ಬಿಜೆಪಿ 40% ಕಮೀಶನ್: ಮಾಡಾಳು ಸಾಕ್ಷಿ ಅಲ್ಲವೇ? ಜೈಲಿನಲ್ಲಿರುವ ಎಡಿಜಿಪಿ ಕೂಡಾ ಸಾಕ್ಷಿ : ಸಚಿವ ಎಂ.ಬಿ.ಪಾಟೀಲ್ 

40% ಕಮೀಶನ್ ಆಪಾದನೆ ಮಾಡಿದ್ದು ನಾವಲ್ಲ, ಗುತ್ತಿಗೆದಾರರ ಸಂಘದ ಅಧ್ಯಕ್ಷರು ಕೆಂಪಣ್ಣನವರು

ಬಿಜೆಪಿ 40% ಕಮೀಶನ್: ಮಾಡಾಳು ಸಾಕ್ಷಿ ಅಲ್ಲವೇ?   ಜೈಲಿನಲ್ಲಿರುವ ಎಡಿಜಿಪಿ ಕೂಡಾ ಸಾಕ್ಷಿ : ಸಚಿವ ಎಂ.ಬಿ.ಪಾಟೀಲ್ 

ಬಿಜೆಪಿ 40% ಕಮೀಶನ್: ಮಾಡಾಳು ಸಾಕ್ಷಿ ಅಲ್ಲವೇ?


ಜೈಲಿನಲ್ಲಿರುವ ಎಡಿಜಿಪಿ ಕೂಡಾ ಸಾಕ್ಷಿ : ಸಚಿವ ಎಂ.ಬಿ.ಪಾಟೀಲ್ 

    ತುಮಕೂರು: ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಮಾಜಿ ಶಾಸಕ ಮಾಡಾಳುವೇ ಸಾಕ್ಷಿ, ಜೈಲಿನಲ್ಲಿರುವ ಹಿರಿಯ ಪೊಲೀಸ್ ಅಧಿಕಾರಿಯೇ ಸಾಕ್ಷಿ. ರಾಜ್ಯ ಬಿಜೆಪಿ ಸರ್ಕಾರದ ನಿಗಮವೊಂದರ ಅಧ್ಯಕ್ಷರ ಮನೆಯಲ್ಲೇ 8-9 ಕೋಟಿ ಹಣ ದೊರಕುತ್ತದೆ ಎಂದರೆ ಅದು ಸಾಕ್ಷಿ ಅಲ್ಲವೇ, ಪಿಎಸ್‌ಐ ನೇಮಕಾತಿಯಲ್ಲಿ ಉನ್ನತ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದ್ದು ಆವರು ಇನ್ನೂ ಜೈಲಿನಲ್ಲೇ ಇದ್ದಾರೆ ಅದು ಸಾಕ್ಷಿಯಲ್ಲವೇ ? ಎಂದು ನೂತನ ಕಾಂಗ್ರೆಸ್ ಸರ್ಕಾರದ ಹಿರಿಯ ಸಚಿವರಾದ ಎಂ.ಬಿ.ಪಾಟೀಲ್ ಪ್ರಶ್ನಿಸಿದರು.


    ಬಿಜೆಪಿ ಆಡಳಿತದಲ್ಲಿ 40% ಕಮೀಶನ್‌ಗೆ ದಾಖಲೆ ನೀಡುವಂತೆ ನಿರ್ಗಮಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ದಿನ ಕೇಳಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್ ಅವರು, ಬಿಜೆಪಿ ಸರ್ಕಾರದ ವಿರುದ್ಧ 40% ಕಮೀಶನ್ ಆಪಾದನೆ ಮಾಡಿದ್ದು ನಾವಲ್ಲ, ಗುತ್ತಿಗೆದಾರರ ಸಂಘದ ಅಧ್ಯಕ್ಷರು ಕೆಂಪಣ್ಣನವರು ಆಪಾದನೆ ಮಾಡಿದ್ದು, ಅವರು ಪ್ರಧಾನ ಮಂತ್ರಿಯವರಿಗೆ ದೂರು ಕೊಟ್ಟಿದ್ದು, ಪ್ರಧಾನ ಮಂತ್ರಿಯವರು ಎಲ್ಲ ಕಡೆ ಐಟಿ ಮತ್ತು ಇಡಿ ರೇಡ್ ಮಾಡಿಸ್ತಾರೆ, ಆದರೆ ಆರೋಪ ಮಾಡಿ ಎರಡು ವರ್ಷಗಳಾದರೂ ಕೇಂದ್ರ ಸರ್ಕಾರವಾಗಲೀ ರಾಜ್ಯ ಸರ್ಕಾರವಾಗಲೀ ಯಾವುದೇ ತನಿಖೆಯನ್ನಾಗಲೀ ದಾಳಿಯನ್ನಾಗಲೀ ಮಾಡಲಿಲ್ಲ. ಇಬ್ಬರು ಗುತ್ತಿಗೆದಾದರರು ಆತ್ಮಹತ್ಯೆ ಮಾಡಿಕೊಂಡರು. ತನಿಖೆ ಮಾಡಿದ್ದರೆ ಸಾಕ್ಷಿ ದೊರಕುತ್ತಿತ್ತು. ಈಗ ತನಿ ಎಂದರು.


   ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಭೇಟಿಯಾಗಿ ನಗರದ ಸಿದ್ದಗಂಗಾ ಮಠಕ್ಕೆ ಆಗಮಿಸಿ, ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿ ಅವರ ಗದ್ದುಗೆಗೆ ಪೂಜೆ ಸಲ್ಲಿಸಿ, ನಂತರ ಸಿದ್ಧಗಂಗಾ ಮಠದ ಹಿರಿಯ ಶ್ರೀಗಳಾದ ಶ್ರೀ ಸಿದ್ಧಲಿಂಗ ಮಹಾ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಸಚಿವ ಎಂ.ಬಿ.ಪಾಟೀಲ್ ಮಾತನಾಡಿದರು.


   ರಾಜ್ಯದಲ್ಲಿ ಬಿಜೆಪಿ ಆಡಳಿತಾವಧಿಯ ಎಲ್ಲ ಹಗರಣಗಳ ಕುರಿತು ತನಿಖೆ ಮಾಡಲಿದ್ದೇವೆ ಎಂಬ ಮಾತನ್ನು ಪುನರುಚ್ಚರಿಸಿದ ಪಾಟೀಲರು, ಬಿಜೆಪಿ ಸರ್ಕಾರ ತನ್ನ ಕೊನೇ ಸಚಿವ ಸಂಪುಟದ ಸಭೆಯಲ್ಲಿ ಮುಸ್ಲಿಮರಿಗಿದ್ದ 4% ಮೀಸಲಾತಿಯನ್ನು ಕಿತ್ತು ಪಂಚಸಾಲಿ ಲಿಂಗಾಯತರು ಹಾಗೂ ಒಕ್ಕಲಿಗರಿಗೆ ಹಂಚಿಕೊಟ್ಟದ್ದನ್ನು ತೀವ್ರವಾಗಿ ಖಂಡಿಸಿ, ನಾವು ಲಿಂಗಾಯತರು ಕಾಯಕ ಮತ್ತು ದಾಸೋಹಕ್ಕೆ ಹೆಸರಾದ ಬಸವ ತತ್ವವನ್ನು ಅನುಸರಿಸುವವರು, ಎಲ್ಲರಿಗೂ ನೀಡುವವರು ನಾವು , ಯಾರೊಬ್ಬರ ಪಾಲನ್ನು ಕಿತ್ತುಕೊಳ್ಳುವವರಲ್ಲ. ಮತ್ತು ಪರಿಶಿಷ್ಟ ಜಾತಿಯವರಿಗೆ ಮೀಸಲು ಪ್ರಮಾಣ ಹೆಚ್ಚಿಸಬೇಕಿದ್ದರೆ ಪಾರ್ಲಿಮೆಂಟಿಗೆ ಶಿಫಾರಸು ಮಾಡಿ ಸಂವಿಧಾನದ 9ನೇ ಪರಿಚ್ಚೇದಕ್ಕೆ ಸೇರಿಸಿ ತಿದ್ದುಪಡಿ ಆದೇಶ ಹೊರಡಿಸಬೇಕಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಹೆಚ್ಚಳ ಮಾಡುವ ಕುರಿತಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲಿದೆ ಎಂದರು.


  ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಬಹಳ ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದೆ, ಅದು ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಚುನಾಯಿತರಾಗಿರುವ ಲಿಂಗಾಯತ ಶಾಸಕರ ಸಂಖ್ಯೆಯನ್ನು ಗಮನಿಸಿದರೇ ಗೊತ್ತಾಗಿಬಿಡುತ್ತದೆ. ಬಿಜೆಪಿಯವರು 62 ಮಂದಿ ಲಿಂಗಾಯತರಿಗೆ ಟಿಕೆಟ್ ಕೊಟ್ಟಿತ್ತು, ಆದರೆ 19 ಮಾತ್ರ ಗೆದ್ದರು,. ಕಾಂಗ್ರೆಸ್‌ನಲ್ಲಿ ಅತಿ ಹೆಚ್ಚು ಲಿಂಗಾಯತರು ಶಾಸಕರಾಗಿ ಆಯ್ಕೆಯಾಗಿದ್ದಾರೆ. 


   ಖಾತೆ ನೀಡುವ ಪರಮಾಧಿಕಾರ ಮುಖ್ಯಮಂತ್ರಿಯವರದು, ನಮ್ಮ ಮನದಾಳದ ಇಚ್ಚೆಯನ್ನು ನಾನು ಹೇಳಿಕೊಂಡಿದ್ದೇನೆ. ಯಾವ ಖಾತೆ ಕೊಟ್ಟರೂ ನಿರ್ವಹಿಸುತ್ತೇನೆ. ನಿಧಾನವಾಗೇ ಆಗಲಿ , ತುರ್ತೇನಿಲ್ಲ. ಎಲ್ಲ ಕೂಡಿಯೇ ಆಡಳಿತ ಮಾಡುತ್ತೇವೆ ಎಂದು ಪಾಟೀಲರು ಸ್ಪಷ್ಟಪಡಿಸಿದರು.


   ಪತ್ನಿ ಆಶಾ ಪಾಟೀಲ್, ಮಾಜಿ ಮೇಯರ್ ಪುಟ್ಟರಾಜು, ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್, ಜೊತೆಯಲ್ಲಿದ್ದರು.