‘ಸ್ಮಾರ್ಟ್ ಸಿಟಿ: ‘ಅಳಿಯನ ಕುರುಡು ಬೆಳಗಾಗುವ ಮೊದಲೇ’ !?

‘ಸ್ಮಾರ್ಟ್ ಸಿಟಿ: ‘ಅಳಿಯನ ಕುರುಡು ಬೆಳಗಾಗುವ ಮೊದಲೇ’ !?

‘ಸ್ಮಾರ್ಟ್ ಸಿಟಿ: ‘ಅಳಿಯನ ಕುರುಡು  ಬೆಳಗಾಗುವ ಮೊದಲೇ’ !?

‘ಸ್ಮಾರ್ಟ್ ಸಿಟಿ: ‘ಅಳಿಯನ ಕುರುಡು

ಬೆಳಗಾಗುವ ಮೊದಲೇ’ !?

ನಮ್ಮ ತುಮಕೂರು ಮಹಾನಗರದಲ್ಲಿ  ಕೆಲ ವರ್ಷಗಳಿಂದ ಅಸ್ತಿತ್ವದಲ್ಲಿರುವ ಸ್ಮಾರ್ಟ್ ಸಿಟಿ ಕಂಪನಿ ಲಿಮಿಟೆಡ್‍ನ ಕಾರ್ಯಾವಧಿ 2023ರ ಜುಲೈ ತಿಂಗಳಿಗೆ ಅಂತ್ಯಗೊಳ್ಳುತ್ತಿದೆ ಎಂದು ಕಳೆದ ವಾರ ಪ್ರೆಸ್ ಕ್ಲಬ್ ಸಮಾರಂಭದಲ್ಲಿ ಭೇಟಿಯಾಗಿದ್ದ ಸ್ಮಾರ್ಟ್ ಸಿಟಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ತಿಳಿಸಿದರು. ಪಾಪ ಅವರ ಅದೃಷ್ಟವೋ ದುರಾದೃಷ್ಟವೋ ಗೊತ್ತಿಲ್ಲ, ಅವರ ಕಣ್ಣೆದುರೇ ಅವರು ಮಾಡಿರುವ ಕಾಮಗಾರಿಗಳೆಲ್ಲ ಕಳಪೆ ಎಂಬುದು ಸಾಬೀತಾಗತೊಡಗಿವೆ. ಅಳಿಯನ ಕುರುಡು ಬೆಳಗಾದಾಗ ಎಂಬ ಗಾದೆಯನ್ನು ತುಸು ಬದಲಿಸಿ ಅಳಿಯನ ಕುರುಡು ಬೆಳಗಾಗುವ ಮೊದಲೇ ಎಂದು ಓದಿಕೊಳ್ಳಿ.

1

ಫುಟ್ ಪಾತ್ ನುಂಗಿದ ಪೊಲೀಸ್ ಠಾಣೆ !?

ಡಿಸಿಸಿ ಬ್ಯಾಂಕ್ ಪಕ್ಕ ಮರುನಿರ್ಮಾಣಗೊಳ್ಳುತ್ತಿರುವ ನಗರ ಪೊಲೀಸ್ ಠಾಣೆಯ ಆವರಣದ ಗೋಡೆಯನ್ನು ಫುಟ್ ಪಾತ್ ಅನ್ನೂ ಸೇರಿಸಿ ನಿರ್ಮಿಸಲಾಗುತ್ತಿದೆ. ಮೊದಲೇ ನಮ್ಮೂರಿನಲ್ಲಿ ಪಾದಚಾರಿಗಳಿಗೆ ಹಾದಿಯೇ ಇಲ್ಲ. ಇದ್ದೊಂದು ಫುಟ್ ಪಾತನ್ನೂ ಹೀಗೆ ಅತಿಕ್ರಮಿಸಿಕೊಂಡರೆ ಹೇಗೆ, ಗುಂಚಿ ವೃತ್ತದಿಂದ ಸಾಗುವಾಗ ವಿಸ್ತಾರವಾದ ಎರಡು ಹಂತದ ಫುಟ್ ಪಾತ್ ನಿರ್ಮಿಸಲಾಗಿದೆ, ನಗರ ಠಾಣೆಯೂ ಅಷ್ಟೇ ಸ್ಥಳಾವಕಾಶ ಬಿಟ್ಟರೆ ಮುಂದೆ ಡಿಸಿಸಿ ಬ್ಯಾಂಕ್ ಹಾಗೂ ಮೈಸೂರು ಬ್ಯಾಂಕ್ ಸಾರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ಮೂರಡಿ ತೆರವು ಮಾಡಿಕೊಡಲು ಅನುವಾಗುತ್ತದೆ ಅಲ್ವಾ.

ಕೋಲಾರದಲ್ಲೇ ಯಶಸ್ವಿಯಾಗಿ ಆಡಳಿತ ಮಾಡಿ ಬಂದ ನಾನು ತುಮಕೂರಿನಲ್ಲಿ ಯಾರಿಗೂ ಹೆದರುವುದಿಲ್ಲ ಎನ್ನುವ ಮಹಾನಗರ ಪಾಲಿಕೆ ಆಯುಕ್ತರು ಇತ್ತ ಗಮನ ಹರಿಸಿ ಕ್ರಮ ಜರುಗಿಸಲೆಂದು ‘ ಬೆವರ ಹನಿ’ ಆಗ್ರಹಪಡಿಸಿದೆ.

2

ಈ ಮೋಟು ಗೋಡೆ ರಹಸ್ಯವೇನು?

