ಎಲ್ಲ ಮೇಲ್ಜಾತಿ ಸಮುದಾಯಗಳಲ್ಲೂ ಈ ಘಟನೆ ಜಾಗೃತಿ ಮೂಡಿಸಬೇಕಿದೆ ನಾ ದಿವಾಕರ
ಎಲ್ಲ ಮೇಲ್ಜಾತಿ ಸಮುದಾಯಗಳಲ್ಲೂ ಈ ಘಟನೆ
ಜಾಗೃತಿ ಮೂಡಿಸಬೇಕಿದೆ
ನಾ ದಿವಾಕರ
ರೈತರು ಕಳೆದ ಹತ್ತು ತಿಂಗಳಿನಿಂದ, ತಮ್ಮ ಬಾಂಧವರನ್ನೇ ಕಳೆದುಕೊಂಡರೂ ಲೆಕ್ಕಿಸದೆ, ಚಳಿ ಮಳೆ ಗಾಳಿ ಲೆಕ್ಕಿಸದೆ, ಪೊಲೀಸರ ಲಾಠಿ ಏಟಿಗೆ ಜಗ್ಗದೆ, ರ‍್ಕಾರಗಳ ದಮನಕಾರಿ ಕ್ರಮಗಳಿಗೆ ಬಗ್ಗದೆ, ಸಮಸ್ತ ಕೃಷಿಕ ಸಮುದಾಯದ ಹಿತದೃಷ್ಟಿಯಿಂದ ಶಾಂತಿಯುತ ಮುಷ್ಕರ ನಡೆಸುತ್ತಿದ್ದಾರೆ. ಈ ಮುಷ್ಕರವನ್ನು ಹತ್ತಿಕ್ಕಲು, ರೈತರ ನಡುವೆ ಒಡಕು ಉಂಟು ಮಾಡಲು ಪ್ರಭುತ್ವ ಎಲ್ಲ ರೀತಿಯ ಅಸ್ತ್ರಗಳನ್ನೂ ಪ್ರಯೋಗಿಸಿದ್ದೂ ಆಗಿದೆ. ಕರಾಳ ಕೃಷಿ ಕಾಯ್ದೆಗಳು ರದ್ದಾಗುವವರೆಗೂ ಮುಷ್ಕರ ನಿಲ್ಲದು ಎಂದು ರೈತ ಮುಖಂಡರು ಘೋಷಿಸಿದ್ದಾರೆ.
ಇತಿಹಾಸ ಕಂಡರಿಯದ ಇಂತಹ ಜನಾಂದೋಲನವನ್ನು ಭಂಗಗೊಳಿಸಲು ಪ್ರಭುತ್ವಕ್ಕಿಂತಲೂ, ಸ್ಥಾಪಿತ ಶೋಷಕ ವ್ಯವಸ್ಥೆಯ ಪರ ಇರುವ ಹಿತಾಸಕ್ತಿಗಳು ತುದಿಗಾಲಲ್ಲಿ ನಿಂತಿರುತ್ತವೆ. ಹೋರಾಟಗಳಲ್ಲಿ ಒಳಗಿನ ಶತ್ರುಗಳನ್ನು ಸೃಷ್ಟಿಸುವ ಮೂಲಕ ಹೋರಾಟಗಾರರ ಐಕ್ಯತೆಗೆ, ಹೋರಾಟದ ಮರ‍್ಗಕ್ಕೆ ಭಂಗ ತರುವ ಪ್ರಯತ್ನಗಳೂ ಈ ಒಳಗಣ ಶತ್ರುಗಳಿಂದಲೇ ನಡೆಯುತ್ತವೆ. ಎಲ್ಲ ಜನಾಂದೋಲನಗಳೂ ಎದುರಿಸುವ ಸಮಸ್ಯೆ ಇದು. ಬಹುಶಃ ರೈತ ಮುಷ್ಕರವನ್ನು ಹತ್ತಿಕ್ಕಲು ವಿಫಲವಾಗುತ್ತಿರುವ ಸ್ಥಾಪಿತ ಹಿತಾಸಕ್ತಿಗಳಿಗೆ ಇಂತಹ ಹಿತಶತ್ರುಗಳು ನೆರವಾಗುತ್ತಾರೆ.
