ಗುಬ್ಬಿ ಸಮಾವೇಶದಲ್ಲಿ ಡಿಕೆಶಿ ಮೇಲೆ ಕುಮಾರಣ್ಣನ ಕೆಂಗಣ್ಣು  ‘ಸಿಎಂ ಆಕಾಂಕ್ಷಿ ಒಕ್ಕಲಿಗ ನಾಯಕರಿಂದ  ಜನತಾ ದಳದ ಶಾಸಕರ ಬ್ರೇನ್‌ವಾಷ್’

ಗುಬ್ಬಿ ಸಮಾವೇಶದಲ್ಲಿ ಡಿಕೆಶಿ ಮೇಲೆ ಕುಮಾರಣ್ಣನ ಕೆಂಗಣ್ಣು  ‘ಸಿಎಂ ಆಕಾಂಕ್ಷಿ ಒಕ್ಕಲಿಗ ನಾಯಕರಿಂದ  ಜನತಾ ದಳದ ಶಾಸಕರ ಬ್ರೇನ್‌ವಾಷ್’
ಗುಬ್ಬಿ ಸಮಾವೇಶದಲ್ಲಿ ಡಿಕೆಶಿ ಮೇಲೆ ಕುಮಾರಣ್ಣನ ಕೆಂಗಣ್ಣು  ‘ಸಿಎಂ ಆಕಾಂಕ್ಷಿ ಒಕ್ಕಲಿಗ ನಾಯಕರಿಂದ  ಜನತಾ ದಳದ ಶಾಸಕರ ಬ್ರೇನ್‌ವಾಷ್’

ಗುಬ್ಬಿ ಸಮಾವೇಶದಲ್ಲಿ ಡಿಕೆಶಿ ಮೇಲೆ ಕುಮಾರಣ್ಣನ ಕೆಂಗಣ್ಣು 


‘ಸಿಎಂ ಆಕಾಂಕ್ಷಿ ಒಕ್ಕಲಿಗ ನಾಯಕರಿಂದ 


ಜನತಾ ದಳದ ಶಾಸಕರ ಬ್ರೇನ್‌ವಾಷ್’


ಗುಬ್ಬಿ: ಮುಖ್ಯಮಂತ್ರಿ ಆಗಬೇಕೆಂದು ಹೊರಟಿರುವ ನಮ್ಮ ಸಮುದಾಯದ ನಾಯಕರೊಬ್ಬರು ನಮ್ಮ ಪಕ್ಷದ ಶಾಸಕರ ಬ್ರೇನ್ ವಾಷ್ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಪ್ರಧಾನ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಸರು ಹೇಳದೆಯೇ ಆರೋಪಿಸಿದರು 

ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆದ್ದಿರುವ ಶಾಸಕ ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಅನುಪಸ್ಥಿತಿಯಲ್ಲಿ ಏರ್ಪಡಿಸಿದ್ದ ಜೆಡಿಎಸ್ ಸಮಾವೇಶ ಹಾಗೂ ಸಿ.ಎಸ್.ಪುರದ ಯುವ ಮುಖಂಡ ಬಿ. ಎಸ್. ನಾಗರಾಜುರವರ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಮ್ಮ ಭಾಷಣದ ಹೆಚ್ಚಿನ ಸಮಯವನ್ನು ಶಾಸಕ ವಾಸಣ್ಣ ಹಾಗೂ ಎಂಎಲ್ ಸಿ ಬೆಮೆಲ್ ಕಾಂತರಾಜು ರವರನ್ನು ಟೀಕಿಸಲು ಮೀಸಲಿಟ್ಟರು.

“ದೇವೇಗೌಡರು ಲೋಕಸಭಾ ಚುನಾವಣೆಗೆ ತುಮಕೂರು ಜಿಲ್ಲೆಯಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರೂ ಒತ್ತಾಯಪೂರ್ವಕವಾಗಿ ತಂದು ವ್ಯವಸ್ಥಿತವಾಗಿ ಯಾರು ಸೋಲಿಸಿದರು ಎಂಬುದು ನಮಗೆ ಗೊತ್ತಿದೆ. ಇನ್ನೂ ಪಕ್ಕದ ಕ್ಷೇತ್ರ ತುರುವೇಕೆರೆಯಲ್ಲಿ ನಮ್ಮ ಪಕ್ಷದಲ್ಲಿ ಶಾಸಕರು ಗೆದ್ದರೆ ನನಗೆ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಅಲ್ಲಿ ಅವರನ್ನು ಹೇಗೆ ಸೋಲಿಸಿದ್ದಾರೆ ಎಂಬ ಮಾಹಿತಿಯೂ ಇದೆ. 
ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಕಳೆದ 2 ವರ್ಷದಿಂದಲೂ ಸಹ ನನ್ನ ಬಗ್ಗೆ ಹಾಗೂ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡುವುದು ನನಗೆ ಗೊತ್ತಿದೆ ನಮ್ಮ ಪಕ್ಷದಲ್ಲಿಯೇ ಇದ್ದು ಈ ರೀತಿ ಮಾಡುವುದು ಒಳಿತಲ್ಲ.”

