ಈಗ, ಇದೀಗ ದೇಶದಲ್ಲಿ ರಾಹುಲ್ ಬ್ರಾಂಡಿಂಗ್ ಕಾಲ - ಒಂದು ಗಳಿಗೆ -ಕುಚ್ಚಂಗಿ ಪ್ರಸನ್ನ

ಈಗ, ಇದೀಗ ದೇಶದಲ್ಲಿ ರಾಹುಲ್ ಬ್ರಾಂಡಿಂಗ್ ಕಾಲ -ಒಂದು ಗಳಿಗೆ- -ಕುಚ್ಚಂಗಿ ಪ್ರಸನ್ನ-

ಈಗ, ಇದೀಗ ದೇಶದಲ್ಲಿ ರಾಹುಲ್ ಬ್ರಾಂಡಿಂಗ್ ಕಾಲ - ಒಂದು ಗಳಿಗೆ   -ಕುಚ್ಚಂಗಿ ಪ್ರಸನ್ನ


ಈಗ, ಇದೀಗದೇಶದಲ್ಲಿ ರಾಹುಲ್ ಬ್ರಾಂಡಿಂಗ್ ಕಾಲ 

ಒಂದು ಗಳಿಗೆ


-ಕುಚ್ಚಂಗಿ ಪ್ರಸನ್ನ

“ ರಾಹುಲ್‌ಗಾಂಧಿ ಹೀಗೆ ಇಡೀದೇಶ ನಡೆಯುವ ಅವಶ್ಯಕತೆ ಇತ್ತಾ, ಈ ನಡಿಗೆಯಿಂದ ದೇಶದಲ್ಲಿ ಕಾಂಗ್ರೆಸ್ ಚೇತರಿಸಿಕೊಳ್ಳುತ್ತಾ, ತುಂಬಾ ಹಣ ಖರ್ಚಾಗ್ತಿದೆ ಅಲ್ವಾ, ರಾಹುಲ್ ಪಾದಯಾತ್ರೆ ರಾಜ್ಯದಲ್ಲಿ ಕಾಂಗ್ರೆಸ್‌ನ್ನುಅಧಿಕಾರಕ್ಕೆ ತರುತ್ತಾ, ಬಿಜೆಪಿಗೇನಾದರೂ ಡ್ಯಾಮೇಜ್‌ ಆಗುತ್ತಾ ?” 


ಹೋದ ವಾರ ತುರುವೇಕೆರೆ, ಕಿಬ್ಬನಹಳ್ಳಿ ಕ್ರಾಸ್ ಮತ್ತು ಚಿಕ್ಕನಾಯಕನ ಹಳ್ಳಿಗಳಲ್ಲಿ ರಾಹುಲ್‌ಗಾಂಧಿ ನಡಿಗೆಯನ್ನುಕಣ್ಣಾರೆಕಂಡು ವರದಿ ಮಾಡಿ ಬಂದ ನನ್ನನ್ನು ಕೆಲವರು ಬಹಳ ಕುತೂಹಲದಿಂದ ಇಂಥ ಹಲವು ಪ್ರಶ್ನೆಗಳನ್ನು ಕೇಳಿದರು. ಪ್ರಶ್ನೆಗಳು ಅವೇ ಆದರೂ ಕೇಳಿದವರಲ್ಲಿ ಸಮಾಜದಎಲ್ಲ ವರ್ಗದ ಜನರು ಇದ್ದರೆಂಬುದು ಗಮನಿಸಬೇಕಾದ ಸಂಗತಿಯಾಗಿತ್ತು.


ಪ್ರಜಾಪ್ರಭುತ್ವದ ಬಾಲ್ಯಾವಸ್ಥೆಯಲ್ಲಿರುವ ಇಂಡಿಯಾದಂಥ ವೈವಿಧ್ಯಮಯ ಪ್ರಕೃತಿ ಮತ್ತು ಸಂಸ್ಕೃತಿಗಳಿರುವ ದೇಶದಲ್ಲಿ ನನ್ನೊಳಗೂ ನಿಮ್ಮೊಳಗೂ ಇಂಥಾ ಪ್ರಶ್ನೆಗಳು ಹುಟ್ಟಿದರೆತಪ್ಪಲ್ಲ. 


