿ ಗೋಷ್ಟಿಯಲ್ಲಿ, ರಾಹುಲ್ ಗಾಂಧಿ ಅತ್ತ ದಿಲ್ಲಿಯಲ್ಲಿ ಮಧುಸೂಧನ ಮಿಸ್ತ್ರಿ ಚುನಾವಣಾ ಫಲಿತಾಂಶ ಘೋಷಿಸುವ ಒಂದು ಗಂಟೆ ಮೊದಲೇ, “ಕಾಂಗ್ರೆಸ್‍ನಲ್ಲಿ ನನ್ನ ಸ್ಥಾನ ಏನೆಂಬುದನ್ನು ಎಐಸಿಸಿ ಅಧ್ಯಕ್ಷ ಖರ್ಗೆನಿರ್ಧರಿಸುತ್ತಾರೆ” ಎಂದು ಹೇಳುವ ಮೂಲಕ ಈ ಚುನಾವಣೆ ಪೂರ್ವನಿರ್ಧರಿತ ಎಂಬುದಕ್ಕೆ ಸಾಕ್ಷಿಯಾಗಿ ಬಿಟ್ಟರೇ.  ಎನಿಹೌ “ಆಲ್ ಈಸ್ ಫೇರ್‌ ಇನ್‌ ಲವ್ ಅಂಡ್‌ ವಾರ್”