ಚೇಳೂರು: ಕೋಟಿ ರೂ. ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಚೇಳೂರು: ಕೋಟಿ ರೂ. ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಚೇಳೂರು: ಕೋಟಿ ರೂ. ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಗುಬ್ಬಿ:  ನಾನು ಜಿಲ್ಲಾ ಪಂಚಾಯಿತಿಯಿಂದ ಆಯ್ಕೆ ಆಗದಂತಹ ಸಂದರ್ಭದಲ್ಲಿ ಜನರೇ ನೀವು ಶಾಸಕರಾಗಬೇಕು. ಚುನಾವಣೆಗೆ ಬನ್ನಿ ಎಂದು ಬೆನ್ನು ತಟ್ಟಿ ಹಿಂದೆ ನಿಂತರು. ಹಾಗಾಗಿ ನಾನು ವಿಧಾನಸಭಾ ಕ್ಷೇತ್ರದಲ್ಲಿ ನಿಂತು ಗೆಲುವು ಪಡೆದು ಶಾಸಕನಾದೆ ಎಂದು ಮಾಜಿ ಸಚಿವ ಶಾಸಕ ವಾಸಣ್ಣ ತಿಳಿಸಿದರು.
ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ದೆಜಡ್ಡ ಹೆಡಗಿಹಳ್ಳಿ ಗ್ರಾಮದಲ್ಲಿ ೧ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಗೆ ಅತ್ಯಂತ ಹೆಚ್ಚುವರಿ ಅನುದಾನವನ್ನು ಹಾಕಿ ರಸ್ತೆ ಕಾಮಗಾರಿ ಸೇರಿದಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮಠದ ಹಳ್ಳದ ಕೆರೆಯ ನೀರಾವರಿ ವಿಚಾರದಲ್ಲಿ ಈ ಭಾಗದ ರೈತರು ಪ್ರತಿಭಟನೆ ಮಾಡಿದ್ದಾರೆ. ಇದಕ್ಕೆ ಸಂಬAಧಪಟ್ಟAತೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕರನ್ನು ಭೇಟಿ ಮಾಡಿದ್ದೇನೆ. ಮುಖ್ಯಮಂತ್ರಿ ಬೊಮ್ಮಾಯಿ ಅವರ ಬಳಿಯೂ ಸಹ ಮಾತುಕತೆ ಮಾಡಿದ್ದು ಇದು ಕೂಡಲೇ ಶೀಘ್ರವಾಗಿ ಆಗಬೇಕು ಎಂದು ಮನವಿ ಸಲ್ಲಿಸಿದ್ದೇನೆ ಎಂದರು.
ಹಿAದೆ ೨೫ ಕೋಟಿ ವೆಚ್ಚದಲ್ಲಿ ಟೆಂಡರನ್ನು ಮಾಡಿಸಲಾಗಿತ್ತು. ಅದು ಸಿಂಗಲ್ ಟೆಂಡರ್ ಆಗಿದ್ದರಿಂದ ಕಾಮಗಾರಿ ನಡೆದಿರಲಿಲ್ಲ. ಮತ್ತೆ ಟೆಂಡರ್ ಮಾಡುವಂತಹ ಸಂದರ್ಭದಲ್ಲಿ ಸರಕಾರ ಬಿದ್ದುಹೋಗಿತ್ತು. ಮತ್ತೆ ಸರ್ಕಾರಕ್ಕೆ ವಿಧಾನಸಭೆಯಲ್ಲಿ ಪ್ರಶ್ನೆಯನ್ನು ಕೇಳಿದ್ದು ಬೊಮ್ಮಾಯಿಯವರು ಹಿಂದೆ ಆಗಿರುವಂತಹ ಎಲ್ಲ ಟೆಂಡರ್ ಪ್ರಕ್ರಿಯೆಗಳನ್ನು ಮುಗಿಸಿ ಕಾರ್ಯರೂಪಕ್ಕೆ ತರುವ ಭರವಸೆ ನೀಡಿದ್ದು ಇನ್ನು ಕೆಲವೇ ದಿನಗಳಲ್ಲಿ ಮಠದ ಕೆರೆಗೆ ನೀರು ಹರಿಸುವ ಕೆಲಸಗಳು ನಡೆಯುತ್ತವೆ ಎಂದು ತಿಳಿಸಿದರು.
ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಕರಿಯಮ್ಮ ರಮೇಶ್, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಲಕ್ಷ್ಮಿಕಾಂತ್, ಮುಖಂಡರಾದ ಮುದ್ದಣ್ಣ, ಸಣ್ಣ ಮುತ್ತಯ್ಯ, ಹನುಮಂತರಾಜು, ಗುತ್ತಿಗೆದಾರ ರವಿಕುಮಾರ್ ಹಾಜರಿದ್ದರು


ನಮ್ಮ ನಾಯಕರಿಂದಲೇ ಗೊಂದಲ ಸೃಷ್ಟಿ
ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ. ಅದರಲ್ಲಿಯೇ ಮುಂದುವರಿಯುತ್ತೇನೆ. ಆದರೆ ನಮ್ಮ ನಾಯಕರೇ ಒಂದಷ್ಟು ಗೊಂದಲವನ್ನು ಸೃಷ್ಟಿ ಮಾಡಿ ಬೇರೊಬ್ಬರಿಗೆ ಟಿಕೆಟ್ ನೀಡುತ್ತೇವೆ ಎಂಬ ಮಾಹಿತಿಯನ್ನು ತಾಲ್ಲೂಕಿನಲ್ಲಿ ಹರಿಬಿಟ್ಟಿರುವುದು ಏಕೆ ಅಂತ ನನಗಂತೂ ತಿಳಿಯುತ್ತಿಲ್ಲ ಎಂದರು.
ನಾನು ಎಲ್ಲಿಯೂ ಪಕ್ಷವನ್ನು ಬಿಡುತ್ತೇನೆ ಎಂದು ಹೇಳಿಲ್ಲ. ಮೊನ್ನೆ ನಡೆದ ಜನತಾಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಕುಮಾರಸ್ವಾಮಿ, ದೇವೆಗೌಡರ ಜೊತೆ ಮತ್ತು ನಮ್ಮ ಎಲ್ಲ ಪಕ್ಷದ ಮುಖಂಡರ ಜತೆ ಮಾತನಾಡಿದ್ದೇನೆ. ಹೀಗಿರುವಾಗ ಪಕ್ಷ ಬಿಡುವ ಮಾತಿಲ್ಲ. ಆದರೂ ಗೊಂದಲ ಸೃಷ್ಟಿ ಮಾಡಿದವರೇ ಈ ಗೊಂದಲವನ್ನು ಬಗೆಹರಿಸಬೇಕು ಎಂದರು.
ಜನರೇ ನಮ್ಮ ನಾಯಕರು. ಅವರದೇ ಅಂತಿಮ ತೀರ್ಪು ಆಗಿರುವುದರಿಂದ ಅವರು ಯಾವ ನಿರ್ಧಾರಕ್ಕೆ ಬರುತ್ತಾರೋ ಅದೇ ಆಗುತ್ತದೆ. ಹಾಗಾಗಿ ಮುಂದಿನ ದಿನದಲ್ಲಿ ಏನಾಗುತ್ತದೆಯೋ ನಾನು ಸಹ ಕಾಯುತ್ತಿದ್ದೇನೆ ಎಂದರು. ಈ ಮಾತಿನಿಂದ ತಾನು ಜೆಡಿಎಸ್‌ನಲ್ಲೇ ಇದ್ದೇನೆ ಎಂದು ಹೇಳುತ್ತಲೇ, ಮುಂದೆ ಏನಾದರೂ ಆಗಬಹುದು ಎಂಬ ಸೂಚನೆ ನೀಡಿದರು.