‘ ಅಧಿಕಾರ ಪಡೆಯುವಲ್ಲಿ ಯುವಕರ ಪಾತ್ರ ಮುಖ್ಯ’ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಕೆ.ಎನ್.ರಾಜಣ್ಣ ಕಿವಿಮಾತು

‘ ಅಧಿಕಾರ ಪಡೆಯುವಲ್ಲಿ ಯುವಕರ ಪಾತ್ರ ಮುಖ್ಯ’ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಕೆ.ಎನ್.ರಾಜಣ್ಣ ಕಿವಿಮಾತು

‘ ಅಧಿಕಾರ ಪಡೆಯುವಲ್ಲಿ ಯುವಕರ ಪಾತ್ರ ಮುಖ್ಯ’  ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಕೆ.ಎನ್.ರಾಜಣ್ಣ ಕಿವಿಮಾತು

‘ ಅಧಿಕಾರ ಪಡೆಯುವಲ್ಲಿ ಯುವಕರ ಪಾತ್ರ ಮುಖ್ಯ’

ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಕೆ.ಎನ್.ರಾಜಣ್ಣ ಕಿವಿಮಾತು

 

ಮಧುಗಿರಿ :  ಯುವಕರು ಹಳ್ಳಿಗಳಲ್ಲಿ ಜನರ ಪರವಾಗಿ ಕೆಲಸ ನಿರ್ವಹಿಸಿ ಅವರ ಮನಸ್ಸನ್ನು ಗೆಲ್ಲಿ. ಜನರೊಂದಿಗೆ ತೊಡಗಿಸಿಕೊಂಡು ಅವರ ವಿಶ್ವಾಸ ಗಳಿಸಿದಾಗ ಮಾತ್ರ ನಾಯಕರಾಗಲು ಸಾಧ್ಯ. ರಾಷ್ಟ್ರದ ಭವಿಷ್ಯ ಯುವಕರ ಕೈಯಲ್ಲಿದೆ, ಯುವಕರಿಗೆ ದೇಶದ ಚಿತ್ರಣವನ್ನು ಬದಲಾಯಿಸುವ ಶಕ್ತಿಯಿದ್ದು, ಯಾವುದೇ ಪಕ್ಷ ಅಧಿಕಾರ ಪಡೆಯುವಲ್ಲಿ ಯುವಕರ ಪಾತ್ರ ಅತೀ ಮುಖ್ಯ ಎಂದು ಪ್ರದೇಶ ಕಾಂಗ್ರೆಸ್ ಉಪಾಧ್ಯಕ್ಷ ,ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ತಿಳಿಸಿದರು.

 

ಪಟ್ಟಣದ ಅವರ ನಿವಾಸದಲ್ಲಿ ಶುಕ್ರವಾರ  "ಯೂತ್ ಜೋಡೋ - ಬೂತ್ ಜೋಡೋ" ಘೋಷಣೆಯಡಿ ಯುವ  ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ  ಮಾತನಾಡಿದರು. ಎಂದರು. 

 

ಟಿಪ್ಪು ನಾಲ್ಕು  ಯುದ್ದಗಳಲ್ಲಿ ಭಾಗವಹಿಸಿದ ಅಪ್ಪಟ ಹೋರಾಟಗಾರ. ತನ್ನ ಮಕ್ಕಳನ್ನೇ ಬ್ರಿಟಶರಿಗೆ ಅಡವಿಟ್ಟಿದ್ದ, ಅಂತಹ ಹೋರಾಟಗಾರನನ್ನು ಬಿಜೆಪಿಯವರು ದ್ವೇಷಿಸುತ್ತಾರೆ. ದಲಿತರ ಮನೆಗಳಲ್ಲಿ ಊಟ ಮಾಡುವ ನೆಪದಲ್ಲಿ ಹೋಟೆಲ್ ನಿಂದ ಊಟ ತಂದು ಅವರ ಮನೆಗಳ ಮುಂದೆ ತಿಂದು ಪೋಸ್ ಕೊಡುತ್ತಿದ್ದಾರೆ.  ಎಲ್ಲಾ ಜಾತಿಯವರನ್ನು ಸಮಾನವನ್ನಾಗಿ ಕಾಣುವುದು ಕಾಂಗ್ರೆಸ್ ಪಕ್ಷ ಮಾತ್ರ ಎಂಬುದನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು. ಅಧಿಕಾರಕ್ಕೆ ಬಂದರೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಅಧಿಕಾರ ಹಿಡಿದ ಪ್ರಧಾನಿ ನರೇಂದ್ರ ಮೋದಿಯವರು ಇಂದು  ತಿನ್ನುವ  ಅನ್ನದ ಮೇಲೂ ಶೇ. 5 ರಷ್ಟು ತೆರಿಗೆ ವಿಧಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

 

ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಮಾತನಾಡಿ ಕೆ.ಎನ್. ರಾಜಣ್ಣನವರು ಶಾಸಕರಾಗಿ ಆಯ್ಕೆಯಾಗಿದ್ದರೆ ಎತ್ತಿನ ಹೊಳೆ ಯೋಜನೆ ಕಾಮಗಾರಿಗೆ ವೇಗ ದೊರೆಯುತ್ತಿತ್ತು. ಮಧುಗಿರಿಯನ್ನು ಜಿಲ್ಲೆಯನ್ನಾಗಿ ಮಾಡುತ್ತಿದ್ದರು ಎಂದ ಅವರು ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಉದ್ಯಮ ಆರಂಭಿಸಬೇಕು ಎಂಬುದು ನಮ್ಮ ಆಶಯವಾಗಿದ್ದು, ಪ್ರತೀ ಬೂತ್  ಮಟ್ಟಕ್ಕೂ ಬಂದು ಸಂಘಟನೆ ಮಾಡುತ್ತೇನೆ. ಮಹಿಳೆಯರು,  ಯುವಕರು ಹೆಚ್ಚಿನ ಜವಾಬ್ದಾರಿ ವಹಿಸಿ ಕೆಲಸ ನಿರ್ವಹಿಸಿ.  ಮುಂದಿನ ದಿನಗಳಲ್ಲಿ ಕೆ.ಎನ್. ರಾಜಣ್ಣನವರು ಶಾಸಕರಾಗಿ ಆಯ್ಕೆಯಾಗಬೇಕು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದರು.

ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ, ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಇಶಾನ್, ರಾಜ್ಯ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಹಾರೋಗೆರೆ ಮಹೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್, ರಾಜ್ಯ ಕಾರ್ಯದರ್ಶಿಗಳಾದ ಯಶವಂತ್ ಗೌಡ, ರಾಜೇಶ್, ಇಲಾಹಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲೀಕುಂಟೆ, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ  ಎಸ್.ಡಿ.ಕೆ. ವೆಂಕಟೇಶ್, ಡಿಸಿಸಿ ಬ್ಯಾಂಕ್ ಸದಸ್ಯ, ನಾಗೇಶ್ ಬಾಬು, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ. ನಂಜುಂಡಯ್ಯ, ಕೆ.ಪ್ರಕಾಶ್, ಡಿ.ಹೆಚ್. ನಾಗರಾಜು ಇತರರಿದ್ದರು.

ನಾವು ಮಹಾತ್ಮ ಗಾಂಧೀ ಹಿಂದೂಗಳು -

ಬಿಜೆಪಿಯವರು  ಗೋಡ್ಸೆ ಹಿಂದೂಗಳು!!

ನಾವು  ಮಹಾತ್ಮ ಗಾಂಧೀ ಹಿಂದೂಗಳು,  ಬಿಜೆಪಿಯವರು ಗೋಡ್ಸೆ ಹಿಂದೂಗಳು, ನಾವೂ ಸಹ ಭಾರತ ಮಾತೆಯ ಮಕ್ಕಳೇ,  ಕುವೆಂಪು ಹೇಳಿದಂತೆ ನಮ್ಮದು ಸರ್ವ ಜನಾಂಗದ  ಶಾಂತಿಯ ತೋಟ.

ಆದರೆ ಬಿಜೆಪಿಯವರು ದಲಿತರ, ಮುಸ್ಲೀಮರ ಮತ್ತು ಮೀಸಲಾತಿಯ ವಿರೋಧಿಗಳು. ರಾಜ್ಯದಲ್ಲಿ  6 ಲಕ್ಷ ನೌಕರಿಗಳಿದ್ದು,  ಅದರಲ್ಲಿ 3 ಲಕ್ಷ ಹುದ್ದೆ ಖಾಲಿಯಿದೆ, ಅಲ್ಲೆಲ್ಲಾ ಹೊರ ಗುತ್ತಿಗೆ ಅಡಿಯಲ್ಲಿ ನೌಕರಿ ಗೆ ತೆಗೆದುಕೊಂಡಿದ್ದು, ಯಾವುದೇ ಮೀಸಲಾತಿಯಿಲ್ಲದೇ ಹುದ್ದೆಗೆ ತೆಗೆದುಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರ ಅವಧಿಯಲ್ಲಿ ಹೊರಗುತ್ತಿಗೆಯಲ್ಲೂ ಮೀಸಲಾತಿ ನೀಡಲಾಗಿತ್ತು.  ಬಿಜೆಪಿಯವರು ಎಲ್ಲಾ ರಾಜ್ಯಗಳಲ್ಲೂ  ಅಧಿಕಾರಕ್ಕೆ ಬಂದಲ್ಲಿ ದೇಶದಲ್ಲಿ ಮೀಸಲಾತಿಯನ್ನೇ ತೆಗೆಯುತ್ತಾರೆ.

 

ಕೆ.ಎನ್.ರಾಜಣ್ಣ,

ಮಾಜಿ ಶಾಸಕರು,