 “ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ತುಮಕೂರು ಜಿಲ್ಲೆಯಲ್ಲಿ ಕುಂಚಿಟಿಗ ಸಮಾಜದವರನ್ನು ಮಂತ್ರಿ ಮಾಡಬೇಕು ಎಂಬುದು ದೇವೆಗೌಡರ ಒತ್ತಾಯವಾಗಿತ್ತು ಆದರೆ ನಾನು ಗುಬ್ಬಿ ಶಾಸಕ ಶ್ರೀನಿವಾಸ್ ಅವರನ್ನು ಮಂತ್ರಿ ಮಾಡಿದ್ದು ನನ್ನ ತಪ್ಪಾಯಿತೆ ನಾನು ಯಾವತ್ತೂ ಅವರಿಗೆ ಮೋಸ ಮಾಡಿಲ್ಲ ನನ್ನಿಂದ ಯಾವುದೇ ಸಮಸ್ಯೆ ಅವರಿಗೆ ಆಗಿಲ್ಲ.ನನ್ನ ಬಗ್ಗೆ ಎಷ್ಟು ಬೇಕಾದರೂ ಮಾತನಾಡಿ, ಆದರೆ ಇಂತಹ ಇಳಿ ವಯಸ್ಸಿನಲ್ಲಿ ರಾಜ್ಯವನ್ನು ತಿರುಗಿ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ ಅವರ ಬಗ್ಗೆ ಮಾತಾನಾಡಬೇಡಿ, ಅವರು ಶಿವನ ಭಕ್ತರು ಅವರ ಬಗ್ಗೆ ಮಾತನಾಡಿದರೆ ದೇವರು ನೋಡಿಕೊಳ್ಳುತ್ತಾರೆ” ಎಂದು ಕುಮಾರಸ್ವಾಮಿ ಗದ್ಗದಿತರಾದರು.
“ಜೆಡಿಎಸ್ ಕಟ್ಟಿರುವುದು ನಾನು ಮತ್ತು ದೇವೇಗೌಡರಲ್ಲ ಇದು ನೀವು ಕಟ್ಟಿರುವ ಪಕ್ಷವಾಗಿದೆ, ನಾನು ಎರಡು ಸಾರಿ ಮುಖ್ಯಮಂತ್ರಿಯಾದAಥ ಸಂದರ್ಭದಲ್ಲಿ ರೈತರ ಪರವಾಗಿ ಕೆಲಸ ಮಾಡಿದ್ದೇನೆ. ಇಪ್ಪತ್ತಾರು ಲಕ್ಷ ಕುಟುಂಬದ ರೈತರ ಸಾಲ ಮನ್ನಾ ಮಾಡಿದ್ದೇನೆ.ಹಲವು ಯೋಜನೆಗಳನ್ನು ಜಾರಿಗೆ ತಂದು ನಾಡಿನ ಜನರಿಗೆ ಒಳಿತು ಮಾಡಿದ್ದೇನೆ ಎನ್ನುವ ಆತ್ಮಸಾಕ್ಷಿ ನನಗೆ ಇದೆ. 12 ವರ್ಷದಿಂದ ಪಕ್ಷ ಕಟ್ಟಬೇಕಾದರೆ ನಾನು ಎಷ್ಟು ಹಿಂಸೆ ಅನುಭವಿಸಿದ್ದೇನೆ ಎಂದು ನನಗೆ ಗೊತ್ತು ಆದರೆ ನೀವುಗಳು ಈ ಪಕ್ಷವನ್ನು ಉಳಿಸುವ ಕೆಲಸವನ್ನು ಮಾಡಿದ್ದೀರಾ ಎಂದು ಪ್ರಶ್ನಿಸಿದರು ಕುಮಾರಸ್ವಾಮಿ.

ಇಲ್ಲಿನ ಶಾಸಕರು ನನಗೆ ವರ್ಚಸ್ಸು ಇಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ ಈಗ ವರ್ಚಸ್ಸು ಬೆಳೆಸಲು ಓಡಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಕೊರೋನಾ ಇದ್ದ ಕಾರಣ ಎಲ್ಲಿಯೂ ಸಹ ಸಂಘಟನೆ ಮಾಡುವುದಕ್ಕೆ ಬರಲಿಲ್ಲ ಸಾವು ನೋವುಗಳಿದ್ದಾಗ ನಾವು ರಾಜಕೀಯ ಮಾಡಬಾರದು ಅನ್ನುವ ದೃಷ್ಟಿಯಲ್ಲಿ ಈಗ ಹೋರಾಟ ಮಾಡುತ್ತಿದ್ದೇವೆ. 2 ಬಾರಿ ಬೇರೆಯವರ ಹಂಗಿನಲ್ಲಿ ಮುಖ್ಯಮಂತ್ರಿಯಾಗಿದ್ದೇನೆ, 123 ಸೀಟುಗಳನ್ನು ರಾಜ್ಯದ ಜನರು ಈ ಬಾರಿ ಕೊಡಬೇಕು ಎಂದು ಮನವಿ ಮಾಡಿದರು.


ಆಹ್ವಾನ ನೀಡಿ, ಬರ ಹೇಳಿದರೂ 
ವಾಸಣ್ಣ ಬರಲಿಲ್ಲ, ಮಾತಾಡಲಿಲ್ಲ 
ಇಂದು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ನಾಗರಾಜುರವರಿಗೆ ನಾನೇ ಕರೆ ಮಾಡಿ ಶ್ರೀನಿವಾಸ್ ಅವರ ಮನೆಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡುವಂತೆ ಹೇಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವಂತೆ ಕೇಳಿಕೊಳ್ಳಿ ಎಂದು ತಿಳಿಸಿದ್ದೆ. ಆದರೆ ಆ ಆಹ್ವಾನವನ್ನು ಅವರು ತಿರಸ್ಕಾರ ಮಾಡಿದ್ದಾರೆ. ಮತ್ತು ಸಿಂಧಗಿಗೆ ಬಂದು ಮಾತನಾಡಿ ಎಂದು ಸಹ ನಾನು ಹೇಳಿದ್ದೆ. ಆದರೆ ಅಲ್ಲಿಗೂ ಸಹ ಬರಲಿಲ್ಲ 
ಬಿಡದಿಯಲ್ಲಿ ನಡೆದ ಸಭೆಗೂ ಕೂಡ ನಾನೇ ಕರೆ ಮಾಡಿ ಬನ್ನಿ ಎಂದರೂ ಸಹ ಮೊದಲ ದಿನ ಬಂದು ಏನೂ ಮಾತನಾಡದೆ ಹೋಗಿದ್ದಾರೆ . ಹೋಗುವುದಾದರೆ ಬೇರೆ ಪಕ್ಷಕ್ಕೆ ಸಂತೋಷವಾಗಿ ಹೋಗಲಿ ಆದರೆ ಪಕ್ಷದ ಬಗ್ಗೆ ಎಲ್ಲಿಯೂ ಮಾತನಾಡಬೇಡಿ ಎಂದು ಮನವಿ ಮಾಡಿದರು ಕುಮಾರಸ್ವಾಮಿ.


ಎಂ.ಟಿ.ಕೃಷ್ಣಪ್ಪರನ್ನು ಸೋಲಿಸಿದ್ದು 
ಇದೇ ಎಂಎಲ್‌ಸಿ ಕಾಂತರಾಜು !

