ಮೇಲ್ಮನೆ ಚುನಾವಣೆ: ಎಲ್ಲೆಡೆ ಶಾಂತಿಯುತ ಮತದಾನ ಮತಪೆಟ್ಟಿಗೆ ಸೇರಿದ 90 ಅಭ್ಯರ್ಥಿಗಳ ಭವಿಷ್ಯ, 14ರಂದು ಫಲಿತಾಂಶ ಪ್ರಕಟ
ಶಾಂತಿಯುತ ಮತದಾನ ಮತಪೆಟ್ಟಿಗೆ ಸೇರಿದ 90 ಅಭ್ಯರ್ಥಿಗಳ ಭವಿಷ್ಯ, 14ರಂದು ಫಲಿತಾಂಶ ಪ್ರಕಟ
ಮೇಲ್ಮನೆ ಚುನಾವಣೆ: ಎಲ್ಲೆಡೆ ಶಾಂತಿಯುತ ಮತದಾನ
ಮತಪೆಟ್ಟಿಗೆ ಸೇರಿದ 90 ಅಭ್ಯರ್ಥಿಗಳ ಭವಿಷ್ಯ, 14ರಂದು ಫಲಿತಾಂಶ ಪ್ರಕಟ
ಬೆಂಗಳೂರು: ರಾಜ್ಯದ ವಿಧಾನ ಪರಿಷತ್‌ನ 25 ಕ್ಷೇತ್ರಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಭರ್ಜರಿ ಮತದಾನವಾಗಿರುವುದು ಕಂಡುಬAದಿದೆ. ಎಲ್ಲೆಡೆ ಮತದಾನ ಬಹುತೇಕ ಶಾಂತಿಯುತವಾಗಿತ್ತು.
ವಿಧಾನಪರಿಷತ್ ಸಭಾನಾಯಕ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿ ಮಠ್, ಕೆ.ಎನ್. ರಾಜಣ್ಣ ಅವರ ಪುತ್ರ ಆರ್. ರಾಜೇಂದ್ರ, ಡಿ.ಕೆ. ಶಿವಕುಮಾರ್ ಸಂಬAಧಿ ಎಸ್. ರವಿ, ಕೋಲಾರ ಜಿಲ್ಲೆಯ ವಕ್ಕಲೇರಿ ರಾಮು, ಬಳ್ಳಾರಿಯ ಕೆ.ಸಿ. ಕೊಂಡಯ್ಯ
ಸೇರಿದAತೆ ಒಟ್ಟು 90 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಯಿತು.
ಬೀದರ್, ಗುಲ್ಬರ್ಗಾ, ಬಿಜಾಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು, ಮೈಸೂರು ಕ್ಷೇತ್ರಗಳಲ್ಲಿ ಮತದಾನ ನಡೆಯಿತು.
ಸಂಸದರು, ಶಾಸಕರು, ಮಹಾನಗರ ಪಾಲಿಕೆ ಸದಸ್ಯರು, ಪುರಸಭೆ, ನಗರಸಭೆ, ಗ್ರಾಪಂ ಸದಸ್ಯರು ತಮ್ಮ ಮತಗಟ್ಟೆಗಳಿಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಬೆಳಗ್ಗೆಯೇ ಮತದಾನ ಮಾಡಿದರು. ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ ಸೇರಿದಂತೆ ಒಟ್ಟು 98,846 ಮತದಾರರಿದ್ದು, 6073 ಮತಗಟ್ಟೆಗಳಲ್ಲಿ ಬೆಳಗ್ಗೆ 8 ರಿಂದ ಮತದಾನ ಆರಂಭವಾಗಿದೆ.
ಬೆಳಗ್ಗೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕರು, ಸಂಸದರು, ಸಚಿವರು ಸೇರಿದಂತೆ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಪಂ ಸದಸ್ಯರು ಮತದಾನ ಮಾಡಿದರು.
ಬಸವರಾಜ ಬೊಮ್ಮಾಯಿ ಶಿಗ್ಗಾಂವ್ ತಾಲ್ಲೂಕಿನ ಮತಗಟ್ಟೆ 297ರಲ್ಲಿ ಮತ ಚಲಾಯಿಸಿದರು. ಯಡಿಯೂರಪ್ಪ ಅವರು ಶಿಕಾರಪುರದ ಪುರಸಭೆಯಲ್ಲಿ ಮತದಾನ ಮಾಡಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಮತ ಚಲಾಯಿಸಿದರೆ, ಶಾಸಕಿ ಅನಿತಾ ಕುಮಾರಸ್ವಾಮಿ ಅವರು ರಾಮನಗರದಲ್ಲಿ ಮತ ಚಲಾವಣೆ ಮಾಡಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇವರುಗಳು ಹುಬ್ಬಳ್ಳಿಯಲ್ಲಿ ಮತ ಹಾಕಿದರೆ, ಸಚಿವ ಕೆ.ಎಸ್. ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಮತ ಚಲಾಯಿಸುವ ಮೊದಲು ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರುಗಳ ಜತೆ ಶಿವಮೊಗ್ಗದಲ್ಲಿ ಮತ ಚಲಾಯಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು ಅವರು ಮಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕನಕಪುರದಲ್ಲಿ ಮತ ಚಲಾಯಿಸಿದರು. ದಾವಣಗೆರೆಯಲ್ಲಿ ಶಾಸಕ ಶ್ಯಾಮನೂರು ಶಿವಶಂಕರಪ್ಪ, ಸಂಸದ ಬಿ.ಎಂ. ಸಿದ್ದೇಶ್ ಮತ ಹಾಕಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿವರ ಸಹೋದರ ಲಖನ್ ಜಾರಕಿಹೊಳಿ ಅವರ ಸ್ಪರ್ಧೆಯಿಂದ ಜಿದ್ದಾಜಿದ್ದಿಯ ಅಖಾಡವಾಗಿ ಮಾರ್ಪಟ್ಟಿರುವ ಬೆಳಗಾವಿ ದ್ವಿಸದಸ್ಯ ಕ್ಷೇತ್ರದಲ್ಲೂ ಬಿರುಸಿನ ಮತದಾನ ನಡೆಯಿತು. ಬಿಜೆಪಿ ಅಭ್ಯರ್ಥಿ ಮಹಂತೇಶ ಕವಟಗಿ ಮಠ ಚಿಕ್ಕೋಡಿಯ ರವಿವಾರ ಪೇಟೆಯಲ್ಲಿರುವ ದುರದಡೇಶ್ವರ ಮಠಕ್ಕೆ ತೆರಳಿ ಬಳಿಕ ಹಾಲತ್ತಿ ಲಕ್ಷಿ÷್ಮ ದೇವರ ಆಶೀರ್ವಾದ ಪಡೆದುಕೊಂಡರು. ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ತಮ್ಮ ಅಣ್ಣ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರ ಗೋಕಾಕ್ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದ್ದರು. ಧಾರವಾಡ ದ್ವಿಸದಸ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹಮದ್ ಅವರು ಹಾವೇರಿಯ ಮತಗಟ್ಟೆಗಳಿಗೆ ಭೇಟಿ ನೀಡಿ ಮತ ಗಟ್ಟೆಯ ವ್ಯವಸ್ಥೆಗಳನ್ನು ಅವಲೋಕಿಸಿದರು.
ಪ್ರತಿ ಗ್ರಾಪಂನಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಯಾವುದೇ ಮತಗಳು ಅಸಿಂಧುವಾಗದಂತೆ ಪಕ್ಷದ ಕಾರ್ಯಕರ್ತರುಗಳು ಮತದಾರರಿಗೆ ಜಾಗೃತಿ ಮೂಡಿಸಿದರು. ಪ್ರಥಮ ಪ್ರಾಶಸ್ಯ್ದದ ಮತವನ್ನು ನೀಡಬೇಕು. ತಮ್ಮ ಅಭ್ಯರ್ಥಿ ಮುಂದೆ ಒಂದು ಗೆರೆ ಎಳೆಯಬೇಕು ಎಂದು ಮತಗಟ್ಟೆಗೆ ಹೋಗುವವರೆಗೂ ಜಾಗೃತಿ ಮೂಡಿಸುತ್ತಿದ್ದುದು ಕಂಡುಬಂತು.
ಈ ಹಿಂದೆ ನಡೆದ ಚುನಾವಣೆಗಳಿಗಿಂತ ಈ ಬಾರಿಯ ಚುನಾವಣೆಗೆ ಎಲ್ಲಿಲ್ಲದ ಖದರ್ ಬಂದಿತ್ತು. ಭಾರೀ ಹಣ, ಉಡುಗೊರೆಗಳ ಹಂಚಿಕೆ ವ್ಯಾಪಕವಾಗಿ ನಡೆದಿತ್ತು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳವರು ಪೈಪೋಟಿಗೆ ಬಿದ್ದವರಂತೆ ಮತದಾರರನ್ನು ಸೆಳೆಯಲು ಲಕ್ಷಗಟ್ಟಲೆ ಹಣ, ಸೀರೆ, ಪಂಚೆ, ಒಡವೆಗಳನ್ನು ನೀಡಿದ್ದು ಗುಟ್ಟಾಗೇನೂ ಉಳಿದಿಲ್ಲ. ಅಲ್ಲದೆ, ಮತಗಳನ್ನು ಖಚಿತಪಡಿಸಿಕೊಳ್ಳಲು ಆಣೆ, ಪ್ರಮಾಣಗಳನ್ನೂ ಮಾಡಿಸಿಕೊಂಡಿದ್ದರು.
ಇದಲ್ಲದೆ, ಹಣ ಪಡೆದ ಬೆಂಬಲಿತ ಸದಸ್ಯರು ಕೊನೆ ಕ್ಷಣದಲ್ಲಿ ಮನಸ್ಸು ಬದಲಾಯಿಸಿ ಬೇರೆಯವರಿಗೆ ಮತ ಹಾಕಿ ಬಿಡಬಹುದು ಎಂಬ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳ ಹಿಂದೆ ಹಲವು ಕಡೆ ಸದಸ್ಯರನ್ನು ಪ್ರವಾಸದ ನೆಪದಲ್ಲಿ ಹೊಟೇಲ್, ತೋಟದ ಮನೆಗಳಿಗೆ ಕರೆದುಕೊಂಡು ಹೋಗಿ ಇಡಲಾಗಿತ್ತು. ಶುಕ್ರವಾರ ಮತದಾನದ ವೇಳೆ ಅವರನ್ನು ನೇರ ಮತಗಟ್ಟೆಗೆ ಕರೆದುಕೊಂಡು ಬಂದು ಮತ ಹಾಕಿಸುವ ವ್ಯವಸ್ಥೆಯನ್ನು ಹಲವೆಡೆ ಮಾಡಲಾಗಿತ್ತು.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಚಿಕ್ಕಮಗಳೂರು, ಆನೇಕಲ್ ಮುಂತಾದ ಕಡೆ ಸದಸ್ಯರನ್ನು ಬೇರೆಡೆಯಿಂದ ಕರೆತಂದು ಮತದಾನ ಮಾಡಿಸುತ್ತಿದ್ದುದು ಕಂಡುಬಂತು.
ಮAಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಮತದಾನದ ಆರಂಭದ ಸಂದರ್ಭದಲ್ಲಿ ಮತದಾರರು ನನ್ನ ಕೈಬಿಡಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತು ತಮ್ಮ ಒಂದು ವರ್ಷದ ಹೋರಾಟ ನೀರಿನಲ್ಲಿ ಹೋಮ ಮಾಡಿದಂತೆ ವ್ಯರ್ಥವಾಗಬಾರದು ಎಂದು ಕಣ್ಣೀರು ಹಾಕುತ್ತ ಹೇಳಿದ್ದಾರೆ.
ಬೊಮ್ಮನಹಳ್ಳಿ ಪುರಸಭೆ ಸದಸ್ಯರೊಬ್ಬರು ಆ್ಯಂಬುಲೆನ್ಸ್ನಲ್ಲಿ ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು. ಹುಷಾರಿಲ್ಲದೆ ಆಸ್ಪತ್ರೆಗೆ ದಾಖಲಾಗಿದ್ದ ನಜ್ಮಾ ಫಾರೂಖ್ ಅವರು ಶುಕ್ರವಾರ ಬೆಳಗ್ಗೆ ನೇರವಾಗಿ ಆ್ಯಂಬುಲೆನ್ಸ್ನಲ್ಲಿ ನೇರವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿದರು.