ದೇಶದ ಮೊದಲ ಶೌರ್ಯ ಪ್ರಶಸ್ತಿ ಪುರಸ್ಕೃತರ ಚಿತ್ರ ಡಿ.30ರಂದು ಬಿಡುಗಡೆ ಮಕ್ಕಳಲ್ಲಿ ನಾಯಕತ್ವ ಕೌಶಲ್ಯ, ನೈತಿಕತೆ ಬೆಳೆಸುವ ಉದ್ದೇಶ-ಸಹ ನಿರ್ಮಾಪಕ ಚಂದ್ರಶೇಖರ್

shourya prashasti children film

ದೇಶದ ಮೊದಲ ಶೌರ್ಯ ಪ್ರಶಸ್ತಿ ಪುರಸ್ಕೃತರ ಚಿತ್ರ ಡಿ.30ರಂದು ಬಿಡುಗಡೆ ಮಕ್ಕಳಲ್ಲಿ ನಾಯಕತ್ವ ಕೌಶಲ್ಯ, ನೈತಿಕತೆ ಬೆಳೆಸುವ ಉದ್ದೇಶ-ಸಹ ನಿರ್ಮಾಪಕ ಚಂದ್ರಶೇಖರ್

ದೇಶದ ಮೊದಲ ಶೌರ್ಯ ಪ್ರಶಸ್ತಿ ಪುರಸ್ಕೃತರ ಚಿತ್ರ ಡಿ.30ರಂದು ಬಿಡುಗಡೆ
ಮಕ್ಕಳಲ್ಲಿ ನಾಯಕತ್ವ ಕೌಶಲ್ಯ, ನೈತಿಕತೆ ಬೆಳೆಸುವ ಉದ್ದೇಶ-ಸಹ ನಿರ್ಮಾಪಕ ಚಂದ್ರಶೇಖರ್

