ಸೂಳೇಕೆರೆಯಲ್ಲಿ ವೀರಭದ್ರೇಶ್ವರ ಅಗ್ನಿಕೊಂಡ ಉತ್ಸವ
ಸೂಳೇಕೆರೆಯಲ್ಲಿ ವೀರಭದ್ರೇಶ್ವರ ಅಗ್ನಿಕೊಂಡ ಉತ್ಸವ
ಸೂಳೇಕೆರೆಯಲ್ಲಿ ವೀರಭದ್ರೇಶ್ವರ ಅಗ್ನಿಕೊಂಡ ಉತ್ಸವ
ತುರುವೇಕೆರೆ: ಇತಿಹಾಸ ಪ್ರಸಿದ್ದ ಶ್ರೀ ಭದ್ರಕಾಳಿ ಮತ್ತು ಶ್ರೀ ವೀರಭದ್ರಸ್ವಾಮಿಯವರ ಅಗ್ನಿಕೊಂಡ ಜಾತ್ರಾ ಮಹೋತ್ಸವವು ಸೂಳೇಕೆರೆಯ ಮೂಲಸ್ಥಾನದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿAದ ನೆರವೇರಿತು.
ಅಗ್ನಿಕೊಂಡದ ಅಂಗವಾಗಿ ಮೂಲದೇವರಿಗೆ ಅಕ್ಕಿಪೂಜೆ ಏರ್ಪಡಿಸಲಾಗಿತ್ತು. ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಕುಂಕುಮಾರ್ಚನೆಯೊAದಿಗೆ ಕಳಸ ಪೂಜೆ, ಗಂಗಾಪೂಜೆ, ಮಡಿ ಸಂತರ್ಪಣೆ ನೆರವೇರಿತು. ವಿದ್ಯುತ್ ದೀಪಗಳಿಂದ ಅಲಂಕೃತವಾದ ಮುತ್ತಿನ ಪಲ್ಲಕ್ಕಿಯಲ್ಲಿ ಸ್ವಾಮಿಯವರನ್ನು ಕೂರಿಸಿ ಧ್ವಜಕುಣಿತ, ಲಿಂಗದ ವೀರರ ಕುಣಿತ ಸೇರಿದಂತೆ ಅನೇಕ ಜಾನಪದ ಕಲಾ ಪ್ರಕಾರಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿAದ ಉತ್ಸವ ನಡೆಯಿತು. ವಿಶೇಷವಾಗಿ ಮದ್ದಿನ ಚಮತ್ಕಾರ ಹಾಗೂ ಬಾಣಬಿರುಸು ಭಕ್ತರ ಕಣ್ಮನ ತಣಿಸಿತು.
ಮುಂಜಾನೆ 5 ಗಂಟೆಗೆ ಅಗ್ನಿಕೊಂಡ ಪ್ರಾರಂಭವಾಗಿ ಮೊದಲು ಶ್ರೀ ವೀರಭದ್ರಸ್ವಾಮಿ ಹಾಗೂ ಶ್ರೀ ಭದ್ರಕಾಳಿದೇವರನ್ನು ಸಾವಿರಾರು ಭಕ್ತರ ಜಯಘೋಷದೊಂದಿಗೆ ಅಗ್ನಿಕೊಂಡ ಹಾಂiÀiಲಾಯಿತು. ಈ ಬಾರಿಯೂ ಸಹಾ ಅಗ್ನಿಕೊಂಡ ಮಹೋತ್ಸವಕ್ಕೆ ತಾಲೂಕು ಆಡಳಿತ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರಿಂದ ಭಕ್ತರು ಸರದಿಯಲ್ಲಿ ಕೊಂಡ ಹಾಯ್ದರು. ಸ್ಥಳದಲ್ಲಿ ಅಗ್ನಿಶಾಮಕ ದಳ, ಆಂಬುಲೆನ್ಸ್ ಹಾಗೂ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹರಕೆ ಹೊತ್ತ ಸಾವಿರಾರು ಭಕ್ತರು ಮುಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನೂರಾರು ತೆಂಗಿನಕಾಯಿ ಒಡೆಯುವ ಮೂಲಕ ಭಕ್ತರು ತಮ್ಮ ಹರಕೆ ತೀರಿಸಿದರು. ಮೂರು ವರ್ಷಗಳಿಂದಲೂ ಕೊರೋನಾ ಭೀತಿ ಇತ್ತು. ಆದರೆ ಈ ಬಾರಿ ಹೆಚ್ಚು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.