ಹಿಮಾಲಯದಿಂದ ದಕ್ಷಿಣಕ್ಕೆ ಮೂರೂ ಕಡೆ ಕಡಲು ಸುತ್ತವರಿದ ಭೂಖಂಡವನ್ನು ಒಂದು ಆಧುನಿಕ ದೇಶವನ್ನಾಗಿ ರೂಪಿಸುವಲ್ಲಿ ಇದೇ ನೆಲದವರಿಗಿಂತ ಹೊರಗಿನಿಂದ ಬಂದ ದಾಳಿಕೋರರ ಪಾತ್ರವೇ ಹೆಚ್ಚಿನ ಪ್ರಮಾಣದಲ್ಲಿದೆ. ಮೊಘಲರು ಹಿಂದೂಸ್ತಾನವನ್ನು ಬ್ರಿಟಿಷರು ಇಂಡಿಯಾವನ್ನುಅವರಿಂದ ಬಿಡುಗಡೆ ಪಡೆದುಕೊಂಡ ಬಳಿಕ ನಾವು ಭಾರತ ಗಣರಾಜ್ಯವನ್ನು ರೂಪಿಸಿಕೊಂಡೆವು. ನಮ್ಮದೇ ಲಿಖಿತ ಸಂವಿಧಾನ ಒಪ್ಪಿಕೊಂಡು ಅಳವಡಿಸಿಕೊಂಡೆವು. ಸ್ವಾತಂತ್ರ್ಯಕ್ಕಾಗಿ ನಡೆದ ಸುದೀರ್ಘ ಆಂದೋಲನದಲ್ಲಿ ಮಹತ್ವದ ಹಾಗೂ ಮುಖ್ಯ ಪಾತ್ರ ವಹಿಸಿದ ಇಂಡಿಯನ್ ನ್ಯಾಶನಲ್‌ಕಾಂಗ್ರೆಸ್ ಸಹಜವಾಗೇ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದಲ್ಲಿಅಚ್ಚರಿ ಪಡುವಂತದ್ದೇನೂ ಇಲ್ಲ.


ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ 3500 ಕಿಮೀಗಳ ಪಾದ ಯಾತ್ರೆಯನ್ನು ಸೆಪ್ಟೆಂಬರ್ ಏಳರಂದು ಆರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ತುರುವೇಕೆರೆಯಲ್ಲಿ ಮೂರನೇ ಪತ್ರಿಕಾಗೋಷ್ಟಿ ನಡೆಸಿದಾಗ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಆರ್‌ಎಸ್‌ಎಸ್ ಮತ್ತು ಸಾವರ್ಕರ್ ಹೆಸರನ್ನು ಉಲ್ಲೇಖಿಸಿದರು. ಆದರೆ ರಾಹುಲ್ ಮಾತು ಮುಗಿಯುವ ಮುನ್ನವೇ ಸಮೀಪದ ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಳಾಗಿರುವ ಚಿಕ್ಕನಾಯಕನಹಳ್ಳಿಯ ಜೆ.ಸಿ.ಮಾಧುಸ್ವಾಮಿ ಹಾಗೂ ತಿಪಟೂರಿನ ಬಿ.ಸಿ.ನಾಗೇಶ್ ಇಬ್ಬರೂತುರ್ತು ಸುದ್ದಿಗೋಷ್ಟಿ ಕರೆದು ರಾಹುಲ್ ಪಾದಯಾತ್ರೆ ತಮ್ಮ ಕ್ಷೇತ್ರಗಳಲ್ಲಿ ಶಾಂತಿ ಭಂಗ ಮಾಡುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು. ಅವರು ಹೀಗೆ ಆತಂಕ ಪಡಲು ಕಾರಣಗಳೇನೂ ಇಲ್ಲವಾದರೂ, ಅವತ್ತಿನ ಮಟ್ಟಿಗೆ ಮಾಧ್ಯಮ ವರದಿಗಳಲ್ಲಿ ಪ್ರಮುಖ ಪಾಲು ಪಡೆಯಬೇಕೆನ್ನುವುದೇ ಆವರ ಉದ್ದೇಶವಾಗಿತ್ತುಎಂದು ನನಗನ್ನಿಸಿತು. 