ಕೋಲಾರ: ಮಕ್ಕಳಲ್ಲಿ ನಾಯಕತ್ವ ಕೌಶಲ್ಯ, ನೈತಿಕ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ದೇಶದ ಮೊಟ್ಟಮೊದಲ ಶೌರ್ಯ ಪ್ರಶಸ್ತಿ ಪುರಸ್ಕೃತ ಹರಿಶ್ಚಂದ್ರ ಮೆಹ್ರಾ ಅವರ ಜೀವನವನ್ನಾಧರಿಸಿದ `ಪದಕ' ಚಲನ ಚಿತ್ರವನ್ನು ರಾಜ್ಯ ನೌಕರರ ಸಂಘದ ಅಧ್ಯಕ್ಷರ ಸಮ್ಮುಖದಲ್ಲಿ ಸುತ್ತೂರು ಶ್ರೀಗಳು ಡಿ.30 ರಂದು ಬಿಡುಗಡೆ ಮಾಡಲಿದ್ದಾರೆ ಎಂದು ಚಾಮರಾಜನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಚಿತ್ರದ ಸಹ ನಿರ್ಮಾಪಕ ಚಂದ್ರಶೇಖರ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಈ ಸಂಬAಧ ಚಿತ್ರದ ಆನ್‌ಲೈನ್ ವೀಕ್ಷಣೆಗೆ ಅವಕಾಶ ಕಲ್ಪಿಸುವ ಟಿಕೆಟ್‌ಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ರಾಜ್ಯದ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಎಲ್ಲಾ 30 ಜಿಲ್ಲೆಗಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಚಿತ್ರದ ನಿರ್ಮಾಪಕರ,ನಿರ್ದೇಶಕರಾದ ಆದಿತ್ಯ ಚಿರಂಜೀವಿ ಸಮ್ಮುಖದಲ್ಲಿ ಚಿತ್ರವನ್ನು ಡಿ.30 ರಂದು ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದರು.
ಬಾರ್‌ಕೋಡ್ ಬಳಸಿ
ಚಿತ್ರವೀಕ್ಷಣೆಗೆ ಕ್ರಮ
ಈ ಚಿತ್ರದ ಟಿಕೆಟ್‌ಗಳನ್ನು 100 ರೂಗೆ ಸರ್ಕಾರಿ ನೌಕರರಿಗೆ ನೀಡುತ್ತಿದ್ದು, ಚಿತ್ರವನ್ನು ಟಿಕೆಟ್ ಮೇಲಿನ ಬಾರ್‌ಕೋಡ್ ಬಳಸಿ ಡಿ.30 ರಿಂದ 10ನೇ ತಾರೀಖಿನೊಳಗೆ ದಿನಕ್ಕೆ 4 ಶೋಗಳಂತೆ ಬೆಳಗ್ಗೆ 10 ಗಂಟೆ, 1 ಗಂಟೆ, 4 ಗಂಟೆ ಹಾಗೂ7 ಗಂಟೆಗೆ ಚಿತ್ರ ಪ್ರದರ್ಶನಗೊಳ್ಳಲಿದ್ದು, ಒಂದು ಬಾರಿ ಮಾತ್ರ ಮೊಬೈಲ್ ಅಥವಾ ಸ್ಕಿçÃನ್ ಮಿರರ್ ಮೂಲಕ ಟಿವಿಯಲ್ಲಿ ವೀಕ್ಷಿಸಲು ಅವಕಾಶವಿದೆ ಎಂದು ತಿಳಿಸಿ, ಇದು ವಿಶಿಷ್ಟ ರೀತಿಯ ಪ್ರಯತ್ನವಾಗಿದೆ ಎಂದು ತಿಳಿಸಿದರು.
ಕೆಜಿಎಫ್ ಚಿತ್ರದ
ಅನ್‌ಮೋಲ್ ನಾಯಕ
ಈ ಚಿತ್ರದಲ್ಲಿ ಬರುವ 1957ರ ಪ್ರಥಮ ಶೌರ್ಯ ಪ್ರಶಸ್ತಿ ಪುರಸ್ಕೃತ ಹರಿಶ್ಚಂದ್ರ ಮೆಹ್ರಾ ಅವರ ಪಾತ್ರವನ್ನು ಕೆಜಿಎಫ್ ಚಿತ್ರದ ಯಶ್ ಬಾಲಕನ ಪಾತ್ರದಾರಿ ಅನ್‌ಮೋಲ್ ಭಾಸ್ಕರ್ ನಿರ್ವಹಿಸಿದ್ದಾರೆ ಎಂದರು.
ಚಿತ್ರದಲ್ಲಿ ಡ್ರಾಮ ಜೂನಿಯರ್ ಖ್ಯಾತಿಯ ತುಷಾರ್, ಮಹೇಂದ್ರ, ಹಿರಿಯ ನಟ ಎಸ್.ಕೆ.ಶ್ರೀಧರ್, ಮಂಜುಳಾರೆಡ್ಡಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದು ತಿಳಿಸಿದರು.
ಚಿತ್ರ ಕಥೆ ಹಿನ್ನಲೆ
ನೈತಿಕ ಮೌಲ್ಯವೃದ್ದಿ
