ಸ್ಮಾರ್ಟ್ ಸಿಟಿಯ ‘ಸ್ಮಾರ್ಟ್ ಫುಟ್‌ಪಾತ್’ !?

smart city kuchangi prasanna

ಸ್ಮಾರ್ಟ್ ಸಿಟಿಯ ‘ಸ್ಮಾರ್ಟ್ ಫುಟ್‌ಪಾತ್’ !?

ಸ್ಮಾರ್ಟ್ ಸಿಟಿಯ ‘ಸ್ಮಾರ್ಟ್ ಫುಟ್‌ಪಾತ್’ !?

ತುಮಕೂರು: ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಕಂಪನಿ ಮಾಡುತ್ತಿರುವ ಸ್ಮಾರ್ಟ್ ಫುಟ್‌ಪಾತ್‌ಗಳಲ್ಲಿ ಸಂಚರಿಸಲು ಈ ಮಹಾನಗರದ ಮಹಾ ಜನತೆ ಏಳೇಳು ಜನ್ಮಗಳ ಪುಣ್ಯ ಮಾಡಿರಬೇಕು ಎಂಬುದನ್ನು ಈ ವರದಿಯಲ್ಲಿರುವ ಫೋಟೋ ನೋಡಿದರೇ ಅರ್ಥವಾಗಿಬಿಡುತ್ತದೆ.


ಮಂಡಿಪೇಟೆಗೆ ಸಾಗುವ ಜೆ.ಸಿ.ರಸ್ತೆಯಲ್ಲಿ ಜಿಲ್ಲಾ ಆಸ್ಪತ್ರೆ ಎದುರಿಗೆ ಸ್ಮಾರ್ಟ್ ಸಿಟಿ ಕಂಪನಿ ನಿರ್ಮಿಸಿರುವ ವಿಶಿಷ್ಟ ಪಾದಚಾರಿ ರಸ್ತೆ ಇದು ನೋಡಿ. ಈ ಸುಗಮವಾದ ಕಾಲುಹಾದಿಯಲ್ಲಿ ನಡೆದು ಸಾಗುವವರಿಗೆ ದಿಡೀರಂತ ವಿದ್ಯುತ್ ಕಂಬ ಅಡ್ಡ ಬಂದು ಬಿಡುತ್ತದೆ. ಸರಿ ಏನು ಮಾಡುವುದು ಕೆಳಕ್ಕಿಳಿದು ಮತ್ತೆ ಅದೇ ಕಾಲುಹಾದಿಯಲ್ಲಿ ನಡಿಗೆ ಮುಂದುವರೆಸಿ ಎನ್ನುತ್ತೀರೋ ಕೆಳಗೆ ಒಂದಿಂಚೂ ಜಾಗ ಬಿಡದಂತೆ ದ್ವಿಚಕ್ರವಾಹನಗಳನ್ನು ಪಾರ್ಕಿಂಗ್ ಮಾಡಲಾಗಿದೆ. 


ಒಂದೋ ಇಲ್ಲಿ ಫುಟ್ ಪಾತ್ ಮಾಡುವಾಗ ಸ್ಥಳ ಪರಿಶೀಲನೆಯನ್ನು ಯಾರೂ ಮಾಡಿಲ್ಲ, ಒಂದು ವೇಳೆ ಮಾಡಿದ್ದರೂ ಹೀಗೆ ಅಲ್ಲಿರುವ ಜೋಡಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿಕೊಡಿ ಅಂತ ಸ್ಮಾರ್ಟ್ ಸಿಟಿ ಇಂಜಿನಿಯರ್‌ಗಳು ಮಹಾನಗರಪಾಲಿಕೆ ಮುಖಾಂತರ ಬೆಸ್ಕಾಂ ಅನ್ನು ಕೇಳಬೇಕಿತ್ತು ಅಂತ ಹೇಳ್ತೀರಾ ಅಂತ ಗೊತ್ತು. ಆದರೆ ಅದಕ್ಕೆಲ್ಲ ಪುರುಸೊತ್ತು ಎಲ್ಲಿದೆ. ಮೊದಲು ಕಾಮಗಾರಿ ಮಾಡಲು ಮತ್ತು ನಂತರ ಬಿಲ್ ಮಾಡಲೇ ಸಮಯ ಸಾಲದು ಅನ್ನಬಹುದೇನೋ ಗುತ್ತಿಗೆದಾರರು.


ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಕೋಆರ್ಡಿನೇಟ್ ಮಾಡಲೆಂದೇ ಉನ್ನತ ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಇಂಜಿನಿಯರ್‌ಗಳನ್ನು ಒಳಗೊಂಡ ಸಮಿತಿಯೂ ಒಂದಿದೆಯAತೆ ಅಲ್ವಾ.