ಹಿಂದುತ್ವ- ಹಿಂದೂಧರ್ಮ- ಭಾರತ- ಭಾರತಮಾತೆ, ಮಸೀದಿ-ರಾಮಮಂದಿರಗಳಂತ  ಭಾವನಾತ್ಮಕ ವಿಷಯಗಳ ಆಧಾರದ ಮೇಲೇ ರಾಜಕೀಯ ಮಾಡಿಕೊಂಡು ಬಂದ, ಮೂಲ ಆರ್‌ಎಸ್‌ಎಸ್‌ಕರ‍್ಯಕರ್ತರೇಆಗಿರುವ ಸಚಿವ ಬಿ.ಸಿ.ನಾಗೇಶ್ ಅವರಿಗಿಂತ, ಸಮಾಜವಾದದ ಹಿನ್ನೆಲೆಯ ಜನತಾ ಪರಿವಾರದಿಂದ ಬಂದು ಕೆಜೆಪಿ ಮೂಲಕ ಬಿಜೆಪಿ ಸೇರಿ ಸಚಿವರಾಗಿರುವ ಜೆ.ಸಿ.ಮಾಧುಸ್ವಾಮಿಯವರೇ ಅಂದಿನ ಸುದ್ದಿಗೋಷ್ಟಿಯಲ್ಲಿಕಾಂಗ್ರೆಸ್ ದೌರ್ಬಲ್ಯಗಳನ್ನು ಬಹಳ ಚೆನ್ನಾಗಿ ಮಂಡಿಸಿದರು. 


ಭಾರತಕ್ಕೆ ಸ್ವಾತಂತ್ರ ತಂದುಕೊಡುವಲ್ಲಿ ಕಾಂಗ್ರೆಸ್‌ ಒಂದು ದೊಡ್ಡ ಸಂಸ್ಥೆಯಾಗಿ ಪ್ರಮುಖ ಪಾತ್ರ ವಹಿಸಿದ್ದು ನಿಜವೇ ಆದರೂ ಇತರರೂ ದೊಡ್ಡ ಸಂಖ್ಯೆಯ ಕೊಡುಗೆ ನೀಡಿದ್ದಾರೆ. ಎರಡು ಹೋಳಾಗುವ ಮೂಲಕ 1969ರಲ್ಲೇ ಕಾಂಗ್ರೆಸ್‌ತನ್ನ ಮೂಲ ಸ್ವರೂಪ ಕಳೆದುಕೊಂಡಿರುವುದರಿಂದ ಸ್ವಾತಂತ್ರ್ಯ ತಂದುಕೊಟ್ಟ ಹಕ್ಕನ್ನುಈಗಿರುವ ಕಾಂಗ್ರೆಸ್ ಸಾಧಿಸಲು ಬರುವುದಿಲ್ಲ. 1947ರಲ್ಲಿ ದೇಶ ವಿಭಜನೆಯಾದಾಗ, 1984ರಲ್ಲಿ ಇಂದಿರಾ ಹತ್ಯೆ ಸಂಭವಿಸಿದಾಗ ಸಿಖ್ಖರ ಸಾಮೂಹಿಕ ಹತ್ಯೆ ದಿಲ್ಲಿಯಲ್ಲಿ ನಡೆದಾಗ, ಶ್ರೀಲಂಕೆಗೆ ಶಾಂತಿಪಾಲನಾ ಪಡೆಗೆ ನಮ್ಮ ಸೈನ್ಯ ಕಳಿಸಿದ ಪರಿಣಾಮ ರಾಜೀವಗಾಂಧಿ ಹತ್ಯೆಯಾದಾಗ ನಡೆದ ಹಿಂಸಾಚಾರಗಳ ಸಂದರ್ಭದಲ್ಲಿ ಭಾರತ ಜೋಡಿಸಿ ಎನ್ನದಕಾಂಗ್ರೆಸ್ ಈಗ ಎಲ್ಲೆಡೆ ಶಾಂತಿ ನೆಲೆಸಿರುವಾಗ ಪಾದಯಾತ್ರೆ ಮಾಡುವ ಅಗತ್ಯವೇನಿದೆ ಎಂದು ಜೆಸಿಎಂ ಲಾ ಪಾಯಿಂಟ್ ಹಾಕಿದರು.


ಟಿಪ್ಪು ಎಕ್ಸ್ಪ್ರೆಸ್‌ರೈಲಿನ ಹೆಸರನ್ನುಒಡೆಯರ್‌ಎಂದು ಬದಲಿಸಿದ್ದನ್ನೂ ಸಮರ್ಥಿಸಿಕೊಂಡ ಮಾಧುಸ್ವಾಮಿಯವರು, ದೇಶದ 80% ಸಂಸ್ಥೆಗಳಿಗೆ ಕಾಂಗ್ರೆಸ್ ನಾಯಕರ ಹೆಸರುಗಳೇ ಇಡಲಾಗಿದೆ, ನಾವು ಎಲ್ಲೋ ಒಂದೆರಡು ಬದಲಿಸಿದರೆ ಆಕ್ಷೇಪವೇಕೆ ಎಂದು ಕೇವಿಯಟ್ ಹಾಕಿದರು.


