ಕಾಲೇಜು ಮಟ್ಟದಲ್ಲೇ ಪಿಯು ಪರೀಕ್ಷೆ
ಕಾಲೇಜು ಮಟ್ಟದಲ್ಲೇ ಪಿಯು ಪರೀಕ್ಷೆ
ಬೆಂಗಳೂರು: ದ್ವಿತೀಯ ಪಿಯುನ ಮಧ್ಯಂತರ ಪರೀಕ್ಷೆಯನ್ನು ಕೇಂದ್ರ ಮಂಡಳಿಯಿAದ ನಡೆಸುವುದಕ್ಕೆ ವಿದ್ಯಾರ್ಥಿ ಸಂಘಟನೆಗಳಿAದ ವ್ಯಕ್ತವಾದ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಪಿಯು ಪರೀಕ್ಷಾ ಮಂಡಳಿ ತನ್ನ ಆದೇಶವನ್ನು ಹಿಂದಕ್ಕೆ ಪಡೆದುಕೊಂಡಿದೆ.
ದ್ವಿತೀಯ ಪಿಯುನ ಮಧ್ಯಂತರ ಪರೀಕ್ಷೆಗಳು ಕಾಲೇಜು ಮಟ್ಟದಲ್ಲೇ ನಡೆಯಲಿದೆ ಮತ್ತು ಆಯಾ ಕಾಲೇಜಿನ ಪ್ರಾಂಶುಪಾಲರು ಅಥವಾ ಉಪನ್ಯಾಸಕರು ಪರೀಕ್ಷೆ ನಡೆಸುವ ಜವಾವ್ದಾರಿಯನ್ನು ನಿರ್ವಹಿಸಬೇಕೆಂದು ತಿಳಿಸಲಾಗಿದೆ. ಅಲ್ಲದೆ, ಇದು ಬೋರ್ಡ್ ಪರೀಕ್ಷೆ ಆಗಿರುವುದಿಲ್ಲ ಎಂದು ಪಿಯು ಮಂಡಳಿ ಸ್ಪಷ್ಟ ಪಡಿಸಿದೆ ಎಂದು ಎಐಡಿಎಸ್‌ಓ ತನ್ನ ಟ್ವೀಟರ್ ಖಾತೆಯಲ್ಲಿ ಖಚಿತಪಡಿಸಿದೆ.