ಸಿಂಘು ಗಡಿಯಲ್ಲಿ ರೈತ ಮುಷ್ಕರದ ನಡುವೆಯೇ, ಲಖ್ಬೀರ್ ಸಿಂಗ್ ಎಂಬ, ರವಿದಾಸ ಪರಂಪರೆಗೆ ಸೇರಿದ ದಲಿತ ವ್ಯಕ್ತಿಯೊಬ್ಬನನ್ನು, ನಿಹಾಂಗ್ ಪಂಥದ ಕೆಲವು ಮತಾಂಧರು, ಆತ ಪವಿತ್ರ ಗ್ರಂಥವನ್ನು ಹಿಡಿದಿದ್ದನೆಂಬ ಕಾರಣಕ್ಕೆ ಭೀಕರ ಹತ್ಯೆ ಮಾಡಿದ್ದಾರೆ. ಇದು ಖಂಡನೀಯ, ಅಕ್ಷಮ್ಯ ಮತ್ತು ಯಾವುದೇ ಸಂವೇದನಾಶೀಲ ಮನಸು ಒಪ್ಪಲಾಗದ ಹೀನ ಕೃತ್ಯ. ಹತ್ಯೆ ಮಾಡಿದ ವ್ಯಕ್ತಿ ಹೆಮ್ಮೆಯಿಂದ ತಪ್ಪೊಪ್ಪಿಕೊಂಡು ಶರಣಾಗತನಾಗಿದ್ದಾನೆ. ಜಾತಿ ಶ್ರೇಷ್ಠತೆಯ ಅಹಮಿಕೆ ಮತ್ತು ಮೇಲ್ಜಾತಿ ಮನಸ್ಥಿತಿಯ ಪಾರಮ್ಯವೇ ಈ ರ‍್ಬರ ಹತ್ಯೆಗೆ ಕಾರಣ ಎನ್ನುವುದು ಸ್ಪಷ್ಟ.
ರೈತ ಮುಷ್ಕರದ ಮುಖಂಡರು ತಮಗೂ ಹತ್ಯೆಗೂ ಸಂಬಂಧವಿಲ್ಲ ಎಂದು ಸ್ಪಷ್ಟೀಕರಣ ನೀಡಿರುವುದೇ ಅಲ್ಲದೆ, ಈ ಘಟನೆಯ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಮುಷ್ಕರನಿರತರಾಗಿರುವ ಸಿಖ್ ಸಮುದಾಯ ತನ್ನ ನೈತಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲೂ ಆಗುವುದಿಲ್ಲ. ಆದರೆ ಈ ಘಟನೆಗೆ ಇಡೀ ರೈತಮುಷ್ಕರವನ್ನೇ ಹೊಣೆ ಮಾಡುವುದು ಅಪಚಾರವಾಗುತ್ತದೆ. ದಲಿತ ವ್ಯಕ್ತಿಯ ರ‍್ಬರ ಹತ್ಯೆ ಸಹಜವಾಗಿಯೇ ಜಾತಿ ದರ‍್ಜನ್ಯದ ಪರಿಭಾಷೆಯಲ್ಲಿ ರ‍್ಚೆಗೊಳಗಾಗುತ್ತದೆ. ಇದು ಕಟು ವಾಸ್ತವ. ಲಖ್ಬೀರ್ ಸಿಂಗ್ ದಲಿತ ಎಂಬ ಕಾರಣಕ್ಕಾಗಿಯೇ ಹತ್ಯೆಗೀಡಾಗಿರುವುದೂ ಕಟು ಸತ್ಯ. ಆದರೆ ರೈತ ಮುಷ್ಕರದ ಧ್ಯೇಯೋದ್ದೇಶಗಳ ವ್ಯಾಪ್ತಿ ದಲಿತ-ದಲಿತೇತರ, ಭೂಸಹಿತ- ಭೂರಹಿತ ರೈತಾಪಿಯನ್ನೂ ಮೀರಿರುವುದಾಗಿದೆ.