ಬಿ.ಸಿ.ನಾಗೇಶ್ ಅವರು ದಿಲ್ಲಿ, ಪಂಜಾಬ್, ಗುಜರಾತ್‌ಗಳಲ್ಲಿ ಕಾಂಗ್ರೆಸ್ ಬದಲಿಗೆ ಆಮ್‌ಆದ್ಮಿ ಪಾರ್ಟಿ ನೆಲೆಯೂರುತ್ತಿದೆ ಎಂದು ಹೇಳುವ ಮೂಲಕ ಕೇಜ್ರಿವಾಲ್ ಬಿಜೆಪಿಯ ಪರ್ಯಾಯ ಎನ್ನುವುದನ್ನುಎಂಡರ‍್ಸ್ ಮಾಡಿದರು.


ರಾಹುಲ್‌ಗಾಂಧಿ ಪಾದಯಾತ್ರೆ ಅಗತ್ಯವಿತ್ತೋ ಇಲ್ಲವೋ ಎಂಬ ವಾದಕ್ಕೆ ಜೋತು ಬೀಳುವುದರಲ್ಲಿ ಅರ್ಥವಿಲ್ಲ, ರಾಹುಲ್ ಈಗಾಗಲೇ ಒಂದು ಸಾವಿರಕಿಲೋಮೀಟರ್ ನಡೆದು ಮುಗಿಸಿದ್ದಾಗಿದೆ, ಮೂರು ರಾಜ್ಯಗಳನ್ನು ದಾಟಿದ್ದೂ ಆಗಿದೆ. ಅವರು ಕಾಶ್ಮೀರ ತಲುಪುವವರೆಗೆ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಭಾಗವನ್ನು ಹಂಚಿಕೊಳ್ಳುತ್ತಲೇ ಹೋಗುತ್ತಾರೆಎಂಬುದರಲ್ಲಿಎರಡು ಮಾತಿಲ್ಲ.


ಬಿಜೆಪಿ ಕೂಡಾ ಹೀಗೇ ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿ ಹುದ್ದೆಗೆ ಸಮರ್ಥಅಭ್ಯರ್ಥಿಎಂದು ಬಿಂಬಿಸುತ್ತಾ ಹೋಯಿತು. ನರೇಂದ್ರ ಮೋದಿಯವರನ್ನೇ ಬ್ರಾಂಡಿಂಗ್ ಮಾಡುತ್ತಾ ಮಾಡುತ್ತಾ 2014ರಲ್ಲಿ ದಿಲ್ಲಿಯ ಗದ್ದುಗೆ ಹಿಡಿಯಿತು. ಅದಕ್ಕಾಗಿ ಬಹುದೊಡ್ಡ ಪ್ರಚಾರೋಂದಲನವನ್ನೇ ಬಿಜೆಪಿ ನಡೆಸಿತು. ಬಿಜೆಪಿಗೆ ಅಂಬಾನಿ ಹಾಗೂ ಆದಾನಿ ಎಂಬ ಇಬ್ಬರು ದೊಡ್ಡ ಉದ್ಯಮಿಗಳು ಬಂಡವಾಳ ಹೂಡಿದ್ದರು ಎಂಬುದನ್ನುಆನಂತರದ ಈ ಎಂಟು ವರ್ಷಗಳ ಆಡಳಿತದಲ್ಲಿ ನರೇಂದ್ರ ಮೋದಿ ನಾಯಕತ್ವದ ಎನ್‌ಡಿಎ ಹೆಸರಿನ ಬಿಜೆಪಿ ಸರ್ಕಾರ ಸಾಬೀತು ಮಾಡಿದೆ ಎನ್ನುವುದೂ ಸತ್ಯ. ಮೊನ್ನೆ ನೋಡಿ, ಮೋದಿ ಅದು ಎಷ್ಟು ಖುಷಿಯಿಂದ ರಿಲೈಯನ್ಸ್‌ ಕಂಪನಿಯ 5ಜಿ ಪ್ರಾಡಕ್ಟ್ನ್ನು ಉದ್ಘಾಟಿಸಿ ಬಂದರು, ಆದರೆ ಅದೇ ವ್ಯಕ್ತಿಗೆ ಬಿಎಸ್‌ಎನ್‌ಎಲ್‌ ಎಂಬುದು ತನ್ನ ಸರ್ಕಾರವೇ ನಡೆಸುತ್ತಿರುವ ಸಾರ್ವಜನಿಕ ಉದ್ಯಮ, ಈ ಉದ್ದಿಮೆಗೆ ಶಕ್ತಿ ತುಂಬಬೇಕು ಎನ್ನುವ ಸಂಗತಿ ನೆನಪಿಗೇ ಬರುವುದಿಲ್ಲ. ಬದಲಿಗೆರಿಲೈಯನ್ಸ್ ಮತ್ತುಇತರ ಖಾಸಗಿ ಕಂಪನಿಗಳು ‘5ಜಿ’ಗೆ ಉನ್ನತೀಕರಿಸಿಕೊಳ್ಳುವ ಹಂತಕ್ಕೆ ಬಂದರೂ ಬಿಎಸ್‌ಎನ್‌ಎಲ್‌ಗೆ ‘4ಜಿ’ ತಂತ್ರಜ್ಞಾನವನ್ನೂಕೊಡಮಾಡದೇಜೀವಂತ ಕತ್ತು ಹಿಸುಕಿ ಕೊಲ್ಲಲಾಗುತ್ತಿದೆ ಎನ್ನುವುದು ಕಟು ಸತ್ಯ. ತುಮಕೂರಿನಲ್ಲೇ ತೆಗೆದುಕೊಳ್ಳಿ, 250 ಅಧಿಕಾರಿಗಳು ನೌಕರರು ಕಾರ್ಯನಿರ್ವಹಿಸುತ್ತಿದ್ದ ಬಿಎಸ್‌ಎನ್‌ಎಲ್‌ನಲ್ಲಿ ಈಗ ಕೇವಲ 30 ಮಂದಿಯೂಇಲ್ಲ, ಉಳಿದವರಿಗೆಲ್ಲ ಕಡ್ಡಾಯ ನಿವೃತ್ತಿಕೊಟ್ಟು ಮನೆಗೆ ಕಳಿಸಿ ಎರಡು  ವರ್ಷವೇಆಯಿತು. 


ಅತ್ಯಾಧುನಿಕ ಮಾರಾಟ ವಿಧಾನದಲ್ಲಿ ಬ್ರಾಂಡಿಂಗ್‌ಗೆ ಹೆಚ್ಚು ಮಹತ್ವಇದೆ, ಬಿಜೆಪಿ ಈಗ ನರೇಂದ್ರ ಮೋದಿ ಬ್ರಾಂಡ್‌ನಲ್ಲಿ ಚಲಾವಣೆಯಲ್ಲಿದೆ, ಮೊದಲಿಗೆ ಅಟಲ್ ಬಿಹಾರಿ ವಾಜಪೇಯಿ ಬ್ರಾಂಡ್‌ ಆಗಿದ್ದರು. 1975-77ರ ಎಮರ್ಜೆನ್ಸಿ ಮುಗಿದ ಮೇಲೆ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದ ಜನತಾ ರಂಗದೊಳಗೆ ಇದೇ ಬಿಜೆಪಿ ಭಾರತೀಯ ಜನಸಂಘದ ಹೆಸರಿನಲ್ಲಿ ವಿಲೀನವಾಗಿತ್ತು. ಈ ಜನಸಂಘದ ಪ್ರತಿನಿಧಿಗಳಾಗಿ ವಾಜಪೇಯಿ ಮತ್ತು ಅಡ್ವಾಣಿಇದ್ದರು. ನಂತರ ಬಿಜೆಪಿಯೇ ಅಧಿಕಾರಕ್ಕೆ ಬಂದಾಗ ಆರ್‌ಎಸ್‌ಎಸ್‌ನ ಮೂಲ ಸಿದ್ದಾಂತವನ್ನು ಅನುಷ್ಟಾನಗೊಳಿಸುವ ನಿಟ್ಟಿನಲ್ಲಿಪ್ರಧಾನ ಮಂತ್ರಿ ವಾಜಪೇಯಿ ತುಸು ಉದಾರ ಹಾಗು ಗೃಹ ಸಚಿವ ಹಾಗೂ ಉಪ ಪ್ರಧಾನ ಮಂತ್ರಿ ಲಾಲ್ ಕೃಷ್ಣ ಅಡ್ವಾಣಿ ಫುಲ್‌ ಖಡಕ್‌ ಎನ್ನುವಂತೆ ವರ್ತಿಸುತ್ತಿದ್ದರು. ಈಗ ಈ ಸ್ಥಾನಗಳನ್ನು ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವಅಮಿತ್ ಶಾ ವಹಿಸಿಕೊಂಡಿದ್ದಾರೆ. 