1857 ರಲ್ಲಿ ಅಂದಿನ ಪ್ರಧಾನಿ ನೆಹರು ಅವರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಮಾರಂಭ ನಡೆಸುತ್ತಿದ್ದ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಅಗ್ನಿ ಅವಘಡದ ಸಂದರ್ಭದಲ್ಲಿ ಸ್ಕೌಟ್ಸ್ಗೈಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹರಿಶ್ಚಂದ್ರ ಮೆಹ್ರಾ 20 ಅಡಿ ಕಂಬವನ್ನು ಹತ್ತಿ, ಪೆಂಡಾಲ್‌ಅನ್ನು ಬೇರ್ಪಡಿಸಿ ಅಪಾರ ಸಾವು ನೋವನ್ನು ತಪ್ಪಿಸಿದ್ದರು.
ಈ ಬಾಲಕನನ್ನು ನೆಹರು ಅವರೇ ಕರೆದು ಮೊದಲ ಶೌರ್ಯ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದ್ದು, ಆತನ ಜೀವನ ಕಥೆಯೇ ಈ ಚಿತ್ರದ ಪ್ರಮುಖ ಕಥಾವಸ್ತುವಾಗಿದೆ ಎಂದು ತಿಳಿಸಿದರು.
ಈ ಚಿತ್ರ ಕನ್ನಡದಲ್ಲಿ ಪ್ರದರ್ಶನಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಹಿಂದಿ ಅವತರಣಿಕೆ ಸಿದ್ದಗೊಳಿಸುವ ಪ್ರಯತ್ನ ಮುಂದುವರೆದಿದ್ದ, ಕೇಂದ್ರಿಯ ವಿದ್ಯಾಲಯಗಳಲ್ಲೂ ಪ್ರದರ್ಶನದ ಉದ್ದೇಶ ಹೊಂದಲಾಗಿದ ಎಂದರು.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ಚಾಮರಾಜನಗರ ನೌಕರರ ಸಂಘದ ಅಧ್ಯಕ್ಷರು ನಡೆಸಿರುವ ಈ ಪ್ರಯತ್ನ ಶ್ಲಾಘನೀಯವಾಗಿದ್ದು, ಅದರಲ್ಲೂ ಸರ್ಕಾರಿ ನೌಕರರಿಗೆ ಟಿಕೆಟ್ ವಿತರಿಸುವ ಮೂಲಕ ಚಿತ್ರವೀಕ್ಷಣೆಗೆ ಮೊದಲ ಅವಕಾಶ ಕಲ್ಪಿಸಿದ್ದಾರೆ, ಮಕ್ಕಳಲ್ಲಿ ಜೀವನ ಕೌಶಲ್ಯ, ನೈತಿಕ ಮೌಲ್ಯಗಳನ್ನು ತುಂಬಿ ಸಮಾಜಕ್ಕೆ ಆಸ್ತಿಯಾಗಿಸುವ ಪ್ರಯತ್ನದಲ್ಲಿ ಇಂತಹ ಚಿತ್ರಗಳು ಅಗತ್ಯವಿದೆ ಎಂದು ತಿಳಿಸಿ ಜಿಲ್ಲೆಯಲ್ಲಿ ಚಿತ್ರದ ಟಿಕೆಟ್ ಮಾರಾಟಕ್ಕೆ ಪೂರ್ಣ ಸಹಕಾರದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಚಿತ್ರ ನಿರ್ಮಾಪಕ ಜಿರಂಜೀವಿ ಆದಿತ್ಯ, ಜಿಲ್ಲಾ ನೌಕರರ ಸಂಘದ ಗೌರವಾಧ್ಯಕ್ಚ ಶ್ರೀನಿವಾಸರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಖಜಾಂಚಿ ವಿಜಯ್,ರಾಜ್ಯಪರಿಷತ್ ಸದಸ್ಯ ಗೌತಮ್, ಉಪಾಧ್ಯಕ್ಷರಾದ ಪುರುಷೋತ್ತಮ್ ಅಜಯ್, ಕ್ರೀಡಾ ಸಂಘದ ಅಧ್ಯಕ್ಷ ಎಂ.ನಾಗರಾಜ್, ಕಾರ್ಯದರ್ಶಿ ಇಂಚರನಾರಾಯಣಸ್ವಾಮಿ, ನೌಕರರ ಸಂಘದ ಪದಾಧಿಕಾರಿಗಳಾದ ಪಿಡಿಒ ನಾಗರಾಜ್,ಚಂದ್ರಪ್ಪ, ವಿಜಯಮ್ಮ, ಪ್ರೇಮಾ, ಸುನೀಲ್,ಸಂದೀಪ್,ವಿಜಯ್,ನವೀನಾ, ಆರ್.ನಾಗರಾಜ್, ಡಿ.ವಿ.ಅರುಣ್‌ಕುಮಾರ್ ಮತ್ತಿತರರಿದ್ದರು.

ಚಿತ್ರಶೀರ್ಷಿಕೆ:(ಫೋಟೊ-10ಕೋಲಾರ1):ಭಾರತದ ಮೊಟ್ಟಮೊದಲ ಶೌರ್ಯ ಪ್ರಶಸ್ತಿ ಪುರಸ್ಕೃತ ಹರಿಶ್ಚಂದ್ರ ಮೆಹ್ರಾ ಅವರ ಜೀವನವನ್ನಾಧರಿಸಿದ `ಪದಕ' ಚಲನ ಚಿತ್ರದ ಆನ್‌ಲೈನ್ ಟಿಕೆಟ್‌ಗಳನ್ನು ಚಾಮರಾಜನಗರ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹಾಗೂ ಕೋಲಾರ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಬಿಡುಗಡೆ ಮಾಡಿದರು.
-___________________________