ಈ ಘಟನೆಗೆ ಜಾತಿ ಲೇಪನ ಪ್ರತ್ಯೇಕವಾಗಿ ನೀಡಬೇಕಿಲ್ಲ. ಜಾತಿಯ ನೆಲೆಯಲ್ಲೇ ಸಂಭವಿಸಿರುವ ಅಮಾನುಷ ಕೃತ್ಯ ಇದು. ಆದರೆ ಈ ಕಾರಣಕ್ಕಾಗಿ ರೈತಮುಷ್ಕರದ ಔಚಿತ್ಯವಾಗಲೀ, ಉದ್ದೇಶವಾಗಲೀ ಪ್ರಶ್ನರ‍್ಹವಾಗಕೂಡದು. ಇಡೀ ಮುಷ್ಕರವನ್ನು ದಲಿತ ಪರ - ದಲಿತ ವಿರೋಧಿ ಎಂದು ವಿಂಗಡಿಸುವುದರಿಂದ, ಈ ಮುಷ್ಕರದ ವೈಫಲ್ಯವನ್ನು ಎದುರುನೋಡುತ್ತಿರುವ ವ್ಯವಸ್ಥೆಯ ಪರ ಇರುವ ಹಿತಾಸಕ್ತಿಗಳಿಗೆ ಮತ್ತಷ್ಟು ನೈತಿಕ ಬಲ ನೀಡಿದಂತಾಗುತ್ತದೆ. ರೈತ ಮುಷ್ಕರದಲ್ಲಿ ನಿರತರಾಗಿರುವವರ ನಡುವೆ ಜಾತಿ ಪ್ರಜ್ಞೆ ಜೀವಂತವಾಗಿರುವಷ್ಟೇ ಊಳಿಗಮಾನ್ಯ ಧೋರಣೆಯೂ ಇದೆ, ಬಂಡವಾಳಶಾಹಿ ಪ್ರವೃತ್ತಿಯೂ ಇದೆ, ಮತಾಂಧತೆಯೂ ಇದ್ದರೆ ಅಚ್ಚರಿಯೇನಲ್ಲ. ಏಕೆಂದರೆ ರೈತ ಸಮುದಾಯವೂ ಭಾರತೀಯ ಶ್ರೇಣೀಕೃತ ಸಾಂಪ್ರದಾಯಿಕ ಸಮಾಜದ ಒಂದು ಭಾಗ ಅಲ್ಲವೇ ?
ಆದರೆ ಈ ಸಂರ‍್ಭದಲ್ಲಿ, ಕರಾಳ ಕೃಷಿ ಕಾಯ್ದೆಗಳ ವಿರುದ್ಧ ತಮ್ಮ ಸಾಮುದಾಯಿಕ, ಪಂಥೀಯ, ಪ್ರಾಂತೀಯ, ರಾಜಕೀಯ ಮತ್ತು ಪ್ರಾದೇಶಿಕ ವೈರುಧ್ಯಗಳನ್ನು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಹೋರಾಟಕ್ಕೆ ಧುಮುಕಿರುವ ರೈತ ಸಮೂಹ, ಈ ಮುಷ್ಕರದ ಮೂಲಕ ಸಮಸ್ತ ರೈತಾಪಿಯ ಹಿತರಕ್ಷಣೆಗೆ ಬದ್ಧವಾಗಿದೆ. ಇಲ್ಲಿ ನಡೆದಿರುವ ರ‍್ಬರ ಹತ್ಯೆಯನ್ನು ಖಂಡಿಸುತ್ತಲೇ, ಅಪರಾಧಿಗಳಿಗೆ ಕಠಿಣ ಶಿಕ್ಷೆಗಾಗಿ ಆಗ್ರಹಿಸುತ್ತಲೇ, ರೈತ ಮುಷ್ಕರದ ಒಟ್ಟಾರೆ ಆಶಯಗಳಿಗೆ ಭಂಗ ಉಂಟುಮಾಡದಂತೆ ಜಾಗ್ರತೆ ವಹಿಸಬೇಕಿದೆ. ನಮ್ಮ - ಅಂದರೆ ರೈತ ಹೋರಾಟದ ಪರ ಇರುವ - ಪ್ರಗತಿಪರ ಮನಸುಗಳ ನಡುವೆ ಉಂಟಾಗುವ ಕೂದಲೆಳೆಯ ವಿಘಟನೆಯೂ ಸಹ ಮುಷ್ಕರ ಭಂಜಕರಿಗೆ, ಸ್ಥಾಪಿತ ವ್ಯವಸ್ಥೆಗೆ ಮತ್ತು ರ‍್ಕಾರಕ್ಕೆ ವರದಾನವಾಗುತ್ತದೆ. ನಮ್ಮ ದಲಿತ ಪರ ಸಂವೇದನೆಗಳನ್ನು ಜೀವಂತವಾಗಿಟ್ಟುಕೊಂಡೇ, ಹತ್ಯೆಗೊಳಗಾದ ಅಮಾಯಕ ವ್ಯಕ್ತಿಗೆ ನ್ಯಾಯ ದೊರಕಿಸಲು ಬಯಸೋಣ. ಹಾಥ್ರಸ್ ಅಥವಾ ಊನ ದಲ್ಲಿ ಕಾಣದ ದಲಿತ ಪರ ಕಾಳಜಿ ಈಗ ರ‍್ಕಾರದಲ್ಲಿ ಕಾಣುತ್ತದೆ ಎನ್ನುವುದನ್ನು ಗಮನಿಸುತ್ತಲೇ, ನಮ್ಮ ಭಾವನಾತ್ಮಕ ಸಂವೇದನೆಗಳು, ಒಂದು ವಿಶಾಲ ವ್ಯಾಪ್ತಿಯ ಜನಪರ ಚಳುವಳಿಗೆ ಭಂಗ ತರಲು ನೆರವಾಗದಂತೆ ಎಚ್ಚರ ವಹಿಸಬೇಕಿದೆ.
ಇಡೀ ಘಟನೆಯ ಹಿಂದೆ ಕಾಣದ ಕೈಗಳು ಇರುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗದು. ಭಾರತದ ವಿದ್ಯುನ್ಮಾನ ಸುದ್ದಿಮನೆಗಳಂತೆ ಅಂತಿಮ ತರ‍್ಪು ನೀಡುವ ಕಾತರ, ಆತುರವೂ ಅಗತ್ಯವಿಲ್ಲ. ಲಖೀಂಪುರಕ್ಕೂ ಇಂದಿನ ಘಟನೆಗೂ ಮತ್ತು ಅದರ ಸುತ್ತಲಿನ ಬೆಳವಣಿಗೆಗಳಿಗೂ ಇರುವ ಸೂಕ್ಷ್ಮ ಸಂಬಂಧಗಳನ್ನೂ ಗಮನಿಸಬೇಕಿದೆ. ಜಾತಿಯ ಕಾರಣಕ್ಕಾಗಿಯೇ ಒಬ್ಬ ದಲಿತ ವ್ಯಕ್ತಿಯ ರ‍್ಬರ ಹತ್ಯೆ ನಡೆದಿರುವುದನ್ನು ಗಮನದಲ್ಲಿಟ್ಟುಕೊಂಡೇ, ಈ ಹತ್ಯೆಯನ್ನು ಖಂಡಿಸುತ್ತಲೇ, ಮುಷ್ಕರ ಭಂಜಕರ ಕೈಗೆ ಗುರಾಣಿ ನೀಡದಿರುವ ಎಚ್ಚರ ನಮ್ಮಲ್ಲಿರಬೇಕು. ಇಲ್ಲವಾದಲ್ಲಿ ಆಳುವ ರ‍್ಗಗಳ ವಿಭಜಕ ರಾಜಕಾರಣಕ್ಕೆ ದಲಿತ vs ರೈತ, ಸಿಖ್ vs ದಲಿತ ಎಂಬ ಹೊಸ ಆಯುಧಗಳನ್ನು ನಾವೇ ಪೂರೈಸಿದಂತಾಗುತ್ತದೆ.