ಬಿಜೆಪಿ ತನ್ನ ಬ್ರಾಂಡಿAಗ್ ವಿಧಾನವನ್ನುಕಂಡುಕೊಂಡಿದ್ದೂ ಕಾಂಗ್ರೆಸ್‌ನಿಂದಲೇ ಎಂದು ಹೇಳಲೂ ನಿದರ್ಶನಗಳಿವೆ. 1947ರಲ್ಲಿ ಕಾಂಗ್ರೆಸ್‌ದೇಶದ ಚುಕ್ಕಾಣಿ ಹಿಡಿದಾಗ ಆ ಪಕ್ಷದಲ್ಲಿ ಪ್ರಧಾನ ಮಂತ್ರಿಯಾಗಿ ಜವಹರಲಾಲ್ ನೆಹರೂ ತುಸುಉದಾರ ಹಾಗೂ ಗೃಹ ಸಚಿವ ಹಾಗು ಉಪ ಪ್ರಧಾನ ಮಂತ್ರಿಯಾಗಿ ಸರ್ದಾರ್ ವಲ್ಲಭಬಾಯಿ ಪಟೇಲ್ ಫುಲ್‌ಖಡಕ್ ವರ್ತನೆಗಳನ್ನು ತೋರುತ್ತ ಆಡಳಿತ ನಿರ್ವಹಣೆ ಮಾಡಿದ್ದರು ಎಂಬುದನ್ನು ಗಮನಿಸಿ.


1947ರಿಂದ 20 ವರ್ಷ ಕಳೆಯುವಷ್ಟರಲ್ಲಿ ನೆಹರೂ ಎಷ್ಟರ ಮಟ್ಟಿಗೆ ಯಶಸ್ವಿ ಬ್ರಾಂಡಿಂಗ್‌ ಆಗಿಬಿಟ್ಟರು ಎನ್ನುವುದಕ್ಕೆ ಇಡೀ ದೇಶ ಅವರಜನ್ಮ ದಿನವನ್ನು ಇಂದಿಗೂ ಮಕ್ಕಳ ದಿನ ಎಂದು ಆಚರಿಸುತ್ತಿರುವುದೇ ಸಾಕ್ಷಿ ಮತ್ತು ಇಡೀ ಆರ್‌ಎಸ್‌ಎಸ್ ಪರಿವಾರ ಕಳೆದ ಒಂದು ದಶಕದಲ್ಲಿ ನೆಹರೂರವರ ಜನಪ್ರಿಯ ವ್ಯಕ್ತಿತ್ವವನ್ನು ಜನಮಾನಸದಿಂದ ಮರೆ ಮಾಡಲಾಗದೇ ಅವರಚಾರಿತ್ರ್ಯ ವಧೆಯಲ್ಲಿ ಹಗಲಿರುಳೂ ತೊಡಗಿದ್ದೇ  ಪ್ರತಿಸಾಕ್ಷಿ.