ಎಂಎಲ್ ಸಿ ಕಾಂತರಾಜು ಮೇಲೆ ವಾಗ್ದಾಳಿ 
ತುರುವೇಕೆರೆ ಕ್ಷೇತ್ರದಲ್ಲಿ ಎಂ.ಟಿ. ಕೃಷ್ಣಪ್ಪ ಸೋಲಿಗೆ ಮೂಲಕಾರಣ ಎಂಎಲ್‌ಸಿ ಕಾಂತರಾಜು. ಎಲ್ಲೋ ಇದ್ದವರನ್ನು ತುಮಕೂರು ಜಿಲ್ಲೆಗೆ ಕರೆದುಕೊಂಡು ಬಂದು ಎಂಎಲ್‌ಸಿ ಮಾಡಿದ ಪ್ರತಿಫಲವಾಗಿ ತುರುವೇಕೆರೆ ಕ್ಷೇತ್ರವನ್ನು ನಾವು ಕಳೆದುಕೊಂಡಿದ್ದೇª.ೆ ಚುನಾವಣಾ ಸಮಯದಲ್ಲಿ ಕಾಂತರಾಜು ಅವರ ಸಂಬAಧಿ ನಾರಾಯಣಗೌಡ ಎಂಬ ವ್ಯಕ್ತಿಯನ್ನು ನಿಲ್ಲಿಸಿ ಕೃಷ್ಣಪ್ಪ ಅವರನ್ನ ಸೋಲಿಸಲಾಗಿದೆ 
ದೇವೇಗೌಡರಿಗೆ ಯಾರು, ಎಷ್ಟು ಜನ ಟೋಪಿ ಹಾಕಿದ್ದಾರೆ ಎಂಬುದು ಗೊತ್ತಿದೆ ಅವರಿಗೆ ಏನಾಗಿದ್ದಾರೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಹಾಗಾಗಿ ಈ ಪಕ್ಷವನ್ನು ಉಳಿಸುವ ಬೆಳೆಸುವಂತಹ ಕೆಲಸ ನಿಮ್ಮದು ಎಂದು ತಿಳಿಸಿದ ಅವರು ಗುಬ್ಬಿಯಲ್ಲಿ 3 ಬಾರಿ ನಮ್ಮ ಪಕ್ಷಕ್ಕೆ ಗೆಲುವನ್ನು ಕೊಟ್ಟಿರುವ ನೀವು ಈ ಬಾರಿಯೂ ಸಹ ಗೆಲುವನ್ನ ಕೊಡಬೇಕು ಎಂದು ಮಾರ್ಮಿಕವಾಗಿ ನಾಗರಾಜ್ ಮುಖ ನೋಡಿ ಹೇಳಿದರು.
ಭಾಗವಹಿಸಿದ್ದ ಗಣ್ಯರು
ಜೆಡಿಎಸ್ ಜಿಲ್ಲಾ ಅಧ್ಯಕ್ಷ ಆರ್.ಸಿ.ಆಂಜಿನಪ್ಪ, ಪಾವಗಡ ಮಾಜಿ ಶಾಸಕ ತಿಮ್ಮರಾಯಪ್ಪ, ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮಧುಗಿರಿ ಶಾಸಕ ವೀರಭದ್ರಯ್ಯ ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ , ಚಿನಾ ಹಳ್ಳಿ ಮಾಜಿ ಶಾಸಕ ಸುರೇಶ್ ಬಾಬು, ಮಾಜಿ ಸಚಿವ ಡಿ. ನಾಗರಾಜಯ್ಯ, ಮಾಜಿ ಶಾಸಕರಾದ ಸುಧಾಕರ್ ಲಾಲ್ , ಹೆಚ್. ನಿಂಗಪ್ಪ ಸೇರಿದಂತೆ ಜಿಲ್ಲೆಯ ಜೆಡಿಎಸ್ ಮುಖಂಡರುಗಳು.



ಪಕ್ಷ ಬಲಪಡಿಸುವೆ: 
ಬಿ.ಎಸ್.ನಾಗರಾಜು
ಜೆಡಿಎಸ್ ಸೇರ್ಪಡೆಗೊಂಡ ಬಿ. ಎಸ್. ನಾಗರಾಜು ಮಾತನಾಡಿ ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಬಂದರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ನಂಬಿರುವ ನಾನು ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ನಾಯಕತ್ವ ಮತ್ತು ಅವರ ಜನಪರ ಕಾಳಜಿಯನ್ನು ಮೆಚ್ಚಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಮುಂದಿನ ದಿನದಲ್ಲಿ ಗುಬ್ಬಿ ತಾಲ್ಲೂಕಿನ ಗಲ್ಲಿಗಲ್ಲಿಯಲ್ಲಿ ತಿರುಗಿ ಪಕ್ಷದ ಸಂಘಟನೆ ಹಾಗೂ ಯುವಕರನ್ನು ಒಗ್ಗೂಡಿಸಿ ಪಕ್ಷದ ಬಲವರ್ಧನೆಗೆ ಮುಂದಾಗುತ್ತೇನೆ ಎಂದರು.
ಗುಬ್ಬಿ ಶ್ರೀ ಚನ್ನಬಸವೇಶ್ವರ ಸ್ವಾಮಿಯ ದೇವಾಲಯದ ಆವರಣದಿಂದ ಬೈಕ್ ರ‍್ಯಾಲಿ ಮೂಲಕ ವೇದಿಕೆಗೆ ಕುಮಾರಸ್ವಾಮಿ ಆಗಮಿಸುವ ಮುನ್ನ ಜೆಸಿಬಿಗಳನ್ನು ಬಳಸಿ ಐನೂರು ಕೆಜಿ ಸೇಬಿನ ಹಾರ ಹಾಕಿ ಸ್ವಾಗತಿಸಲಾಯಿತು.