ರೈತ ಹಿತಾಸಕ್ತಿಯನ್ನು ಪ್ರಧಾನವಾಗಿ ಪ್ರತಿನಿಧಿಸುವ ಸಿಖ್ ಸಮುದಾಯವಷ್ಟೇ ಅಲ್ಲ, ಎಲ್ಲ ಮೇಲ್ಜಾತಿ ಸಮುದಾಯಗಳಲ್ಲೂ ಈ ಘಟನೆ ಜಾಗೃತಿ ಮೂಡಿಸಬೇಕಿದೆ. ಈ ಮುಷ್ಕರದಲ್ಲಿ ರೈತರು ಮುಂಚೂಣಿಯಲ್ಲಿದ್ದಾರೆ ಆದರೆ ಈ ಮುಷ್ಕರದ ಆಶಯಗಳು ಸಮಸ್ತ ದುಡಿಯುವ ರ‍್ಗಗಳನ್ನು ಪ್ರತಿಧಿಸುತ್ತದೆ ಎನ್ನುವ ಪ್ರಜ್ಞೆಯೂ ನಮ್ಮೊಳಗೆ ಸದಾ ಜಾಗೃತವಾಗಿರಲಿ.
ದೇಶ ನೈತಿಕವಾಗಿ ಪಾತಾಳದತ್ತ ಸಾಗುತ್ತಿದೆಯೇ?
ಹತ್ತು ತಿಂಗಳಿಂದ ರೈತರು ಸತ್ಯಾಗ್ರಹ ನಡೆಸುತ್ತಿರುವ ರ‍್ಯಾಣ ದಿಲ್ಲಿಯ ಸಿಂಘು ಗಡಿ ಬಳಿ ಅಕ್ಟೋಬರ್ 15ರ ಮುಂಜಾನೆ ಪೊಲೀಸ್ ಬ್ಯಾರಿಕೇಡ್‍ಗೆ ಕೈಕಾಲುಗಳನ್ನು ಬಿಗಿದ ಸ್ಥಿತಿಯಲ್ಲಿ 36 ರ‍್ಷದ ವ್ಯಕ್ತಿಯ ಶವ ಪತ್ತೆಯಾಯಿತು. ಈತನ ಒಂದು ಕೈಯನ್ನು ಮಣಿಕಟ್ಟಿನ ಸಮಕ್ಕೆ ಹಾಗೂ ಎರಡೂ ಕಾಲುಗಳನ್ನು ಕತ್ತರಿಸಿ ಹಾಕಲಾಗಿತ್ತು, ಈತನನ್ನು ಭೀಕರವಾಗಿ ಹಿಂಸಿಸಿ ಕೊಲ್ಲಲಾಗಿದೆ ಎಂದು ನೋಡಿದ ತಕ್ಷಣ ಯಾರಿಗಾದರೂ ಗೊತ್ತಾಗುತ್ತಿತ್ತು. ಹೀಗೆ ಸತ್ತವನ ಹೆಸರು ಲಖ್‍ಬೀರ್ ಸಿಂಗ್, ಈತ ಪಂಜಾಬಿ ಸಿಖ್ ದಲಿತ ಸಮುದಾಯಕ್ಕೆ ಸೇರಿದ ಬಡಪಾಯಿ. ಸಿಖ್ಖರ ಪವಿತ್ರ ಗ್ರಂಥವನ್ನು ಮುಟ್ಟಿದ ಎಂಬ ಕಾರಣಕ್ಕೇ ನಿಹಾಂಗ್ ಎಂಬ ಸಿಖ್ ಮತಾಂಧ ಗುಂಪಿಗೆ ಸೇರಿದ ಮೂವರು ಈತನನ್ನು ಹೀಗೆ ಚಿತ್ರಹಿಂಸೆ ಮಾಡಿ ಕೊಂದಿದ್ದು ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಆದರೆ ಇವರಿಗೆ ಇವರು ಮಾಡಿದ ಕೃತ್ಯದ ಬಗ್ಗೆ ವಿಷಾದವಿಲ್ಲವಂತೆ. ತಾಂತ್ರಿಕವಾಗಿ ಆಧುನಿಕಗೊಳ್ಳುತ್ತಿರುವ ದೇಶವೊಂದು ಹೀಗೆ ನೈತಿಕವಾಗಿ ಪಾತಾಳಕ್ಕೆ ಕುಸಿಯುತ್ತಿರುವ ಬಗ್ಗೆ ತೀವ್ರ ವಿಷಾದವೆನಿಸುತ್ತಿದೆ.-ಸಂಪಾದಕ
ದಲಿತರ ಜೀವಕ್ಕೆ ನಯಾಪೈಸೆ ಬೆಲೆಯಿಲ್ಲ
ವಿ.ಎಲ್.ನರಸಿಂಹಮೂರ‍್ತಿ
ದೆಹಲಿಯ ಸಿಂಘು ಬರ‍್ಡರ‍್ನಲ್ಲಿ ರೈತ ಮಸೂದೆಗಳ ವಿರುದ್ದ ಹೋರಾಡುತ್ತಿರುವ ಸಿಖ್ ಸಮುದಾಯದವರು ತಮ್ಮ ಧರ‍್ಮದ 'ಪವಿತ್ರ ಗ್ರಂಥ'ವನ್ನು ಮುಟ್ಟಿದ್ದಕ್ಕಾಗಿ ದಲಿತನೊಬ್ಬನನ್ನು ರ‍್ಬರವಾಗಿ ಹತ್ಯೆ ಮಾಡಿದ್ದಾರೆ.