ಇಂಥಾ ನೆಹರೂ 1949ರಲ್ಲೇ ತಮ್ಮ ಬ್ರಾಂಡಿಂಗ್‌ ಅನ್ನು ಮಗಳು ಇಂದಿರಾಗಾಂಧಿಗೆ ವರ್ಗಾಯಿಸುವ ಪ್ರಯತ್ನದಲ್ಲಿ ತೊಡಗಿದ್ದರು ಎಂಬುದಕ್ಕೆ, 1949ರಲ್ಲಿ ಜಪಾನ್‌ನ ಮಕ್ಕಳಿಗೆ ಭಾರತದ ಕೊಡುಗೆಯಾಗಿ ಒಂದು ಆನೆ ಮರಿಯನ್ನು ನೀಡುವಾಗ ಆ ಆನೆ ಮರಿಗೆ ‘ಇಂದಿರಾ’ ಎಂದು ನಾಮಕರಣ ಮಾಡಿ ಕಳಿಸಿಕೊಟ್ಟಿದ್ದನ್ನು ಪುಟ್ಟ ನಿದರ್ಶನ ಎಂದರೆ ಕಾಂಗ್ರೆಸ್‌ನವರು ಕಿಡಿಕಾರುವುದಿಲ್ಲ ಎಂದು ಕೊಳ್ಳುತ್ತೇನೆ. ಇಂಥಾ ಬ್ರಾಂಡಿಂಗ್‌ಗಳು ಎಲ್ಲ ಕಾಲಕ್ಕೂ ಎಲ್ಲ ನೆಲಗಳಲ್ಲೂ ನಡೆದೇಇವೆ. ಕಮ್ಯುನಿಸ್ಟ್, ಸೋಶಲಿಷ್ಟ್ ಎಲ್ಲರಲ್ಲೂ ನಡೆದೇ ಇವೆ. ಆರ್‌ಎಸ್‌ಎಸ್‌ ತನ್ನನ್ನು ತಾನುದೇಶ ಭಕ್ತ ಸಂಘಟನೆ ಎಂಬುದನ್ನುಎಷ್ಟರ ಮಟ್ಟಿಗೆ ಬ್ರಾಂಡಿಂಗ್ ಮಾಡಿಕೊಂಡಿದೆ ಎಂದರೆ ಕಳೆದ ವಾರ ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ಸುದ್ದಿಗೋಷ್ಟಿ ನಡೆಸಿದ ಮೇಧಾವಿ, ವಿಚಾರವಾದಿ ಎಂದು ಹೆಸರಾಗಿರುವ ಮಾಧುಸ್ವಾಮಿಯವರೂ ಕೂಡಾ “ ಇತರ ವಿಚಾರಗಳಲ್ಲಿ ನೀವು ಎಷ್ಟು ಬೇಕಾದರೂ ಹೇಳಿ, ಆದರೆ ಆರ್‌ಎಸ್‌ಎಸ್‌ನವರ ಅಪ್ರತಿಮದೇಶ ಭಕ್ತಿಯನ್ನು ಮಾತ್ರ ಯಾರೂ ಪ್ರಶ್ನಿಸುವಂತಿಲ್ಲ” ಎಂದು ಫರ್ಮಾನು ಹೊರಡಿಸಿಬಿಟ್ಟರು.

 
ಕಳೆದ ದಶಕದ ಅವಧಿಯಲ್ಲಿ ನರೇಂದ್ರ ಮೋದಿಯವರನ್ನು ಬ್ರಾಂಡಿಂಗ್ ಮಾಡುತ್ತ ಮಾಡುತ್ತಲೇ ರಾಹುಲ್‌ಗಾಂಧಿಯ ವ್ಯಕ್ತಿತ್ವ ನಾಶ ಮತ್ತು ಚಾರಿತ್ರ್ಯ  ವಧೆ ಮಾಡುವಲ್ಲಿ ಇದೇಆರ್‌ಎಸ್‌ಎಸ್ ಪರಿವಾರ 100% ಯಶಸ್ವಿಯಾಗಿರುವುದನ್ನೂ ಅಲ್ಲಗೆಳೆಯುವಂತಿಲ್ಲ. ರಾಹುಲ್‌ರನ್ನ ಪಪ್ಪುಎಂದು ಈ ದೇಶದ ಬಹುಪಾಲು ಜನರನ್ನು ನಂಬಿಸಲು ಅಸಂಖ್ಯ ತಿರುಚಿದ ವಿಡಿಯೋಗಳು, ಚಿತ್ರಗಳನ್ನು ಇವರು ಬಳಸಿಕೊಂಡರು. ಹಾಗಾಗಿಯೇ ಟಿವಿಗಳು ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಕಟವಾಗುವ ಇಂಥ ಸಂಗತಿಗಳು ಅಸಲಿಯೇನಕಲಿಯೇ ಎಂಬುದನ್ನು ಪತ್ತೆ ಹಚ್ಚುವ “ಫ್ಯಾಕ್ಟ್ಚೆಕ್, ರಿಯಾಲಿಟಿಚೆಕ್” ಎಂಬ ಕಾರ‍್ಯಾಚರಣೆಗಳನ್ನು ಪತ್ರಕರ್ತರು ಮಾಡಬೇಕಾಗಿ ಬಂದದ್ದು, ಹೀಗೆ ರಿಯಾಲಿಟಿಚೆಕ್ ಮಾಡುತ್ತ ಮಾಡುತ್ತಆಲ್ಟ್ ನ್ಯೂಸ್‌ನ ಮಹಮ್ಮದ್‌ ಜುಬೇರ್ ಶಾಂತಿ ನೋಬೆಲ್ ಪ್ರಶಸ್ತಿಗೂ ನಾಮಕರಣಗೊಂಡದ್ದು ಮತ್ತು ಅದಕ್ಕೂ ಮುನ್ನಈತನನ್ನುಉತ್ತರ ಪ್ರದೇಶದ ಆದಿತ್ಯನಾಥ ಸರ್ಕಾರ ಕೇಸುಗಳ ಮೇಲೆ ಕೇಸು ಹಾಕಿ ಇಕ್ಕೆಳೆದದ್ದು.