ಅದೇ ಡಿಸಿಸಿ ಬ್ಯಾಂಕ್ ರಸ್ತೆಯಲ್ಲಿ ಗುಂಚಿ ಚೌಕದ ಕಡೆ ನಡೆಯಿರಿ, ಇನ್ನೇನು ಹಳೇ ಜಟಕಾ ಸ್ಟಾಂಡ್ ಹತ್ತಿರ ಬರುವ ಹೊತ್ತಿಗೆ ಎರಡು ಹಂತದ ಫುಟ್ ಪಾತ್ ಮಾಯವಾಗಿ ಧುತ್ತೆಂದು ಮೋಟು ಗೋಡೆಯೊಂದು ಅಡ್ಡ ಬಂದು ನಿಂತು ಬಿಡುತ್ತದೆ, ಈ ಗೋಡೆಯನ್ನೇ ಮರೆ ಮಾಡಿಕೊಂಡು ಹತ್ತೂ ಬೆರಳುಗಳಿಗೆ ಬೆಳ್ಳಿ ಉಂಗುರಗಳನ್ನು ಪೋಣಿಸಿಕೊಂಡ ಪೋಕರಿಯೊಬ್ಬಪಗಡಿ, ಬಾಡಿಗೆ ಎರಡೂ ಇಲ್ಲದೇ ಬೊಂಬಾಟ್ ಅಂಗಡಿಯೊಂದನ್ನು ನಡೆಸುತ್ತಿದ್ದಾನೆ.

ಈ ಮೋಟು ಗೋಡೆಯನ್ನು ಕೆಡವಬೇಡಿ ಎಂದು ನಮ್ಮ ಮಹಾನಗರ ಪಾಲಿಕೆ ಅಥವಾ ಸ್ಮಾರ್ಟ್ ಸಿಟಿ ಕಂಪನಿಗೆ ತಾಕೀತು ಮಾಡಿರುವ ಭೂಪತಿ ಅದ್ಯಾರು ಸ್ವಾಮಿ ಅಂತ ಕೇಳಬೇಡವೇ.

3

ಇನ್ನೇನು ಈಗಲೋ ಆಗಲೋ….,

ಅಲ್ಲೇ ಮೇಲೆ ಹೇಳಿದ ಮೋಟು ಗೋಡೆಯ ಹತ್ತಿರವೇ ಇನ್ನೇನು ಈಗಲೋ ಆಗಲೋ ಬೀಳುವಂತಿದೆ ಈ ಲೈಟು ಕಂಬ. ಬಿದ್ದ ಮೇಲೆ ಎತ್ತಿದರಾಯಿತು ಅನ್ನುತ್ತೀರೋ, ಯಾರ ಮೇಲಾದರೂ ಬಿದ್ದು ಜೀವ ಹೋದ ಮೇಲೆ ಎತ್ತುವುದು ಇದ್ದೇ ಇರುತ್ತದೆ ಅಲ್ವಾ,ನೋ ಆಸ್ಕರ್, ನೋ ಟೆಲ್ಲರ್‍, ಇದು ನಮ್ಮ ತುಮಕೂರು.

4

ನಾವೇ ಬೇರೆ ,ನಮ್ಮ ಸ್ಟೈಲೇ ಬೇರೆ..,

ಅಂತಾರೆ ಸ್ಮಾರ್ಟ್ ಸಿಟಿ ಇಂಜಿನಿಯರ್‍ ಗಳು

ಎಲ್ಲೂ ದೂರ  ಹೋಗಬೇಡಿ, ಅದೇ ಡಿಸಿಸಿ ಬ್ಯಾಂಕ್ ರಸ್ತೆಯಲ್ಲಿ ಓಎಂಎಸ್( ಓಲ್ಡ್ ಮಿಡ್ಲ್ ಸ್ಕೂಲ್) ಬಿಇಓ ಕಚೇರಿ ಎದುರು ನಮ್ಮ ಸ್ಮಾರ್ಟ್ ಸಿಟಿ ಕಂಪನಿ ವಿಶೇಷವಾಗಿ ಆರ್ಡರ್ ಕೊಟ್ಟುಮಾಡಿಸಿರುವ ಡಕ್ಟ್ ನೋಡಿ, ಅರ್ಧ ರಸ್ತೆಯೊಳಗೆ ಇನ್ನರ್ಧ ಫುಟ್ ಪಾತ್ ನೊಳಗೆ , ಜೊತೆಗೆ ಐಸ್ ಕ್ರೀಮ್ ಮೇಲೆ ಡಿಸೈನಾಗಿ ಗಾರ್ನಿಷ್ ಮಾಡ್ತಾರಲ್ಲ ಹಂಗೆ ಕೆಂಪು ಪೈಪು ಬೇರೆ, ಜೊತೆಗೊಂದು ಕಪ್ಪು ಕೇಬಲ್, ಆಹಾ, ವಿಶ್ವ ಆರ್ಥಿಕ ಸಮ್ಮೇಳನಕ್ಕೆ ಅಂತ ಸ್ವೀಡನ್‍ಗೆ ಹೋಗಿರುವ ನಮ್ಮ ಕಾಮನ್ ಮ್ಯಾನ್ ಸಿಎಂಗೇನಾರ ಆ ದೇಶದಲ್ಲಿ ಇಂತಾ ಡಿಸೈನ್ ಕಂಡರೆ ಹೇಳಿ ಅಂತ ಛಾಲೆಂಜ್ ಮಾಡುತ್ತಾರೆ ಈ ಸ್ಮಾರ್ಟ್ ಸಿಟಿ ಇಂಜಿನಿಯರ್ ಗಳು.