ಇಲ್ಲಿ ನಾವು ಮರೆಯಬಾರದ ವಿಷಯವೇನೆಂದರೆ ಸತ್ತ ದಲಿತ ವ್ಯಕ್ತಿ ಸಿಖ್ ರ‍್ಮಕ್ಕೆ ಮತಾಂತರಗೊಂಡಿರುವ ರವಿದಾಸಿ-ಸಿಖ್ ಸಮುದಾಯದವನು !
ರೈತರ ಪ್ರತಿಭಟನೆಯ ಪರ ನಿರಂತರವಾಗಿ ಮಾತನಾಡುತ್ತಿರುವ ನಮ್ಮ ಯಾವ ಪ್ರಗತಿಪರರೂ ಸಿಂಘು ಬರ‍್ಡರಿನಲ್ಲಿ ನಡೆದಿರುವ ದಲಿತ ವ್ಯಕ್ತಿಯ ರ‍್ಬರ ಹತ್ಯೆಯನ್ನು ಖಂಡಿಸಿ ಒಂದು ಅಕ್ಷರ ಬರೆದಿರುವುದನ್ನ ಕಂಡುಬರಲಿಲ್ಲ.
ಈ ದೇಶದ ರೈತರು, ರೈತ ಚಳುವಳಿಗಳ ಹೋರಾಟ ಕೇವಲ ಫ್ಯೂಡಲ್ ಜಾತಿಗಳ ಹಿತಾಸಕ್ತಿಗಾಗಿ ಮಾಡುವ ಚೀರಾಟ ಎನ್ನುವುದು ಮತ್ತೆ ಮತ್ತೆ ಸಾಬೀತಾಗತೊಡಗಿದೆ.
ದಲಿತರು ಸತ್ತರು ಪರವಾಗಿಲ್ಲ ರೈತರ ಹೋರಾಟ ಮುಖ್ಯ ಅಲ್ಲವೇ ?
*****
ಈ ದೇಶದ ಒಟ್ಟು ಕೃಷಿ ಭೂಮಿಯಲ್ಲಿ ದಲಿತರಿಗೆ ಇರುವ ಪಾಲು ಕೇವಲ 9%. ದಲಿತರಲ್ಲಿ 71% ಗಿಂತಲೂ ಹೆಚ್ಚು ಜನರಿಗೆ ಅಂಗೈ ಅಗಲದ ಭೂಮಿಯ ಒಡೆತನವಿಲ್ಲ. ಭೂಮಿಯ ಒಡೆತನ ಹೊಂದಿರುವ ಪ್ರಬಲ ಜಾತಿಗಳ ರ‍್ಜಿಯಲ್ಲಿ ಈ ದೇಶದ ದಲಿತರು ಕೂಲಿನಾಲಿ ಮಾಡಿಕೊಂಡು ಬದುಕಬೇಕಾದ ಸನ್ನಿವೇಶ ಇದೆ. ಭೂಮಾಲೀಕರ ಭೂಮಿಯಲ್ಲಿ ದಲಿತರ ದುಡಿದು ಬೆವರು ಸುರಿಸುವುದರಿಂದಲೇ ಭೂ ಮಾಲೀಕರ ಸಿರಿವಂತಿಕೆ ಸಾಧ್ಯವಾಗಿದೆ.
ಇನ್ನು ದಲಿತರು ವಾಸಿಸುವ ಮುಕ್ಕಾಲು ಭಾಗ ಹಳ್ಳಿಗಳಲ್ಲಿ ಸತ್ತರೆ ಹೂಳುವುದಕ್ಕೆ ಸ್ಮಶಾನಗಳೇ ಇಲ್ಲ. ಸತ್ತ ಹೆಣವನ್ನು ಕೊಂಡೊಯ್ಯಲು ಮೇಲ್ಜಾತಿಯ ಜನ ದಾರಿ ಕೂಡ ಬಿಡದ, ತಮ್ಮದಲ್ಲದ ಭೂಮಿಯಲ್ಲಿ ಹೂತು ಭೂಮಿಯನ್ನು ಮಲಿನಗೊಳಿಸಿದರು ಎನ್ನುವ ಕಾರಣ ನೀಡಿ ಸತ್ತ ಹೆಣವನ್ನು ಆಚೆಗೆ ತೆಗೆಸಿರುವ ಘಟನೆಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ. ಇಲ್ಲಿ ದಲಿತರಿಗೆ ಬದುಕುವುದಕ್ಕು ಭೂಮಿಯಿಲ್ಲ ಸತ್ತರೂ ಭೂಮಿಯಿಲ್ಲ.
ಇಂತಹ ಪರಿಸ್ಥಿತಿ ಇರುವಾಗ ಪ್ರಬಲ ಜಾತಿಗಳಿಗೆ ಸೇರಿದ ಭೂಮಾಲೀಕರು ತಮ್ಮ ಹಿತಾಸಕ್ತಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ದಲಿತರು, ದಲಿತ ಸಂಘಟನೆಗಳು ಬೆಂಬಲ ಸೂಚಿಸಿರುವುದು ಕೇಂದ್ರ ರ‍್ಕಾರ ತರುತ್ತಿರುವ ರೈತ ಮಸೂದೆಗಳು ರದ್ದಾದರೆ ತಮಗೆ ಭೂಮಿ ದೊರಕಿಬಿಡುತ್ತದೆ ಅನ್ನುವ ಆಸೆಯಿಂದ ಅಲ್ಲ. ಕೇಂದ್ರ ರ‍್ಕಾರದ ಜನವಿರೋಧಿ, ಫ್ಯಾಸಿಸ್ಟ್ ಧೋರಣೆಗೆ ಪ್ರತಿರೋಧ ತೋರಿಸುವುದಕ್ಕಾಗಿ. ಯಾವ ಪ್ರತಿಫಲದ ನಿರೀಕ್ಷೆಯೂ ಇಲ್ಲದೆ ಒಂದು ಹೋರಾಟಕ್ಕೆ ಬೆಂಬಲ ಸೂಚಿಸಿದ ದಲಿತ ಸಮುದಾಯದ ವ್ಯಕ್ತಿಯನ್ನು ಆ ಹೋರಾಟ ನಡೆಯುತ್ತಿರುವ ಜಾಗದಲ್ಲಿ ತಮ್ಮ ರ‍್ಮಗ್ರಂಥವನ್ನು ಮುಟ್ಟಿ ಅಪವಿತ್ರಗೊಳಿಸಿದ ಅನ್ನುವ ಕಾರಣಕ್ಕೆ ರ‍್ಬರವಾಗಿ ಹತ್ಯೆ ಮಾಡಿಲಾಗಿದೆ. ಆದರೆ ಹೋರಾಟದ ನೇತೃತ್ವ ವಹಿಸಿರುವ ಮೇಲ್ಜಾತಿಗಳ ರೈತ ಮುಖಂಡರು ಈ ಕೃತ್ಯ ಮಾಡಿದವರಿಗೂ ಹೋರಾಟಕ್ಕು ಸಂಬಂಧವಿಲ್ಲ ಅಂತ ಘೋಷಿಸಿದ್ದಾರೆ.
