“ಅಮಾಯಕರ ಪ್ರಾಣಕ್ಕೆ ಕಂಟಕವಾಗಿರುವ ವೀಲಿಂಗ್” ʼಇಂದಿನ ಬಂದ್ʼ ಗೆ ಸಹಕರಿಸಿ: ಜ್ಯೋತಿಗಣೇಶ್ 

“ಅಮಾಯಕರ ಪ್ರಾಣಕ್ಕೆ ಕಂಟಕವಾಗಿರುವ ವೀಲಿಂಗ್” ʼಇಂದಿನ ಬಂದ್ʼ ಗೆ ಸಹಕರಿಸಿ: ಜ್ಯೋತಿಗಣೇಶ್ 

“ಅಮಾಯಕರ ಪ್ರಾಣಕ್ಕೆ ಕಂಟಕವಾಗಿರುವ ವೀಲಿಂಗ್”
ʼಇಂದಿನ ಬಂದ್ʼ ಗೆ ಸಹಕರಿಸಿ: ಜ್ಯೋತಿಗಣೇಶ್ 


ತುಮಕೂರು: ನಗರದಲ್ಲಿ ್ಲ ಭಜರಂಗದಳದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಎರಡು ದಿನಗಳ ಹಿಂದೆ ಹಲ್ಲೆ ನಡೆಸಲಾಗಿದ್ದು ಇಂತಹ ಸಮಾಜ ಘಾತುಕ ಶಕ್ತಿಗಳನ್ನು ಹೊಸಕಿ ಹಾಕಬೇಕಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ ವ್ಯಕ್ತಪಡಿಸಿದ್ದು, ಶುಕ್ರವಾರದ ತುಮಕೂರು ಬಂದ್‌ಗೆ ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದ್ದಾರೆ..

ಎರಡು ದಿನಗಳ ಹಿಂದೆ ಭಜರಂಗ ದಳ ಸಂಚಾಲಕ ಮಂಜುಭರ‍್ಗವ್ ಹಾಗೂ ಕಿರಣ್ ಎಂಬುವವರ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ್ದನ್ನು ಖಂಡಿಸಿ. ಶುಕ್ರವಾರ ತುಮಕೂರು ನಗರ ಬಂದ್ ಗೆ ವಿಶ್ವ ಹಿಂದೂ ಪರಿಷತ್ ನೀಡಿರುವ ಕರೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಶಾಸಕರು ವೀಲಿಂಗ್ ಮಾಡುವುದು ಅಪರಾಧ, ಇದು ಟೆರರಿಸಂಗೂ ಮಿಗಿಲಾದುದು, ವೀಲಿಂಗ್ ಮಾಡುವ ಮೂಲಕ ಅಮಾಯಕರ ಪ್ರಾಣಕ್ಕೆ ಕಂಟಕವಾಗುತ್ತಿದ್ದಾರೆ, ವೀಲಿಂಗ್ ಮಾಡುವವರನ್ನು ಗುಂಡಿಟ್ಟು ಹೊಡೆಯಬೇಕು, ಇಂಥ ಶಕ್ತಿಗಳ ನಿಗ್ರಹಕ್ಕಾಗಿ ತುಮಕೂರು ಬಂದ್ ಅನಿವಾರ್ಯ ಎಂದಿದ್ದಾರೆ.

ವಿಶ್ವ ಹಿಂದು ಪರಿಷತ್‌ನ ತುಮಕೂರು ಜಿಲ್ಲಾಧ್ಯಕ್ಷ ಜಿ.ಕೆ.ಶ್ರೀನಿವಾಸ್ ಮಾತನಾಡಿ, ಭಜರಂಗ ದಳದ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿರುವುದನ್ನು ಇಡೀ ಹಿಂದೂ ಸಮಾಜ ಖಂಡಿಸುತ್ತದೆ, ಉz್ದೆÃಶ ಪೂರ್ವಕವಾಗಿ ನಡೆದ ಹಲ್ಲೆ ಖಂಡಿಸಿ ಅ.೨೨ ರ ಶುಕ್ರವಾರ ತುಮಕೂರು ಬಂದ್ ಕರೆ ನೀಡಿದ್ದು, ಬಂದ್ ಯಶಸ್ವಿಗೊಳಿಸಲು ಎಲ್ಲರು ಸಹಕಾರ ನೀಡಬೇಕೆಂದರು.
ಭಜರAಗ ದಳದ ಕಾರ್ಯಕರ್ತರಾದ ಮಂಜು ಭಾರ್ಗವ್ ಮತ್ತು ಕಿರಣ್ ಮೇಲೆ ಉz್ದÉÃಶ ಪೂರ್ವಕವಾಗಿ ಅನ್ಯ ಕೋಮಿನವರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ, ಹಲ್ಲೆಕೋರರನ್ನು ಪೊಲೀಸರು ಬಂಧಿಸಿದ್ದಾರೆ, ಆದರೆ ಹಲ್ಲೆ ಹಿಂದಿರುವವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಂಜು ಭಾರ್ಗವ್ ಮತ್ತು ಕಿರಣ್ ಹಿಂದುಗಳ ರಕ್ಷಣೆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು, ಅಲ್ಲದೆ ಗೋ ಸಾಗಣೆ ತಡೆದು ಗೋವುಗಳ ರಕ್ಷಣೆ ಮತ್ತು ಲವ್ ಜಿಹಾದ್‌ಗೆ ಬ್ರೇಕ್ ಹಾಕಲು ಶ್ರಮಿಸಿ ಹಲವು ಹಿಂದು ಹೆಣ್ಣು ಮಕ್ಕಳನ್ನು ರಕ್ಷಿಸಿದ್ದಾರೆ, ಇದರಿಂದ ಇವರಿಗೆ ಹಲವು ಬೆದರಿಕೆ ಕರೆಗಳು ಬಂದಿವೆ, ಮೊನ್ನೆ ವೀಲಿಂಗ್ ನೆಪ ಮಾಡಿಕೊಂಡು ಉz್ದÉÃಶಪೂರ್ವಕವಾಗಿ ಹಲ್ಲೆ ನಡೆಸಲಾಗಿದೆ ಎಂದು ತಿಳಿಸಿದರು.
ತುಮಕೂರು ಬಂದ್‌ಗೆ ಎಲ್ಲಾ ಹಿಂದುಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ, ಆಟೋ ಚಾಲಕರು, ಅಂಗಡಿ ವ್ಯಾಪಾರಿಗಳು ಬೆಂಲ ನೀಡುವುದಾಗಿ ತಿಳಿಸಿದ್ದಾರೆ, ಹೋಟೆಲ್ ಅಸೋಸಿಯೇಷನ್ ಕೂಡ ಬೆಂಬಲ ನೀಡಿದೆ, ನಾವು ಯಾವುದೇ ಬಸ್ ತಡೆಯಲ್ಲ, ಎಲ್ಲಾ ನಾಗರಿಕರು ಬಂದ್ ಯಶಸ್ವಿಗೊಳಿಸು ಸಹಕಾರ ನೀಡಬೇಕು ಎಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಹಿಂದುಪರ ಸಂಘಟನೆಗಳ ಮುಖಂಡರಾದ ಚಂದ್ರಶೇಖರ್, ದಯಾನಂದ, ಪ್ರತಾಪ್, ರೇಣುಕಾ ಇದ್ದರು.