ಈಗ ಕಾಲ್ನಡಿಗೆಯಾತ್ರೆ ಮೂಲಕ ರಾಹುಲ್‌ಗಾಂಧಿಯ ಬ್ರಾಂಡಿಂಗ್ ಪರ್ವ ಆರಂಭಗೊಂಡಿದೆ. ಮುತ್ತಾತ ಚಾಚಾ ನೆಹರೂ ಅವರಿಗಿದ್ದ ಮಕ್ಕಳ ಮೇಲಿನ ಅಕ್ಕರೆ, ಅಜ್ಜಿಇಂದಿರಾಗಾಂಧಿಗಿದ್ದ ದೃಢತೆ, ಅಪ್ಪ ರಾಜೀವ ಗಾಂಧಿಗಿದ್ದ ಸರಳತೆ, ಅಮ್ಮನ ಮೈತ್ರಿ ಭಾವಗಳನ್ನೆಲ್ಲ ಮೇಳೈಸಿಕೊಂಡಿರುವ ಪೆಪ್ಪರ್ ಸಾಲ್ಟ್ ಗಡ್ಡಧಾರಿ ರಾಹುಲ್‌ಗಾಂಧಿ ಎಲ್ಲ ಮೀಡಿಯಾಗಳನ್ನು ಆವರಿಸಿಕೊಂಡು ಬಿಟ್ಟಿದ್ದಾರೆ. ಇನ್ನೂ ಐದಾರು ತಿಂಗಳು ರಾಹುಲ್ ಹವಾ ಮುಂದುವರೆಯಲಿದೆ. 


ಇಡೀದೇಶದಲ್ಲಿಕಾಂಗ್ರೆಸ್ ಚೇತರಿಸಿಕೊಳ್ಳುವುದೋ ಇಲ್ಲವೋಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕಿದೆಯಾದರೂ, ಕರ್ನಾಟಕದ ಮಟ್ಟಿಗೆ ರಾಹುಲ್ ಪಾದಯಾತ್ರೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಅಧಿಕಾರದ ದಡ ಮುಟ್ಟಿಸುವಲ್ಲಿ ಯಶಸ್ಸು ಕಾಣುವುದರಲ್ಲಿಅಚ್ಚರಿಯೇನೂ ಇಲ್ಲ.

ರಾಜ್ಯದಲ್ಲಿ ಹರಡುತ್ತಿರುವಕಾಂಗ್ರೆಸ್‌ಕಾವನ್ನು ಕಡಿಮೆ ಮಾಡಲು ತಾನೇ ಅಧಿಕಾರದಿಂದ ಇಳಿಸಿದ ಯಡಿಯೂರಪ್ಪನವರನ್ನು ಬಳಸಿಕೊಳ್ಳುವ ವಿಫಲ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಕೈಗೊಂಬೆ ಮುಖ್ಯಮಂತ್ರಿ ಎಂಬುದಾಗಿ ಬೊಮ್ಮಾಯಿ ಇತಿಹಾಸದಲ್ಲಿ ದಾಖಲಾಗುವ ಎಲ್ಲ ನಡವಳಿಕೆಗಳನ್ನೂ ತೋರುವಲ್ಲಿ ಯಶಸ್ಸು ಕಂಡಿದ್ದಾರೆ. ಉಳಿದ ಕಟೀಲ್, ಸೀಟಿಗಳ ಪಿಟೀಲ್ ಸದ್ದುಗಳೆಲ್ಲ ಇವತ್ತು ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ಮೆಗಾ ರ‍್ಯಾಲಿಗೆ ಸೇರಿದ್ದಜನಸ್ತೋಮ ಸಿದ್ದರಾಮಯ್ಯ ಭಾಷಣಕ್ಕೆ ಮೈಕ್ ಮುಂದೆ ಬಂದು ನಿಂತಾಗತಟ್ಟಿದ ಚಪ್ಪಾಳೆ, ಶಿಳ್ಳೆ, ಕೇಕೆಗಳ ಪ್ರಚಂಡಆರ್ಭಟದಲ್ಲಿಅಡಗಿಹೋಗಲಿದೆ.