ದಲಿತನ ಹತ್ಯೆಯ ನೈತಿಕ ಹೊಣೆ ಹೊರಲಾರದ ಈ ಸೋಗಲಾಡಿಗಳು ರೈತರ ಹೋರಾಟಕ್ಕೆ ಎಲ್ಲರೂ ಬಂದು ಭಾಗವಹಿಸಿ ದೇಶ ಉಳಿಸಿ ಅಂತ ಕರೆ ಕೊಡುತ್ತಾರೆ. ಹೆಚ್ಚು ಜನ ಬಂದಾಗ ನಮ್ಮ ಹೋರಾಟ ಯಶಸ್ವಿಯಾಯಿತು ಅಂತ ಹೂಂಕರಿಸುತ್ತಾರೆ. ಅದೇ ಹೋರಾಟದ ಭಾಗವಾಗಿರುವ ಜನ ಜಾತಿ ದರ‍್ಜನ್ಯ ನಡೆಸಿದಾಗ ತಮಗೂ ಅವರಿಗೂ ಸಂಬಂಧವಿಲ್ಲ ಎನ್ನುತ್ತಾರೆ.
ದಲಿತನೊಬ್ಬನ ಪ್ರಾಣ ಹೋಯಿತಲ್ಲ ಅಂತ ನಾವು ದುಃಖ ತೋಡಿಕೊಂಡರೆ ನಮ್ಮ ಪ್ರಗತಿಪರರು ಇಂತವನ್ನೆಲ್ಲ ದೊಡ್ಡದು ಮಾಡಿದರೆ ರೈತರ ದೊಡ್ಡ ಹೋರಾಟಕ್ಕೆ ಧಕ್ಕೆಯಾಗುತ್ತೆ ಅಂತ ಗೋಳಾಡುತ್ತಾರೆ.
ಒಟ್ಟಿನಲ್ಲಿ ಈ ದೇಶದ ದಲಿತರ ಜೀವಕ್ಕೆ ನಯಾಪೈಸೆ ಬೆಲೆಯಿಲ್ಲ.
ಆಯ್ತು, ರೈತರ ಹೋರಾಟವನ್ನು ಬಗ್ಗು ಬಡಿಯುವುದಕ್ಕಾಗಿಯೇ ಕುತಂತ್ರ ಮಾಡಿ ದಲಿತನೊಬ್ಬನನ್ನು ಹತ್ಯೆ ಮಾಡಿ ದಿಕ್ಕು ತಪ್ಪಿಸುತ್ತಾ ಇದಾರೆ ಅಂತ ಒಪ್ಪಿಕೊಳ್ಳೋಣ.
ಆದರೆ, ಇಲ್ಲಿ ದಲಿತನ ಬದಲಿಗೆ ಒಬ್ಬ ಜಾಟ್ ಸಮುದಾಯದವನನ್ನೊ, ಠಾಕೂರ್ ಸಮುದಾಯದವನನ್ನೊ ಕೊಲೆ ಮಾಡಿದ್ದರೆ ಇವಾಗ ರ‍್ತಾ ಇರೋ ಸಮಾಧಾನದ, ಕಾದು ನೋಡಿ ಮಾತಾಡುವ ಪ್ರತಿಕ್ರಿಯೆಗಳು ರ‍್ತಿದ್ವಾ.
ಈ ಮೇಲ್ಜಾತಿಗಳು ಆ ಸತ್ತ ದಲಿತನ ಸಾವಿಗೆ ಮಿಡಿಯೋದು ಬಿಟ್ಟು ಅವನ ಅhಚಿಡಿಚಿಛಿಣeಡಿ ಛಿeಡಿಣiಜಿiಛಿಚಿಣe ಸೃಷ್ಠಿ ಮಾಡ್ತಾ ಇದಾರಲ್ಲ ಅದನ್ನ ಬಿಟ್ಟು ಇವರೇ ದೇಶದಲ್ಲಿ ಮತ್ತೊಂದು ಸಿಖ್ ಹತ್ಯಾಕಾಂಡ ಮಾಡಿ ಬಿಡ್ತಾ ಇದ್ರು.
ಪಾಪ ಸತ್ತಿರೋದು ದಲಿತ ಅಲ್ವೆ. ದಲಿತರೊಂದು ಜೀವವೇ... ದೇಶಕ್ಕೆ ಅಷ್ಟು ಸಮಸ್ಯೆ ಅಲ್ಲ.
ಇದು ಭಾರತ! ಇದು ಭಾರತ !