ಕನ್ನಡ ಕನ್ನಡಿಗರಿಗೆ ಅನ್ನದ ಭಾಷೆಯಾಗಲಿ: ಪ್ರೊ. ಶ್ರೀನಿವಾಸಮೂರ್ತಿ

ಕನ್ನಡ ಕನ್ನಡಿಗರಿಗೆ ಅನ್ನದ ಭಾಷೆಯಾಗಲಿ: ಪ್ರೊ. ಶ್ರೀನಿವಾಸಮೂರ್ತಿ

ಕನ್ನಡ ಕನ್ನಡಿಗರಿಗೆ ಅನ್ನದ ಭಾಷೆಯಾಗಲಿ: ಪ್ರೊ. ಶ್ರೀನಿವಾಸಮೂರ್ತಿ

ಕೋಲಾರ : ಕನ್ನಡ ಭಾಷೆ ಪ್ರಚಲಿತ ದಿನಗಳಲ್ಲಿ ಅನ್ನದ ಭಾಷೆ, ಉದ್ಯೋಗ ನೀಡುವ ಭಾಷೆಯಾಗಬೇಕೆಂದು ಕೋಲಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಶ್ರೀನಿವಾಸಮೂರ್ತಿ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೇಮಗಲ್‌ನಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತಾನಾಡಿದರು.
ವಿದ್ಯಾರ್ಥಿಗಳು ಈ ದಿನಗಳಲ್ಲಿ ಸಹನೆ ಸಭ್ಯತೆ ಸರಳತೆ ಅಳವಡಿಸಿಕೊಳ್ಳಬೇಕು. ಯುವಶಕ್ತಿ ಸಾಧನೆ ಮತ್ತು ಸಾಹಸವನ್ನು ಶ್ರಮದ ಸತತ ಪ್ರಯತ್ನದಿಂದ ಪಡೆದುಕೊಳ್ಳಬೇಕು. ಗಡಿ ಸಮಸ್ಯೆ, ಜಲ ಸಮಸ್ಯೆ, ಭಾಷೆ ಸಮಸ್ಯೆಗಳು ಬಂದಾಗ ನಮ್ಮೆಲ್ಲರು ಒಂದಾಗುವ ಮನೋಭಾವನೆಯನ್ನು ಮೆರೆಯಬೇಕು. ಕನ್ನಡ ಭಾಷೆಗೆ ಪ್ರಾಚೀನತೆಯ ಶ್ರೇಷ್ಠತೆಯನ್ನು ಪೆಡೆದುಕೊಂಡಿದೆ. ಕನ್ನಡದ ನೆಲ ಬಹುಭಾಷಾ ಸಂಸ್ಕೃತಿಯನ್ನು ಹೊಂದಿದ್ದು. ಭಾಷಾ ಸಾಮರಸ್ಯಕ್ಕೆ ದಕ್ಕೆ ಬಂದಾಗ ಹೋರಾಟಗಾರರು ಚಳುವಳಿಗಾರರು ಮುಂದಾಬೇಕು. ಕನ್ನಡ ನೆಲವಾದ ಬೆಂಗಳೂರು ಮುಂದಿನ ದಿನಗಳಲ್ಲಿ ಕೇಂದ್ರಾಡಳಿತ ಪ್ರದೇಶ ಆಗುವುದರಲ್ಲಿ ಸಂದೇಹವಿಲ್ಲ ಎನ್ನುವ ಬೇಸರವನ್ನು ವ್ಯಕ್ತಪಡಿಸಿದರು. ಪಂಪನ, ಕುವೆಂಪು, ರಾಜರತ್ನಂ ಮುಂತಾದವರ ಕನ್ನಡ ಭಾಷೆಯನ್ನು ಕುರಿತು ಕೊಂಡಾಡಿದರು.
ಅಧ್ಯಕ್ಷತೆಯನ್ನ ವಹಿಸಿ ಮಾತಾನಾಡಿದ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ ಅವರು ಈ ದಿನದಂದು ಇಡೀ ಕರ್ನಾಟಕ ರಾಜ್ಯವು ಹಬ್ಬದಂತೆ ಕಂಗೊಳಿಸುತ್ತಿದೆ. ವಿವಿಧ ಪ್ರದೇಶಗಳು ಸಂಪೂರ್ಣವಾಗಿ ಕನ್ನಡ ವರ್ಣಮಯವಾಗಿದೆ. ಹಿಂದುಗಳು ಅಲ್ಲದೆ ವಿವೇಕಾನಂದ ಜನಾಂಗದವರು ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕು ಅಂದಾಗ ಮಾತ್ರ ಕನ್ನಡ ಉಳಿಸಲು ಸಾಧ್ಯ ಎಂದರು.
 ಪ್ರಾಸ್ತಾವಿಕವಾಗಿ ಮಾತಾನಾಡಿದ ಕರ್ನಾಟಕದ ಏಕೀಕರಣದ ಚರಿತ್ರೆಯನ್ನು ಕುರಿತು ಮಾತಾನಾಡಿ 1956 ರ ನವೆಂಬರ್ 1 ರಂದು ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತಾನಾಡುವ ಪ್ರದೇಶಗಳನ್ನು ಕರ್ನಾಟಕ ಎಂಬ ಒಂದು ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು. ಅಂದಿನಿAದ ಈ ದಿನವನ್ನು ಕರ್ನಾಟಕ ರಾಜ್ಯೋತ್ಸವ ಕನ್ನಡ ದಿನ ಅಥವಾ ಕರ್ನಾಟಕ ರಚನೆ ದಿನ ಎಂದು ಗೋಚರಿಸಲಾಗುತ್ತಿದೆ ಎಂದು ಹೇಳುತ್ತಾ ಕನ್ನಡ ಏಕೀಕರಣಕ್ಕಾಗಿ ಕನ್ನಡ ಸಾಹಿತಿಗಳ ಪ್ರಾಮುಖ್ಯತೆಯನ್ನು ತಿಳಿಸಿದರು. 
ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಭಾಷಣ ಹಾಗೂ ಗೀತಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಮನುಶ್ರೀ, ನವೀನ್ ಕುಮಾರ್, ಜಗದೀಶ್, ಸಂಗೀತ, ಸ್ನೇಹ, ಮುಂತಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಉದ್ಘಾಟಕರಾಗಿ ಆಗಮಿಸಿದ ಪ್ರೊ. ಶ್ರೀನಿವಾಸಮೂರ್ತಿ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ನವೀನ್, ಸಾಯಿರಾಂ, ಮುನಿರಾಜು, ಮಂಜುಳ, ವನಜ, ಮಂಜುನಾಥ, ರಾಮಕೃಷ್ಣ, ಡಾ. ಶರಣಪ್ಪ ಗಬ್ಬೂರು ಇದ್ದರು.