``ಪುನೀತ್‌ಗೆ ಕರ್ನಾಟಕ ರತ್ನ’’ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

``ಪುನೀತ್‌ಗೆ ಕರ್ನಾಟಕ ರತ್ನ’’ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ


``ಪುನೀತ್‌ಗೆ ಕರ್ನಾಟಕ ರತ್ನ’’
ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ


ಬೆಂಗಳೂರು: ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದರು. 

ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಂಗಳವಾರ ಆಯೋಜಿಸಿದ್ದ `ಪುನೀತ ನಮನ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪುö್ಪ ಚಿರಸ್ಥಾಯಿ ಆಗಿರಬೇಕು ಎನ್ನುವ ಜನರ ಅಭಿಲಾಷೆಯೇ ಸರ್ಕಾರದ ಆಶಯ. ಪುನೀತ್ ಸಮಾಧಿಯನ್ನು ಡಾ. ರಾಜ್‌ಕುಮಾರ್ ಅವರ ಸಮಾಧಿಯಂತೇ ಅಭಿವೃದ್ಧಿಗೊಳಿಸಲಾಗುವುದು. ಪುನೀತ್ ಅವರ ಹೆಸರನ್ನು ರಾಷ್ಟçಮಟ್ಟದ ಪ್ರಶಸ್ತಿಗಳಿಗೆ ಶಿಫಾರಸು ಮಾಡಬೇಕೆಂಬ ಸಲಹೆಯೂ ಸರ್ಕಾರದ ಗಮನದಲ್ಲಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಆ ನಿರ್ಣಯಗಳನ್ನೂ ತೆಗೆದುಕೊಳ್ಳುತ್ತೇವೆ. ಮುತ್ತುರಾಜ್ ಅವರ ಮುತ್ತು ಇಂದು ದೈಹಿಕವಾಗಿ ನಮ್ಮ ಜೊತೆಗಿಲ್ಲ. ಆದರೆ ಸಣ್ಣವಯಸ್ಸಿನಲ್ಲಿ ಅವರು ತೋರಿರುವ ಚಾರಿತ್ರ‍್ಯ ಚರಿತ್ರೆಗೆ ಸೇರಲಿದೆ' ಎಂದರು. 

ನಾನು ಪುನೀತ್‌ಗೆ ಮುತ್ತು ಕೊಟ್ಟಾಗ ಅದನ್ನು ಹಲವರು ಬೇರೆ ಬೇರೆ ರೀತಿ ವಿಶ್ಲೇಷಿಸಿದರು. ಆದರೆ ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅದು ನನ್ನ ಹೃದಯದಿಂದ ಬಂದಿದ್ದು. ಆರು ಕೋಟಿ ಕನ್ನಡಿಗರ ಪರವಾಗಿ ಆ ಮುತ್ತನ್ನು ನಾನು ಕೊಟ್ಟಿದ್ದೇನೆ. ಸೂರ್ಯಚಂದ್ರ ಇರುವವರೆಗೂ ಪುನೀತ್ ಕರ್ನಾಟಕದ ರತ್ನವಾಗಿ ಇರುತ್ತಾರೆ. ಡಾ. ರಾಜ್ ಕುಟುಂಬ ಸದಾ ನಮ್ಮ ಕುಟುಂಬದಲ್ಲಿ ಇರುತ್ತದೆ. ಇದು ನನ್ನ ಅಪುö್ಪವಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದರು.